ಬುಧವಾರ, ಆಗಸ್ಟ್ 25, 2010

ಮಳೆ ನೀರು ಕೊಯ್ಲು ಕಡ್ಡಾಯ (ಬೆಂಗಳೂರಿನಲ್ಲಿ)

 ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB), ಬೆಂಗಳೂರು ಜಲಮಂಡಳಿ ಅಭಿಯಂತರ ಸಂಘ, ಅರ್ಘ್ಯಮ್ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ(KSCST)
ಹೊಸದಾಗಿ ತಿದ್ದುಪಡಿಗೊಳಿಸಿದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಅಧಿನಿಯಮ 2009ರ ಅನ್ವಯ ಬೆಂಗಳೂರಿನ ನಿರ್ಮಿತ ಹಾಗೂ ಹೊಸದಾಗಿ ನಿರ್ಮಿಸಲಾಗುವ ಅನೇಕ ಕಟ್ಟಡಗಳಲ್ಲಿ 2010ರ ಮೇ ತಿಂಗಳ 27ರ ಒಳಗೆ ಮಳೆ ನೀರು ಸಂಗ್ರಹಣೆ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಅಗಸ್ಟ್ 25, 2009ರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ತಿದ್ದುಪಡಿ ಅಧಿನಿಯಮದ ಪ್ರಕಾರ ಈ ಅಧಿಸೂಚನೆ ಜಾರಿಗೊಳಿಸಿದ 9 ತಿಂಗಳುಗಳ ಸಮಯದೊಳಗೆ 2400 ಚ.ಅ ಹಾಗೂ ಹೆಚ್ಚಿನ ವಿಸ್ತೀರ್ಣದ ನಿವೇಶನ ಹೊಂದಿರುವ ಕಟ್ಟಡದ ಮಾಲಿಕರು ಅಥವಾ ವಾಸಿಸುವವರು, ಅಥವಾ 1200 ಚ.ಅ ಗೂ ಹೆಚ್ಚಿನ ನಿವೇಶನದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವ ಮಾಲಿಕರು, ಕಡ್ಡಾಯವಾಗಿ ಮಳೆ ನೀರು ಕೊಯ್ಲಿಗೆ ವ್ಯವಸ್ಥೆ ಮಾಡಬೇಕು.
ಮುಂಬರುವ ದಿನಗಳಲ್ಲಿ ಮಳೆನೀರು ಕೊಯ್ಲಿನ ವ್ಯವಸ್ಥೆಗೆ ಭಾರಿ ಬೇಡಿಕೆ ಬರುವ ನಿರೀಕ್ಷೆಯಿದೆ. ಆದರೆ ಈ ವ್ಯವಸ್ಥೆ, ಉತ್ತಮ ಗುಣಮಟ್ಟ ಹೊಂದಿ, ವಿವಿಧ ಕಾಯ್ದೆ ನಿಯಮಗಳಿಗೆ ಅನುಗುಣವಾಗಿರಬೇಕು. ಈ ಬೇಡಿಕೆಯನ್ನು ಪೂರೈಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೂರಾರು ಕೊಳಾಯಿಗಾರರಿಗೆ ತರಬೇತಿ ನೀಡಿದೆ. ಜೊತೆಗೆ, ಹಲವಾರು ಖಾಸಗಿ ಮಳೆ ನೀರು ಕೊಯ್ಲು ಸಂಸ್ಥೆಗಳು ಬೆಂಗಳೂರಿನಲ್ಲಿ ಈಗಾಗಲೇ ತಮ್ಮ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB): ಮಂಜುನಾಥ್: 9845444015 ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(Help desk for Rainwater Hrwesting): 23341652 / 23348848 / 23348849.

ಬೆಂಗಳೂರಿನ ಮಳೆ ನೀರು ಕೊಯ್ಲು ವ್ಯವಸ್ಥೆಯ ಹಾಗೂ ಸಂಪನ್ಮೂಲಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ: http://www.waterday.in/rainwaterharvesting

ಕಾಮೆಂಟ್‌ಗಳಿಲ್ಲ: