ಬುಧವಾರ, ನವೆಂಬರ್ 3, 2010

ಕೊಳವೆ ಬಾವಿ ನೀರು ಎಷ್ಟು ಸುರಕ್ಷಿತ!

ಸರಕಾರವೇ ಸಾರಿತ್ತು ಕೊಳವೆ ಬಾವಿ ನೀರು ಸುರಕ್ಷಿತ!: ಜನ ಸರಕಾರವೇ ಪ್ರಚಾರ ಮಾಡಿದ ಈ ಮಾತನ್ನು ತೀರ ನಂಬಿದರು. ಮನೆಗೊಂದು ಬೋರ್ ವೆಲ್ ಅನಿವಾರ್ಯ ವೆಂಬಂತೆ ಎಲ್ಲರೂ ಅಂತರ್ಜಲದ ಮೇಲೆ ಮಾಲ್ಕಿ ಹಕ್ಕು ತೋರಿಸಲು ಮುಂದಾದರು. ನಿಜಕ್ಕೂ ತೆರೆದ ಬಾವಿಯಷ್ಟು ಶುದ್ಧವಾದದ್ದು ಬೇರೆ ಯಾವುದೂ ಅಲ್ಲ! ಮೊದಲಿಗೆ ೧೦೦ ರಿಂದ ೧೫೦ ಅಡಿಗಳಿಗೆ ನೀರು ನಿಲುಕುತ್ತಿತ್ತು. ಈಗ ಕನಿಷ್ಠ ೬೦೦ ಅಡಿಗಳು ಗರಿಷ್ಠ ೧೫೦೦ ಅಡಿಗಳ ವರೆಗೆ ಕೃಷಿಗಾಗಿ ಬೋರ್ ವೆಲ್ ಕೊರೆಯಲಾಗುತ್ತಿದೆ. ಹಾಗಾಗಿ ಭೂಮಿಯ ಮೇಲ್ಪದರಿಗಿಂತ ಒಳ ಪದರುಗಳಲ್ಲಿ ಲವಣಾಂಶ, ಆರ್ಸೆನಿಕ್ ಹಾಗೂ ಫ್ಲೋರೈಡ್ ಅತ್ಯಂತ ಏಕಾಗ್ರಿತವಾಗಿ ದೊರಕುವುದರಿಂದ ಅದರ ಆ ನೀರಿನ ಬಳಕೆ ಅಪಾಯಕಾರಿಯಾದದ್ದು. ನೇರವಾಗಿ ಕುಡಿಯಲು ಮಾತ್ರವಲ್ಲದೇ ಕೃಷಿಗೂ ಆ ನೀರು ಬಳಕೆಯಾಗುತ್ತಿರುವುದರಿಂದ ನಾವು ಉಣ್ಣುವ ಅನ್ನದ ಬಟ್ಟಲನ್ನೂ ವಿಷವಾಗಿಸುತ್ತಿದೆ.

ಹೆಚ್ಚಾಗಿ ಬೇಸಿಗೆಯಲ್ಲಿ ಅಂತರ್ಜಲದಲ್ಲಿ ಈ ಲವಣಾಂಶಗಳ ಸೇರಿಕೆ ಅಪಾರ ಪ್ರಮಾಣದಲ್ಲಿದ್ದು, ನೀರಿನ ಬೇಡಿಕೆಯೂ ಅಷ್ಟೇ ಹೆಚ್ಚಿರುವುದರಿಂದ ೩೦೦ ಅಡಿಗಳಿಗಿಂತ ಕೆಳಗೆ ಕೊರೆಯಲಾದ ಬೋರ್ ವೆಲ್ ನೀರು ಬೇಸಿಗೆಯಲ್ಲಿ ಬಳಕೆಗೆ ಸೂಕ್ತವಲ್ಲ ಎನ್ನುತ್ತದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸ್, ನವ ದೆಹಲಿಯಲ್ಲಿ ಈ ಕುರಿತು ವ್ಯಾಪಕ ಅಧ್ಯಯನ ಕೈಗೊಳ್ಳಲು ಸಹಾಯಕವಾಗುವಂತೆ ಒಂದು ಸಂಶೋಧನಾ ಕೇಂದ್ರವನ್ನೇ ತೆರೆಯಲಾಗಿದೆ.

ಅಮೇರಿಕೆಯ ಭೂಗರ್ಭದಲ್ಲಿ 'ಫ್ಲೋರೈಡ್' ಅಂಶವೇ ಇಲ್ಲ. ಹಾಗಾಗಿ ಅಲ್ಲಿನ ಜನ ಕುಡಿಯುವ ನೀರಿನಲ್ಲಿ ಆರ್ಸೆನಿಕ, ಫ್ಲೋರೈಡ್ ನಂತಹ ಆಘಾತಕಾರಿ ಲವಣಗಳು ಸೇರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅಮೇರಿಕೆಯವರು 'ಫ್ಲೋರೈಡ್ ಯುಕ್ತ' ದೇಹಕ್ಕೆ ಬೇಕಾದ ಪರಿಮಿತ ಪ್ರಮಾಣದ ಫ್ಲೋರೈಡ್ ಟೂಥ್ ಪೇಸ್ಟ್ ತಯಾಸಿದರು. ಅದು ಭಾರತದ ಮಾರುಕಟ್ಟೆಗೂ ಲಗ್ಗೆ ಇಟ್ಟಿತು. ಚಿಕ್ಕ ಮಕ್ಕಳಲ್ಲಿ ಹಲ್ಲುಗಳು ಮುರುಟುವ ಸಮಸ್ಯೆ ಕಂಡುಬಂತು.

ಚೈನಾ ಒಂದೇ ದೇಶ ಇಡೀ ಜಗತ್ತಿನಲ್ಲಿ ತನ್ನ ಕುಡಿಯುವ ನೀರಿನ ಮೂಲಗಳನ್ನು ಅತ್ಯಂತ ಜಾಗರೂಕತೆಯಿಂದ ಕಾಯ್ದುಕೊಂಡು ಬಂದಿದೆ. ಅಲ್ಲಿನ ಪ್ರಶಾಸನಕ್ಕೆ ರಾಜಕೀಯ ಇಚ್ಛಾಶಕ್ತಿ ಇದೆ, ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ದೂರದೃಷ್ಟಿ ಇದೆ. ನದಿ ಇರಲಿ, ಝರಿ ಇರಲಿ, ತೊರೆ, ಕೆರೆ ಅಥವಾ ಹಳ್ಳಗಳಿರಲಿ..ಅವುಗಳ 'ಕ್ಯಾಚಮೆಂಟ್ ಏರಿಯಾ' ದಲ್ಲಿ ಕಟ್ಟಡ ಕಟ್ಟುವುದು, ಮಲೀನ ಸುರಿಯುದು ಅಥವಾ ಸೇರಿಸುವುದು, ಅಂತರ್ಜಲ ನವೀಕರಣಕ್ಕೆ ಸಂಬಂಧಿಸಿದಂತೆ ಕಾನೂನಿನ ಸ್ಪಷ್ಠ ಚಿತ್ರಣ, ಹಾಗೂ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸುವಿಕೆ ಅವರನ್ನು ಜಲಜನ್ಯ ಹಾಗೂ ಸಾಂಕ್ರಾಮಿಕ ರೋಗಗಳಿಂದ ಕಾಯ್ದಿದೆ.

ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಹೇಗೆ ನಾವು ಉಸಿರಾಡುವ ಗಾಳಿಗೆ 'ಮೀಟರ್' ಅಳವಡಿಕೆಯಾಗಿಲ್ಲವೋ? ಅದು ಇಂದಿಗೂ ಉಚಿತವಾಗಿ ಎಲ್ಲರಿಗೂ ಲಭ್ಯವಿದೆಯೋ? ಹಾಗೇ, ನೀರೂ ಕೂಡ ನಮ್ಮ ಹಕ್ಕು, ನಾವು ಅದಕ್ಕೆ ಹಣ ನೀಡಬೇಕಾದ ಅವಶ್ಯಕತೆ ಇಲ್ಲ. ಅದು ತೊರೆಯಾಗಿ, ಝರಿಯಾಗಿ, ಹಳ್ಳವಾಗಿ, ಕೆರೆಯಾಗಿ, ನದಿಯಾಗಿ ಇನ್ನು ಅನೇಕ ರೀತಿ ಹರಿಯುವಲ್ಲಿ ಯಾರ ಅಪ್ಪಣೆಯೂ ಬೇಕಿಲ್ಲ. ಅದು ನಿಸರ್ಗದತ್ತವಾಗಿ, ಉಚಿತವಾಗಿ ನಮಗೆ ದೊರಕಬೇಕು.

ತಂತ್ರಜ್ಞಾನ ಎಷ್ಟೇ ಬದಲಾದರೂ, ಹೊಸ ಹೊಸ ಅನ್ವೇಷಣೆಗಳು ಎಷ್ಟೇ ಮಾರುಕಟ್ಟೆ ಹೊಕ್ಕರೂ, ನೀರಿನ ಪ್ರತಿ ನಮ್ಮ ಧೋರಣೆ, ನಮಗಿರುವ ಮನಸ್ಥಿತಿ ಬದಲಾಗದ ಹೊರತು ಸದ್ಯದ ಸ್ಥಿತಿ ವ್ಯತ್ಯಾಸವಾಗಲಾರದು.

ಗುರುವಾರ, ಅಕ್ಟೋಬರ್ 28, 2010

ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ ಹಾಕುವುದರಿಂದ ಯಾರಿಗೆ ಲಾಭ?

ಸರಕಾರದ ಯೋಜನೆಗಳಿಂದ ನಿಜವಾಗಿ ಲಾಭ ಯಾರಿಗೆ? ಕೇಂದ್ರ ಸರಕಾರದ ಯೋಜನೆಯೊಂದನ್ನು ಪರಿಶೀಲಿಸೋಣ. ಈ ಯೋಜನೆಯ ಪ್ರಕಾರ, ಮಹಾರಾಷ್ಟ್ರದ ಬರಪೀಡಿತ ಜಿಲ್ಲೆಗಳಲ್ಲಿ ಕೃಷಿಗಾಗಿ ನೀರಿನ ಲಭ್ಯತೆ ಹೆಚ್ಚಿಸಲಿಕ್ಕಾಗಿ ತೋಡುವ ಕೃಷಿಹೊಂಡಗಳಿಗೆ ಶೇಕಡಾ ೧೦೦ ಸಬ್ಸಿಡಿ. ಮಳೆನೀರು ಸಂಗ್ರಹಿಸುವ ಈ ಕೃಷಿಹೊಂಡಗಳ ತಳ ಹಾಗೂ ಬದಿಗಳಿಂದ ಮಣ್ಣಿನಾಳಕ್ಕೆ ನೀರು ಇಂಗಿ ಹೋಗದಂತೆ ಪ್ಲಾಸ್ಟಿಕ್ ಹಾಳೆ ಹಾಸುವ ತಂತ್ರದ ಬಳಕೆ.
ಆರಂಭದಲ್ಲಿ ಅಲ್ಲಿನ ಕೃಷಿಕರು ಈ ಯೋಜನೆಯನ್ನು ಸ್ವಾಗತಿಸಲಿಲ್ಲ. ಕ್ರಮೇಣ ಯೋಜನೆಗೆ ಅರ್ಜಿ ಹಾಕಿ, ಕೃಷಿಹೊಂಡಗಳನ್ನು ಅಗೆಯಲು ಶುರುಮಾಡಿದರು. ಫಲಾನುಭವಿಗಳು ಪ್ರತಿಯೊಬ್ಬರೂ ೦.೬ ಹೆಕ್ಟೇರ್ ಕೃಷಿಭೂಮಿಯಲ್ಲಿ ಹೊಂಡ ತೋಡಬೇಕಾಯಿತು. ಈ ಹೊಂಡಗಳು ತಯಾರಾಗುತ್ತಿದ್ದಂತೆಯೇ, ಅವುಗಳಿಗೆ ಪ್ಲಾಸ್ಟಿಕ್ ಹಾಳೆ ಒದಗಿಸಲು ಆಯ್ಕೆಯಾದ ಕಂಪೆನಿಗಳ ಮಾರಾಟ ತಂತ್ರ ಬಯಲಾಯಿತು! ಆ ಕಂಪೆನಿಗಳು ೫೦೦ ಮೈಕ್ರೋನ್ ದಪ್ಪದ ಪ್ಲಾಸ್ಟಿಕ್ ಹಾಳೆಗಳ ಬೆಲೆಯನ್ನು ಚದರ ಮೀಟರಿಗೆ ರೂ.೧೬ರಿಂದ ರೂ.೧೮ ಏರಿಸಿದವು. ಇದರಿಂದಾಗಿ ಪ್ರತಿಯೊಂದು ಕೃಷಿಹೊಂಡಕ್ಕೆ ಪ್ಲಾಸ್ಟಿಕ್ ಹಾಳೆ ಹಾಸುವ ವೆಚ್ಚ ರೂ.೫೦,೦೦೦ದಿಂದ ರೂ.೬೦,೦೦೦ ಹೆಚ್ಚಾಯಿತು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಪ್ರಕಾರ ಮಹಾರಾಷ್ಟ್ರದಲ್ಲಿ ೧೭,೫೦೦ ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ ಹಾಸಲಿಕ್ಕಾಗಿ ಕೇಂದ್ರ ಸರಕಾರ ಮಂಜೂರು ಮಾಡಿರುವುದು ರೂಪಾಯಿ ೮೦ ಕೋಟಿ. ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಹಾಳೆ ಬಳಸುವುದನ್ನು ತಡೆಯಲಿಕ್ಕಾಗಿ ಒಂದು ಸಮಿತಿ ರಚಿಸಲಾಯಿತು. ಅದರ ಸದಸ್ಯರು ಅಂತಿಮವಾಗಿ ೫೦೦ ಮೈಕ್ರೋನ್ ದಪ್ಪದ ಜೀಯೊಮೆಂಬ್ರೇನ್ ಪ್ಲಾಸ್ಟಿಕ್ ಹಾಳೆಗಳನ್ನು ಸರಬರಾಜು ಮಾಡಲಿಕ್ಕಾಗಿ ೩ ಉತ್ಪಾದನಾ ಕಂಪೆನಿಗಳನ್ನು ಆಯ್ಕೆ ಮಾಡಿದರು. ಈ ಯೋಜನೆ ನಂಬಿ ಕೃಷಿಹೊಂಡ ತೋಡಿದ ರೈತರಿಗೆ, ಕಂಪೆನಿಗಳ ತಂತ್ರದಿಂದಾಗಿ ದೊಡ್ಡ ಆತಂಕ ಎದುರಾಯಿತು. ಹೆಚ್ಚುವರಿ ಮೊತ್ತ ಯಾರು ಪಾವತಿಸಬೇಕು? ರಾಜ್ಯ ತೋಟಗಾರಿಕಾ ಮಿಷನ್‍ನ ಅಧಿಕಾರಿಗಳು 'ಶಿಫಾರಸ್ ಮಾಡಲಾಗಿದೆ' ಎನ್ನುತ್ತಲೇ ಕಾಲ ತಳ್ಳಿದರು.
ಆದರೆ ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ ಹಾಸುವುದು ಅಗತ್ಯವೇ? "ಪ್ಲಾಸ್ಟಿಕ್ ಹಾಳೆ ಹಾಸುವುದು ಅಲ್ಪಕಾಲಿಕ ವಿಧಾನ. ಇದರಿಂದ ಒಂದು ಬೆಳೆಗಾಗಿ ನೀರು ಸಂಗ್ರಹಿಸಲು ರೈತರಿಗೆ ಸಾಧ್ಯವಾದೀತೆ ಹೊರತು. ಅಂತರ್ಜಲಮಟ್ಟ ಏರುವುದಿಲ್ಲ. ಆದ್ದರಿಂದ ಈ ಯೋಜನೆಗಾಗಿ ದುಬಾರಿ ವೆಚ್ಚ ಮಾಡೋದು ಸಮಂಜಿಸವೆ?" 'ಈ ಹೊಂಡಗಳ ಹೂಳು ತೆಗೆಯುವಾಗ ಪ್ಲಾಸ್ಟಿಕ್ ಹಾಳೆಗಳಿಗೆ ತೂತುಗಳು ಆಗೋದಿಲ್ಲವೇ?' ಕೃಷಿಕರಿಗೆ ಸಹಾಯ ಮಾಡುವ ನೆಪದಲ್ಲಿ ಈ ದೇಶದಲ್ಲಿ ಏನೇನು ಆಗುತ್ತಿದೆ, ನೋಡಿ! ಸರಕಾರದ ಇಂತ ಯೋಜನೆಗಳಿಂದ ನಿಜವಾಗಿ ಯಾರಿಗೆ ಲಾಭ?

ಸೋಮವಾರ, ಅಕ್ಟೋಬರ್ 25, 2010

ಕುಡಿಯಲು ಯೋಗ್ಯವಾದ ನೀರು ಯಾವುದು?

'ಮಳೆ ನೀರು ಕುಡಿಯಬಹುದಾ?'
ಎಲ್ಲೆಡೆ ಕೇಳಿಬರುವ ಅತ್ಯಂತ ಸಾಮಾನ್ಯ ಪ್ರಶ್ನೆಯಿದು. ಹಾಗೆ ನೋಡಿದರೆ, ಮಳೆ ನೀರೇ ಕುಡಿಯಲು ಅತ್ಯಂತ ಯೋಗ್ಯವಾದ ನೀರು. ಅಂತರ್ಜಲ ಅತಿ ಶುದ್ಧ ನೀರು ಎಂಬ ನಂಬಿಕೆ ಬಹಳಷ್ಟು ಜನರಿಗಿದೆ. ಇದು ತಪ್ಪು. ಏಕೆಂದರೆ, ಅಂತರ್ಜಲ ಭೂಮಿಯೊಳಗಿನ ಲವಣಾಂಶಗಳನ್ನು ಕರಗಿಸಿಕೊಂಡಿರುತ್ತದೆ. ನೂರಾರು ವರ್ಷಗಳ ಕಾಲ ಶೇಖರಣೆಗೊಂಡ ನೀರದು. ನೋಡಲು ಶುದ್ಧವಾಗಿ ಕಾಣುತ್ತದೆ ಎಂಬ ಕಾರಣಕ್ಕೆ ಅದು ಕುಡಿಯಲು ಯೋಗ್ಯ ಎಂದು ಭಾವಿಸುವುದು ಅಪಾಯಕಾರಿ.
ಆದರೆ, ಮಳೆ ನೀರಿಗೆ ಈ ಸಮಸ್ಯೆ ಇಲ್ಲ. ಅದು ಆಕಾಶದಿಂದ ನೇರವಾಗಿ ಭೂಮಿಗೆ ಬಿದ್ದಿರುತ್ತದೆ. ಭೂಮಿಗೆ ಬೀಳುವಾಗ ವಾಯುಪದರಗಳನ್ನು ಹಾಯ್ದು ಬರುವಾಗ ಕೊಂಚ ಮಲಿನಗೊಳ್ಳಬಹುದು. ಅದೂ ಮೊದಲ ಮಳೆಯ ಕಾಲಕ್ಕೆ ಮಾತ್ರ. ನಂತರ ಬೀಳುವ ಮಳೆಯ ನೀರು ಬಹುತೇಕ ಶುದ್ಧವಾಗಿರುತ್ತದೆ. ಮೋಡಗಳಿಂದ ಮನೆಯ ಚಾವಣಿ ಮೇಲೆ ಬೀಳುವ ಮಳೆ ನೀರಿಗಿಂತ ಶುದ್ಧ ನೀರು ಬೇಕೆ? ನಮ್ಮ ಚಾವಣಿ ಸ್ವಚ್ಛವಾಗಿದ್ದರೆ, ಶೋಧಕಗಳ ಹಂಗಿಲ್ಲದೇ ನೀರನ್ನು ನೇರವಾಗಿ ಕುಡಿಯಬಹುದು. ಅದಕ್ಕಿರುವ ರುಚಿ, ಜಗತ್ತಿನ ಯಾವುದೇ ಮಿನರಲ್‌ ವಾಟರ್‌ಗೂ ಇಲ್ಲ.
ಆದರೂ, ಸ್ವಚ್ಛತಾ ಪ್ರಜ್ಞೆಯಿಂದಾಗಿ, ಮಳೆ ನೀರನ್ನು ಸೋಸಿ ಕುಡಿಯುವುದು ಉತ್ತಮ. ಏಕೆಂದರೆ, ಚಾವಣಿ ಎಷ್ಟೇ ಸ್ವಚ್ಛವಾಗಿದ್ದರೂ ಅದು ವಾತಾವರಣಕ್ಕೆ ತೆರೆದುಕೊಂಡಿರುವಂಥದು. ದೂಳು ಮತ್ತೊಂದು ಇದ್ದೇ ಇರುತ್ತದೆ. ಹೀಗೆ ಸಂಗ್ರಹಿಸಿದ ಮಳೆ ನೀರು ಗಾಳಿ ಹಾಗೂ ಸೂರ್ಯನ ಬೆಳಕಿಗೆ ಬಾರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಏಕೆಂದರೆ, ಸೂರ್ಯನ ಬೆಳಕು ಮತ್ತು ಗಾಳಿ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಪ್ರಚೋದಿಸುತ್ತದೆ. ಹೀಗಾಗಿ, ಮಳೆ ನೀರು ಸಂಗ್ರಹದ ತೊಟ್ಟಿ ಬಿಸಿಲು ಮತ್ತು ಗಾಳಿಗೆ ಒಡ್ಡಿಕೊಳ್ಳದ ರೀತಿ ನಿರ್ಮಾಣವಾಗಬೇಕು. ಏಕೆಂದರೆ, ಒಂದು ವೇಳೆ ನೀರಿನಲ್ಲಿ ಯಾವುದೇ ಜೀವಾಣುಗಳು ಇದ್ದರೂ, ಸೂರ್ಯನ ಬೆಳಕು-ಗಾಳಿ ದೊರೆಯದೇ ಹೋದಾಗ, ಅವು ತಂತಾನೇ ನಿರ್ನಾಮವಾಗುತ್ತವೆ.

 ಫಿಲ್ಟರ್‌ನ ಸುಲಭ ವಿಧಾನ
ಮಳೆ ನೀರನ್ನು ಶೋಧಿಸಲು ಹಲವಾರು ವಿಧಾನಗಳಿವೆ. ಸರಳ ವಿಧಾನ ಎಂದರೆ ಮರಳು ಶೋಧಕ. ಈ ವಿಧಾನದಲ್ಲಿ ಜೆಲ್ಲಿ (ಸಣ್ಣ) ಕಲ್ಲು, ಕೊಂಚ ದಪ್ಪ ಜೆಲ್ಲಿ ಹಾಗೂ ಮರಳಿನ ಹಾಸಿನ ಮೂಲಕ ಮಳೆ ನೀರನ್ನು ಹಾಯಿಸಲಾಗುತ್ತದೆ. ಸುಮಾರು ನಾಲ್ಕು ಅಡಿ ಎತ್ತರದ ಟ್ಯಾಂಕ್ ಇದೆ ಎಂದಾದರೆ, ಅದರ ಕೆಳ ಭಾಗದಲ್ಲಿ ಒಂದು ಅಡಿ ದಪ್ಪ ಜೆಲ್ಲಿ ಕಲ್ಲು ತುಂಬಬೇಕು. ನಂತರ ಅಷ್ಟೇ ಎತ್ತರದಲ್ಲಿ ಸಣ್ಣ ಜೆಲ್ಲಿ ತುಂಬಿ, ಅದರ ಮೇಲೆ ಒಂದಡಿ ಎತ್ತರಕ್ಕೆ ಮರಳನ್ನು ತುಂಬಬೇಕು. ಇಷ್ಟಾದರೆ ಸಾಕು. ಮರಳನ್ನು ಪದೆ ಪದೆ ತೊಳೆಯುವುದು ಕಷ್ಟವಾದ್ದರಿಂದ, ಅದರ ಮೇಲೆ ತೆಳ್ಳಗಿನ ಸ್ಪಂಜ್‌ ಹಾಳೆಯನ್ನು ಹೊದಿಸಬಹುದು. ಹೀಗೆ ಸಿದ್ಧವಾದ ಶೋಧಕ ಟ್ಯಾಂಕಿನ ಕೆಳಭಾಗಕ್ಕೆ ಶುದ್ಧ ನೀರು ಹೋಗುವ ಕಡೆ ಒಂದು ನಲ್ಲಿ ಜೋಡಿಸಿದರೆ ಮುಗೀತು. ಚಾವಣಿ ನೀರು ಶೋಧಕ ಪ್ರವೇಶಿಸುವ ಪೈಪ್‌ನ ಕೆಳಭಾಗಕ್ಕೆ ಒಂದು ಶುದ್ಧ ಬಟ್ಟೆಯನ್ನು ಪದರಾಗಿ ಮಡಿಚಿ ಕಟ್ಟಿದರೆ, ನೀರಿನ ಫಿಲ್ಟರ್‌ ರೆಡಿ.
ತಡಮಾಡದೆ ಮಳೆ ನೀರು ಸಂಗ್ರಹಿಸಿ. ವರ್ಷಪೂರ್ತಿ ನಿಶ್ಚಿಂತೆಯಿಂದ ಬಳಸಿ.

ಭಾನುವಾರ, ಅಕ್ಟೋಬರ್ 24, 2010

ಯುಪ­ಟೋ­ರಿಯಂ ಉತ್ತಮ ಹಸಿರು ಗೊಬ್ಬ­ರ­

ಗೊಬ್ಬರ ಗಲಾಟೆ ಇತ್ತೀ­ಚೆಗೆ ಸಾಮಾ­ನ್ಯ­ವಾ­ಗಿದೆ. ರಸ­ಗೊ­ಬ್ಬರ ಇಲ್ಲ­ದಿ­ದ್ದರೆ ಕೃಷಿ ಇಲ್ಲ ಎನ್ನುವ ಸ್ಥಿತಿ ಬಂದಿದೆ. ಉತ್ತಮ ಇಳು­ವ­ರಿಗೆ ರಸ­ಗೊ­ಬ್ಬ­ರವೇ ಬೇಕೆಂ­ದಿಲ್ಲ. ನಮ್ಮ ಪರಿ­ಸ­ರ­ದಲ್ಲಿ ಇರುವ ನಿರು­ಪ­ಯುಕ್ತ ಎಂದು ತಿಳಿ­ಯುವ ಕಳೆ ಗಿಡ­ದಲ್ಲಿ ರಸ­ಗೊ­ಬ್ಬ­ರ­ದಲ್ಲಿ ಸಿಗುವ ಪೋಷ­ಕಾಂ­ಶ­ಗಳು ದೊರೆ­ಯು­ತ್ತವೆ ಎನ್ನು­ವುದು ಸಂಶೋ­ಧ­ನೆ­ಯಿಂದ ಸಾಬೀತು ಮಾಡಿ­ದ್ದಾರೆ.

ಸ್ಥಳೀ­ಯ­ವಾಗಿ ಪಾರ್ಥೇ­ನಿಯಂ ಕಾಂಗ್ರೆಸ್‌, ಕಮ್ಯು­ನಿಸ್ಟ್‌, ಲಾಟಾನಾ ಎಂದು ಕರೆ­ಸಿ­ಕೊ­ಳ್ಳುವ ಯುಪ­ಟೋ­ರಿ­ಯಂನ ಸಸ್ಯ ಶಾಸ್ತ್ರೀಯ ಹೆಸರು ಕ್ರೊಮೋ­ಲೀನಾ ಒಡೊ­ರಟ. ಪಶ್ಚಿಮ ಘಟ್ಟ ಪ್ರದೇ­ಶ­ದಲ್ಲಿ ಎಲ್ಲೆಂ­ದ­ರಲ್ಲಿ ಕಾಣುವ ಈ ಸಸ್ಯ­ಗ­ಳನ್ನು ನಿಷ್ಪ್ರ­ಯೋ­ಜಕ ಎಂದು ಎಲ್ಲರೂ ಭಾವಿ­ಸಿ­ದ್ದಾರೆ. ಆದರೆ ಇದ­ರಲ್ಲಿ ಭೂಮಿ­ಯನ್ನು ಫಲ­ವ­ತ್ತತೆ ಮಾಡುವ ಗುಣ­ವಿದೆ ಎಂದು ಕೃಷಿ ಸಂಶೋ­ಧನಾ ಕೇಂದ್ರ(ಭತ್ತ) ಶಿರಸಿ ಇವರು ಕಂಡು­ಕೊಂ­ಡಿ­ದ್ದಾರೆ.
 ಹಸಿರು ಗೊಬ್ಬ­ರ­ವಾಗಿ ಯುಪ­ಟೋ­ರಿಯಂ ಬಳಕೆ  : 1996ರಿಂದ  ಕೃಷಿ  ಸಂಶೋ­ಧನಾ  ಕೇಂದ್ರ ( ಭತ್ತ) ದಲ್ಲಿ ಪ್ರಾಯೋ­ಗಿ­ಕ­ವಾಗಿ ಬೆಳೆಗೆ ಯುಪ­ಟೋ­ರಿಯಂ ಗಿಡ­ಗ­ಳನ್ನು ಪೋಷ­ಕಾಂ­ಶ­ವಾಗಿ ಬಳಸಿ ಸಂಶೋ­ಧನೆ ನಡೆ­ಸಿ­ದ್ದಾರೆ. ಸಾಮಾ­ನ್ಯ­ವಾಗಿ ಯುಪ­ಟೋ­ರಿಯಂ ಗಿಡ ಜುಲೈ, ಆಗಸ್ಟ್‌ ತಿಂಗ­ಳಿ­ನಲ್ಲಿ ಎಳೆಯ ಗಿಡ­ವಾ­ಗಿ­ರು­ತ್ತದೆ. ಅದರ ಕಾಂಡ­ಗ­ಳನ್ನು ಕಡಿದು ಹಾಕಿ­ದರೆ ಸುಲ­ಭ­ವಾಗಿ ಕೊಳೆ­ಯು­ತ್ತದೆ. ಯುಪ­ಟೋ­ರಿಯಂ ಗಿಡ­ಗಳು ಇಂತಹ ಹಂತ­ದಲ್ಲಿ ಇರು­ವಾಗ ಭತ್ತ ನಾಟಿ ಮಾಡುವ ಸಮ­ಯವು ಬಂದಿ­ರು­ತ್ತದೆ.

ರಸ­ಗೊ­ಬ್ಬ­ರದ ಗೊಡವೆ ಬೇಡ ಎನ್ನುವ ರೈತರು ಒಂದು ಎಕ­ರೆಗೆ ನಾಲ್ಕು ಸಾವಿರ ಕಿಲೋ­ದಷ್ಟು ಯುಪ­ಟೋ­ರಿಯಂ ಗಿಡ­ಗ­ಳನ್ನು ಗದ್ದೆಗೆ ಹಾಕ­ಬೇಕು. ನೀರಿ­ರುವ ಹೊಲ­ಗ­ಳಲ್ಲಿ ಒಂದೆ­ರಡು ದಿನ ಈ ಕತ್ತ­ರಿಸಿ ಹಾಕಿದ ಯುಪ­ಟೋ­ರಿಯಂ ಗಿಡ ಕೊಳೆ­ಯು­ತ್ತದೆ. ಆಗ ಟಿಲ್ಲರ್‌ ಮೂಲಕ ಅಥವಾ ಪಡ್ಲರ್‌ ಮುಖೇನ ಮಿಶ್ರಣ ಮಾಡಿ­ದರೆ. ರಸ­ಗೊ­ಬ್ಬ­ರ­ದಿಂದ ಸಿಗು­ವಷ್ಟೇ ಪೋಷ­ಕಾಂಶ ಇದ­ರಿಂ­ದಲೂ ಸಿಗು­ತ್ತದೆ.

ಯುಪ­ಟೋ­ರಿಯಂ ಗಿಡ­ಗ­ಳಲ್ಲಿ ಸಾರ­ಜ­ನಕ, ರಂಜಕ ಮತ್ತು ಪೋಟಾಷ್‌ ಸಾಕಷ್ಟು ಪ್ರಮಾ­ಣ­ದಲ್ಲಿ ಇರು­ತ್ತದೆ. ಇದ­ಲ್ಲದೆ, ಮಧ್ಯಮ ಪೋಷ­ಕಾಂ­ಶ­ಗ­ಳಾದ ಕ್ಯಾಲಿ­ಸಿಯಂ, ಮ್ಯಾಂಗ್ನೇ­ನಿ­ಸಿಯಂ, ಸಲ್ಫ­ರ್‌ನ ಅಂಶವು ಇರು­ವುದು ತಿಳಿದು ಬಂದಿದೆ. ಹಾಗೆಯೇ ಸೂಕ್ಷ್ಮ ಪೋಷ­ಕಾಂ­ಶ­ಗ­ಳಾದ ಸತು, ಖಾಫರ್‌, ಆಮ್ಲ, ಮ್ಯಾಂಗ­ನೀಸ್‌, ಕಬ್ಬಣ ಇರು­ತ್ತವೆ. ಇದ­ರಿಂದ ಭೂಮಿಯ ಫಲ­ವ­ತ್ತತೆ ತಾನಾ­ಗಿಯೇ ಹೆಚ್ಚಾ­ಗು­ತ್ತದೆ.

ಹಸಿರು ಗೊಬ್ಬ­ರ­ವಾಗಿ ಸೆಣಬು, ಡಾಯಂಚಾ, ಗಿಲ್ಸಿ­ಡಿಯಾ ಮುಂತಾ­ದ­ವು­ಗ­ಳನ್ನು ಬಳ­ಸು­ತ್ತಾರೆ. ಆದರೆ ಯುಪ­ಟೋ­ರಿಯಂ ಇವೆ­ಲ್ಲ­ಕ್ಕಿಂತ ಮುಂಚೆ ಮಣ್ಣಲ್ಲಿ ಮಣ್ಣಾ­ಗುವ ಗುಣ­ವನ್ನು ಹೊಂದಿದೆ.
ಯುಪ­ಟೋ­ರಿಯಂ ಗುಣಾ­ವ­ಗುಣ: ಪರಿ­ಸರ ಮಾಲಿನ್ಯ ಮಾಡುವ ಗಿಡ ಎಂದು ಯುಪ­ಟೋ­ರಿ­ಯಂನ ಕುಖ್ಯಾತಿ. ಇದಕ್ಕೆ ಕಾರ­ಣವು ಇದೆ. ಎಳೆಯ ಗಿಡ­ವಾ­ಗಿ­ರು­ವಾಗ ಇದನ್ನು ಕಟಾವು ಮಾಡ­ದಿ­ದ್ದರೆ, ಒಂದು ಗಿಡ­ದಿಂದ ಲಕ್ಷಾಂ­ತರ ಬೀಜ­ಗಳು ಉತ್ಪ­ತ್ತಿ­ಯಾ­ಗು­ತ್ತದೆ. ಇದು ಉಣು­ಗು­ಗಳು ಹುಟ್ಟಲು ಕಾರ­ಣ­ವಾ­ಗು­ತ್ತದೆ. ಇಷ್ಟೇ ಅಲ್ಲದೆ, ಅಸ್ತಮಾ ರೋಗ ಸಹ ಇದ­ರಿಂದ ಬರುವ ಸಾಧ್ಯತೆ ಇದೆ. ಅದ­ಕ್ಕಾಗಿ ಇದನ್ನು ಗೊಬ್ಬ­ರ­ವಾಗಿ ಬಳ­ಸಿ­ದರೆ ಪ್ರಯೋ­ಜ­ನಕ್ಕೆ ಬರು­ತ್ತದೆ.

