ನೀಲಗಿರಿ ಯು ವೇಗವಾಗಿ-ಬೆಳೆಯುವ ಕಾಡಿನ ಮೂಲವಾಗಿದ್ದು, ಇದರ ತೈಲವನ್ನು ಶುದ್ಧೀಕರಣಕ್ಕಾಗಿ ಬಳಸಬಹುದಾಗಿದೆ ಹಾಗೂ ಇದು ಒಂದು ನೈಸರ್ಗಿಕ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ. ಇದರ ತೈಲವನ್ನು ಕೆಲವೊಮ್ಮೆ ಜೌಗುನೆಲಗಳನ್ನು ಒಣಗಿಸಲು, ತನ್ಮೂಲಕ ಮಲೇರಿಯಾದ ಅಪಾಯವನ್ನು ತಗ್ಗಿಸಲು ಬಳಸಲಾಗುತ್ತದೆ.
ನೀಲಗಿರಿ ಮರಗಳು ಅನೇಕ ಉಪಯೋಗಗಳನ್ನು ಹೊಂದಿದ್ದು, ಈ ಉಪಯೋಗಗಳ ದೆಸೆಯಿಂದಾಗಿ ಅವು ಆರ್ಥಿಕವಾಗಿ ಮುಖ್ಯವಾದ ಮರಗಳಾಗಿ ಮಾರ್ಪಟ್ಟಿವೆ. ಅಷ್ಟೇ ಅಲ್ಲ ಬಡ ಪ್ರದೇಶಗಳಲ್ಲಿ ಇವು ಒಂದು ವಾಣಿಜ್ಯ ಬೆಳೆಯಾಗಿ ಮಾರ್ಪಟ್ಟಿವೆ. ನೀಲಗಿರಿ ಮರಗಳ ವೇಗದ ಬೆಳವಣಿಗೆಯಿಂದಾಗಿ ಅವು ಗಾಳಿತಡೆಕಾರಕಗಳಾಗಿ ಬಳಕೆಯಾಗಲು ಸೂಕ್ತವಾಗಿವೆ ಮತ್ತು ಸವಕಳಿಯ ಪ್ರಮಾಣವನ್ನು ತಗ್ಗಿಸಲು ನೀಲಗಿರಿ ಮರಗಳು ಬಳಕೆಯಾಗುತ್ತದೆ. ಬಾಷ್ಪ ವಿಸರ್ಜನೆಯ ಪ್ರಕ್ರಿಯೆಯ ಮೂಲಕ ನೀಲಗಿರಿ ಮರಗಳು ಮಣ್ಣಿನಿಂದ ಒಂದು ಮಹತ್ತರವಾದ ಪ್ರಮಾಣದಲ್ಲಿ ನೀರನ್ನು ಎಳೆದುಕೊಳ್ಳುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಜಲಸ್ತರವನ್ನು ಕಡಿಮೆಮಾಡಲು ಹಾಗೂ ಮಣ್ಣಿನ ಉಪ್ಪುಗೂಡಿಕೆಯನ್ನು ತಗ್ಗಿಸಲು ಅವುಗಳನ್ನು ನೆಡಲಾಗಿದೆ. ಆಲ್ಜೀರಿಯಾ, ಲೆಬನಾನ್, ಸಿಸಿಲಿ ಮೊದಲಾದ ಕಡೆಗಳಲ್ಲಿ, ಮತ್ತೊಂದೆಡೆ ಯುರೋಪ್, ಮತ್ತು ಕ್ಯಾಲಿಫೋರ್ನಿಯಾದಲ್ಲಿ ಮಣ್ಣನ್ನು ಒಣಗಿಸುವ ಮೂಲಕ ಮಲೇರಿಯಾವನ್ನು ತಗ್ಗಿಸುವ ಒಂದು ವಿಧಾನವಾಗಿಯೂ ನೀಲಗಿರಿ ಮರಗಳನ್ನು ಬಳಸಿಕೊಂಡು ಬರಲಾಗಿದೆ. ಒಣಗಿಸುವಿಕೆಯು ಜೌಗುನೆಲಗಳನ್ನು ನಿರ್ಮೂಲನಗೊಳಿಸುತ್ತದೆಯಾದರೂ, ಉತ್ಪನ್ನಕಾರಕವಾಗಿರುವ ಪ್ರದೇಶಗಳನ್ನೂ ಇದು ನಾಶಪಡಿಸಬಲ್ಲುದಾಗಿದೆ. ಈ ಒಣಗಿಸುವಿಕೆಯು ಕೇವಲ ಮಣ್ಣಿನ ಮೇಲ್ಮೈಗೆ ಮಾತ್ರವೇ ಸೀಮಿತಗೊಂಡಿದೆ. ಏಕೆಂದರೆ, ನೀಲಗಿರಿ ಬೇರುಗಳು ...೨.೫ m ನಷ್ಟು ಉದ್ದದವರೆಗಿನ ಬೇರುಗಳನ್ನು ಹೊಂದಿದ್ದು, ಅವು ಭೂಮಿಯಡಿ ಇರುವ ವಲಯವನ್ನು ತಲುಪುವುದಿಲ್ಲ; ಹೀಗಾಗಿ ಮಳೆನೀರು ಅಥವಾ ನೀರಾವರಿ ವ್ಯವಸ್ಥೆಯು ಮಣ್ಣನ್ನು ಮತ್ತೆ ತೇವಗೊಳಿಸಬಲ್ಲವು.
ನೀಲಗಿರಿ ತೈಲವನ್ನು ಅದರ ಎಲೆಗಳಿಂದ ಅನಾಯಾಸವಾಗಿ ಆವಿ ಬಟ್ಟಿ ಇಳಿಸಲಾಗುತ್ತದೆ ಮತ್ತು ಈ ತೈಲವನ್ನು ಶುದ್ಧೀಕರಣ, ವಾಸನೆಯನ್ನು ಕಳೆಯುವಿಕೆ ಮೊದಲಾದವುಗಳಿಗಾಗಿ ಬಳಸಬಹುದಾಗಿದೆ. ಅಷ್ಟೇ ಅಲ್ಲ, ಆಹಾರದ ಪೂರಕಗಳಲ್ಲಿ, ಅದರಲ್ಲೂ ವಿಶೇಷವಾಗಿ ಸಿಹಿತಿಂಡಿಗಳು, ಕೆಮ್ಮಿನ ಪೆಪ್ಪರ್ಮೆಂಟುಗಳಲ್ಲಿ ಹಾಗೂ ರಕ್ತ/ಮೂಗು ಕಟ್ಟಿರುವಿಕೆಯನ್ನು ನಿವಾರಿಸುವ ಔಷಧಿಗಳಲ್ಲಿ ಅತ್ಯಂತ ಅಲ್ಪ ಪ್ರಮಾಣದಲ್ಲಿ ನೀಲಗಿರಿ ತೈಲವನ್ನು ಬಳಸಲಾಗುತ್ತದೆ. ಇದು ಕೀಟ ನಿವಾರಕ ಗುಣಗಳನ್ನೂ ಹೊಂದಿದೆ, ಮತ್ತು ಕೆಲವೊಂದು ವಾಣಿಜ್ಯೋದ್ದೇಶದ ಸೊಳ್ಳೆ ನಿವಾರಕಗಳಲ್ಲಿ ಇದೊಂದು ಕ್ರಿಯಾಶೀಲ ಘಟಕವಾಗಿದೆ.
