ಶುಕ್ರವಾರ, ಆಗಸ್ಟ್ 20, 2010

10 ವೃಕ್ಷಗಳಿಗೆ ‘ಪರಂಪರೆ’ ಗೌರವ

ಜೈವಿಕ ವಿಜ್ಞಾನ ವೈವಿಧ್ಯ ಕಾಯ್ದೆ 2002ರ ಅನ್ವಯ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ 10 ಮರಗಳನ್ನು 'ಪರಂಪರೆ ಮರಗಳು' (ಹೆರಿಟೇಜ್ ಟ್ರೀಸ್) ಎಂದು ಘೋಷಿಸಲಾಗಿದೆ ಎಂದು ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದ್ದು .

ಬಿಜಾಪುರ ಜಿಲ್ಲೆ ಬಿಜಾಪುರ ತಾಲ್ಲೂಕಿನಲ್ಲಿರುವ 600 ಮತ್ತು 359 ವರ್ಷದ ಅದನ್‌ಸೋನಿಯಾ ಡಿಜಿಟಾಟಾ ಮಲ್ವಸಿಯೆ (Adansonia Digitata Malvaceae) ಎಂಬ ಎರಡು ಮರ, ಸಿಂದಗಿ ತಾಲ್ಲೂಕಿನ 883 ವರ್ಷದ ಹುಣಸೆ ಮರ, ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಟಿ.ವೆಂಕಟಪುರ ಗ್ರಾಮದ 200 ವರ್ಷದ ಬೇವಿನ ಮರ, ಮೈಸೂರು ತಾಲ್ಲೂಕು ಚಿಕ್ಕಹಳ್ಳಿಯ 260 ವರ್ಷದ ಆಲದ ಮರ, ಮಾನಸ ಗಂಗೋತ್ರಿ ಆವರಣದಲ್ಲಿರುವ 160 ವರ್ಷದ ಅಶ್ವಥ ಮರ, ಪ್ಯಾಲೇಸ್ ಗೇಟ್ ಬಳಿಯ 130 ವರ್ಷದ ಕೆಂಪು ಬೋರ್ಗ್ ಮರ, ಬೆಂಗಳೂರು ಕೆಥೊಹಳ್ಳಿಯಲ್ಲಿರುವ 400 ವರ್ಷದ ದೊಡ್ಡಾಲದ ಮರ, ಲಾಲ್‌ಬಾಗ್‌ನ 140 ವರ್ಷದ ಅರೌರಾರಿಯೋ ಕೂಕೀ (Araucarioa cookie) ಮರ ಮತ್ತು ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಬನವಾಸಿಯ 400 ವರ್ಷದ ಪಿಳಲಿ 'ಪರಂಪರೆ ವೃಕ್ಷ' ಪಟ್ಟಿಯಲ್ಲಿವೆ.

ಕಾಮೆಂಟ್‌ಗಳಿಲ್ಲ: