ಸೋಮವಾರ, ಆಗಸ್ಟ್ 30, 2010

ಕನಿಷ್ಠ ನೀರಿನಿಂದ ಕೃಷಿ

ಚಿಕ್ಕಮಗಳೂರು ತಾಲೂಕಿನ ಕುನ್ನಾಳು ಗ್ರಾಮದ ವಿಠಲಾಪುರದ ವೀರಪ್ಪ ಅವರ ಜಮೀನಿಗೆ ಹೊದಾಗ ಹಿಂದಿನ ಎರಡು ವರುಷಗಳಲ್ಲಿ ಮಳೆ ಆಗಿರಲಿಲ್ಲ ಆದರೆ ಮಣ್ಣಿನಲ್ಲಿ ತೇವಾಂಶವಿತ್ತು. ಅದು ಹೇಗೆ ಸಾದ್ಯೆ ಅಂತಾ ಪ್ರಶ್ನಿಸಿದರೆ!

"ನಮ್ ತೋಟದಲ್ಲಿ ಹೆಂಗೈತೆ ನೋಡಿ" ಎಂದು ವೀರಪ್ಪ ಹಾರೆ ಎತ್ತಿಕೊಂಡು ಮಣ್ಣು ಅಗೆಯತೊಡಗಿದರು. ಎರಡು ಅಡಿ ಆಳಕ್ಕೆ ಅಗೆದು ತೋರಿಸಿದರು. ಅಷ್ಟು ಆಳದ ವರೆಗೂ ಮಣ್ಣಿನಲ್ಲಿ ತೇವಾಂಶವಿತ್ತು. ಅದರಿಂದಾಗಿಯೇ ಅವರ ೧೫ ಎಕ್ರೆ ತೋಟದಲ್ಲಿ ಮರಗಿಡಗಳೆಲ್ಲ ಹಸುರಾಗಿದ್ದವು. ತೆಂಗು ಮತ್ತು ಅಡಿಕೆ ಮುಖ್ಯ ಬೆಳೆಗಳು. ಜಾಯಿಕಾಯಿ, ವೀಳ್ಯದೆಲೆ, ಅರಸಿನ, ಕರಿಮೆಣಸು, ವೆನಿಲ್ಲಾ, ಪಪ್ಪಾಯಿ ಉಪಬೆಳೆಗಳು.

ಅಕ್ಕಪಕ್ಕದ ತೋಟಗಳಲ್ಲಿ ಮರಗಿಡಗಳೆಲ್ಲ ಒಣಗಿ ಸೊರಗಿದ್ದವು. ಯಾಕೆಂದರೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ ಹಿಂದಿನ ಎರಡು ವರುಷಗಳಲ್ಲಿ ಮಳೆ ಬಂದದ್ದೇ ಇಲ್ಲ ಅನ್ನಬೇಕು. ವೀರಪ್ಪರ ತೋಟಕ್ಕೆ ನಾವು ಭೇಟಿ ಕೊಟ್ಟ ವರುಷ ಅಕ್ಟೋಬರ್ ತನಕ ಅಲ್ಪಸ್ವಲ್ಪ ಮಳೆ. ಅನಂತರ ಒಂದು ಹನಿ ಮಳೆ ಬಿದ್ದಿರಲಿಲ್ಲ. ಅಂತಹ ಸನ್ನಿವೇಶದಲ್ಲಿ ಇವರ ತೋಟದ ಮರಗಿಡಗಳು ಬಾಡಿದ್ದರೂ ಹಸುರು ಉಳಿದಿತ್ತು.

"ನಿಮ್ ತೋಟದಾಗೆ ನೀರಿನ್ ಪಸೆ ಉಳಿಸಿಕೊಳ್ಳಾಕೆ ಏನ್ ಮಾಡಿದ್ರಿ?" ಎಂಬ ನಮ್ಮ ಪ್ರಶ್ನೆಗೆ ವೀರಪ್ಪರ ಉತ್ತರ, "ನಮ್ ತೋಟದಾಗೆ ಏನೂ ಬೇಸಾಯ ಮಾಡಿಲ್ಲ. ಅಂದ್ರೆ ಶೂನ್ಯ ಬೇಸಾಯ. ಹಾಗಂತ ಒಂದೇಟಿಗೆ ನಾನ್ ಇಡೀ ತೋಟ ಶೂನ್ಯ ಬೇಸಾಯಕ್ಕೆ ತರ‍್ಲಿಲ್ಲ. ಹತ್ತುಹತ್ತು ಗುಂಟೇನೇ ಬಿಡಿಸ್ತಾ ಬಂದೆ. ಇಡೀ ತೋಟಾನ ಶೂನ್ಯ ಬೇಸಾಯಕ್ಕೆ ತರೋದಕ್ಕೆ ನಂಗೆ ಇಪ್ಪತ್ತು ವರ್ಷ ಬೇಕಾತು."

ಆ ತಾಲೂಕಿನ ಎಲ್ಲ ರೈತರಂತೆ ವೀರಪ್ಪರಿಗೂ ನೀರಿನ ಸಮಸ್ಯೆ. ಹಳೆಯ ಬಾವಿಯ ನೀರು ಕಡಿಮೆಯಾಗುತ್ತ ಬಂದಂತೆ ಎರಡನೇ ಬಾವಿ ತೋಡಿಸಿದರು. ಇದರ ನೀರೂ ವಿಸ್ತರಿಸುತ್ತಿದ್ದ ತೋಟಕ್ಕೆ ಸಾಲದಾಯಿತು. ಆಗ ಕೊಳವೆಬಾವಿ ಕೊರೆಸಲು ಶುರು ಮಾಡಿದರು. "ಹದಿನೆಂಟು ಬೋರ್ ಹೊಡೆಸಿದೆ. ಒಂದ್ರಲ್ಲೂ ನೀರ್ ಸಿಕ್ಲಿಲ್ಲ. ಕೆಲವು ಬೋರ್ ೩೫೦ ಅಡಿ ಹೊಡ್ಸಿದ್ದೆ. ಕೊನೆಗೆ ಆ ಕಲ್ಲುಬಂಡೆ ಹತ್ರ ಬೋರ್ ತೆಗ್ಸಿದೆ. ಅಲ್ಲಿ ೬೦ ಅಡಿಗೇ ನೀರು ಸಿಕ್ತು" ಎಂದು ವೀರಪ್ಪ ನೆನಪು ಮಾಡಿಕೊಂಡರು.

ಇನ್ನು ಹೊಸ ಕೊಳವೆಬಾವಿ ಬೇಡ; ಇರುವ ನೀರಿನಲ್ಲೇ ಕೃಷಿ ಮಾಡಬೇಕೆಂದು ಶೂನ್ಯ ಬೇಸಾಯ ಪದ್ಧತಿ ಅನುಸರಿಸಲು ನಿರ್ಧರಿಸಿದರು. ತೋಟದಲ್ಲಿ ಉಳುಮೆ ಮಾಡೋದನ್ನು ನಿಲ್ಲಿಸಿದರು. ಸಣ್ಣ ಮಟ್ಟದಲ್ಲಿ ಎರೆಹುಳಗೊಬ್ಬರ ಮಾಡತೊಡಗಿದರು. ಕ್ರಮೇಣ ರೂ. ೨ ಲಕ್ಷ ವೆಚ್ಚದಲ್ಲಿ ಎರೆಹುಳ ಸಾಕಾಣಿಕೆ ಘಟಕದ ನಿರ್ಮಾಣ. ತೋಟಕ್ಕೆ ಬಳಸಿ ಮಿಕ್ಕಿದ ಎರೆಹುಳ ಗೊಬ್ಬರ ಮಾರಾಟ.

"ಎರೆಹುಳ ಗೊಬ್ಬರ ಹಾಕಿದ್ರಿಂದಾಗಿ ಮೂರು ವರುಷ ಮಳೆ ಇಲ್ಲದಿದ್ರೂ ಗಿಡಗಳ ಬುಡದಲ್ಲಿ ನೀರಿನ ಪಸೆ ಉಳಿದೈತೆ. ಯಾಕಂದ್ರೆ ಎರೆಹುಳಗಳೇ ಉಳುಮೆ ಮಾಡ್ತವೆ" ಎಂದರು ವೀರಪ್ಪ. ತೆಂಗಿನ ಮರದ ಬುಡದಿಂದ ಮೂರು ಅಡಿ ದೂರದಲ್ಲಿ ಮರದ ಸುತ್ತಲೂ ಅರ್ಧ ಇಂಚು ಆಳಕ್ಕೆ ಮಣ್ಣನ್ನು ಹಾರೆಯಿಂದ ತೆಗೆಯುತ್ತಾರೆ. ಅಲ್ಲಿ ಎರೆಹುಳಗೊಬ್ಬರ ಹರಡಿ ಅದರ ಮೇಲೆ ಮಣ್ಣು ಹಾಕಿ ಮುಚ್ಚುತ್ತಾರೆ.

ಶೂನ್ಯ ಬೇಸಾಯದಿಂದ ಅವರ ಇಳುವರಿ ಕಡಿಮೆಯಾಗಿಲ್ಲ. ಸರಾಸರಿ ಒಂದು ಅಡಿಕೆಮರದಿಂದ ೨ ಕಿಲೋ ಒಣ ಅಡಿಕೆ ಇಳುವರಿ. "ಏನೂ ಬೇಸಾಯ ಮಾಡದೆ ಮೂರೆಕ್ರೆಯಿಂದ ನಂಗೆ ೨೪ ಕ್ವಿಂಟಾಲ್ ಒಣ ಅಡಿಕೆ ಸಿಗ್ತಿದೆ. ಅದೇ ನಮ್ ಕಡೆ ಉಳುಮೆ ಮಾಡಿ ಪೇಟೆಗೊಬ್ರ ಹಾಕೋರಿಗೂ ಸರಾಸರಿ ಇಷ್ಟು ಇಳುವರಿ ಸಿಗಲ್ಲ" ಎಂದು ವೀರಪ್ಪ ವಿವರಿಸಿದರು.

ತಮ್ಮ ಕೊಳವೆಬಾವಿಗೆ ಜಲಮರುಪೂರಣ ಮಾಡುತ್ತಿರುವ ವೀರಪ್ಪ ಕೃಷಿಕರನ್ನು ಎಚ್ಚರಿಸುತ್ತಾರೆ, "ಎಲ್ಲ ರೈತರೂ ಮಳೆನೀರು ಇಂಗಿಸಬೇಕು. ಇಲ್ಲಾಂದ್ರೆ ಬಹಳ ಕಷ್ಟಕ್ಕೆ ಸಿಕ್‍ಹಾಕ್ಕೊಳ್ತಾರೆ."

ಭಾನುವಾರ, ಆಗಸ್ಟ್ 29, 2010

ಕೃಷಿ ಹೊಂಡಗಳ ಗ್ರಾಮ “ರುದ್ರವಾಡಿ”

ಆಳಂದ ಸಮೀಪದ ರುದ್ರವಾಡಿಯ ಆದಿನಾಥ್ ಹೀರಾ ಅವರು ನಾಡಿನ ಎಲ್ಲ ಮೇಧಾವಿ ರೈತರ ಪ್ರತಿನಿದಿ. ಹೀರಾ ಅವರ ಪುಟ್ಟ ಊರಲ್ಲಿ ನಿಜಕ್ಕೂ ನಿತ್ಯೋತ್ಸವ. ಅಲ್ಲಿ ಬೀಳುವ ಪ್ರತಿ ಹನಿ ಮಳೆ ನೀರನ್ನೂ ಅವರು ಹಿಡಿದಿಟ್ಟುಕೊಳ್ಳುತ್ತಾರೆ. ಒಂದೇ ಒಂದು ಮಳೆ ಬಿದ್ದರೆ ಸಾಕು, ಅಲ್ಲಿನ ಮೂರು ಕೃಷಿ ಹೊಂಡಗಳು ಬರೋಬ್ಬರಿ ೧ ಕೋಟಿ ೫ ಸಾವಿರ ಲೀಟರ್ ನೀರನ್ನು ತಮ್ಮೊಡಲಲ್ಲಿ ತುಂಬಿಸಿಕೊಳ್ಳುತ್ತವೆ. ಆ ದಿನದಿಂದಲೇ ಅದು ಇಂಗಲು ಆರಂಭ. ವಾರೊಪ್ಪತ್ತಿನಲ್ಲಿ ಎಲ್ಲವೂ ನಿಧಾನಕ್ಕೆ ನೆಲದ ಕೆಳಕ್ಕೆ ಜಾರಿ ಅಂತರ್ಜಲವೆಂಬ ಸೇಫ್ ಲಾಕರ್‌ನಲ್ಲಿ ಭದ್ರವಾಗಿ ಬಿಡುತ್ತದೆ. ಹೆಚ್ಚುವರಿ ನೀರು ಮಾತ್ರ ಹೊಂಡದ ಮೇಲೆಯೇ ಅಲ್ಲಾಡಿ, ಅಲ್ಲಾಡಿ ತಿಳಿಗೊಂಡು ನಿಂತುಕೊಳ್ಳುತ್ತದೆ. ಮತ್ತೊಂದು ಮಳೆ ಬರುವವರೆಗೆ ಅದು ಬಳಕೆಗೆ ಸಂಪೂರ್ಣ ಉಚಿತ.

ರುದ್ರವಾಡಿಯೆಂದರೆ ಇಂದು ಕೃಷಿ ಹೊಂಡಗಳ ಗ್ರಾಮ. ಮಳೆ ನೀರು ಸಂಗ್ರಹಕ್ಕೆ ಮಾದರಿ ಅಲ್ಲಿನ ಕೃಷಿ, ನೀರಾವರಿ. ಅಷ್ಟೊಂದು ಸಮರ್ಥ ಉದಾಹರಣೆಯಾಗಿ ಗ್ರಾಮ ಬೆಳೆದು ನಿಂತದ್ದು ಹೀರಾರ ಕ್ರಿಯಾಶೀಲತೆ, ಇಚ್ಛಾಶಕ್ತಿ ಹಾಗೂ ನೀರ ಪ್ರೀತಿಯಿಂದಾಗಿ. ಇಂಥ ಗುಣಗಳೇ ಅವರಿಗೆ ೨೦೦೩ರಲ್ಲಿ ಕೃಷಿ ಪಂಡಿತ ಪ್ರಶಸ್ತಿಯನ್ನೂ ತಂದು ಕೊಟ್ಟಿವೆ. ಹಾಗೆಂದು ಅಂಥದ್ದೊಂದು ಪಾಂಡಿತ್ಯ ಆ ಪ್ರಗತಿಪರ ರೈತನಿಗೆ ಜನ್ಮದೊಂದಿಗೇ ಬಂದ ಬಳುವಳಿಯಲ್ಲ. ಯಾವುದೇ ವಿಶ್ವವಿದ್ಯಾಲಯದ ನಾಲ್ಕು ಗೋಡೆಗಳ ಮಧ್ಯೆ ಸಿಕ್ಕದ್ದೂ ಅಲ್ಲ. ಹೊಲವೆಂಬ ಪ್ರಯೋಗಶಾಲೆಯ ಮೂಸೆಯಲ್ಲಿ ನಿರಂತರ ಪರಿಶ್ರಮದಿಂದ ದಕ್ಕಿಸಿಕೊಂಡದ್ದು. ನೀರಿನ ಸಂಕಷ್ಟದಲ್ಲಿ ಬೆಂದ ಬಳಿಕ ನಶಿಸಿದ ಅಜ್ಞಾನದ ಕೊನೆಯಲ್ಲಿ ಗೋಚರಿಸಿದ್ದು. ಬರಡು ಭೂಮಿಯ ಬಿರುಕುಗಳನ್ನು ಬಿಡದೇ ತಡಕಾಡಿ ಉತ್ತರದ ರೂಪದಲ್ಲಿ ಕಂಡುಕೊಂಡದ್ದು.

ಪಾರಂಪರಿಕ ಕೃಷಿ ಬದುಕಿನ ಜಿವಂತಿಕೆಯ ಧನಾತ್ಮಕ ಅಂಶಗಳನ್ನು ಹೀರಾ, ಇಂದು ತಾವು ಮಾತ್ರ ಹೀರಿಕೊಂಡು ಕುಳಿತಿಲ್ಲ. ಸುತ್ತ ಮುತ್ತಲಿನ ಹತ್ತಾರು ರೈತರನ್ನೂ ಈ ನಿಟ್ಟಿನಲ್ಲಿ ಪ್ರೇರೇಪಿಸುತ್ತಿದ್ದಾರೆ. ನೀರಿಲ್ಲದೇ ನಲುಗಿದ ಯಾವುದೇ ಭೂಮಿಯ ನಟ್ಟ ನಡುವೆ ಹೋಗಿ ನಿಂತ ಸ್ಥಳೀಯರಿಗೆ ಬುದ್ಧಿ ಹೇಳುತ್ತಿದ್ದಾರೆ. ಸಭೆ- ಸಮಾರಂಭಗಳಿಗೆ ಹೋಗಿ ಕತೆ-ಕವನಗಳ ಮೂಲಕ ನೀರೆಚ್ಚರ ಮೂಡಿಸುತ್ತಿದ್ದಾರೆ. ವಿಶ್ವ ವಿದ್ಯಾಲಯಗಳಿಗೆ ಹೋಗಿ ಉಪನ್ಯಾಸ ನೀಡುವ ಮಟ್ಟಕ್ಕೆ ಬೆಳೆದಿದ್ದಾರೆ.

ಒಬ್ಬ ಸಾಮಾನ್ಯ ರೈತನಿಗೆ ಇಷ್ಟೆಲ್ಲ ಸಾಸಲಾದದ್ದು ಹೇಗೆ ಎಂದು ಪ್ರಶ್ನಿಸಿದರೆ, ಹೀರಾ ಅಷ್ಟೇ ಮುಗ್ಧವಾಗಿ 'ಹಂಗೇನಿಲ್ಲ ಸರ, ಚಿಕ್ಕವ್ರ ಇದ್ದಾಗ ಸಾಲಿಗೂ ಹೋಗಲಾರದ ನೀರಿಗಾಗಿ ಎಷ್ಟ್ ಕಷ್ಟ ಬಿದ್ದೇವಿ ಅಂದ್ರ, ಅದಾ ಎಲ್ಲ ಕಲಿಶಿಕೊಟ್ಟು ಬಿಡ್ತು. ಹೊಲ-ಮನಿ ಉಳಿಶಿಕೊಂಬೋ ಜರೂರಿತ್ತಲ್ಲ, ಅದಕ್ಕಾಗಿ ಏನಾದರೊಂದು ಮಾಡಾಬೇಕಿತ್ತು. ಏನೇನಾರ ಮಾಡೋ ಬದ್ಲು, ಅದರಾಗ ಸೋಲು ಉಣ್ಣೊ ಬದ್ಲು, ಮಳಿ ನೀರು ಹಿಡಕೊಳ್ಳೋಕ ಹೊಂಟ್ವಿ. ತಂತಾನ ಹೊಲ-ಮನಿ ಅಷ್ಟೇ ಅಲ್ಲ ಇಡೀ ಊರೇ ನಲಿದಾಡಕ್ಕೆ ಹತ್ಯಿತು.' ಎಂದುತ್ತರಿಸುತ್ತಾರೆ.

'ಕತಿ ಹೇಳಕೊಂತ ಹೊಂಟ್ರ ಭಾಳ ಇದಾವು ಬಿಡ್ರೀ ಸಾಹೇಬ್ರ...' ಎನ್ನುತ್ತಲೇ ಹೀರಾ ತಮ್ಮ ಯಶೋಗಾಥೆಯನ್ನು ಬಿಚ್ಚಿಡುತ್ತಾರೆ. ಅದು ೧೯೭೨ರ ಸುಮಾರು. ಆಗಿನ್ನೂ ಅವರು ವಿದ್ಯಾರ್ಥಿ ದೆಸೆಯಲ್ಲಿದ್ದರು. ಗುಲ್ಬರ್ಗದ ಶರಣ ಬಸಪ್ಪ ದೇವಾಲಯ ಶಾಲೆಯಲ್ಲಿ ಓದುತ್ತಿದ್ದರು. ಆ ವರ್ಷ ಮಳೆಯೇ ಆಗಲಿಲ್ಲ. ಭೋಸ್ಗಾ ಕೆರೆ ಬತ್ತಿತು. ಗುಲ್ಬರ್ಗ ಕೆರೆಯೂ ಒಣಗಿತು. ಸುತ್ತಲೆಲ್ಲೂ ನೀರಿಲ್ಲದೇ ೧೫ ದಿನ ಶಾಲೆಗೇ ರಜೆ ಘೋಷಿಸಲಾಯಿತು. ಇದೇ ನೀರಿನ ಕೆಲಸಕ್ಕೆ ಪ್ರೇರಣೆ ಒದಗಿಸಿತು.

ಊರಿಗೆ (ರುದ್ರವಾಡಿ) ಹೋದರೆ ಅಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಕುಡಿಯಲೂ ನೀರಿಲ್ಲದ ಪರಿಸ್ಥಿತಿ. ರಾತ್ರಿ ಎರಡು ಗಂಟೆಗೆ ಊರ ಮುಂದಿನ ೪೦ ಅಡಿ ಆಳದ ಬಾವಿಯ ಮೆಟ್ಟಿಲಿಳಿದು ಕೆಳಗೆ ಹೋಗಿ ಅಲ್ಪ ಸ್ವಲ್ಪ ಸಂಗ್ರಹಗೊಂಡಿದ್ದ ನೀರನ್ನೇ ಲೋಟದಲ್ಲಿ ಕೆರೆದೂ, ಕೆರೆದು ಕೊಡಕ್ಕೆ ತುಂಬಿಸಿಕೊಂಡು ಬರಬೇಕಿತ್ತು. ಮಳೆ ನೀರು ಸಂಗ್ರಹದ ಯೋಚನೆ ಬಂದದ್ದೇ ಆಗ. ಮುಂದಿನ ಮಳೆಯ ಹೊತ್ತಿಗೆ ಹೊಲದ ಪಕ್ಕದಲ್ಲಿ ಹರಿಯುತ್ತಿದ್ದ ಹಳ್ಳಕ್ಕೆ ಒಡ್ಡು ಹಾಕಿ, ಹರಿದು ಹೋಗುತ್ತಿದ್ದ ಮಳೆ ನೀರನ್ನು ನಿಲ್ಲಿಸಿಕೊಳ್ಳಲಾಯಿತು.

ನೀರಿನ ಇಂಥ ಪರದಾಟ ಗುಲ್ಬರ್ಗದ ಶಾಲೆಗೆ ಶರಣು ಹೊಡೆಸಿತು. ಊರಿನ ಪಕ್ಕದ ಹೊದ್ಲೂರು ಶಾಲೆಗೆ ಸೇರಿದ್ದಾಯಿತು. ಪ್ರತಿದಿನ ಶಾಲೆ ಬಿಟ್ಟು ಹೊಲದ ಮೇಲೆಯೇ ಹಾದು ಬರಬೇಕಿತ್ತು. ಆಗೆಲ್ಲ ಕಣ್ಣಿಗೆ ಕತ್ತಲು ಕವಿಯುವವರೆಗೂ ಕಲ್ಲು ಮಣ್ಣು ತಂದು ಹಳ್ಳದ ಒಡ್ಡು ಎತ್ತರಿಸುವ ಕಾರ್ಯ ಮಾಡಲಾಗುತ್ತಿತ್ತು. ಇಲ್ಲಿ ನಿಂತದ್ದು ಬಸಿ ನೀರಾಗಿ ಬಾವಿಗೆ ಬಂದಿಳಿದಾಗ ಸಂತಸವೋ ಸಂತಸ.

೮೦ರ ದಶಕಕ್ಕೆ ಬರುವಷ್ಟರಲ್ಲಿ ಓದು ನಿಲ್ಲಿಸಿ ಸಂಪೂರ್ಣ ಕೃಷಿಯಲ್ಲಿ ತೊಡಗಿಸಿಕೊಂಡಾಗಿತ್ತು. ೮೭ರವರೆಗೂ ಎಲ್ಲವೂ ಸುಸೂತ್ರವಾಗಿ ಸಾಗಿತ್ತು. ೧೯ ಎಕರೆಯ ಜಮೀನಿನಲ್ಲಿ ಮೊದಲೇ ಇದ್ದ ಬಾವಿಯನ್ನು ಇನ್ನಷ್ಟು ಆಳ ಮಾಡಿ ಹೇಗೊ ಬೆಳೆಗಳಿಗೆ ನೀರು ಒದಗಿಸಲಾಗುತ್ತಿತ್ತು. ಆ ವರ್ಷ ಮತ್ತೆ ಅಟಕಾಯಿಸಿಕೊಂಡ ಬರ 'ಬೋರ್‌ವೆಲ್ ಜಮಾನ'ಕ್ಕೆ ರೈತರನ್ನು ಕೊಂಡೊಯ್ದಿತ್ತು. ಹೀರಾರ ಪಕ್ಕದ ಜಮೀನಿನವ ೩೦೦ ಅಡಿಯ ಬೋರ್ ಕೊರೆಸಿದ್ದೇ ತಡ ಇದ್ದೊಂದು ಬಾವಿಯೂ ಬತ್ತಿತು. ಅನಿವಾರ್ಯವಾಗಿ ಹೀರಾ ಸಹ ಬೋರ್‌ವೆಲ್‌ನ ಮೊರೆ ಹೋದರು. ಅಂತರ್ಜಲ ಹೆಚ್ಚಳ ಉಪಾಯ ಕಂಡದ್ದೇ ಆಗ. ನಾಲೆ ಮಾಡಿ ಮಳೆ ನೀರನ್ನು ಬೋರ್‌ಗೆ ಹರಿಸಲಾಯಿತು. ಆದರೆ ಇದೂ ಹೆಚ್ಚು ದಿನ ಬಾಳಲಿಲ್ಲ. ಮುಂದಿನ ಬೇಸಿಗೆ ಹೊತ್ತಿಗೆ ಪಕ್ಕದ ಬೋರ್‌ವೆಲ್‌ನ ಆಳ ಹೆಚ್ಚಿಸಿದಾಗ ಹೀರಾರ ಬೋರ್‌ವೆಲ್‌ನೊಳಕ್ಕೆ ಇಳಿಯುತ್ತಿದ್ದ ನೀರು ಒಳಗೊಳಗೇ ಪಕ್ಕದ ಜಮೀನಿಗೆ ಹರಿಯತೊಡಗಿತು. ಇವರದ್ದು ಒಣಗಿ ನಿಂತಿತು.

ಅಕ್ಕ ಪಕ್ಕದಲ್ಲಿ ಅಸ್ತಿತ್ವದಲ್ಲಿದ್ದ ಎರಡು ಬೋರ್‌ವೆಲ್‌ಗಳ ನಡುವೆ ಮತ್ತೊಂದು ಬೋರ್ ಕೊರೆಸಿ ಕೆಳಗಿನ ಪದರದಲ್ಲಿದ್ದ ಬಂಡೆಯನ್ನು ಸೋಟಕಗಳಿಂದ ಸಿಡಿಸಲಾಯಿತು.ನೀರೇನೋ ಸಿಕ್ಕಿತು. ಆದರೆ ಇಂಥ ಸಾಹಸಗಳು ಶಾಶ್ವತವಲ್ಲ ಎಂಬುದನ್ನು ಮನಗಾಣಲು ಹೆಚ್ಚು ದಿನ ಹಿಡಿಯಲಿಲ್ಲ. ಏಕೆಂದರೆ ಸುತ್ತ ಮುತ್ತಲೆಲ್ಲ ಬೋರ್‌ಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ನೀರ ಖಜಾನೆಯನ್ನು ಬರಿದು ಮಾಡುವವರ ಸಂಖ್ಯೆ ಹೆಚ್ಚಿತೇ ವಿನಃ ಅದನ್ನು ತುಂಬುವವರಿರಲಿಲ್ಲ. ಅದೇ ವೇಳೆ ಮಳೆಗಾಲದಲ್ಲಿ ಊರ ಮುಂದಿನ ಹಳ್ಳದಲ್ಲಿ ದಂಡಿಯಾಗಿ ಹರಿದು ವ್ಯರ್ಥವಾಗುತ್ತಿತ್ತು.

ಅದು ೨೦೦೨ರ ಸುಮಾರು. ಶಾಲಾ ದಿನಗಳಲ್ಲಿ ಕಂಡಿದ್ದ ನೀರಿಂಗಿಸುವ ಕನಸು ಮತ್ತೆ ನೆನಪಾಯಿತು. ಒಡ್ಡು, ಇಂಗು ಗುಂಡಿಗಳಿಂದ ಮಾತ್ರ ಸಮಸ್ಯೆಗೆ ಕೊನೆ ಹಾಡಲು ಸಾಧ್ಯ ಎಂದು ನಿಶ್ಚಯಿಸಿದ್ದವರಿಗೆ ನೆರವಾದವರು ಜಲಾನಯನ ಅಭಿವೃದ್ಧಿ ಅಕಾರಿ ಮಲ್ಲಾರೆಡ್ಡಿ. ಅದಾಗಲೇ ತಂದೆಯ ಕಾಲದಿಂದ ಅಸ್ತಿತ್ವದಲ್ಲಿದ್ದ ಚೆಕ್ ಡ್ಯಾಮ್ ಸುಭದ್ರವಾಗಿದ್ದುದು ಕಣ್ಣ ಮುಂದಿತ್ತು. ಇಂಥವೇ ಕೃಷಿ ಹೊಂಡಗಳನ್ನು ಮತ್ತಷ್ಟು ಮಾಡಬಾರದೇಕೆ ಎನಿಸಿತು. ೧೫ ಅಡಿ ಅಗಲ, ೮ ಅಡಿ ಆಳ, ೩೦ ಅಡಿಯಷ್ಟು ಉದ್ದದ ಪುಟ್ಟ ಕೆರೆ ಜಮೀನಿನಲ್ಲಿ ನಿರ್ಮಾಣವಾಯಿತು. ಅದರ ಫಲ ಅಕಾರಿಗಳ ಕಣ್ಣನ್ನೂ ತೆರೆಸಿತು. ಗ್ರಾಮಕ್ಕೆ ೩೦ ಕೃಷಿ ಹೊಂಡಗಳು, ೩ ಕೆರೆ, ೨ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಸರಕಾರದಿಂದ ಮಂಜೂರಾತಿ ದೊರೆಯಿತು. ಇಡೀ ಊರವರನ್ನು ಹೀರುಗುಂಡಿಗಳ ನಿರ್ಮಾಣಕ್ಕೆ ಹೀರಾ ಪ್ರೇರೇಪಿಸಿದರು. ಇದೊಂದು ಆಂದೋಲನವಾಯಿತು.

ನೋಡ ನೋಡುತ್ತಿದ್ದಂತೆ ಇಡೀ ಗ್ರಾಮ ಕೃಷಿ ಹೊಂಡಗಳಿಂದಾವೃತವಾಯಿತು. ಮಳೆ ನೀರು ಏನೇ ಹಠ ಮಾಡಿದರೂ ರುದ್ರವಾಡಿಯವರ ಕಾವಲನ್ನು ತಪ್ಪಿಸಿಕೊಂಡು ಹೊರ ಹೋಗದಂತಾಯಿತು. ಕುಳಿತಲ್ಲಿ, ನಿಂತಲ್ಲಿ, ನಡೆದಲ್ಲಿ, ನೆರೆದಲ್ಲಿ ನೀರಿಂಗಿಸುವುದು ಹೇಗೆಂಬುದರ ಬಗ್ಗೆ ಹೀರಾ ಚರ್ಚಿಸಲಾರಂಭಿಸಿದರು. ಓಡಿ ಹೋಗುವ ಮಳೆ ನೀರನ್ನು ಕಟ್ಟಿ ಹಾಕಿ ಇಂಗಿಸಿಕೊಳ್ಳುವುದು ರೈತರ ಸ್ವಭಾವದಂತಾಯಿತು. ರುದ್ರವಾಡಿಯಲ್ಲಿಂದು ಮಳೆ ಸುರಿದರೆ ಸಾಕು. ಅದೊಂದು ಹಬ್ಬ, ಕೋಟಿ ಕೋಟಿ ಲೀಟರ್ ನೀರು ಅಂತರ್ಜಲ ಖಜಾನೆಗೆ ನೇರವಾಗಿ ಹೋಗಿ ಡೆಪಾಸಿಟ್ ಆಗುತ್ತದೆ. ಅದರ ಬಡ್ಡಿಯಲ್ಲೇ ಬೇಸಿಗೆಯನ್ನು ಕಳೆಯುತ್ತಿದ್ದಾರೆ ಜನ. ಯಶಸ್ಸಿನ ಕದ ತೆರೆಯುತ್ತ ಹೋದಂತೆಲ್ಲ ಹೀರಾ ಹೀರೊ ಆದರು. ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂತು. ಖ್ಯಾತಿಯನ್ನು ಪ್ರಯೋಗ, ಪ್ರಯತ್ನಗಳ ಛಾತಿಯಾಗಿ ಪರಿವರ್ತಿಸಿಕೊಂಡರವರು. ರುದ್ರವಾಡಿಯಲ್ಲಿಂದು ಬರದ ರುದ್ರತಾಂಡವ ಇತಿಹಾಸದ ಕತೆಯಾಗಿಯಷ್ಟೇ ಉಳಿದಿದೆ. ಅಂಥ ನೆನಪು ಸಹ ಮಾಸಿ ಹೋಗಲು ಹೆಚ್ಚು ದಿನವಿಲ್ಲ ಎನ್ನುತ್ತಾರೆ ಅವರು ವಿಶ್ವಾಸದಿಂದ.

ಗುರುವಾರ, ಆಗಸ್ಟ್ 26, 2010

ಸುಸ್ಥಿರ ಕೃಷಿ ಶಿಖರ ಶಿವಣ್ಣಗೌಡ

ಶಿವಣ್ಣಗೌಡರು ಮಿತ ಭಾಷಿ, ಮೃದು ಭಾಷಿ. ಮೈಸೂರು ಆಕಾಶವಾಣಿಯ 'ಬಾನುಲಿ ಕೃಷಿ ಬೆಳಗು' ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಜಮೀನಿನಲ್ಲೂ ಇಂತಹ ಕಾರ್ಯಕ್ರಮ ಮಾಡಿ ತಾನು ಮಾಡುತ್ತಿರುವ ಸುಸ್ಥಿರ ಬೇಸಾಯ ವಿಧಾನಗಳನ್ನು ಇತರ ರೈತರಿಗೆ ಪರಿಚಯಿಸುವ ಮಹದೋದ್ದೇಶ ಹೊತ್ತು ನನ್ನ ಬಳಿ ಬಂದಿದ್ದರು. ಅವರ ಮಾತು, ಸರಳ ಚಿಂತನೆ, ಕಾರ್ಯ ತತ್ಪರತೆ ಕಂಡು ನಾನೂ ಬೆರಗಾದೆ. ವ್ಯವಸಾಯದ ಮೂಲ ಉದ್ದೇಶವಾದರೂ ಏನು? ರೈತ ತನ್ನ ಜಮೀನಿನಲ್ಲಿ ತನಗೆ ಬೇಕಾದುದನ್ನೆಲ್ಲಾ ಬೆಳೆಯುವುದು ತಾನೆ? ಇದೇ 'ಸುಸ್ಥಿರ ಕೃಷಿ'. ತನಗೆ ಬೇಕಾದ್ದನ್ನೆಲ್ಲಾ ಬೆಳೆದು, ಮಾರುಕಟ್ಟೆಗಾಗಿ, ಆರ್ಥಿಕ ಸಬಲತೆಗಾಗಿ ಒಂದೆರಡು ವಾಣಿಜ್ಯ ಬೆಳೆ ಬೆಳೆದ್ರೆ ಮಾರುಕಟ್ಟೆ ಏರಿಳಿತಗಳು ರೈತನನ್ನು ಭಾಧಿಸೋಲ್ಲ. ವ್ಯವಸಾಯದ ಸುಸ್ಥಿರತೆಗೆ ಮಿಶ್ರ ಬೇಸಾಯದ ಚಿಂತನೆ ಸಹಕಾರಿ. ಶಿವಣ್ಣಗೌಡರೂ ಸಹ ಮಾಡುತ್ತಿರುವುದು ಇದನ್ನೇ. ಇವರ ಒಟ್ಟು ಕುಟುಂಬಕ್ಕಿರುವ ಜಮೀನು, ಆರು ಎಕರೆ ನೀರಾವರಿ ಹಾಗೂ 4 ಎಕರೆ ಖುಷ್ಕಿ ಮಾತ್ರ. ಇದರಲ್ಲಿ ಹತ್ತು ಜನರ ಜೀವನ ಸಾಗಬೇಕು. ಶಿವಣ್ಣಗೌಡರು ಜಮೀನಿನಲ್ಲಿ ಪೋಷಿಸಿರುವ ಜೀವ ವೈವಿಧ್ಯವಾದರೂ ಎಂತಹುದು. ಒಂದು ಜತೆ ಎತ್ತು, ಮೂರು ಸೀಮೆ ಹಸು, ಮೂರು ಎಮ್ಮೆ, ಒಂದು ನಾಟಿ ಹಸು, ಹತ್ತಾರು ಕುರಿ, ನಾಟಿ ಕೋಳಿಗಳು, ಗೊಬ್ಬರಕ್ಕಾಗಿ ಎರೆಹುಳು ಸಾಕಣೆ, ಖುಷ್ಕಿಯಲ್ಲಿ ರಾಗಿ, ತೊಗರಿ, ಎಳ್ಳು, ಹರಳು, ಹುರುಳಿ, ಅಲಸಂದೆ, ಹಸಿಕಡಲೆ, ಅವರೆ, ಹುಚ್ಚೆಳ್ಳು, ಬಗೆಬಗೆಯ ಸೊಪ್ಪು, ತರಕಾರಿಗಳು, ನೀರಾವರಿಯಲ್ಲಿ ನಾಲ್ಕು ಎಕರೆ ಕಬ್ಬು, ಎರಡು ಎಕರೆ ಭತ್ತ, ಮನೆಗೆ ಬೇಕಾದ ಎಲ್ಲ ಜಾತಿಯ ಮರಗಿಡಗಳು, ಹೆಸರಿಸುವುದಾದರೆ 22 ಆಲ, 30 ಹೊಂಗೆ, 700 ಅಕೇಶಿಯ, 50 ತೆಂಗು, 70 ತೇಗ, 16 ಸಿಲ್ವರ್, 20 ಸವರ್ೆ ಮರ, 25 ಬೇವಿನ ಮರಗಳು, 60 ನೀಲಗಿರಿ, 10 ಬುಗರಿ ಮರ, 5 ಜಂಬುನೇರಳೆ ಮರ, 6 ಅಡಿಕೆ, 2 ಬಾಗೆ, 2 ಗೊಬ್ಬಳಿ, 5 ಬಿದಿರು ಮೆಳೆ, 2 ಮರ ಹತ್ತಿ, ಒಂದು ಬಸಲಿ ಮರ, 3 ಹಲಸು, 3 ಮಾವು, 2 ಸಪೋಟ, 5 ಹುಣಸೆ, ಒಂದು ಸೀಗೆ ಮೆಳೆ, 4 ಪಪ್ಪಾಯ, 20 ಬಾಳೆ ಗಿಡಗಳು, 2 ಅರಳಿ, 6ನೀರಂಜ ಒಟ್ಟು 775 ಮರಗಿಡಗಳು ಇವರ ಸುಸ್ಥಿರ ಕೃಷಿ ಬದುಕಿಗೆ ಸಾಕ್ಷಿಯಾಗಿ ನಿಂತಿವೆ. ಇದಲ್ಲವಾ ಬೆಳೆ ವೈವಿಧ್ಯತೆ. ಬರೀ ಭತ್ತ, ಕಬ್ಬು ಬೆಳೆಯುವ ಮಂಡ್ಯದಲ್ಲಿ ಶಿವಣ್ಣಗೌಡರು ವಿಭಿನ್ನವಾಗಿ ನಿಲ್ಲುತ್ತಾರೆ. ಹೆಚ್ಚು ಆಪ್ತರಾಗುತ್ತಾರೆ. ನೆಲಮುಟ್ಟಿ ದುಡಿಯುವ ಗೌಡರ ವ್ಯಕ್ತಿತ್ವ ಇಷ್ಟವಾಗುತ್ತೆ.

ಕಬ್ಬಿನ ಬೇಸಾಯದಲ್ಲಿ ಹೊಸ ಪ್ರಯೋಗಗಳನ್ನು ಶಿವಣ್ಣಗೌಡರು ಮಾಡಿದ್ದಾರೆ. ಹಿಂಗಾರಿನಲ್ಲಿ ಕಬ್ಬಿನೊಳಗೆ ಹಸಿಕಡಲೆ ಬೆಳೆದು ಯಶಸ್ವಿಯಾಗಿದ್ದಾರೆ. ಕಬ್ಬಿನ ತರಗು ಸುಡದೆ, ಕತಾಳೆ ಕಬ್ಬಿನ ಬೇಸಾಯ ಮಾಡಿದ್ದಾರೆ. ರಾಸಾಯನಿಕಗಳ ಬಳಕೆ ಮಿತಗೊಳಿಸಿದ್ದಾರೆ. 60 ರಿಂದ 65 ಟನ್ ಸರಾಸರಿ ಇಳುವರಿ ಪಡೆಯುತ್ತಿದ್ದಾರೆ.

ಆಕಾಶವಾಣಿ ಕಾರ್ಯಕ್ರಮಗಳನ್ನು ಕೇಳಿ ಸಾವಯವ ಬೇಸಾಯದತ್ತ ವಾಲಿರುವ ಶಿವಣ್ಣಗೌಡರು ಈಗ ಒಂದು ಎಕರೇಲಿ ಸಾವಯವ ಬೇಸಾಯ ವಿಧಾನದಲ್ಲಿ ನಾಟಿತಳಿ 'ರತ್ನಚೂಡಿ' ಭತ್ತವನ್ನು ಬೆಳೆದಿದ್ದಾರೆ. ಜಮೀನಿಗೆ ಹಟ್ಟಿಗೊಬ್ಬರ, ಎರೆಗೊಬ್ಬರ ಹಾಕಿ, ಹಸಿರೆಲೆ ಗೊಬ್ಬರವನ್ನೂ ಹಾಕಿ, ಸ್ಥಳೀಯ ತಳಿ 'ರತ್ನಚೂಡಿ' ಭತ್ತವನ್ನು ಒಟ್ಲು ಹಾಕಿ, ಸಸಿ ಏಳಿಸಿಕೊಂಡು ನಾಟಿ ಮಾಡಿದಾಗ ಗೌಡರಿಗೆ ತೊಂದರೆಕೊಟ್ಟಿದ್ದು ಭತ್ತದ ಸುಳಿಕೊರಕ ಕೀಟ.

ಸಾವಯವದಲ್ಲಿ ಭತ್ತ ಬೆಳೀತಿರೋರು ಕೀಟನಾಶಕ ಬಳಸುವಂತಿಲ್ಲ. ಬೇವಿನ ಕಷಾಯಕ್ಕೆ ಕೀಟ ಬಗ್ಗುತ್ತಿಲ್ಲ. ಆಗ ಮಂಡ್ಯದ ಪರತಂತ್ರಜೀವಿ ಪ್ರಯೋಗಾಲಯಕ್ಕೆ ಹೋಗಿ ಅಲ್ಲಿಂದ ಭತ್ತದ ಕಾಂಡಕೊರಕ ಕೀಟಕ್ಕೆ ಪರಭಕ್ಷಕ ಕೀಟಗಳನ್ನು ತಂದು, ಭತ್ತದ ಗದ್ದೆಯಲ್ಲಿ ಮೂರು ಬಾರಿ ಬಿಟ್ಟು, ಸುಳಿಕೊರಕ ಕೀಟವನ್ನು ನಿಯಂತ್ರಿಸಿದ್ದಾರೆ. ಸಮಗ್ರ ಪೀಡೆ ನಿರ್ವಹಣೆ ಕಲೆಯನ್ನು ಶಿವಣ್ಣಗೌಡರು ಕರಗತ ಮಾಡಿಕೊಂಡಿದ್ದಾರೆ. ಸಾವಯವ ಬೇಸಾಯದಲ್ಲಿ ಭತ್ತ ಬೆಳೆದ್ರೆ ಜಳ್ಳು ಕಡಿಮೆ, ಅಕ್ಕಿಯ ಇಳುವರಿ ಜಾಸ್ತಿ, ರುಚಿಯೂ ಸೊಗಸು ಅನ್ನುವುದು ಶಿವಣ್ಣಗೌಡರ ವಿಚಾರ.

ತಂದೆ ದೊಡ್ಡಕರಿಗೌಡ ಹಾಗೂ ತಾಯಿ ಮಾದಮ್ಮನವರನ್ನು ಕಂಡರೆ ಶಿವಣ್ಣಗೌಡರಿಗೆ ಬಲು ಪ್ರೀತಿ. ತಂದೆ ಕರಿಗೌಡರು ಎತ್ತುಗಳನ್ನು ಪ್ರೀತಿಯಿಂದ ಸಾಕಿರುವುದನ್ನು ಹೆಮ್ಮೆಯಿಂದ ಹೇಳ್ತಾರೆ. ಎತ್ತನ್ನ ಎಲ್ಲೋ ಕೊಟ್ಟಿಗೇಲಿ ಕಟ್ಟಿ ನಾವಿಲ್ಲಿ ಹಾಸಿಗೇಲಿ ಸುಖವಾಗಿ ಮಗಲಬಾರದು. ಅವೂ ನಮ್ಮ ಜತೇನೇ ಇರಬೇಕು ಅಂತ ತಂದೆ ಹೇಳ್ತಿರ್ತಾರೆ. ಹಾಗೇ ಅವರೂ ಸಹ. ತಮ್ಮ ಜತೆಯಲ್ಲಿಯೇ ರಾತ್ರಿಯ ವೇಳೆ ರಾಸುಗಳನ್ನು ಇಟ್ಟುಕೊಂಡಿರ್ತಾರೆ ಅಂತ ಅಭಿಮಾನಪೂರ್ವಕವಾಗಿ ನುಡಿಯುತ್ತಾರೆ. ಇಳಿ ವಯಸ್ಸಿನಲ್ಲೂ ಜಮೀನಿಗೆ ಬಂದು ಕೆಲಸ ಮಾಡುವ ತಾಯಿ ಮಾದಮ್ಮನವರನ್ನು ಕಂಡರೆ ಗೌಡರಿಗೆ ಅಕ್ಕರೆ. ಶಿವಣ್ಣಗೌಡರ ಜತೆ ಜೋಡೆತ್ತಿನ ಸಂಸಾರದ ನೊಗಕ್ಕೆ ಹೆಗಲುಕೊಟ್ಟಿರುವುದು ಪತ್ನಿ ಪ್ರಭಾವತಿ. ಪ್ರಭಾವತಿ ಅವರೂ ಗಂಡನ ಜತೆಜತೆಗೇ ದುಡಿದು ಕುಟುಂಬ ಕಟ್ಟಿದ್ದಾರೆ. ಅಣ್ಣ, ಅತ್ತಿಗೆ, ಅವರ ಎರಡು ಮಕ್ಕಳು, ತಮ್ಮ ಎರಡು ಮಕ್ಕಳು, ತಂದೆ ತಾಯಿ ಜತೆಗೂಡಿದ ಕೂಡು ಕುಟುಂಬ ಶಿವಣ್ಣ ಗೌಡರದ್ದು. ವ್ಯವಸಾಯಕ್ಕೆ ಒಟ್ಟು ಕುಟುಂಬಗಳು ಪೂರಕ ಎನ್ನುವ ಮಾತನ್ನು ಶಿವಣ್ಣಗೌಡರಂತಹ ಕುಟುಂಬ ನೋಡಿಯೇ ಹೇಳಿರಬೇಕು.

ಮಕ್ಕಳಲ್ಲಿ ವ್ಯವಸಾಯದ ಬಗೆಗಿನ ಪ್ರೀತಿಯನ್ನೂ ಈಗಿನಿಂದಲೇ ತುಂಬುತ್ತಿದ್ದಾರೆ ಗೌಡರು. ರಜಾದಿನಗಳಲ್ಲಿ ಮಕ್ಕಳನ್ನೂ ಸಹ ಜಮೀನಿಗೆ ದುಡಿಯಲು ಕರೆದುಕೊಂಡು ಹೋಗ್ತಾರೆ ಗೌಡರು. ಎರೆಹುಳು ಸಾಕಣೆ, ಕೊಟ್ಟಿಗೆ ನಿರ್ವಹಣೆಯಲ್ಲಿ ಮಕ್ಕಳ ಪಾಲುಂಟು.

'ತೊಗರಿ ಬೇಸಾಯ' ಗೌಡರ ಅಚ್ಚುಮೆಚ್ಚಿನ ಆರಂಭ. ತೊಗರಿಯಲ್ಲಿ ಕೂಳೆ ಬೆಳೆದೂ ಸಹ ಶಿವಣ್ಣಗೌಡರು ಯಶಸ್ವಿಯಾಗಿದ್ದಾರೆ.

ಬಿಆರ್ಜಿ - 1, ಬಿಆರ್ಜಿ-2, ಹೈದರಾಬಾದ್ 3 ಸಿ ತೊಗರಿ ತಳಿಯನ್ನು ತಮ್ಮ ಜಮೀನಿನಲ್ಲಿ ಬೆಳೆದಿದ್ದಾರೆ. ಅಧಿಕ ಇಳುವರಿ ಪಡೆದಿದ್ದಾರೆ. ತೊಗರಿಯನ್ನು ಬೇಳೆ ಮಾಡಿ ಮಾರುವ ಇರಾದೆ ಗೌಡರಿಗಿದೆ.ಶಿವಣ್ಣಗೌಡರದ್ದು ಸಂತೃಪ್ತ ಕೃಷಿ ಬದುಕು. ತನಗೆ ಬೇಕಾದ್ದನ್ನು ಎಲ್ಲವನ್ನೂ ತಾನು ಬೆಳೆಯುತ್ತಿದ್ದೇನೆಂಬ ಹೆಮ್ಮೆ ಶಿವಣ್ಣಗೌಡರಿಗಿದೆ. ವ್ಯವಸಾಯದಲ್ಲಿ ತೃಪ್ತಿ, ನೆಮ್ಮದಿ ಕಂಡಿದ್ದಾರೆ. ಈ ರೀತಿಯ ಸಂತೃಪ್ತಿ ಎಷ್ಟು ಜನ ರೈತರಿಗಿದೆ! ಸಂತೃಪ್ತ, ಸುಸ್ಥಿರ ಕೃಷಿಗೆ ಶಿಖರಪ್ರಾಯವಾಗಿರುವ ಶಿವಣ್ಣಗೌಡರ ಕೃಷಿ ಬದುಕಿನಿಂದ ಇತರರು ಕಲಿಯುವುದು ಬಹಳ ಇದೆ. ಕೃಷಿಯಲ್ಲಿ ಸಾಧಿಸುವವನಿಗೆ ಶಿವಣ್ಣಗೌಡರು ಆದರ್ಶ ಆಗಬಲ್ಲರು ಎಂಬುದು ನನ್ನ ಅನಿಸಿಕೆ. ನಮಸ್ಕಾರ !

ಲೇಖನ - ಎನ್ .ಕೇಶವಮೂರ್ತಿ


ಬುಧವಾರ, ಆಗಸ್ಟ್ 25, 2010

ಮಳೆ ನೀರು ಕೊಯ್ಲು ಕಡ್ಡಾಯ (ಬೆಂಗಳೂರಿನಲ್ಲಿ)

 ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB), ಬೆಂಗಳೂರು ಜಲಮಂಡಳಿ ಅಭಿಯಂತರ ಸಂಘ, ಅರ್ಘ್ಯಮ್ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ(KSCST)
ಹೊಸದಾಗಿ ತಿದ್ದುಪಡಿಗೊಳಿಸಿದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಅಧಿನಿಯಮ 2009ರ ಅನ್ವಯ ಬೆಂಗಳೂರಿನ ನಿರ್ಮಿತ ಹಾಗೂ ಹೊಸದಾಗಿ ನಿರ್ಮಿಸಲಾಗುವ ಅನೇಕ ಕಟ್ಟಡಗಳಲ್ಲಿ 2010ರ ಮೇ ತಿಂಗಳ 27ರ ಒಳಗೆ ಮಳೆ ನೀರು ಸಂಗ್ರಹಣೆ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಅಗಸ್ಟ್ 25, 2009ರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ತಿದ್ದುಪಡಿ ಅಧಿನಿಯಮದ ಪ್ರಕಾರ ಈ ಅಧಿಸೂಚನೆ ಜಾರಿಗೊಳಿಸಿದ 9 ತಿಂಗಳುಗಳ ಸಮಯದೊಳಗೆ 2400 ಚ.ಅ ಹಾಗೂ ಹೆಚ್ಚಿನ ವಿಸ್ತೀರ್ಣದ ನಿವೇಶನ ಹೊಂದಿರುವ ಕಟ್ಟಡದ ಮಾಲಿಕರು ಅಥವಾ ವಾಸಿಸುವವರು, ಅಥವಾ 1200 ಚ.ಅ ಗೂ ಹೆಚ್ಚಿನ ನಿವೇಶನದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವ ಮಾಲಿಕರು, ಕಡ್ಡಾಯವಾಗಿ ಮಳೆ ನೀರು ಕೊಯ್ಲಿಗೆ ವ್ಯವಸ್ಥೆ ಮಾಡಬೇಕು.
ಮುಂಬರುವ ದಿನಗಳಲ್ಲಿ ಮಳೆನೀರು ಕೊಯ್ಲಿನ ವ್ಯವಸ್ಥೆಗೆ ಭಾರಿ ಬೇಡಿಕೆ ಬರುವ ನಿರೀಕ್ಷೆಯಿದೆ. ಆದರೆ ಈ ವ್ಯವಸ್ಥೆ, ಉತ್ತಮ ಗುಣಮಟ್ಟ ಹೊಂದಿ, ವಿವಿಧ ಕಾಯ್ದೆ ನಿಯಮಗಳಿಗೆ ಅನುಗುಣವಾಗಿರಬೇಕು. ಈ ಬೇಡಿಕೆಯನ್ನು ಪೂರೈಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೂರಾರು ಕೊಳಾಯಿಗಾರರಿಗೆ ತರಬೇತಿ ನೀಡಿದೆ. ಜೊತೆಗೆ, ಹಲವಾರು ಖಾಸಗಿ ಮಳೆ ನೀರು ಕೊಯ್ಲು ಸಂಸ್ಥೆಗಳು ಬೆಂಗಳೂರಿನಲ್ಲಿ ಈಗಾಗಲೇ ತಮ್ಮ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB): ಮಂಜುನಾಥ್: 9845444015 ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(Help desk for Rainwater Hrwesting): 23341652 / 23348848 / 23348849.

ಬೆಂಗಳೂರಿನ ಮಳೆ ನೀರು ಕೊಯ್ಲು ವ್ಯವಸ್ಥೆಯ ಹಾಗೂ ಸಂಪನ್ಮೂಲಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ: http://www.waterday.in/rainwaterharvesting

ಭಾನುವಾರ, ಆಗಸ್ಟ್ 22, 2010

ಹೆಚ್ಚು ನೀರು ಕುಡಿಯಿರಿ, ಆರೋಗ್ಯವಾಗಿರಿ

ನುಷ್ಯನ ದೇಹದಲ್ಲಿರುವ ನೀರಿನಾಂಶ ಎಷ್ಟು?

ಶೇಕಡಾ ೬೦.೭ ಎನ್ನುತ್ತಾರೆ ತಜ್ಞರು. ಅಂದರೆ, ಮನುಷ್ಯನ ದೇಹದ ತೂಕ ನೂರು ಕೆಜಿ ಇದೆ ಎಂದರೆ, ೬೦.೭ ಕೆಜಿ ನೀರಿರುತ್ತದೆ. ಇದರರ್ಥ: ನೀರು ಮನುಷ್ಯನ ಅತ್ಯಂತ ಮೂಲಭೂತ ಅವಶ್ಯಕತೆ.
ಹೀಗಿದ್ದರೂ, ನೀರೆಂದರೆ ನಮಗೆ ನಿರ್ಲಕ್ಷ್ಯ. ಅಲರ್ಜಿ. ಆರೋಗ್ಯ ಕೆಟ್ಟಿದೆ ಎಂದರೆ, ನಾವು ನೀರು ಕುಡಿಯಲು ಹಿಂಜರಿಯುತ್ತೇವೆ. ನೀರಿನ ಬದಲು ಚಹ, ಕಾಫಿ, ಹಾಲು, ತಂಪುಪಾನೀಯ, ಹಣ್ಣಿನ ರಸ ಸೇವಿಸುತ್ತೇವೆಯೇ ಹೊರತು ನೀರು ಕುಡಿಯಲು ಮುಂದಾಗುವುದಿಲ್ಲ.
ದೊಡ್ಡವರನ್ನು ಬಿಡಿ, ಮಕ್ಕಳ ಆರೋಗ್ಯ ಕೆಟ್ಟಾಗಲೂ ನಾವು ನೀರು ಕುಡಿಸಲು ಹಿಂಜರಿಯುತ್ತೇವೆ. ಮಕ್ಕಳು ಆರೋಗ್ಯವಾಗಿದ್ದಾಗ ಕೂಡ ನೀರಿನಿಂದ ಮಕ್ಕಳನ್ನು ದೂರ ಇಡುವುದರತ್ತಲೇ ನಮ್ಮ ಗಮನ. ಊಟ ಮಾಡುವಾಗಲಂತೂ ಮಕ್ಕಳಿಗೆ ನೀರನ್ನೇ ಕುಡಿಸುವುದಿಲ್ಲ. ಹೆಚ್ಚು ನೀರು ಕುಡಿದರೆ ಊಟ ಮಾಡುವುದಿಲ್ಲ ಎಂಬ ಅಳುಕು.
ತಮಾಷೆ ಎನ್ನಿ, ಸತ್ಯ ಸಂಗತಿ ಎನ್ನಿ, ನೀರೇ ಬದುಕಿನ ಜೀವಾಳ. ಹೆಚ್ಚು ನೀರು ಕುಡಿದರೆ ದೇಹಕ್ಕೆ ಒಳ್ಳೆಯದೇ. ನಮ್ಮ ಬಹುತೇಕ ದೈಹಿಕ ಸಮಸ್ಯೆಗಳಿಗೆ ನೀರೇ ಮದ್ದು. ಆದರೆ, ಕುಡಿಯುವ ನೀರು ಶುದ್ಧವಾಗಿರಬೇಕಷ್ಟೇ.
ಮ್ಮ ದೇಹ ನೀರನ್ನು ಬಳಸಿಕೊಳ್ಳುವ ಕ್ರಿಯೆಯೇ ಅದ್ಭುತ. ನೀರು ತೊಳೆಯಲು, ರೋಗಾಣುಗಳನ್ನು ದೂರವಿಡಲು, ದೇಹದ ಕಶ್ಮಲಗಳನ್ನು ಹೊರಹಾಕಲು ನೆರವಾಗುತ್ತದೆ. ಆಹಾರ ಜೀರ್ಣಗೊಳ್ಳಲು, ರಕ್ತವಾಗಲು, ದೇಹದ ಜೈವಿಕ ಕ್ರಿಯೆ ಸುಲಲಿತವಾಗಿ ನಡೆಯಲು ನೀರೇ ಉತ್ತಮ ಕ್ಯಾರಿಯರ್‍.
ಕಣ್ಣಲ್ಲಿ ದೂಳು ಬಿತ್ತೆಂದರೆ, ತಕ್ಷಣ ನೀರು ಸುರಿಯುತ್ತದೆ. ಆ ಮೂಲಕ ದೂಳನ್ನು ಹೊರಹಾಕುತ್ತದೆ. ಸೊಗಸಾದ ಆಹಾರದ ಸುವಾಸನೆ ಬರುತ್ತಿದ್ದಂತೆ, ಬಾಯಲ್ಲಿ ನೀರೂರುತ್ತದೆ. ಆ ಮೂಲಕ, ಆಹಾರದ ಪಚನಕ್ರಿಯೆಗೆ ನೆರವಾಗುತ್ತದೆ. ಮೂಗಿನಲ್ಲಿ ಪರವಸ್ತುಗಳ ಪ್ರವೇಶವಾದರೆ ಅದು ಒಳಗೆ ಹೋಗದಂತೆ ನೀರಿನ ಇನ್ನೊಂದು ರೂಪವಾದ ಸಿಂಬಳ ತಡೆಯುತ್ತದೆ. ಇನ್ನು ದೇಹದ ಬಹುತೇಕ ದ್ರವ ಕಶ್ಮಲಗಳು ಹೊರಬರುವುದು ಮೂತ್ರದ ಮೂಲಕ.
ಒಂದು ವೇಳೆ ಹೊಟ್ಟೆಯಲ್ಲಿ ವಿಷಕಾರಿ ವಸ್ತುಗಳು ಅಥವಾ ಅಪಾಯಕಾರಿ ಸೂಕ್ಷ್ಮಜೀವಿಗಳ ಚಟುವಟಿಕೆ ಹೆಚ್ಚಾಯಿತೆನ್ನಿ. ಆಗ, ಭೇದಿ ಹತ್ತಿಕೊಳ್ಳುತ್ತದೆ. ಆ ಮೂಲಕ, ಅಪಾಯಕಾರಿ ವಸ್ತುಗಳು, ಜೀವಾಣುಗಳು ಸರಾಗವಾಗಿ ಹೊರಹೋಗುತ್ತವೆ. ದೇಹದ ಉಷ್ಣಾಂಶವನ್ನು ಬೆವರು ಸುರಿಸುವ ಮೂಲಕ ನಿಯಂತ್ರಿಸುವುದೂ ಇದೇ ರೀತಿ. ಬೆವರು ಹೊರಬಂದಷ್ಟೂ ದೇಹ ತಂಪಾಗುತ್ತದೆ. ಇದೊಂಥರಾ ನೈಸರ್ಗಿಕ ವಾತಾನುಕೂಲಿತ ವ್ಯವಸ್ಥೆ.
ನಾವು ನಿತ್ಯ ಕುಡಿಯುವ ನೀರಿನ ಮುಕ್ಕಾಲು ಭಾಗ ಪ್ರತಿದಿನ ದೇಹದಿಂದ ಹೊರಹೋಗುತ್ತದೆ. ಉಸಿರಾಟ, ಬೆವರುವಿಕೆ, ಮೂತ್ರ ವಿರ್ಸಜನೆ ಮೂಲಕ ಬಹುಪಾಲು ನೀರು ಹೊರಬೀಳುತ್ತದೆ. ಉಳಿದ ನೀರು ಜೀರ್ಣ ಪ್ರಕ್ರಿಯೆ ಮೂಲಕ ದೇಹ ಸೇರುತ್ತದೆ. ರಕ್ತ, ಜೀವಕಣಗಳ ಉತ್ಪಾದನೆಯಲ್ಲಿ ವ್ಯಯವಾಗುವ ನೀರು ದೇಹದ ಪ್ರಮುಖ ಅವಶ್ಯಕತೆ.
ಹೀಗೆ ಹೊರಹೋಗುವ ಮುಕ್ಕಾಲುಪಾಲು ನೀರು ಮತ್ತೆ ದೇಹ ಸೇರಲೇಬೇಕು.
ಅದಕ್ಕಾಗಿ ನೀರಿನಂಶ ಹೆಚ್ಚಾಗಿರುವ ಹಣ್ಣಿನರಸ, ಎಳನೀರು ಮುಂತಾದವನ್ನು ಸೇವಿಸಬೇಕು. ನಾವು ತಿನ್ನುವ ಹಣ್ಣು-ಹಂಪಲು, ತರಕಾರಿ, ಆಹಾರದಲ್ಲಿ ನೀರಿದೆ. ಇದರ ಹೊರತಾಗಿ, ದಿನಕ್ಕೆ ಕನಿಷ್ಠ ಎರಡು ಲೀಟರ್‌ ನೀರನ್ನಾದರೂ ಕುಡಿಯಬೇಕು. ವ್ಯಾಯಾಮ ಮಾಡುವವರು, ಬಿಸಿಲಲ್ಲಿ ದುಡಿಯುವವರು, ಹೆಚ್ಚು ಓಡಾಡುವವರು ಇದಕ್ಕಿಂತ ಹೆಚ್ಚು ನೀರು ಕುಡಿಯುವುದು ಉತ್ತಮ.
ನಾವೆಲ್ಲ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ದೇಹವನ್ನು ಸೇರುವ ನೀರು ಶುದ್ಧವಾಗಿರಬೇಕು. ಅಂದರೆ, ರೋಗಾಣುಗಳಿಂದ, ಹಾನಿಕಾರಕ ರಾಸಾಯನಿಕಗಳಿಂದ ಮುಕ್ತವಾಗಿರಬೇಕು. ಇಲ್ಲದಿದ್ದರೆ, ಆರೋಗ್ಯದ ಮುಖ್ಯ ಅಂಗವಾಗಿರುವ ನೀರೇ ಅನಾರೋಗ್ಯಕ್ಕೂ ಕಾರಣವಾಗಬಲ್ಲುದು.
ನಮ್ಮ ದೇಶದಲ್ಲಿ ಪ್ರತಿ ವರ್ಷ ಒಂದು ಕೋಟಿ ಮಕ್ಕಳು ಭೇದಿಯಿಂದ ಬಳಲುತ್ತಾರೆ. ಆ ಪೈಕಿ ಹತ್ತು ಲಕ್ಷಕ್ಕೂ ಹೆಚ್ಚು ಮಕ್ಕಳು ಸತ್ತುಹೋಗುತ್ತಾರೆ. ಒಂದು ವರ್ಷದಲ್ಲಿ ಕನಿಷ್ಠ ಹದಿನೈದರಿಂದ ಇಪ್ಪತ್ತು ಸಾವಿರ ಮಂದಿ ಕಾಲರಾ ಪೀಡಿತರಾಗುತ್ತಾರೆ. ವಿಷಮಶೀತ ಜ್ವರ, ಕಾಮಾಲೆ, ಆಮಶಂಕೆ, ಜಂತುಹುಳು, ಪೋಲಿಯೊ ಮುಂತಾದ ಅನೇಕ ರೋಗಗಳ ಮೂಲ ಕಲುಷಿತ ನೀರೇ.

ಶುಕ್ರವಾರ, ಆಗಸ್ಟ್ 20, 2010

10 ವೃಕ್ಷಗಳಿಗೆ ‘ಪರಂಪರೆ’ ಗೌರವ

ಜೈವಿಕ ವಿಜ್ಞಾನ ವೈವಿಧ್ಯ ಕಾಯ್ದೆ 2002ರ ಅನ್ವಯ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ 10 ಮರಗಳನ್ನು 'ಪರಂಪರೆ ಮರಗಳು' (ಹೆರಿಟೇಜ್ ಟ್ರೀಸ್) ಎಂದು ಘೋಷಿಸಲಾಗಿದೆ ಎಂದು ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದ್ದು .

ಬಿಜಾಪುರ ಜಿಲ್ಲೆ ಬಿಜಾಪುರ ತಾಲ್ಲೂಕಿನಲ್ಲಿರುವ 600 ಮತ್ತು 359 ವರ್ಷದ ಅದನ್‌ಸೋನಿಯಾ ಡಿಜಿಟಾಟಾ ಮಲ್ವಸಿಯೆ (Adansonia Digitata Malvaceae) ಎಂಬ ಎರಡು ಮರ, ಸಿಂದಗಿ ತಾಲ್ಲೂಕಿನ 883 ವರ್ಷದ ಹುಣಸೆ ಮರ, ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಟಿ.ವೆಂಕಟಪುರ ಗ್ರಾಮದ 200 ವರ್ಷದ ಬೇವಿನ ಮರ, ಮೈಸೂರು ತಾಲ್ಲೂಕು ಚಿಕ್ಕಹಳ್ಳಿಯ 260 ವರ್ಷದ ಆಲದ ಮರ, ಮಾನಸ ಗಂಗೋತ್ರಿ ಆವರಣದಲ್ಲಿರುವ 160 ವರ್ಷದ ಅಶ್ವಥ ಮರ, ಪ್ಯಾಲೇಸ್ ಗೇಟ್ ಬಳಿಯ 130 ವರ್ಷದ ಕೆಂಪು ಬೋರ್ಗ್ ಮರ, ಬೆಂಗಳೂರು ಕೆಥೊಹಳ್ಳಿಯಲ್ಲಿರುವ 400 ವರ್ಷದ ದೊಡ್ಡಾಲದ ಮರ, ಲಾಲ್‌ಬಾಗ್‌ನ 140 ವರ್ಷದ ಅರೌರಾರಿಯೋ ಕೂಕೀ (Araucarioa cookie) ಮರ ಮತ್ತು ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಬನವಾಸಿಯ 400 ವರ್ಷದ ಪಿಳಲಿ 'ಪರಂಪರೆ ವೃಕ್ಷ' ಪಟ್ಟಿಯಲ್ಲಿವೆ.

ಗುರುವಾರ, ಆಗಸ್ಟ್ 19, 2010

ಕರಿಬೇವು ಎಂಬ ದಿವ್ಯೆ ಔಷದ

curry-3.jpgcurry-2.jpg

OÚ†æÞÈÚâ´ ¬ÈÚß½ OÚà¥ÚÄನ್ನು …ÆÎÚr ÔÛVÚà Ôæà×Ú®Úâ´VæàØÑÚß}Ú¡¥æ. AÔÛÁÚ¥Ú ÈÚßàÄOÚ @¢ÚÈÛ WsÚÈÚßàÆOæ OÚÎÛ¾ÚßÈÛW OÚ†æÞÈÚನ್ನು OÚÃÈÚß…¥ÚªÈÛW ÑæÞÉÑÚßÉOæ ~ÞÈÚà ¯}æà¡Þ¥æÃÞOÚ, ÈÛM~, @~ÑÚÁÚ, Ôæàmæo }æà×ÚÑÚßÉOæ ÈÚß}Úß¡ ÈÚßÄ…¥Úª}æ Ôæàsæ¥æàÞtÑÚßÈÚÆÇ «æÁÚÈÛVÚß}Ú¡¥æ.

ÒÕ†æÞÈÚâ´ GM¥Úà OÚÁæ¾ÚßÅÛVÚßÈÚ OÚ†æÞÈÚâ´ JM¥Úß ÈÚßÔÛ LÎÚƒÞ¾Úß VÚßy ÔæàM¦¥æ. @¥Úß OÚà¥ÚÆ«Ú †æÞÁÚßVÚ×Ú
ನ್ನು
VÚnoVæàØÑÚß}Ú¡¥æ ÈÚß}Úß¡ OÚà¥ÚÄß D¥ÚßÁÚßÉOæ ¬ÈÛÂÑÚß}Ú¡¥æ. OÚà¥ÚÄß †æÞVÚ «ÚÁæ¾ÚßßÉOæ ÈÚß}Úß¡ OÚà¥ÚÄß D¥ÚßÁÚßÉOæ B¥Ú§Áæ ÑÛM®ÚÃ¥Û¿ßOÚ …Væ¾Úß LÎÚƒ¾Úß ÈÚä~¡®ÚÁÚÁÚß OÚ†æÞÈÚನ್ನು @¬ÈÛ¾Úß%ÈÛW Væà}Úß¡®ÚtÑÚß}Û¡Áæ.

ÑÛ¨ÛÁÚy fÞy%}æVæ J×æÙ¾ÚߥۥڧÂM¥Ú OÚ†æÞÈÚ
ನ್ನು ~ನ್ನ¥æ ¸sÚ†ÛÁÚ¥Úß. ÈÚßÄ…¥Úª}æ ®ÚÂÔÚÂÑÚß}Ú¡¥æ. OÚ†æÞÉ«Ú ÈÚßÁÚ¥Ú †æÞÁÚßVÚ×Úನ್ನು ÈÚß}Úß¡ ÔÚy|ನ್ನು WsÚÈÚßàÆOæ¾Úß LÎÚƒÞ¾Úß ®Ú¥Úª~VÚ×ÚÄàÇ …×ÚÑÚß}Û¡Áæ. BtÞ GÅæVÚ×Úನ್ನು ~ನ್ನÅÛVÚ¥ÚÈÚÁÚß OÚßno J×æÙ¾Úß ÑÛ‡¥Ú ÔÛVÚà D}Ú¡ÈÚß AÁæàÞVÚÀOÛQW ®ÚÄÀ @¢ÚÈÛ ÈÚßfgVæ¾ÚßÆÇ ^Úày% †æÁæÑÚ…ÔÚߥÛW¥æ.

ÈÚß«æÈÚߥÚߧ
ÑæOæ ÈÚß}Úß¡ ¸ÒÆ«Ú }Û®Ú }Úsæ¾ÚßÄß †æÞÒVæ¾Úß ÁÚhß×Ú¥Ú ¦«Ú¥ÚM¥Úß OÚ†æÞÉ«Ú GÅæ¾Úß ^Úày%, fÞÂVæ ÈÚß}Úß¡ ËÚßMq¾Úß PÁÚß ^ÚàÁÚßVÚ×Ú
ನ್ನು †æÁæÒ¥Ú ÈÚßfgVæ ÑæÞÉÒ.

OÚlß ÔæÞÈÚÂOæ¾Úß
ನ್ನು ¥ÚàÁÚVæàØÑÚÄß OÚ†æÞÉ«Ú }ÛeÛ GÅæVÚ×Úನ್ನು ^Úày%VæàØÒ, ¬M†æÁÚÑÚ ÔÛVÚà eæÞ«Úß}Ú߮ڰ †æÁæÒ, JM¥Úß @¢ÚÈÛ GÁÚsÚß ^ÚÈÚß^Ú¥ÚÎÚßo ÑæÞÉÒ.

AVÛVÚ @fÞy%¦M¥Ú …×ÚÄßÈÚÈÚÁÚß OÚ†æÞÉ«Ú }ÛeÛ GÅæVÚ×Úß, Oæà}Ú¡M… ÈÚß}Úß¡ ®Úâ´¦«Ú¥Ú ^Úày%ÈÚ
ನ್ನು ^ÚÔÛ ^ÚÈÚß^Ú¥ÚÎÚoನ್ನು ¾Úßತ್ನಿÑÚ…ÔÚߥÚß.

¬ÈÚß½ OÚà¥ÚÄß OÚ®Û°W ÔÛVÚà …ÆÎÚrÈÛWÁÚ†æÞOæM¥Úß …¾ÚßÑÚßÉÁÛ¥ÚÁæ, ¬ÈÚß½ AÔÛÁÚ¥ÚÆÇ OÚ†æÞÉ«Ú GÅæ (@¢ÚÈÛ ¬ÈÚßVæ BtÞ GÅæ BÎÚoÉÁÚ¦¥Ú§ÆÇ OÚ†æÞÉ«Ú GÅæ¾Úß ÔÚßt) ÑæÞÉÑÚßÈÚâ´¥Ú
ನ್ನು R_}Ú®ÚtÒOæàØÙ.

ÈÚߨÚßÈæßÞÕVÚ×Úß ÑÚOÚQÁæ ÈÚßlo Õt}Ú¥ÚÆÇsÚÄß ¬}ÚÀ †æ×ÚVæX OÚ†æÞÉ«Ú OæÄÈÚâ´ }ÛeÛ GÅæVÚ×Ú
ನ್ನು ¾Úßತ್ನಿÑÚ…ÔÚߥÛW¥æ.

ಬುಧವಾರ, ಆಗಸ್ಟ್ 18, 2010

ಬೇವಿನ ಮರದ ಔಷಧಿಯ ಗುಣ


^ÚÈÚß%¥Ú VÚß×æÙVÚØM¥Ú Õt¥Úß ¥ÚM}ÚOÚоÚß ÈÚß}Úß¡ ÈÚßàÄÈÛÀƒ¾ÚßÈÚÁæVæ ÔÚÄÈÛÁÚß OÛ¿ßÅæVÚØVæ ÁÛÈÚ߆ÛyÈæM¥Úß †æÞÈÚನ್ನು ¾ÚáÛÈÛVÚÄà Èæß^Ú`ÅÛW¥æ. †æÞÈÚâ´, @¥ÚÁÚ }æàVÚmæ, ¸ÞdVÚ×Úß, …MOæ ÔÚàÈÚâ´VÚ×Úß, ÔÚyß|VÚ×Ú ÔÛVÚà ÁæM†æVÚ×Ú LÎÚƒÞ¾Úß VÚßyVÚ×Ú …VæVæ ®ÛÃ_Þ«Ú ºÛÁÚ~Þ¾Úß ÑÛÕ}ÚÀ ÉÈÚÁÚÈÛW …{|Ò¥æ.

†æÞÉ«Ú ÈÚßÁÚ¥Ú ®ÚÃ~¾æàM¥Úß ºÛVÚ LÎÚƒÞ¾Úß VÚßyVÚ×Ú
ನ್ನು ÔæàM¦¥æ. †æÞÈÚâ´ ÈæàsÚÈæ ÔÛVÚà OÚ®Úâý° OÚÅæVÚ×Úನ್ನು ¬¾ÚßM~ÃÑÚßÈÚâ´¥ÚÁÚÆÇ «æÁÚÈÛVÚß}Ú¡¥æ. ÈæàsÚÈæ VÚßyÈÛ¥Ú …ØOÚ ^ÚÈÚß% @M¥ÚVæsÚßÈÚâ´¥Úನ್ನು @¥Úß ¬ÈÛÂÑÚß}Ú¡¥æ.

E¦Oæà×ÚßÙÉOæ, d‡ÁÚ, ÁÚOÚ¡¥ÚÆÇ«Ú ÑÚOÚQÁæ ÈÚßlo, ÔÚßyß|VÚ×Úß ÈÚß}Úß¡ VÚsæuVÚ×Ú
ನ್ನು BØÑÚßÈÚâ´¥ÚÁÚÆÇ †æÞÈÚâ´ «æÁÚÈÛVÚß}Ú¡¥æ. @¥Úß ÈÚßÅæÞ¾ÚáÛÈÚನ್ನು ¬ÁæàÞƒÑÚ…ÄÇ¥Úß.

†æÞÉ«Ú GÅæVÚ×Ú ^Úày%ÈÚನ್ನು †Ûƒ}Ú eÛVÚ¥ÚÆÇ ÔÚ_`¥ÚÁæ, ÈæàsÚÈæVÚ×Úನ್ನು ®ÚÂÔÚÂÑÚß}Ú¡¥æ. †æÞÉ«Ú  }æàVÚmæ¾Úß ^Úày%ÈÚâ´ ÈæàsÚÈæVÚ×Úನ್ನು Ôæàsæ¥æàÞtÑÚß}Ú¡¥æ.

ÌÞYÚ´Ã ®ÚÂÔÛÁÚVÚ×Úß:
®Û¥ÚVÚ×ÚÆÇ ¸ÁÚßOÚßVÚØÁÚßÈÚÈÚÂVæ †æÞÉ«Ú Gzæ| ÑÚÔÛ¾ÚßOÚ. }ÚÅæÔæàlßo ÈÚß}Úß¡ VÚß×æÙVÚ×Ú
ನ್ನೊ×ÚVæàMsÚß ^ÚÈÚß% ÑÚÈÚßÑæÀVÚ×Úನ್ನು …VæÔÚÂÑÚÄß †æÞÉ«Ú OæÄÈÚâ´ GÅæVÚ×Ú«Úß" ¸Ò ¬Þ«ÚÆÇ «æ«æÒ ÈÚß}Úß¡ ¬ÈÚß½ ಸ್ನಾ«Ú¥Ú ¬Þ«ÚÆÇ †æÁæÒ.
OÚà¥ÚÄß D¥ÚßÁÚßÉOæ ÔÛVÚà ÌÆÞM¨Ú´Ã¾Úßß}Ú ÑæàÞMOÚßVÚ×Úß ¬ÈÛÂÑÚÄß †æÞÉ«Ú Gzæ| ÈÚß}Úß¡ †æÞÉ«Ú GÅæVÚ×Ú ^Úày%VÚ×Úನ್ನು «æ~¡Væ Õ}ÚÈÛW DfgÂ.
PÞl OÚ_`¥ÛVÚ A eÛVÚOæQ †æÞÉ«Ú OæÄÈÚâ´ GÅæVÚ×Ú
ನ್ನು ÈÚß}Úß¡ @ÂÒ«Ú¥Ú }ÛeÛ †æÞÂ«Ú ÑÚy| }ÚßMt«Ú ^Úày% ÈÚáÛt ÔÚ_`.
†æÞÉ«Ú ÈÚßÁÚ¥Ú …VæVæ ÔæÞ×ÚßÈÛVÚ, ¥ÚM}Ú ÔÛVÚà †Û¿ß AÁæàÞVÚÀOæQ @¥ÚÂM¥ÛVÚßÈÚ ®ÚþæàÞd«ÚVÚ×Ú
ನ್ನು ÈÚßÁæ¾ÚßÅÛVÚ¥Úß. †æÞÉ«Ú OÚtu¿ßM¥Ú ÔÚÄßÇVÚ×Úನ್ನು OÚÃÈÚß…¥ÚªÈÛW DdßgÈÚâ´¥ÚÂM¥Ú ¥ÚM}Ú OÚоÚß }Ú®Úâý°}Ú¡¥æ ÈÚß}Úß¡ †Û¿ß¾ÚßÆÇ«Ú ÔÛ¬OÛÁÚOÚ ÑÚàOÚÐ=½fÞÉVÚ×Úß ÑÛ¾Úßß}Ú¡Èæ.

ಸೋಮವಾರ, ಆಗಸ್ಟ್ 16, 2010

‘ಕೆರೆ ನಿರ್ಮಿಸಿ, ನೀರಿನ ಬರ ತಪ್ಪಿಸಿ’

ಗದಗ ಜಿಲ್ಲೆ ರೋಣ ತಾಲೂಕಿನಲ್ಲಿ 2001, 2002, 2003 ಸತತವಾಗಿ ಮೂರು ವರ್ಷ ಬರ ಬಿದ್ದ ಕಾಲದಲ್ಲಿ ಕುಡಿಯುವ ನೀರಿಗೂ ಬರ ಹಾಲಕೆರೆ ಅನ್ನದಾನಸ್ವಾಮಿಗಳು ಈ ವಿಷಯದ ಬಗ್ಗೆ ಬಹಳ ಚಿಂತಿಸಿದ್ದರು. ತಮ್ಮ ಶಾಲೆ ಮತ್ತು ಕಾಲೇಜುಗಳ ಬಳಕೆಗಾಗಿ ಕೊರೆಸಿದ್ದ ಏಳು ಕೊಳವೆ ಬಾವಿಗಳ ಪೈಕಿ ಐದು ಬಿಕ್ಕತೊಡಗಿದ್ದವು. ಇನ್ನೆರಡು ಕೊಳವೆ ಬಾವಿಗಳಲ್ಲಿ ಬರುತ್ತಿದ್ದ ಕೇವಲ ಅರ್ಧ ಇಂಚು ನೀರು ಯಾವ ಕ್ಷಣದಲ್ಲಾದರೂ ಕಡಿಮೆಯಾಗುವ ಲಕ್ಷಣವಿತ್ತು. ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ ಹೇಗೆ ನೀರು ಪೂರೈಸುವುದೆಂದು ಸ್ವಾಮಿಗಳು ಚಿಂತಿತರಾಗಿದ್ದರು. ಅದೆರೀತಿ ನರೇಗಲ್ ಜನರಿಗೆ ಕುಡಿಯವ ನೀರಿಗಾಗಿ ದೊಡ್ಡ ಕೆರೆಯಲ್ಲಿ ತೋಡಿಸಿದ ಕೊಳವೆ ಬಾವಿ ಕೂಡ ವಿಫಲವಾಗುವ ಲಕ್ಷಣಗಳು ಕಂಡಾಗ ಈ ನೀರನ್ನೇ ನೆಚ್ಚಿಕೊಂಡವರು ಜನರು ಹತಾಶರಾಗಿದ್ದರು.
ಅಂತ ಪರಿಸ್ಥಿತಿಯಲ್ಲಿ ಅವರಿಗೆ ನೆನಪಾಗಿದ್ದು 'ಕೆರೆ ನಿರ್ಮಿಸಿ, ನೀರಿನ ಬರ ತಪ್ಪಿಸಿ' ಎಂದು ಹೇಳುತ್ತಿದ್ದ ಅಯ್ಯಪ್ಪ ಮಸಗಿ. ಅದೇ ರೋಣ ತಾಲೂಕಿನ ಈ ಜಲ ತಜ್ಞನನ್ನು ಕರೆಸಿ ಬತ್ತಿದ ಕೊಳವೆಬಾವಿಗಳ ಜವಾಬ್ದಾರಿಯನ್ನು ಒಪ್ಪಿಸಲಾಯಿತು. ಸ್ಥಳ ಪರಿಶೀಲನೆ ನಡೆಸಿದ ಅಯ್ಯಪ್ಪ, ಕೊಳವೆ ಬಾವಿಯ ಸುತ್ತ ಇದ್ದ ಮೂರು ಎಕರೆ ಪಾಳು ಜಮೀನನ್ನು ತಮ್ಮ ಜಲ ಸಂವರ್ಧನೆಗೆ ಆರಿಸಿಕೊಂಡರು. ಸುತ್ತಮುತ್ತಲಿನ ಭೂಮಿಯಲ್ಲಿ ಬಿದ್ದ ಮಳೆ ನೀರು ಬಂದು ಈ ಮೂರು ಎಕರೆ ಪ್ರದೇಶಕ್ಕೆ ಬಂದು ಸೇರುವಂತೆ ಎತ್ತರದ ಒಡ್ಡು ಹಾಕಿ, ಬತ್ತಿದ ಕೊಳವೆ ಬಾವಿಯ ಸುತ್ತ ಸಣ್ಣ ಕೆರೆ ನಿರ್ಮಿಸಿದರು. ಕೊಳವೆ ಬಾವಿಯ ಸುತ್ತ ತಲಾ ೧೦ ಅಡಿ ಆಳ, ಆರು ಅಡಿ ಅಗಲ ಮತ್ತು ಎರಡು ಅಡಿ ದಪ್ಪ ಕಲ್ಲಿನ ಗೋಡೆಯನ್ನು ಕಟ್ಟಲಾಯಿತು. ಕೊಳವೆ ಬಾವಿಯ ಕೇಸಿಂಗ್‌ ಪೈಪ್‌ನ ಸುತ್ತಮುತ್ತ, ಒಂದು ಚಾಕ್‌ಪೀಸ್‌ ಗಾತ್ರದ ಸುಮಾರು ೧೦೦-೧೫೦ ರಂಧ್ರಗಳನ್ನು ಕೊರೆಯಲಾಯಿತು. ಇದರ ಸುತ್ತ ೩೦ ಅಡಿ ವ್ಯಾಸ ಹಾಗೂ ಎಂಟು ಅಡಿ ಆಳದ ಗುಂಡಿ ತೆಗೆದು, ಕಲ್ಲು ಮತ್ತು ಮರಳನ್ನು ತುಂಬಲಾಯಿತು. ಮಳೆ ನೀರು ಮರಳು ಮತ್ತು ಕಲ್ಲುಗೋಡೆಯ ಮೂಲಕ ಶೋಧನೆಗೊಂಡು, ನಂತರ ಕೇಸಿಂಗ್ ಪೈಪ್‌ನಲ್ಲಿ ಕೊರೆದ ರಂಧ್ರಗಳ ಮೂಲಕ ಒಳಗೆ ಪ್ರವೇಶಿಸಬೇಕೆನ್ನುವುದು ಇದರ ಉದ್ದೇಶ. ಕೇಸಿಂಗ್ ಪೈಪ್ ಸುತ್ತ ಮೂರು ಸುತ್ತು ಪ್ಲಾಸ್ಟಿಕ್ ಜರಡಿಯನ್ನು ಸುತ್ತಿರುವುದರಿಂದ ಒಳ ಸೇರುವ ನೀರು ಶುದ್ಧವಾಗಿಯೇ ಇರುತ್ತದೆ
kr-kolave-thumb.jpgPg8-14-3.JPG
ಇದು ನಡೆದಿದ್ದು ೨೦೦೩ರ ಅಗಸ್ಟ್ ತಿಂಗಳ ಕೊನೆಗೆ. ಮುಂದೆ ಎರಡು ತಿಂಗಳವರೆಗೆ ಜೋರು ಮಳೆ ಬೀಳಲಿಲ್ಲ. ಅಕ್ಟೋಬರ್‌ನಲ್ಲಿ ಒಂದು ರಭಸದ ಮಳೆ ಬಿದ್ದಾಗ, ಮುಕ್ಕಾಲು ಭಾಗ ಕೆರೆ ತುಂಬಿತು. ಸುತ್ತ ತುಂಬಿದ್ದ ಮರಳು ಮತ್ತು ಕಲ್ಲುಗಳ ಜಾಲರಿ ಮೂಲಕ ಸೋಸಿಕೊಂಡ ನೀರು ಕೊಳವೆ ಬಾವಿಯ ಕೇಸಿಂಗ್ ಪೈಪ್ ಮೂಲಕ ಭೂಮಿಯಲ್ಲಿ ಇಂಗಿತು. ಅರ್ಧ ಇಂಚು ನೀರು ಕೊಡುತ್ತಿದ್ದ ಕೊಳವೆ ಬಾವಿಯಿಂದ ಎರಡು ಇಂಚು ನೀರು ಬರತೊಡಗಿತು. ಒಂದೇ ಮಳೆಗೆ ಬಾವಿ ಮರು ಜೀವ ಪಡೆದುಕೊಂಡಿತು.
ಅಯ್ಯಪ್ಪ ಮಸಗಿಯವರ ಪ್ರಕಾರ ಒಂದು ಎಕರೆ ಪ್ರದೇಶದಲ್ಲಿ ಕೇವಲ ಒಂದು ಇಂಚು ಮಳೆ ಬಿದ್ದರೂ ಸಾಕು, ಒಂದು ಲಕ್ಷ ೪೪೦ ಲೀಟರ್ ನೀರು ಸಂಗ್ರಹವಾಗುತ್ತದೆ. ಸುತ್ತಲಿನ ಪ್ರದೇಶಗಳಿಂದ ನೀರು ಹರಿದು ಬರುತ್ತಿದ್ದರಂತೂ ಇನ್ನೂ ಒಳ್ಳೆಯದು. ಒಂದು ವರ್ಷ ಈ ರೀತಿ ನೀರು ಸಂಗ್ರಹಿಸಿದರೆ ಎಂತಹ ಬೇಸಿಗೆಗೂ ಹೆದರಬೇಕಿಲ್ಲ. ಒಂದು ಹೆಕ್ಟೇರ್ ಜಮೀನಿಗೆ ಒಂದು ಗುಂಟೆ ಕೆರೆ ಇದ್ದರೆ ನೀರಿನ ವಿಷಯದಲ್ಲಿ ರೈತ ಸ್ವಾವಲಂಬಿಯಾಗುತ್ತಾನೆ ಎನ್ನುವುದು ಅವರ ಅಭಿಪ್ರಾಯ.
ಕೆರೆ ನಿರ್ಮಿಸುವುದರಿಂದ ಸಾಕಷ್ಟು ಲಾಭಗಳಿವೆ. ಕೆರೆಯ ನೀರು ಒಂದೆರಡು ದಿನಗಳಲ್ಲಿ ಪೂರ್ತಿಯಾಗಿ ಇಂಗಿಬಿಡುತ್ತದೆ. ಆಗ ಅದೇ ಜಾಗದಲ್ಲಿ ಬಿತ್ತನೆ ಕಾರ್ಯ ನಡೆಸಬಹುದು. ಕಡಿಮೆ ಅವಧಿಯಲ್ಲಿ ಅಗಾಧ ಪ್ರಮಾಣದಲ್ಲಿ ಹರಿದು ಬರುವ ನೀರನ್ನು ನೇರವಾಗಿ ಕೊಳವೆ ಬಾವಿಯ ಮೂಲಕ ಭೂಮಿಗೆ ಸೇರಿಸಲು ಸಾಧ್ಯವಿಲ್ಲವಾದ್ದರಿಂದ ಕೆರೆ ನಿರ್ಮಾಣ ಅನಿವಾರ್ಯ ಎಂಬುದು ಅವರ ಅಭಿಪ್ರಾಯ.

ಭಾನುವಾರ, ಆಗಸ್ಟ್ 15, 2010

ಮರಗಳ ಮಹತ್ವ












ಅಶ್ವತ್ಥಮೇಕಂ ಪಿಚುಮಂದಮೇಕಮ್
ನ್ಯಗ್ರೋಧಮೇಕಂ ದಶ ತಿಂತ್ರಿಣೀಶ್ಚ
ಕಪಿತ್ಥಬಿಲ್ವಾಮಲಕಾಮ್ರವೃಕ್ಷಾನ್
ಧರ್ಮಾರ್ಥಮಾರೋಪ್ಯ ಸ ಯಾತಿ ನಾಕಂ||
 ಹೀಗೆಂದರು ಹಿರಿಯರು. ಇದಅರ್ಥ: ಒಂದು ಅರಳಿ ಮರ, ಒಂದು ಬೇವಿನ ಮರ, ಒಂದು ಆಲದ ಮರ, ಹತ್ತು ಹುಣಿಸೇಮರ ಹಾಗೂ ಸಾಕಷ್ಟು ಬೇಲ, ಬಿಲ್ವ, ನೆಲ್ಲಿ ಮತ್ತು ಮಾವಿನ ಮರಗಳನ್ನು ಧರ್ಮಾರ್ಥಕ್ಕಾಗಿ (ತನ್ನದಲ್ಲದ ಇತರರ ಒಳಿತಿಗಾಗಿ) ಬೆಳೆಸಿ ಒಬ್ಬನು ಸ್ವರ್ಗಕ್ಕೆ ಹೋಗುತ್ತಾನೆ.

ಇಲ್ಲಿ ಉಲ್ಲೇಖಿಸಿದ ವೃಕ್ಷಗಳ ಬಗ್ಗೆ ವಿಚಾರಿಸಿ ನೋಡಿದಾಗ ನಮ್ಮ ಹಿರಿಯರಿಗೆ ಮರಗಳ ಮಹತ್ವದ ಅರಿವಿರುವುದು ಗೊತ್ತಾಗುತ್ತದೆ. ಈ ಮೇಲಿನ ಎಲ್ಲಾ ವೃಕ್ಷಗಳು ಬಹುವಾರ್ಷೀಕ ಸಸ್ಯಗಳು. ಅರಳಿ, ಆಲ, ಬೇವು ನೆರಳನ್ನು ಕೊಡುವ ಮರಗಳು. ಇವುಗಳು ಇಂಗಾಲದ ಡೈ ಆಕ್ಸೈಡ್‌ನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವುಳ್ಳವುಗಳು. ಹಾಗೆಯೇ ಈ ವೃಕ್ಷಗಳು ಓಜೋನ್ ಪದರವನ್ನು ಸಂರಕ್ಷಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಹಾಗೆಯೇ ನೆಲದಲ್ಲಿ ನೀರನ್ನು ಹಿಡಿದಿಡುತ್ತವೆ. ಬಿಲ್ವ ಮರವು ಪೂಜೆಗೆ ಶ್ರೇಷ್ಠವಾಗಿದ್ದು ಔಷಧೀಯ ಗುಣಗಳನ್ನು ಹೊಂದಿದೆ. ಬೇಲವು ಬೇಸಿಗೆಯಲ್ಲಿ ತಂಪಾದ ಪಾನೀಯ ತಯಾರಿಸಲು ಬೇಕಾದ ಹಣ್ಣುಗಳನ್ನು ಒದಗಿಸುತ್ತದೆ. ನೆಲ್ಲಿಯು ಔಷಧೀಯ ಗುಣ ಹೊಂದಿರುವ ಕಾಯಿಗಳನ್ನು ಬಿಡುತ್ತದೆ. ನೆಲ್ಲಿಕಾಯಿಗಳನ್ನು ಜಾಮ್ ಮತ್ತು ಉಪ್ಪಿನಕಾಯಿಗಳ ತಯಾರಿಕೆಯಲ್ಲಿ ಬೞಸುತ್ತಾರೆ. ಮಾವಿನ ಹಣ್ಣು ಹಣ್ಣುಗಳ ರಾಜನೇ ಆಗಿದ್ದು ರುಚಿಯಾದ ಹಣ್ಣುಗಳಿಗೆ ಪ್ರಸಿದ್ಧವಾಗಿದೆ. ಈ ಹಣ್ಣುಗಳಿಂದ ರುಚಿಯಾದ ಪಾನೀಯವನ್ನು ತಯಾರಿಸುತ್ತಾರೆ. ಹಾಗೆಯೇ ಮಾವಿನ ಹಣ್ಣುಗಳಿಂದಲೂ ಜಾಮ್ ತಯಾರಿಸುತ್ತಾರೆ. ಕೆಲವು ಜಾತಿಯ ಮಾವಿನ ಕಾಯಿಗಳನ್ನು ಉಪ್ಪಿನಕಾಯಿ ತಯಾರಿಸಲು ಬೞಸುತ್ತಾರೆ. ಹುಣಿಸೇಮರಗಳು ಬಯಲುಸೀಮೆಯಲ್ಲಿ ನೆರಳನ್ನು ಕೊಡುವುದರ ಜೊತೆಗೆ ಇದರ ಹಣ್ಣನ್ನು ಎಲ್ಲರಿಗೂ ಗೊತ್ತಿರುವಂತೆ ಅಡಿಗೆಯಲ್ಲಿ ರುಚಿಗಾಗಿ ಬೞಸುತ್ತಾರೆ. ಹೀಗಾಗಿ ನಮ್ಮ ಹಿರಿಯರಿಗೆ ಮರಗಳ ಮಹತ್ವ ಗೊತ್ತಿರುವುದು ಸ್ಪಷ್ಟವಾಗುತ್ತದೆ.

ಹಾಗಾಗಿ ನಾವು ನಮ್ಮ ಹಿರಿಯರು ಮರಗಳ ಬಗ್ಗೆ ತಿಳಿದಿದ್ದ ಮಹತ್ವವನ್ನು ಸರಿಯಾಗಿ ಅರಿಯುವುದು ತೀರಾ ಅವಶ್ಯಕವಾಗಿದೆ ಹಾಗೂ ಈ ಒಂದು ಒಳ್ಳೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ

ಶನಿವಾರ, ಆಗಸ್ಟ್ 14, 2010

ಮಳೆ ನೀರು ಸಂಗ್ರಹಣೆ ಪಾಠ ಹೇಳುವ ’ಗ್ರಾಮೋದಯ’

  ತಿಪಟೂರು-ಹಾಸನ ರಸ್ತೆಯಲ್ಲಿರುವ ಬೈಫ್ ಗ್ರಾಮೋದಯ ಕೇಂದ್ರವು ತಿಪಟೂರಿನಿಂದ ೧೧ ಕಿ.ಮೀ. ದೂರದಲ್ಲಿರುವ ಎಸ್.ಲಕ್ಕಿಹಳ್ಳಿ ಗ್ರಾಮದಲ್ಲಿದೆ. ಇದು ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ತರಬೇತಿ ಮತ್ತು ಸಂಶೋಧನಾ ಉದ್ದೇಶಗಳನ್ನು ನಿರ್ವಹಿಸುವ ತಾಣ. ಗ್ರಾಮೀಣಾಭಿವೃದ್ಧಿಯ ಅನೇಕ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ನೀಡುವ ರಾಜ್ಯದ ಪ್ರಮುಖ ಕೇಂದ್ರ.
ತರಬೇತಿ ಕೇಂದ್ರವು 500 ಎಕರೆ ವಿಸ್ತೀರ್ಣದಲ್ಲಿದೆ. ಕೇಂದ್ರದಲ್ಲಿ ತರಬೇತಿಗಳು, ಸಸ್ಯಾಭಿವೃದ್ಧಿ, ನರ್ಸರಿ, ರೇಷ್ಮೆಸಾಕಾಣಿಕೆ, ಔಷಧಿ ವನ ಮುಂತಾದ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಗಮನ ಸೆಳೆಯುವ ಮತ್ತೊಂದು ಅಂಶ ಇಲ್ಲಿನ ಮಳೆ ನೀರು ಸಂಗ್ರಹಣೆ. ಒಂದು ದಶಕದ ಹಿಂದೆಯೇ ಮಳೆ ನೀರು ಸಂಗ್ರಹಣೆಗೆ ತೊಡಗಿದ್ದು ಸಂಸ್ಥೆಯ ದೂರದೃಷ್ಟಿಗೆ ಸಾಕ್ಷಿ. ಎರಡು ಕಡೆ ಮಳೆ ನೀರು ಸಂಗ್ರಹಣೆಗೆ ವ್ಯವಸ್ಥೆ ಮಾಡಿದ್ದು ಕ್ರಮವಾಗಿ 60 ಸಾವಿರ ಮತ್ತು 1 ಲಕ್ಷ 60 ಸಾವಿರ ಲೀಟರ್ ನೀರು ಸಂಗ್ರಹಣೆ ನಡೆಯುತ್ತಿದೆ.
ಸಂಸ್ಥೆಯು ಲಕ್ಕಿಹಳ್ಳಿಯ ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿದಿರುವುದು, ಯೋಗ್ಯವಾದ ಕುಡಿಯುವ ನೀರಿನ ಅಲಭ್ಯತೆ ಹಾಗೂ ಲಭ್ಯವಿರುವ ಕುಡಿಯುವ ನೀರೂ ಸಹ ಫ್ಲೋರೈಡ್ ಯುಕ್ತವಾಗಿರುವುದನ್ನು ಪ್ರತ್ಯಕ್ಷ ಅನುಭವದಿಂದ ಅರಿತುಕೊಂಡು 1998 ರಲ್ಲಿ ಛಾವಣಿ ಮಳೆ ನೀರು ಸಂಗ್ರಹಣೆಗೆ ಪ್ರಾರಂಭಿಸಿತು.
ಮಳೆ ನೀರು ಸಂಗ್ರಹಣೆ ವಿಧಾನ: 
ಸಂಸ್ಥೆಯ ಕ್ಯಾಂಪಸ್ಸಿನಲ್ಲಿ ಹಾಸ್ಟಲ್ ಕಟ್ಟಡ ಒಂದಿದೆ. ವಿಸ್ತೀರ್ಣ 400 ಚದರ ಮೀಟರ್. ಇದರ ಮೇಲ್ಛಾವಣಿಯು ಆರ್.ಸಿ.ಸಿ.ಯದಾಗಿದ್ದು ಇಂಗ್ಲಿಷ್ನ 'ಯು'ಆಕಾರದಲ್ಲಿದೆ. ಛಾವಣಿಯಲ್ಲಿ ಬೀಳುವ ಮಳೆ ನೀರು ಪೈಪುಗಳ ಮೂಲಕ ಹಾದು ಸಂಗ್ರಹಣಾ ತೊಟ್ಟಿಗೆ ಹರಿದು ಬರುವಂತೆ ವ್ಯವಸ್ಥೆ ಮಾಡಲಾಗಿದೆ. ನೀರು ತೊಟ್ಟಿಗೆ ಬರುವ ಮುಂಚೆ ಶೋಧಕವನ್ನು ಹಾದು ಬರುವ ವ್ಯವಸ್ಥೆಯಿದ್ದು ಶೋಧಕ ತೊಟ್ಟಿಯ ನಿರ್ಮಾಣ ಈ ರೀತಿ ಇರುತ್ತದೆ.
ತಳ ಭಾಗದಲ್ಲಿ ಅರ್ಧ ಅಡಿಯಷ್ಟು ದಪ್ಪ ಜಲ್ಲಿ, ನಂತರ ಅರ್ಧ ಅಡಿಯಷ್ಟು ಸಣ್ಣ ಜಲ್ಲಿ, ಅದರ ಮೇಲೆ ಅರ್ಧ ಅಡಿ ಇದ್ದಿಲು ಮತ್ತೆ ಮೇಲೆ ಪ್ಲಾಸ್ಟಿಕ್ ಲೇಯರ್ ಹಾಗೂ ಮೇಲ್ಭಾಗದಲ್ಲಿ ಅರ್ಧ ಅಡಿ ಮರಳು ಹರಡಿದ್ದು ಅದರ ಮೇಲೆ ಒಂದು ಜರಡೆಯನ್ನು ಕೂರಿಸಲಾಗಿದೆ. ಜರಡೆಯು ಕಸ-ಕಡ್ಡಿಗಳು ಹೋಗದಂತೆ ತಡೆಯುತ್ತದೆ. ಕಟ್ಟಡ 'ಯು' ಆಕಾರದಲ್ಲಿರುವುದರಿಂದ ಎರಡೂ ಕಡೆಯಿಂದ ನೀರು ಹಾದು ಬರುವಂತೆ ಪೈಪುಗಳನ್ನು ಜೋಡಿಸಿದ್ದು ಎರಡು ಶೋಧಕ ತೊಟ್ಟಿಗಳಿವೆ. ಇವುಗಳಿಂದ ನೀರು ಹಾದು ಸಂಗ್ರಹಣಾ ತೊಟ್ಟಿಗೆ ಬೀಳುತ್ತದೆ.
ನೀರು ಸಂಗ್ರಹಣಾ ತೊಟ್ಟಿ: 
ನೀರು ಸಂಗ್ರಹಣಾ ತೊಟ್ಟಿಯು ಗೋಲಾಕಾರದಲ್ಲಿದ್ದು ಭೂಮಟ್ತಕ್ಕಿಂತ ಕೆಳಗಿದೆ. 10 ಅಡಿ ಆಳ ಮತ್ತು 18 ಅಡಿ ವ್ಯಾಸದ್ದಾಗಿದ್ದು 60 ಸಾವಿರ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯವಿದೆ. ಸೈಜು ಕಲ್ಲುಗಳಿಂದ ತೊಟ್ಟಿ ನಿರ್ಮಿಸಿದ್ದು ಒಳಭಾಗದಲ್ಲಿ ಸಿಮೆಂಟ್ ಪ್ಲಾಸ್ಟಿಂಗ್ ಮಾಡಿ ಸುಣ್ಣ ಬಳಿಯಲಾಗಿದೆ. ಸಂಗ್ರಹಣಾ ತೊಟ್ಟಿಯಲ್ಲಿ ಹೆಚ್ಚಾದ ನೀರು ಹೊರಹೋಗಲು ತೊಟ್ಟಿಯ ಮೇಲ್ಭಾಗದಲ್ಲಿ ಒಂದು ಪೈಪ್ ಅಳವಡಿಸಲಾಗಿದೆ.
ಲಕ್ಕಿಹಳ್ಳಿ ಗ್ರಾಮೋದಯ ಕೇಂದ್ರದ ಮೇಲ್ವಿಚಾರಕರಾದ ಠಾಕೂರ್ ಛಾವಣಿ ಮತ್ತು ನೀರು ಸಂಗ್ರಹಣಾ ತೊಟ್ಟಿಯನ್ನು ನಿರ್ವಹಣೆ ಮಾಡುವುದು ಅತಿಮುಖ್ಯ ಎನ್ನುತ್ತಾರೆ. ನೀರಿನ ಗುಣಮಟ್ಟ ಮತ್ತು ತೊಟ್ಟಿಯ ಬಾಳಿಕೆ ಉತ್ತಮವಾಗಿರಲು ಇದು ಅತ್ಯವಶ್ಯಕ ಎಂಬುದು ಅವರ ಅಭಿಪ್ರಾಯ. ಇದಕ್ಕಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಲಲಾಗಿದೆ. ಮುಖ್ಯವಾಗಿ ಪ್ರತಿ ವರ್ಷ ಮಳೆಗಾಲದ ಪ್ರಾರಂಭದ ದಿನಗಳಲ್ಲಿ ಛಾವಣಿಯನ್ನು ಸ್ವಚ್ಚಗೊಳಿಸಲಾಗುತ್ತದೆ. ನೀರು ಸಂಗ್ರಹಣಾ ತೊಟ್ಟಿಯನ್ನು ಪ್ರತಿ ವರ್ಷದ ಏಪ್ರಿಲ್ ತಿಂಗಳು ಅಥವಾ ಮಳೆಗಾಲದ ಆರಂಭಕ್ಕಿಂತ ಮುಂಚೆ ಕಡ್ಡಾಯವಾಗಿ ಸ್ವಚ್ಚಗೊಳಿಸಲಾಗುತ್ತದೆ.
ನೀರು ಸಂಗ್ರಹಣಾ ತೊಟ್ಟಿಯ ಮೇಲ್ಭಾಗದಲ್ಲಿ ಒಬ್ಬ ಮನುಷ್ಯ ಇಳಿಯುವಷ್ಟು ಅಗಲದ ಜಾಗವಿದ್ದು ಅದಕ್ಕೊಂದು ಮುಚ್ಚಳಿಕೆಯಿರುತ್ತದೆ. ತೊಟ್ಟಿ ಸ್ವಚ್ಚಗೊಳಿಸುವಾಗ, ನೀರಿನ ಮಟ್ಟ ತಿಳಿಯಲು ಮತ್ತು ಅಗತ್ಯವಿದ್ದಾಗ ಮಾತ್ರ ಇದನ್ನು ತೆರೆಯಲಾಗುತ್ತದೆ. ಪದೇ-ಪದೇ ಇದನ್ನು ತೆಗೆದರೆ ಸೂರ್ಯನ ಕಿರಣಗಳು ಮತ್ತು ಗಾಳಿ ತೊಟ್ಟಿಯಲ್ಲಿನ ನೀರಿಗೆ ತಾಕಿ ಹುಳ ಬೀಳುವ ಸಂಭವವಿರುತ್ತದೆ ಹಾಗೂ ತೊಟ್ಟಿಯ ಒಳಗೆ ಪಾಚಿ ಬೆಳೆಯಲು ಆಸ್ಪದವಾಗುತ್ತದೆ. ಒಂದು ವೇಳೆ ಹೀಗೇನಾದರೂ ಆದರೆ ನೀರು ಬಳಕೆಗೆ ಬರುವುದಿಲ್ಲ. ಆದ್ದರಿಂದ ಈ ಬಗ್ಗೆ ಹೆಚ್ಚು ಮುತುವರ್ಜಿ.
ಮಳೆನೀರು ಸಂಗ್ರಹಣೆಗೆ ಮುಂಚೆ ಇದ್ದಂತಹ ಪರಿಸ್ಥಿತಿ: 
ಇಲ್ಲಿನ ವಾರ್ಷಿಕ ಸರಾಸರಿ ಮಳೆ 600 ಮಿ.ಮೀ. ಮಾತ್ರ. ಮಳೆಯ ಅನಿಶ್ಚಿತತೆ ಇಲ್ಲಿ ಸರ್ವೇ ಸಾಮಾನ್ಯ. ಪರಿಣಾಮ ನೀರಿನ ಅಭಾವ. ಕುಡಿಯುವ ನೀರಿಗಂತೂ ವಿಪರೀತ ತೊಂದರೆ. ನೀರಿನ ಅವಶ್ಯಕತೆಗಳಿಗೆ ಕೊಳವೆ ಬಾವಿಗಳ ಮೇಲೆ ಅವಲಂಬನೆ ಹೆಚ್ಚದಂತೆಲ್ಲಾ ಅಂತರ್ಜಲ ಮಟ್ಟ ಸಹಜವಾಗಿಯೇ ಕುಸಿದು ಕೊಳವೆ ಬಾವಿಗಳ ಆಳ ಹೆಚ್ಚುತ್ತಾ ಹೋಯಿತು. ಇದರಿಂದ ಕೊಳವೆ ಬಾವಿ ನೀರಿನಲ್ಲಿ ಫ್ಲೋರೈಡ್ ಅಂಶ ಅಧಿಕ. ವಿಧಿ ಇಲ್ಲದೆ ಈ ನೀರನ್ನೇ ಕುಡಿದು ಅನೇಕ ಆರೋಗ್ಯ ಸಮಸ್ಯೆಗಳನ್ನು ಈ ಭಾಗದ ಜನರು ಎದುರಿಸುತ್ತಿದ್ದರು.
ತರಬೇತಿ ಕೇಂದ್ರದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಕ್ಯಾಂಪಸ್ಸಿನಲ್ಲಿ ಚಟುವಟಿಕೆಗಳು ಹೆಚ್ಚಾದಂತೆ ನೀರಿನ ಅಗತ್ಯ ಹೆಚ್ಚಾಯಿತು. "ಟ್ಯಾಂಕರ್ ಮೂಲಕ ನೀರು ತರಿಸುವುದು ದಿನ ನಿತ್ಯದ ಪರಿಪಾಠವೇ ಆಗಿಹೋಗಿತ್ತು" ಎಂದು ಆಗಿನ ಪರಿಸ್ಥಿತಿಯನ್ನು ನೆನಪಿಸಿಕೊಳ್ಳುತ್ತಾರೆ ಈ ಕ್ಯಾಂಪಸ್ಸಿನಲ್ಲಿ ಅರಂಭದಿಂದಲೂ ಕಾರ್ಯ ನಿರ್ವಹಿಸುತ್ತಿರುವ ಕಾಂತರಾಜು. ಈ ಕಟು ಅನುಭವವೇ ನಮಗೆ ಮಳೆ ನೀರು ಸಂಗ್ರಹಣೆಯನ್ನು ಅಳವಡಿಸಿಕೊಳ್ಳಲು ಪ್ರೇರೇಪಣೆ ಎನ್ನುವ ಅವರು. "ಈಗ ವರ್ಷದಲ್ಲಿ ಒಂದೆರಡು ತಿಂಗಳು ಬಿಟ್ಟರೆ ಉಳಿದ ಅವಧಿಗೆ ಮಳೆ ನೀರು ಸಾಕಷ್ಟಾಗುತ್ತದೆ, ಫ್ಲೋರೈಡ್ ಅಂಶವಿಲ್ಲದ ಶುದ್ಧ ನೀರು ಲಭ್ಯ. ಟ್ಯಾಂಕರ್ ನೀರು ತರಿಸುವ ಕಿರಿ-ಕಿರಿ ಇಲ್ಲ. ಹಣದ ಉಳಿತಾಯವೂ ಆದಂತಾಗಿದೆ" ಎಂಬುದು ಕಾಂತರಾಜುರವರ ಆತ್ಮ ವಿಶ್ವಾಸದ ನುಡಿ. ಹಾಸ್ಟೆಲ್ ಕಟ್ಟಡದಲ್ಲಿರುವ ಮಳೆ ನೀರು ಸಂಗ್ರಹಾಗಾರ ನಿರ್ಮಾಣಕ್ಕೆ 1.20.000.00 ರೂ. ವೆಚ್ಚವಾಗಿದೆ. ನಿರ್ಮಾಣಕ್ಕೆ ತೆಗೆದುಕೊಂಡ ಅವಧಿ 2 ತಿಂಗಳು.
ಲಕ್ಕಿಹಳ್ಳಿ ವ್ಯಾಪ್ತಿಯ ಸರಾಸರಿ ಮಳೆ ಪ್ರಮಾಣ 400 ರಿಂದ 600 ಮಿ.ಮೀ. 1 ಮಿ.ಮೀ ಮಳೆ ಬಿದ್ದರೆ 400 ಲೀಟರ್ ನೀರು ಸಂಗ್ರಹಣೆಯಗುತ್ತದೆ. 1 ಸೆಂಟಿ ಮೀಟರ್ ಮಳೆ ಬಿದ್ದರೆ 4000 ಲೀಟರ್ ನೀರು ಸಂಗ್ರಹಣೆಯಾಗುತ್ತದೆ. ಈ ಭಾಗದಲ್ಲಿ ಸಾಮಾನ್ಯವಾಗಿ ಜೂನ್ ಮತ್ತು ಅಕ್ಟೋಬರ್ ತಿಂಗಳು ಹೆಚ್ಚು ಮಳೆ ಬೀಳುತ್ತದೆ.
ಸಂಗ್ರಹಿತವಾದ ಮಳೆ ನೀರನ್ನು ಸಂಸ್ಥೆಯು ವಿವಿಧ ಉಪಯೋಗಗಳಿಗೆ ಬಳಸುತ್ತದೆ. ತರಬೇತಿಗೆ ಬರುವ ಶಿಬಿರಾರ್ಥಿಗಳಿಗೆ ಕುಡಿಯಲು ಉತ್ತಮ ಗುಣಮಟ್ಟದ ಮಳೆ ನೀರನ್ನು ನೀಡುತ್ತದೆ. ಆ ಮೂಲಕ ಮಳೆ ನೀರು ಬಳಕೆಯಿಂದ ಫ್ಲೊರೊಸಿಸ್ ನ್ನು ದೂರವಿಡುವ ಸುಲಭ ಉಪಾಯದ ಮನವರಿಕೆ ಮಾಡಿಕೊಡಲಾಗುತ್ತದೆ. ಮಳೆ ನೀರು ಸಂಗ್ರಹಣೆಯ ವಿಧಾನ, ಖರ್ಚು-ವೆಚ್ಚಗಳ ಬಾಬ್ತು, ನಿರ್ವಹಣೆ ಮುಂತಾದ ಅಂಶಗಳನ್ನೆಲ್ಲಾ ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸುವುದು ಬಹಳ ಪರಿಣಾಮಕಾರಿಯಾಗಿದೆ. ಇದರ ಪರಿಣಾಮ ಹಲವಾರು ಹಳ್ಳಿಗಳಲ್ಲಿ ಸ್ವತಃ ಮಳೆ ನೀರು ಸಂಗ್ರಹಿಸಿ ಉಪಯೋಗಿಸುವ ಪರಿಪಾಠ ಪ್ರಾರಂಭವಾಗಿದೆ. ಕ್ಯಾಂಪಸ್ಸಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಮತ್ತು ಶಾಲಾ-ಕಾಲೇಜು ಮಕ್ಕಳಿಗೂ ಸಹ ಮಳೆ ನೀರು ಸಂಗ್ರಹಣೆ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ. ಇದು ಹಲವಾರು ಶಾಲೆಗಳಲ್ಲಿ ಛಾವಣಿ ನೀರು ಸಂಗ್ರಹಣೆ ಕಾರ್ಯಕ್ಕೆ ಪ್ರೇರೇಪಣೆ ನೀಡಿದೆ.ತಪ್ಪದೆ ಒಮ್ಮೆ ಭೇಟಿ ಕೊಡಿ.
ಕೇಂದ್ರದ ವಿಳಾಸ:
ಬೈಫ್ ಗ್ರಾಮೋದಯ ತರಬೇತಿ ಕೇಂದ್ರ
ಎಸ್.ಲಕ್ಕಿಹಳ್ಳಿ, ತಿಪಟೂರು ತಾಲ್ಲೂಕು
ತುಮಕೂರು ಜಿಲ್ಲೆ.
ದೂರವಾಣಿ - 08134-263755

ಗುರುವಾರ, ಆಗಸ್ಟ್ 12, 2010

ಬೀಜ ಕಾಯಿದೆ

ge-rice-threatens-biodiversity.jpg
ದೇಶದಲ್ಲಿ ಮೂದಲ ಬಾರಿಗೆ 1966ರಲ್ಲಿ ಬೀಜ ಕಾಯಿದೆ ಜಾರಿಗೆ ಬಂತು. ಅದೇ ಕೊನೆಯ ಕಾಯಿದೆಯೂ ಆಗಿತ್ತು . 2004ರಲ್ಲಿ ಹೊಸ ಬೀಜ ಕಾಯಿದೆ ಬಂತಾದರೂ ಅದರಲ್ಲಿ ರೈತರಿಗೆ ಮಾರಕವಾದ ಅಂಶಗಳೇ ಅಧಿಧಕವಾಗಿದ್ದು, ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು . ಆ ಕಾರಣದಿಂದ ಕಾಯಿದೆಯನ್ನು ಪುನರ್ರೂಪಿಸಲು ನಿರ್ಣಯಿಸಲಾಯಿತು. ಅದೇ "ಬೀಜ ಕಾಯಿದೆ&2010'.






2004ರಲ್ಲಿ ರೈತ ವಿರೋಧಿಧ ಬೀಜ ಕಾಯಿದೆ ಬಂದಿದ್ದರಿಂದಲೇ ಬಿಟಿ ಬದನೆ ಆಗಮನವಾಯಿತು . ಬಿಟಿ ಹತ್ತಿ ಪರಿಚಯ ವಾಯಿತು. ಮೂದಲಿಗೆ ಹೆಚ್ಚಿನ ಲಾಭವನ್ನೇ ನೀಡಿದ ಬಿಟಿ ಬದನೆ ಮತ್ತು ಬಿಟಿ ಹತ್ತಿ ಆಮೇಲೆ ರೈತರ ಮೇಲೆರಗಿತು. ಆಂಧ್ರ ಪ್ರದೇಶದಲ್ಲಿ ಬಿಟಿ ಹತ್ತಿ ಬೆಳೆದ ರೈತರು ಸಾಲುಸಾಲು ಆತ್ಮಹತ್ಯೆ ಮಾಡಿಕೊಂಡರು. ಈ ಕಾರಣದಿಂದಲೇ "2004ರ ಬಿಜ ಕಾಯಿದೆ ರೈತರ ವಿರೋಧಿಧ' ಎನ್ನುವ ಕುಖ್ಯಾತಿ ಪಡೆದಿದ್ದು ಮತ್ತು 2010ರ ಕಾಯಿದೆ ರೂಪಿಸುವ ಚಿಂತನೆ ಮೂಡಿದ್ದು .

ಬೀಜ ಕಾಯಿದೆ 2010
ಈ "ಬೀಜ ಕಾಯಿದೆ&2010' ರೈತರ ಪಾಲಿಗೆ ವರವೋ ಶಾಪವೋ& ಎನ್ನುವುದು. ಅದನ್ನು ಪರಿಶೀಲಿಸೋಣ.
* ಇಷ್ಟು ದಿನ ಸರ್ಕಾರವೇ ಬೀಜಗಳಿಗೆ ದರ ನಿಗದಿ ಮಾಡುತ್ತಿತ್ತು . ಹೊಸದಾಗಿ ರೂಪುಗೊಳ್ಳುತ್ತಿರುವ ಕಾಯಿದೆಯಲ್ಲಿ "ಬೀಜಗಳ ದರ ನಿಯಂತ್ರಣ'ದ ಬಗ್ಗೆ ಪ್ರಸ್ತಾಪ ಆಗಿಲ್ಲ . ಹೀಗಾಗಿ ಮುಂದೆ ಕಂಪನಿಗಳು ಮನಬಂದಷ್ಟು ದರಗಳನ್ನು ನಿಗದಿಪಡಿಸುವ ಅಪಾಯವಿದೆ.
* ಈವರೆಗೆ ಬೀಜಗಳನ್ನು ಪರಿಚಯಿ ಸುವುದು, ಮಾರಾಟ ಮಾಡುವುದು, ಬೆಲೆ ನಿಗದಿ ಸೇರಿದಂತೆ ಪ್ರತಿಯೊಂದನ್ನೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆಯೇ ಮಾಡಬೇಕಿತ್ತು. ಹೊಸ ಕಾಯಿದೆಯಲ್ಲಿ ರಾಜ್ಯ ಸರ್ಕಾರಗಳ ಹಕ್ಕಿನ ಬಗ್ಗೆ ಪ್ರಸ್ತಾಪ ಮಾಡಿಲ್ಲ. "ಕೆಲವೊಂದು ಪ್ರದೇಶಗಳಿಗೆ ಅನುಕೂಲ ಆಗುತ್ತದೆ' ಎಂದು ಕೇಂದ್ರ ಸರ್ಕಾರ ಕೆಲವು ಸಂಗತಿಗಳ ಕುರಿತಾಗಿ ಕಂಪನಿಗಳಿಗೆ ಅನುಮತಿ ನೀಡಿದರೆ, ರಿಯಾಯಿತಿ ನೀಡಿದರೆ, ಕಂಪನಿಗಳು ದೇಶಾದ್ಯಂತ ಇದನ್ನೇ ಅನುಸರಿಸುತ್ತವೆ.
* ಕಳಪೆ ಬೀಜದಿಂದ ಬೆಳೆ ನಾಶ ಅನುಭವಿಸುವ ರೈತರಿಗೆ ಪರಿಹಾರ ನೀಡುತ್ತಿರುವ ಈಗಿನ ಕ್ರಮ ಸಂಪೂರ್ಣ ಅವೈಜ್ಞಾನಿಕವಾಗಿದೆ. ಸಾಮಾನ್ಯವಾಗಿ ಬೀಜದ ಕಂಪನಿಗಳು ಬೀಜದ ಬೆಲೆಯನ್ನು ಮಾತ್ರ ಹಿಂತಿರುಗಿಸಿ ಕೈತೊಳೆದುಕೊಳ್ಳುತ್ತಿವೆ. ಆದರೆ ರೈತರು ಒಕ್ಕಣೆ, ಗೊಬ್ಬರ, ಔಷಧಿಧ ಸೇರಿದಂತೆ ಪ್ರತಿ ಎಕೆರೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿರುತ್ತಾರೆ. ಖಳ ಕಂಪನಿಗಳು ಕಳಪೆ ಬೀಜ ನೀಡುವುದರಿಂದ ಇಷ್ಟೆಲ್ಲಾ ಖರ್ಚು ಮತ್ತು ಶ್ರಮ ಹಾಕಿಯೂ ರೈತ ಮೋಸ ಹೋಗುತ್ತಿದ್ದಾನೆ. ಯಾವ ಹಂತದಲ್ಲಿ ಬೆಳೆ ನಾಶವಾಯಿತು, ಇಡೀ ವ್ಯವಸಾಯಕ್ಕೆ ಆತ ಮಾಡಿದ ಖರ್ಚು ಎಷ್ಟು ಎನ್ನುವುದನ್ನು ಆಧರಿಸಿ ಪರಿಹಾರ ನಿಗದಿ ಮಾಡಬೇಕು. ಅಂಥ ಪರಿಹಾರದ ಪ್ರಸ್ತಾಪ ಹೊಸ ಕಾಯಿದೆಯಲ್ಲಿ ಆಗಿಲ್ಲ .
* ರೈತರಿಗೆ ಕಳಪೆ ಬೀಜ ನೀಡಿ ಹಣ ಮಾಡಿಕೊಳ್ಳುವ ಮೋಸಗಾರ ಕಂಪನಿಗಳಿಗೆ ದಂಡ ಹಾಕುವ ಕ್ರಮ ಮತ್ತಷ್ಟು ಶಿಸ್ತಿಗೆ ಒಳ ಪಡಬೇಕು. ಹೊಸ ಕಾಯಿದೆಯಲ್ಲಿ ಇದರ ಬಗ್ಗೆ ಚರ್ಚೆ ಆಗಿಲ್ಲ . ಹಾಲಿ ಪದ್ಧತಿಯಲ್ಲೂ ಮೋಸಗಾರ ಕಂಪನಿಗಳನ್ನು ದಂಡಿಧಿಸುವ ಕ್ರಮ ಇದೆ. ಆದರೆ ದಂಡದ ಪ್ರಮಾಣ ತೀರಾ ಕಡಿಮೆ. ಕಾಯಿದೆ ಮುಖಾಂತರ ಬಿಗಿ ಮಾಡದಿದ್ದರೆ ಖೂಳ ಕಂಪನಿಗಳ ಈ ಕೆಟ್ಟ ಚಾಳಿ ಮತ್ತೂ ಮುಂದುವರೆಯುತ್ತದೆ.
* ಆಯಾ ರಾಜ್ಯಗಳಿಗೆ ಬೇಕಾದ ಬೀಜಗಳನ್ನು ಉತ್ಪಾದಿಸುವ, ಮಾರಾಟ ಮಾಡುವ ಅವಕಾಶ ಮಾಡಿಕೊಡಬೇಕಾದುದು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟ ವಿಚಾರ. ಆ ಕಾರಣಕ್ಕೆ ಪ್ರತಿ ರಾಜ್ಯಗಳಲ್ಲೂ ಪ್ರತ್ಯೇಕ "ಬೀಜ ನೋಂದಣಿ ಕೇಂದ್ರ' ಸ್ಥಾಪನೆಯಾಗಬೇಕು. ಆದರೆ ಹೊಸ ಕಾಯಿದೆ "ರಾಷ್ಟ್ರೀಯ ಬೀಜ ನೋಂದಣಿ ಕೇಂದ್ರ'ದಲ್ಲಿ ಮಾತ್ರ ನೋಂದಾಯಿಸಿಕೊಳ್ಳುವಂತೆ ಹೇಳುತ್ತಿದೆ. ಇದರಿಂದ ರಾಜ್ಯ ಸರ್ಕಾರಗಳ ಹಕ್ಕು ಮೂಟಕುಗೊಳ್ಳುತ್ತದೆ ಮತ್ತು "ಕೇಂದ್ರೀಕರಣ'ಗೊಳ್ಳಲು ಅನುವು ಮಾಡಿ ಕೊಟ್ಟಂತಾಗುತ್ತದೆ.
* ಬೆಳೆ ನಾಶ ಅನುಭವಿಸುವ ರೈತರಿಗೆ ಕಡ್ಡಾಯವಾಗಿ ಪರಿಹಾರ ನೀಡಲೇಬೇಕು ಎಂದು ಪ್ರತಿಪಾದಿಸುವ ರೈತಸ್ನೇಹಿಯಾದ "ಪರಿಹಾರ ಸಮಿತಿ' ಸ್ಥಾಪಿಸುವ ಚಿಂತನೆ ನೂತನ ಕಾಯಿದೆಯಲ್ಲಿದೆ. ಹಲವಾರು ಕಂಪನಿಗಳು ರೈತರಿಗೆ ಕಳಪೆ ಬೀಜ ಮಾರಿ ಪರಿಹಾರ ನೀಡದೆ ಮೋಸ ಮಾಡುತ್ತಿದ್ದವು. ಹೊಸ ಕಾಯಿದೆ ಪ್ರಕಾರ ಕಂಪನಿಗಳಿಗೆ ಮೋಸ ಮಾಡಲು ಸಾಧ್ಯ ಇರುವುದಿಲ್ಲ . ಇಷ್ಟು ದಿನ ರೈತರು ತಮಗೆ ಆದ ಅನ್ಯಾಯವನ್ನು ನ್ಯಾಯಾಲಯ ಅಥವಾ ಗ್ರಾಹಕರ ವೇದಿಕೆಗಳಲ್ಲಿ ಪರಿಹರಿಸಿಕೊಳ್ಳಬೇಕಿತ್ತು . ನ್ಯಾಯಾಲಯ ಮತ್ತು ಗ್ರಾಹಕರ ವೇದಿಕೆಗಳಲ್ಲಿ ತೀರ್ಪು ಬರುವುದು ವಿಳಂಬವಾಗಿ ರೈತರು ಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ "ಪರಿಹಾರ ಸಮಿತಿ' ತ್ವರಿತವಾಗಿ ವಿಚಾರಣೆ ನಡೆಸಿ 60 ದಿನಗಳೊಳಗೆ ಪರಿಹಾರ ಕೊಡಿಸಿಕೊಡಲಿದೆ.
ಈ ಸಮಿತಿಯು ಕೇಂದ್ರ ಸರ್ಕಾರದ ಮಟ್ಟದಲ್ಲಿರುತ್ತದೋ, ರಾಜ್ಯ ಸರ್ಕಾರದ ಮಟ್ಟದಲ್ಲಿರುತ್ತದೋ, ಸ್ಥಳೀಯ ಆಡಳಿತದ ಮಟ್ಟದಲ್ಲಿರುತ್ತದೋ ನಿಗದಿಯಾಗಿಲ್ಲ . ವಾಸ್ತವವಾಗಿ ಸ್ಥಳೀಯ ಮಟ್ಟದಲ್ಲಿದ್ದರಷ್ಟೇ ರೈತರು ಪರಿಹಾರ ಸಮಿತಿ ಮುಂದೆ ಅಹವಾಲು ಸ್ವೀಕರಿಸಲು, ಪರಿಹಾರ ಪಡೆಯಲು ಸಾಧ್ಯ.
* ಬೀಜ ಉತ್ಪಾದಿಸುವುದಕ್ಕೆ, ಸಂರಕ್ಷಿಸು ವುದಕ್ಕೆ ಮತ್ತು ಮಾರಾಟಕ್ಕೆ ರೈತರಿಗೆ ಮೂದಲಿನಂತೆ ಮುಕ್ತ ಸ್ವಾತಂತ್ರ್ಯವಿದೆ. ಆದರೆ ಬೀಜಗಳನ್ನು ಬ್ರಾಂಡ್ ಮಾಡಿ ಮಾರಾಟ ಮಾಡುವುದಕ್ಕೆ ಮಾತ್ರ ನೋಂದಣಿ ಮಾಡಿಸಬೇಕು. ಇದು ಒಳ್ಳೆಯದೂ ಹೌದು. ಇದರಿಂದ ಕಂಪನಿಗಳು ರೈತರ ಹೆಸರಿನಲ್ಲಿ ಬೀಜ ಮಾರಾಟ ಮಾಡಲಾಗುವುದಿಲ್ಲ .
ಹೀಗೆ 2010ರ ಬೀಜ ಕಾಯಿದೆ ಹಲವು ಸೂಕ್ಷ್ಮಗಳನ್ನು ಒಳಗೊಂಡಿದೆ. ಇವೆಲ್ಲದರ­ ನಿರ್ವಹಣೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಮಾರಕವಾಗಲಿದೆ.

ಮಂಗಳವಾರ, ಆಗಸ್ಟ್ 10, 2010

ವೃಕ್ಷಾಧಾರಿತ ಕೃಷಿ ಬದುಕು ರೈತರ ಉಸಿರಾಗಬೇಕು

ವೃಕ್ಷಾಧಾರಿತ ಕೃಷಿ ಬದುಕು ರೈತರ ಉಸಿರಾಗಬೇಕು, ಪ್ರಸಕ್ತ ಸಂಧರ್ಭದಲ್ಲಿ ರೈತರ ಸಂಕಷ್ಟಗಳಿಗೆ ಸಿದ್ದೌಷಧ ಎಂದರೆ ಗಿಡ-ಮರ ಬೆಳೆಸುವುದೇ ಆಗಿದೆ
ಕೃಷಿ ಸಂಕಷ್ಟ ನಿವಾರಣೆಗೆ ವೃಕ್ಷ ಪ್ರೀತಿ ಬೆಳೆಯಬೇಕು, ಪರಿಸರದಲ್ಲಿ ದೇವರನ್ನು ಕಾಣುವ ಮನೋಧರ್ಮ ಬಂದಾಗ ತಂತಾನೆ ಪ್ರಾಕೃತಿಕ ಸಂಪತ್ತು ಬೆಳೆಯಲು ಸಾಧ್ಯ ರೈತರು ತಮ್ಮ ಕೃಷಿ ಜಮೀನುಗಳಲ್ಲಿ ಸಾಂಪ್ರದಾಯಿಕ ಬೆಳೆಯ ಜೊತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಭರಾಟೆಯಲ್ಲಿ ಪ್ರಾಕೃತಿಕ ಸಂಪತ್ತಿಗೆ ಧಕ್ಕೆ ತರುತ್ತಿದ್ದಾರೆ, ಆಧುನಿಕ ಬೇಸಾಯ ಪದ್ದತಿಗಳಿಂದ ನಷ್ಟ ಅನುಭವಿಸುತ್ತಿದ್ದಾರೆ, ಇಂದಿನ ಸಂಧರ್ಬದಲ್ಲಿ ಜಮೀನು-ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರ ಕೊರತೆಯೂ ಇದೆ ಹೀಗಿರುವಾಗ ಮರ-ಗಿಡ ನೆಟ್ಟು ಪೋಷಿಸುವುದರಿಂದ ಅವು ನಮ್ಮ ಕಷ್ಟಕಾಲದಲ್ಲಿ ನೆರವಿಗೆ ಬರುತ್ತವೆ ಆದ್ದರಿಂದ ಪ್ರತಿಯೊಬ್ಬರು ತಮ್ಮ ಜಮೀನುಗಳಲ್ಲಿ, ಖಾಲಿ ಸ್ಥಳಗಳಲ್ಲಿ ಗಿಡಬೆಳೆಸಿ ಹಸಿರು ವಾತಾವರಣವನ್ನು ಉಳಿಸಿ ಕೃಷಿ ಜಮೀನಿಗೆ ಸತ್ವಯುತ ಪೋಷಕಾಂಶಗಳು ಲಭಿಸಬೇಕೆಂದರೆ ಗಿಡ ನೆಡುವುದೊಂದೇ ಏಕೈಕ ಪರಿಹಾರವಾಗಿದೆ ಗಿಡಬೆಳೆಸಲು ಆಯಾ ಊರಿನ ಗ್ರಾಮಸ್ಥರು ಪ್ರತೀ ವರ್ಷ ಹೊಸದಾಗಿ ಗಿಡಖರೀದಿಸಿ ಅವರವರ ಗ್ರಾಮಗಳಲ್ಲಿ ಗಿಡನೆಡಿಸುವ ಸಂಪ್ರದಾಯವನ್ನು ಎಲ್ಲಾ ಗ್ರಾಮಗಳ ಗ್ರಾಮಸ್ಥರುಗಳು ಅನುಕರಿಸಬೇಕು. ಮರಗಳು ಆಪತ್ತಿನ ಸ್ನೇಹಿತರಿದ್ದಂತೆ ವಾಣಿಜ್ಯ ಬೆಳೆಬೆಳೆದು ಮಣ್ಣಿನ ಫಲವತ್ತತೆ ಹಾಳು ಮಾಡುವ ಮತ್ತು ನೇಣಿಗೆ ಶರಣಾಗುವ ಬದಲಿಗೆ ರೈತರು ಜಮೀನುಗಳಲ್ಲಿ ಗಿಡ ನೆಟ್ಟು ಪೋಷಿಸಿ ಅವು ನಮ್ಮನ್ನು ಜೀವನ ಪರ್ಯಂತ ಕಾಯುತ್ತವೆ, ನಮ್ಮ ರೈತರು ಅರ್ಥ ಮಾಡಿಕೊಳ್ಳಬೇಕು, ಪ್ರಾಕೃತಿಕ ಅಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಿಡ ಬೆಳೆಸಿ.

ಶನಿವಾರ, ಆಗಸ್ಟ್ 7, 2010

‘ಹಸಿರು ತುಮಕೂರು’

ಏನಿದು ‘ಹಸಿರು ತುಮಕೂರು’?:
ನಗರದಾದ್ಯಂತ ಈಗಾಗಲೇ ಬೆಳವಣಿಗೆ ಕಂಡಿರುವ ವಿವಿಧ ಬಡಾವಣೆಗಳ ರಸ್ತೆ ಬದಿಯಲ್ಲಿ, ಈಗಷ್ಟೇ ಅಭಿವೃದ್ಧಿ ಹೊಂದುತ್ತಿರುವ ಲೇಔಟ್ಗಳಲ್ಲಿ, ಕೈಗಾರಿಕಾ ಪ್ರದೇಶದಲ್ಲಿ, ಖಾಲಿ ಇರುವ ಸರ್ಕಾರಿ ಮತ್ತು ಖಾಸಗಿ ಸ್ಥಳದಲ್ಲಿ ವೃಕ್ಷ ಪ್ರಾಧಿಕಾರ ಗೊತ್ತುಪಡಿಸಿದ ನಿಯಮಾನುಸಾರ ವೈಜ್ಞಾನಿಕವಾಗಿ ಗಿಡ ಮರಗಳನ್ನು ನೆಟ್ಟು ಪೋಷಿಸುವುದು, ಆ ಮೂಲಕ ನಗರದ ತುಂಬೆಲ್ಲಾ ಹಸಿರಿನ ವಾತಾವರಣ ನಿರ್ಮಿಸುವುದೇ ‘ಹಸಿರು ತುಮಕೂರು’ ಯೋಜನೆ.

ವೃಕ್ಷ ಪ್ರಾಧಿಕಾರ:
ಕರ್ನಾಟಕ ಅರಣ್ಯ ಸಂರಕ್ಷಣೆ ಕಾಯಿದೆ 1976ರ ಪ್ರಕಾರ ಪ್ರತಿಯೊಂದು ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ವೃಕ್ಷ ಪ್ರಾಧಿಕಾರ ರಚಿಸಲು ಸರ್ಕಾರ ತೀರ್ಮಾನಿಸಿದೆ. ಆ ಪ್ರಕಾರ, ನಗರವೊಂದರಲ್ಲಿ ರಚನೆಗೊಳ್ಳುವ ಪ್ರಾಧಿಕಾರದಲ್ಲಿ ನಗರಸಭೆ ಅಧ್ಯಕ್ಷ, ಆಯುಕ್ತ, ಉಪ ಅರಣ್ಯ ಸಂರಕ್ಷಣಾಧಿಕಾರಿ, ತೋಟಗಾರಿಕಾ ಇಲಾಖೆ ಉಪನಿರ್ದೇಶಕರು ಹಾಗೂ ಓರ್ವ ನಗರಸಭೆ ಸದಸ್ಯರೂ ಸೇರಿದಂತೆ ಒಟ್ಟು 5 ಜನ ಸದಸ್ಯರಿರುವುದು ಕಡ್ಡಾಯ.

ಪ್ರಾಧಿಕಾರದ ಕರ್ತವ್ಯ:
ನಗರ ಮಿತಿಯಲ್ಲಿ ಹಾಲಿ ಎಷ್ಟು ಮರಗಳಿವೆ ಎಂಬುದರ ಬಗ್ಗೆ ಕಾಲ ಕಾಲಕ್ಕೆ ಸಮೀಕ್ಷೆ ಕೈಗೊಳ್ಳುವುದು, ಬಡಾವಣೆಗಳ ರಸ್ತೆ ಬದಿ, ಖಾಸಗಿ, ಸರ್ಕಾರಿ ಭೂಮಿಯಲ್ಲಿ ಸ್ಥಳ ಗುರುತಿಸುವುದು, ಗಿಡ ನೆಟ್ಟು ಪೋಷಿಸುವುದು, ಸಸಿಸತ್ತು ಹೋದರೆ ಆ ಸ್ಥಳದಲ್ಲಿ ಹೊಸದಾಗಿ ಗಿಡನೆಡುವುದು, ರಸ್ತೆ ಅಭಿವೃದ್ಧಿ, ವಿಸ್ತರಣೆ ವೇಳೆ ಆ ರಸ್ತೆಗಳ ಗುಣಮಟ್ಟ ಆಧರಿಸಿ ಗಿಡ ನೆಡಲು ಕ್ರಮ ಕೈಗೊಳ್ಳುವುದೂ ಸೇರಿದಂತೆ ಅಗತ್ಯ ಪ್ರಮಾಣದಲ್ಲಿ ಬೀಜ ಅಥವಾ ಸಸಿಗಳನ್ನು ಪೂರೈಸುವುದು ವೃಕ್ಷ ಪ್ರಾಧಿಕಾರದ ಆದ್ಯ ಕರ್ತವ್ಯವಾಗಿದೆ.

ಹಸಿರು ಸಂರಕ್ಷಣಾ ಪಡೆ:
ಆದರೆ ತುಮಕೂರು ನಗರಸಭೆ ಆಡಳಿತ ವೃಕ್ಷ ಪ್ರಾಧಿಕಾರ ರಚಿಸುವ ಬದಲು ಇದಕ್ಕೆ ಪರ್ಯಾಯವಾಗಿ ಹಸಿರು ಸಂರಕ್ಷಣಾ ಪಡೆ ರಚಿಸಿದೆ. ನಗರ ಮಿತಿಯಲ್ಲಿ ಕಳೆದೊಂದು ವರ್ಷದಿಂದ ವಿವಿಧೆಡೆ ರಸ್ತೆ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ, ಉದ್ದೇಶಿತ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿರುವ ರಸ್ತೆ ಇಕ್ಕೆಲಗಳಲ್ಲಿನ ಮರಗಳನ್ನು ಹಸಿರು ಸಂರಕ್ಷಣಾ ಪಡೆ ನೀಡಿದ ಅರೆಬರೆ ಒಪ್ಪಿಗೆ ಮೇರೆಗೆ ತೆರವು ಗೊಳಿಸಿದೆ. ಹೀಗೆ ತೆರವುಗೊಳಿಸಿದ ಮರಗಳ ಸಂಖ್ಯೆ 400ಕ್ಕೂ ಅಧಿಕವಾಗಿದೆ.

ರಸ್ತೆ ಬದಿಯ ಮರಗಳನ್ನು ಯಾವುದೇ ಇಲಾಖೆ ತೆರವುಗೊಳಿಸಬೇಕಿದ್ದರೆ, ಅದಕ್ಕೆ ಪ್ರತಿಯಾಗಿ ಒಂದು ಮರಕ್ಕೆ ಹತ್ತು ಸಸಿಗಳನ್ನು ನೆಟ್ಟು 5 ವರ್ಷ ಪೋಷಿಸಲು ಪ್ರತಿ ಗಿಡಕ್ಕೆ ರೂ. 715ರಂತೆ ತಗಲುವ ನಿರ್ವಹಣಾ ವೆಚ್ಚವನ್ನು ಅರಣ್ಯ ಇಲಾಖೆಗೆ ಪಾವತಿಸಬೇಕೆಂಬ ನಿಯಮವಿದೆ. ಅದರಂತೆ ನಗರ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಕಾರ್ಯಕ್ಕೆ ಅಡ್ಡಿಯಾಗಿದ್ದ 400ಕ್ಕೂ ಹೆಚ್ಚು ಮರತೆರವುಗೊಳಿಸಿರುವ ನಗರಸಭೆ ಇದಕ್ಕೆ ಪ್ರತಿಯಾಗಿ ಸಸಿ ನೆಟ್ಟು ಪೋಷಿಸಲು ರೂ. 14 ಲಕ್ಷವನ್ನು ಅರಣ್ಯ ಇಲಾಖೆಗೆ ಪಾವತಿಸಿದೆ.

ಅರಣ್ಯ ಇಲಾಖೆ ಸಹ ಪ್ರಸಕ್ತ ಸಾಲಿನಲ್ಲಿ ನಗರ ವ್ಯಾಪ್ತಿಯಲ್ಲಿ ಬರುವ 31 ವಿವಿಧ ಪಾರ್ಕುಗಳ ಒಟ್ಟು 29 ಹೆಕ್ಟೇರ್ ಪ್ರದೇಶದಲ್ಲಿ 5729 ಗಿಡನೆಡಲು ಉದ್ದೇಶಿಸಿದೆ. ಇದಕ್ಕಾಗಿ ರೂ. 26.96 ಲಕ್ಷ ವೆಚ್ಚದ ಅಂದಾಜು ಪಟ್ಟಿ ತಯಾರಾಗಿದ್ದು, ಯೋಜನೆಗೆ ಅಗತ್ಯವಿರುವ ಸಸಿಗಳನ್ನು ನಗರದ ಹೊರವಲಯದ ಸಿದ್ಧಾರ್ಥ ನಗರದಲ್ಲಿರುವ ಸಸ್ಯ ಕ್ಷೇತ್ರದಲ್ಲಿ ಹುಲುಸಾಗಿ ಬೆಳೆಸಿದೆ.
ನಗರ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಗುರುತರ ಜವಾಬ್ದಾರಿ ಹೊತ್ತ ಅರಣ್ಯ ಇಲಾಖೆ, ನಗರಸಭೆ ಆಡಳಿತ ಪರಸ್ಪರರ ನಡುವೆ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸುವ ಮೂಲಕ ಉದ್ದೇಶಿತ ಹಸಿರು ತುಮಕೂರು ಯೋಜನೆಯನ್ನು ಅಸ್ತಿತ್ವಕ್ಕೆ ತರುವರೇ ಎಂಬುದನ್ನು ಕಾಲವೇ ನಿರ್ಣಯಿಸಬೇಕಿದೆ.

ಶುಕ್ರವಾರ, ಆಗಸ್ಟ್ 6, 2010

42 ಮರ ಕಡಿದವಗೆ 210 ಗಿಡ ನೆಡುವ ಶಿಕ್ಷೆ

ಕಾನೂನು ಬಾಹಿರವಾಗಿ 42 ಮರಗಳನ್ನು ಕಡಿದ ವ್ಯಕ್ತಿಯೊಬ್ಬನಿಗೆ 210 ಗಿಡಗಳನ್ನು ನೆಡುವ ಶಿಕ್ಷೆ ವಿಧಿಸಿರುವ ದೆಹಲಿಯ ನ್ಯಾಯಾಲಯ ಒಂದು ರಾಜಧಾನಿಯಲ್ಲಿ ಹಸಿರು ನಶಿಸುತ್ತಿರುವ ಹಿನ್ನೆಲೆಯಲ್ಲಿ ಮರಗಳ ಕಾನೂನಿಗೆ ಸಂಬಂಧಿಸಿದ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದೆ.

"ಮರಗಳು ನಗರದ ಶ್ವಾಸಕೋಶಗಳಿದ್ದಂತೆ. ಭೂಮಿಯಲ್ಲಿನ ಹಸಿರುಭಾಗವು ಸಂಕುಚಿತಗೊಳ್ಳುತ್ತಿದೆ ಎಂಬುದು ಸಾಮಾನ್ಯ ಜ್ಞಾನದ ವಿಚಾರ" ಎಂದು ದಂಡಾಧಿಕಾರಿ ದೇವೇಂದರ್ ಕುಮಾರ್ ಜಂಗಾಲ ಅವರು ಸುರೇಂದರ್ ವಾಸುದೇವ ಎಂಬ ವ್ಯಕ್ತಿಗೆ ಶಿಕ್ಷೆ ವಿಧಿಸುತ್ತಾ ನುಡಿದರು.

ಒಂದು ಮರ ಕಡಿದುದಕ್ಕೆ ಪ್ರತಿಯಾಗಿ ಐದು ಗಿಡಗಳನ್ನು ನೆಡುವ ಶಿಕ್ಷೆ ವಿಧಿಸಿದ ನ್ಯಾಯಾಲಯ, ವಾಸುದೇವ ಅವರ ತಪ್ಪಿನಿಂದಾಗಿರುವ ಪರಿಣಾಮವನ್ನು ಕಡಿಮೆಗೊಳಿಸುವುದು ನ್ಯಾಯಾಲಯದ ಕರ್ತವ್ಯ ಎಂಬುದಾಗಿ ಶಿಕ್ಷೆ ಘೋಷಣೆ ವೇಳೆ ನುಡಿಯಿತು. ಆದರೆ ಉತ್ತಮ ವರ್ತನೆಯ ಎಚ್ಚರಿಕೆ ನೀಡಿ ಅಪರಾಧಿಯನ್ನು ಬಿಡುಗಡೆ ಮಾಡಲಾಯಿತು.

ಮರಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ದೆಹಲಿ ಮರಗಳ ಸಂರಕ್ಷಣಾ ಕಾಯ್ದೆಯನ್ನು ಮರಗಳ ಸಂರಕ್ಷಣೆಯ ಸುರಕ್ಷೆಗಾಗಿ ಜಾರಿಗೆ ತರಲಾಗಿದೆ ಎಂದು ನ್ಯಾಯಾಲಯದ ಹೇಳಿದೆ. ತಾಜ್ಪುರ ಎಂಬ ಜಿಲ್ಲೆಯಲ್ಲಿ 2003ರಲ್ಲಿ 42 ಮರಗಳನ್ನು ಕಡಿದ ಅಪರಾಧವನ್ನು ವಾಸುದೇವ ಎದುರಿಸುತ್ತಿದ್ದರು. ಬಳಿಕ ಈತನ ವಿರುದ್ಧ 1994ರ ದೆಹಲಿ ಮರಗಳ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಬುಧವಾರ, ಆಗಸ್ಟ್ 4, 2010

ಗಿಡ ಮರಗಳನ್ನು ಬೆಳೆಯಬೇಕು

ಗದಗ ಜಲ್ಲೆಯ ರೋಣ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿರುವ ನಮ್ಮ ಜಮೀನು
'ಕಾಡು ಬೆಳೆಸಿ ನಾಡು ಉಳಿಸಿ' ಎಂಬ ಘೋಷಣೆಯೊಂದಿಗೆ ವಿಶ್ವದಾದ್ಯಂತ ಪರಿಸರ ದಿನಾಚರಣೆಯನ್ನು ಜೂನ ೫ ರಂದು ಆಚರಿಸಲಾಯಿತು.ಪರಿಸರ ದಿನಾಚರಣೆ ಕೇವಲ ಆಚರಣೆ ಆಗದೇ ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಹೊಣೆ ಎಂದು ನಾವು ತಿಳಿದು ಹಾಗೂ ಜನರಿಗೂ ಜಾಗೃತಿ ಮುಡಿಸುವ ಪ್ರಯತ್ನ ಮತ್ತಸ್ಟಾಗಬೇಕಿದೆ. ಪರಿಸರ ನಾಶವಾದರೆ ನಾವು ನಾಶವಾದಂತೆ ಇತ್ತಿಚಿನ ದಿನಗಳಲ್ಲಿ ಅರಣ್ಯಗಳ ನಾಶ ಮಾಡಿ ಹೊಟ್ಟೆ ಪಾಡಿಗಾಗಿ ಗುಡ್ಡು ಗಾಡು ಪ್ರದೇಶದ ಜನರು ಜೀವನ ನೆಡೆಸುತ್ತಿದ್ದಾರೆ.ಹೆಚ್ಚು ಗಿಡ ಮರಗಳನ್ನು ನಾಶಮಾಡಿದಂತೆ ಆಮ್ಲಜನಕದ ಪ್ರಮಾಣ ಕಡಿಮೆಯಾಗಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತದೆ ಇದರಿಂದ ಮನುಷ್ಯರು ಹಾಗೂ ಪ್ರಾಣಿಗಳು ಉಸಿರಾಡಿಸಲೂ ತೊಂದರೆವುಂಟಾಗುತ್ತದೆ.ಇದನ್ನು ಅರಿತು ಅರಣ್ಯ ನಾಶ ಮಾಡದೆ ಮತ್ತಷ್ಟು ಗಿಡ ಮರಗಳನ್ನು ಬೆಳೆಯಬೇಕು.ಈಗಾಗಲೇ ವಾಹನಗಳ ಮತ್ತು ಕಾರ್ಖಾನೆಗಳು ಬಿಡುವ ಹೊಗೆಯಿಂದ ಅನೇಕ ತೊಂದರೆಗಳನ್ನು ಎದುರಿಸುವ ಪರಸ್ಥಿತಿ ಬಂದಿದೆ.ಸರಿಯಾಗಿ ಮಳೆಯಾಗದಿರಲು ಒಂದು ರೀತಿಯಲ್ಲಿ ಪರಿಸರ ನಾಶವೇ ಮುಖ್ಯ ಕಾರಣವಾಗಿದೆ.ಪಟ್ಟಣಗಳು ಬೆಳೆದಂತೆ ಪರಿಸರ ನಾಶವು ಹೆಚ್ಚಾಗುತ್ತದೆ.ಇತ್ತಿಚೀಗೆ ಬೆಂಗಳೂರದಿಂದ ಪುಣೆಗೆ ಹೊಗುವ ಎನ್ ಎಚ್ ೪ ರಸ್ತೆ ಬದಿಯಲ್ಲಿ ಸುಮಾರು ವರ್ಷಗಳಿಂದ ಬೆಳೆದಿರುವಂತಹ ಗಿಡಗಳನ್ನು ನೆಲಕ್ಕುರುಳಿಸಿದಾಗ ಆದಂತಹ ನಷ್ಟ ಅಪಾರ ಗಿಡಗಳನ್ನು ಕಡಿಯುವದು ಅನಿವಾರ್ಯವಾಗಿದ್ದರಿಂದ ಕಡಿದದ್ದಾಯಿತು ನಂತರ ರಸ್ತೆಯ ಕೆಲಸವು ನಡೆದಿದೆ ಆದರೆ ನಮ್ಮ ವಿನಂತಿ ಎಂದರೆ ನಾಶವಾದಂತಹ ಗಿಡಗಳ ಜಾಗದಲ್ಲಿ ಮತ್ತೆ ಹೆಚ್ಚಿನ ಪ್ರಮಾನದಲ್ಲಿ ಗಿಡ ನೆಟ್ಟು ಮತ್ತೆ ಹಸಿರನ್ನು ಉಳಿಸುವ ಕಾರ್ಯ ನಮ್ಮ ಸರ್ಕಾರ ಮಾಡಬೇಕು.
 ಗಿಡ ನೆಡುವ ಮೂಲಕ ಹುಟ್ಟು ಹಬ್ಬ
ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಯವರು ವನಮೊತ್ಸವ ಕಾರ್ಯಕ್ರಮದಲ್ಲಿ ಭಾಷಣಮಾಡುವಾಗ ಮೇಣ ಬತ್ತಿ ಆರಿಸು ಮೂಲಕ ಹುಟ್ಟು ಹಬ್ಬ ಆಚರಿಸುವ ಬದಲು ಒಂದು ಗಿಡ ನೆಡುವ ಮೂಲಕ ಹುಟ್ಟು ಹಬ್ಬ ಆಚರಿಸಿ ಅಂತಾ ಹೇಳಿದ್ದು ಗಿಡ ಮರಗಳ ಬಗ್ಗೆ ಆಸಕ್ತಿ ಇರುವ ನನ್ನ ಮನಸ್ಸಿಗೆ ನಾಟಿತ್ತು , ಜೂನ 27 ರಂದು ನಮ್ಮ ನಾಲ್ಕನೆ ಮಗ ಮಾಜಅಹ್ಮದ ಇವನ 9ನೇ ವರ್ಷದ ಹುಟ್ಟು ಹಬ್ಬವನ್ನು ಗಿಡ ನೆಡುವ ಮೂಲಕ ಆಚರಿಸಿ ಬೇವು ಮತ್ತು  ಹೊಂಗೆ ಗಿಡಗಳನ್ನು ನೆಡಲಾಯಿತು. ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಯವರು ಹೇಳಿ ದಂತೆ ನಾವೆಲ್ಲರೂ ಹುಟ್ಟು ಹಬ್ಬ ಮತ್ತು ಮಳಗಾಲದಲ್ಲಿ ಬರುವ ಹಬ್ಬಗಳನ್ನು ಗಿಡ ಮರಗಳನ್ನು ನೆಡುವ ಮೂಲಕ ಆಚರಿಸುವ ರೂಡಿ ಬೇಳೆಸಿಕೊಂಡಲ್ಲಿ ನಮ್ಮ ಪರಿಸರ ಸಮೃದ್ಧಿಯಾಗುವಲ್ಲಿ ಎರಡು ಮಾತಿಲ್ಲ.

ಭಾನುವಾರ, ಆಗಸ್ಟ್ 1, 2010

ಸಾಲುಮರದ ತಿಮ್ಮಕ್ಕ

ಸಾಲುಮರದ ತಿಮ್ಮಕ್ಕನವರು ಅನಕ್ಷರಸ್ಥೆಯಾದರು ಪರಿಸರ ಕಾಳಜಿಯಿಟ್ಟುಕೊಂಡು ಸಾಲುಸಾಲು ಮರಗಳನ್ನು ಮಕ್ಕಳಂತೆ ಬೆಳೆಸಿ ಪೋಷಿಸಿದ ಸಾಲುಮರದ ತಿಮ್ಮಕ್ಕ ಅವರಿಗೆ ಪ್ರತಿಷ್ಠಿತ 'ನಾಡೋಜ' ಪ್ರಶಸ್ತಿ ಲಭಿಸಿರುವುದು ಅವರ ತವರು ಮಾಗಡಿಯಲ್ಲಿ ಸಂಸತದ ನೆರಳನ್ನು ಹರಡಿದೆ. 82ರ ಇಳಿವಯಸ್ಸಿನಲ್ಲೂ ಪರಿಸರ ಸಂರಕ್ಷಣೆ ಕುರಿತಂತೆ ನಾಡಿನ ಜನತೆಗೆ ತಿಮ್ಮಕ್ಕ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಗಡಿಗ್ರಾಮ ಹುಲಿಕಲ್ಲು ಕುದೂರು ರಸ್ತೆಯಲ್ಲಿ ಹಾದುಹೋದರೆ ರಸ್ತೆಯ ಎರಡು ಬದಿಗಳಲ್ಲಿರುವ ನೂರಾರು ಮರಗಳ ತಣ್ಣನೆಯ ಗಾಳಿ ನೆರಳು ಸ್ವಾಗತ ನೀಡುತ್ತವೆ. ಇಷ್ಟೆಲ್ಲಾ ಮರಗಳನ್ನ ಸಾಲುಮರದ ತಿಮ್ಮಕ್ಕ ತನ್ನ ಪತಿ ಬಿಕ್ಕಲುತಿಮ್ಮಯ್ಯನೊಂದಿಗೆ ಕೈಜೋಡಿಸಿ ನೀರೆರೆದು ಪೋಷಿಸಿ ಹೆಮ್ಮರವನ್ನಾಗಿಸಿದ್ದಾರೆ. ತಿಮ್ಮಕ್ಕ ದಂಪತಿಗಳಿಗೆ ಮಕ್ಕಳಿಲ್ಲದಿದ್ದರೂ ಗಿಡ ನೆಟ್ಟು ನೀರೆರೆದು ಮರಬೆಳೆಸಿ ಮಕ್ಕಳಿಲ್ಲವೆಂಬ ಕೊರಗನ್ನ ದೂರಮಾಡಿಕೊಂಡು ಸಾರ್ಥಕ ಜೀವನ ನಡೆಸಿದರು.

ಸಾಲುಮರದ ತಿಮ್ಮಕ್ಕನವರ ಮನೆಗೆ ಹಲವಾರು ಸಂಘಸಂಸ್ಥೆಗಳ ಪದಾಧಿಕಾರಿಗಳು ತೆರಳಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಿಮ್ಮಕ್ಕ ಮುಂದಿನ ಜನ್ಮವಂತಿದ್ದರೆ ಮನುಷ್ಯನಾಗಿ ಹುಟ್ಟುವುದಕ್ಕಿಂತ ಫಲಬಿಡುವ ಮರವಾರಿ ಹುಟ್ಟಲು ಇಷ್ಟವೆಂದು ಹೇಳಿದರು. ಎಲ್ಲಾ ಶಾಲೆಗಳ ಪ್ರತಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಒಂದೊಂದು ಮರವನ್ನ ಬೆಳೆಸಿದರೆ ಸಾರ್ಥಕವಾಗುತ್ತದೆ ಎಂದು ತಿಮ್ಮಕ್ಕ ಹೇಳಿದರು. ತನ್ನ ಸಾಧನೆ ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿದವರೆಲ್ಲರು ತಣ್ಣಗಿರಲಿ ಎಂದು ಹಾರೈಸಿದರು. ನನ್ನಂತಹ ಹಲವಾರು ಎಲೆಮರೆಯ ಕಾಯಿಗಳಿಂತಿರುವ ಸಾಧಕರನ್ನ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಿ ಎಂದು ತಿಮ್ಮಕ್ಕ ಆಗ್ರಹಿಸಿದರು.

ಸಾಲುಮರದ ತಿಮ್ಮಕ್ಕನವರ ಸಾಧನೆಯನ್ನ ಗುರುತಿಸಿ ಪ್ರಥಮ ಬಾರಿಗೆ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ಸಂಧರ್ಭದಲ್ಲಿ 1995ರ ಸಾಲಿನ "ನ್ಯಾಷನಲ್ ಸಿಟಿಜನ್ ಅವಾರ್ಡ್"ನ್ನು 1996ರ ಡಿಸೆಂಬರ್ನಲ್ಲಿ ಪುರಸ್ಕರಿಸಿದರು. ನಂತರ 1997ರಲ್ಲಿ "ಇಂದಿರಾಪ್ರಿಯದರ್ಶಿನಿ ವೃಕ್ಷಮಿತ್ರ ಪುರಸ್ಕಾರ" ದೊರೆಯಿತು. ನಂತರ ರಾಜ್ಯ ಸರ್ಕಾರ 2007-08ರ ಅವಧಿಯ ರಾಜ್ಯ ಪರಿಸರ ಪ್ರಶಸ್ತಿ, ಪಂಪಾಪತಿ ಪ್ರಶಸ್ತಿ ಸೇರಿದಂತೆ ಸಾವಿರಾರು ಪ್ರಶಸ್ತಿ ಪುರಸ್ಕಾರಗಳು ಸಾಲುಮರದ ತಿಮ್ಮಕ್ಕನವರಿಗೆ ಸಂದಿವೆ.

ನಾಡಿನ ಜನತೆಗೆ ಪರಿಸರ ಕಾಳಜಿಯ ಬಗ್ಗೆ ಸ್ಪೂರ್ತಿ ತುಂಬಿ ಮಾದರಿಯಾಗಿರುವ ಸಾಲುಮರದ ತಿಮ್ಮಕ್ಕನಿಗೆ ನಾಡೋಜ ಪ್ರಶಸ್ತಿ ಲಭಿಸಿರುವುದು ಪ್ರಶಸ್ತಿಯ ಘನತೆಯನ್ನು ಹೆಚ್ಚಿಸಿದೆ. ಪ್ರತಿಫಲಾಪೇಕ್ಷೆಯನ್ನ ಬಯಸಿ ಕಾರ್ಯನಿರ್ವಹಿಸುವ ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಪತಿಯೊಂದಿಗೆ ಕೈಜೋಡಿಸಿ ಪರಿಸರಕ್ಕೆ ಕೊಡುಗೆಯನ್ನ ನೀಡಿರುವ ಸಾಲುಮರದ ತಿಮ್ಮಕ್ಕನವರ ಸಾಧನೆ ಅನನ್ಯವಾದುದು.

ನಾಡಪ್ರಭು ಕೆಂಪೇಗೌಡರ ನಾಡು ಮಾಗಡಿಯ ಪುಣ್ಯಭೂಮಿಯಲ್ಲಿ ಅನೇಕ ಸಾಧ್ವಿ ಶಿರೋಮಣಿಗಳಿದ್ದು ಇತಿಹಾಸದ ಪುಟಸೇರಿದ್ದಾರೆ. ಇಂತಹ ಪುಣ್ಯಭೂಮಿಯಲ್ಲಿ ಜನಿಸಿ ಅಕ್ಷರದ ಅರಿವಿಲ್ಲದ ಸಾಲುಮರದ ತಿಮ್ಮಕ್ಕ ಬೆಳೆಸಿ ಪರಿಸರ ಕಾಳಜಿ ಬಗ್ಗೆ ಜನತೆಗೆ ಪಾಠ ಕಲಿಸಿದ್ದಾರೆ. ಬದುಕಿನ ಮುಸ್ಸಂಜೆಯಲ್ಲಿರುವ ಸಾಲುಮರದ ತಿಮ್ಮಕ್ಕ ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವುದರ ಮೂಲಕ ಮನುಕುಲಕ್ಕೆ ಮಾದರಿಯೆನಿಸಿದ್ದಾರೆ.