ಕೆಲವೊಂದು ನೀಲಗಿರಿ ಮರಗಳ ಮಕರಂದವು ಉನ್ನತ-ಗುಣಮಟ್ಟದ ಜೇನನ್ನು ಉತ್ಪಾದಿಸುತ್ತದೆ. ರೇಷ್ಮೆ ಮತ್ತು ಉಣ್ಣೆಯಂಥ ಪ್ರೋಟೀನು ನಾರುಗಳ ಮೇಲೆ ಗಟ್ಟಿಯಾಗಿ ನಿಲ್ಲುವ ವರ್ಣದ್ರವ್ಯಗಳನ್ನು ತಯಾರಿಸಲು ನೀಲಗಿರಿ ಯ ಎಲ್ಲಾ ಭಾಗಗಳನ್ನೂ ಬಳಸಿಕೊಳ್ಳಬಹುದು. ಸಸ್ಯದ ಭಾಗವನ್ನು ನೀರಿನ ಜೊತೆಯಲ್ಲಿ ಸಂಸ್ಕರಿಸುವುದರ ಮೂಲಕ ಅತ್ಯಂತ ಸರಳ ವಿಧಾನದಲ್ಲಿ ವರ್ಣದ್ರವ್ಯವನ್ನು ತಯಾರಿಸುವುದನ್ನು ಈ ಪ್ರಕ್ರಿಯೆಯು ಒಳಗೊಳ್ಳುತ್ತದೆ. ಹೀಗೆ ಸಾಧಿಸಲ್ಪಡುವ ಬಣ್ಣಗಳ ಶ್ರೇಣಿಯು ಹಳದಿ ಮತ್ತು ಕಿತ್ತಳೆಯಿಂದ ಮೊದಲ್ಗೊಂಡು ಹಸಿರು, ಕಂದುಬಣ್ಣ, ಚಾಕೊಲೇಟ್ ಮತ್ತು ಗಾಢವಾದ ತುಕ್ಕು ಕೆಂಪಿನ ಬಣ್ಣದಾದ್ಯಂತ ಇರುತ್ತದೆ. ಸಂಸ್ಕರಣದ ನಂತರ ಉಳಿಯುವ ಸಾಮಗ್ರಿಯನ್ನು ಹಸಿಗೊಬ್ಬರವಾಗಿ ಅಥವಾ ರಸಗೊಬ್ಬರವಾಗಿ ಕ್ಷೇಮಕರವಾಗಿ ಬಳಸಬಹುದು. ಗರಗಸದ ಕಾರ್ಖಾನೆಯ ಕೆಲಸಗಾರಿಕೆ, ತಿರುಳು, ಇದ್ದಿಲು ಸಂಬಂಧಿ ಕೆಲಸಗಳು ಮತ್ತು ಇತರ ಕೆಲಸಗಳಂಥ ಹಲವಾರು ಉದ್ಯಮಗಳಿಗೆ ನೀಲಗಿರಿ ಗಳು ಆಧಾರವಾಗಿವೆ.
ಸರ್ ಜೋಸೆಫ್ ಬ್ಯಾಂಕ್ಸ್ ಎಂಬ ಸಸ್ಯವಿಜ್ಞಾನಿಯೊಬ್ಬ 1770ರಲ್ಲಿ ಕೈಗೊಂಡ ಕುಕ್ ವಿಶೇಷ ಕಾರ್ಯಯಾತ್ರೆಯ ಸಂದರ್ಭದಲ್ಲಿ ನೀಲಗಿರಿ ಯನ್ನು ಆಸ್ಟ್ರೇಲಿಯಾದಿಂದ ವಿಶ್ವದ ಇತರ ಭಾಗಗಳಿಗೆ ಮೊದಲು ಪರಿಚಯಿಸಿದರು. ತರುವಾಯ ಇದು ವಿಶ್ವದ ಅನೇಕ ಭಾಗಗಳಿಗೆ ಪರಿಚಯಿಸಲ್ಪಟ್ಟಿತು. ಮತ್ತು ನೆಡುತೋಪುಗಳಲ್ಲಿ ನೆಡಲ್ಪಟ್ಟಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