ಕೊಟ್ಟಿ­ಗೆ­ಯಲ್ಲಿ ದನ­ಗ­ಳಿಗೆ ಈ ಯುಪ­ಟೋ­ರಿಯಂ ಗಿಡ­ಗ­ಳನ್ನು ಹಾಸಲು ಉಪ­ಯೋ­ಗಿಸಿ ನಂತರ ಗೊಬ್ಬ­ರ­ಗುಂ­ಡಿಗೆ ಹಾಕಿ­ದರೆ ಪೌಷ್ಠಿ­ಕ­ವಾದ ಗೊಬ್ಬರ ಸಿಗು­ತ್ತದೆ.

"ಯಾ­ವು­ದಕ್ಕೂ ಪ್ರಯೋ­ಜ­ನಕ್ಕೆ ಬಾರದ ಗಿಡ ಎನ್ನುವ ಸ್ಥಿತಿ ಯುಪ­ಟೋ­ರಿ­ಯಂಗೆ ಇದೆ. ಇಂತಹ ಗಿಡ­ದಲ್ಲಿ ಹೆಚ್ಚಿಗೆ ತಾಕತ್ತು ಇದೆ ಎಂದು ಗೊತ್ತಾ­ಗಿದ್ದು ಭತ್ತದ ಗದ್ದೆ­ಯಲ್ಲಿ ಇದನ್ನು ಗೊಬ್ಬ­ರ­ವಾಗಿ ಬಳ­ಸಲು ಆರಂ­ಭಿ­ಸಿ­ದಾಗ. ನಾವು ಇದನ್ನು 12 ವರ್ಷ­ದಿಂದ ಪ್ರಯೋಗ ಮಾಡಿದ ಮೇಲೆ ಇದನ್ನು ಯಾವುದೇ ಅನು­ಮಾ­ನ­ವಿ­ಲ್ಲದೆ ಗೊಬ್ಬ­ರ­ವಾಗಿ ಬಳಸ ಬಹುದು ಎನ್ನುವ ತಿರ್ಮಾ­ನಕ್ಕೆ ಬಂದಿ­ದ್ದೇವೆ. ಸಾವ­ಯವ ಕೃಷಿ ಮಾಡಿ­ದರೆ ಇಳು­ವರಿ ಕಡಿಮೆ ಬರು­ತ್ತದೆ ಎನ್ನು­ತ್ತಾರೆ. ಕಡಿಮೆ ಯಾಗು­ವುದು ಸತ್ಯ. ಆದರೆ ಸತತ ಹತ್ತು ವರ್ಷ ಯುಪ­ಟೋ­ರಿಯಂ ಬಳ­ಸಿ­ದರೆ ಭೂಮಿ ತುಂಬಾ ಫಲ­ವ­ತ್ತಾಗಿ ತಾನಾ­ಗಿಯೇ ಹೆಚ್ಚಿಗೆ ಇಳು­ವರಿ ಬರು­ತ್ತದೆ" ಎನ್ನು­ವು­ದಾಗಿ ಸಂಶೋ­ಧನಾ ಕೇಂದ್ರದ ಡಾ. ಮಂಜಪ್ಪ ಹೇಳು­ತ್ತಾರೆ.

ಬಯೋ ಗ್ಯಾಸ್‌ಗೆ ಕಚ್ಚಾ ವಸ್ತು: ಸಾಮಾ­ನ್ಯ­ವಾಗಿ ಬಯೋ­ಗ್ಯಾಸ್‌ ಉತ್ಪ­ದ­ನೆಗೆ ಸೆಗಣಿ ಬೇಕು. ಕಡಿಮೆ ಜಾನು­ವಾ­ರು­ಗ­ಳನ್ನು ಸಾಕಿ­ಕೊಂ­ಡ­ವ­ರಿಗೆ ಸೆಗ­ಣಿಯ ತೊದರೆ ಇರು­ತ್ತದೆ. ಇಂತ­ವರು ಯುಪ­ಟೋ­ರಿಯಂ ಗಿಡ­ವನ್ನು ಬಳ­ಸ­ಬ­ಹುದು. ಆದರೆ ಇದಕ್ದು ನಿಯ­ಮ­ವಿದೆ. ನಾಲ್ಕು ಭಾಗ ಸೆಗಣಿ, ಒಂದು ಭಾಗ ಯುಪ­ಟೋ­ರಿಯಂ ಸೇರಿ­ಸ­ಬೇಕು. ಹೆಚ್ಚಿಗೆ ಪ್ರಮಾ­ಣದ ಈ ಸಸ್ಯ­ಗ­ಳನ್ನು ಸೆಗ­ಣಿಯ ಜೊತೆಗೆ ಸೇರಿ­ಸಿ­ದರೆ ಬಯೋ­ಗ್ಯಾ­ಸ್‌ನ ಟ್ಯಾಂಕಿನ ಒಳ­ಗಡೆ ಈ ಸಸ್ಯ ಸಿಕ್ಕಿ ಹಾಕಿ­ಕೊ­ಳ್ಳುವ ಸಾಧ್ಯತೆ ಇರು­ತ್ತದೆ. ಯುಪ­ಟೋ­ರಿಯಂ ಅನ್ನು ಗ್ಯಾಸ್‌ಗೆ ಬಳ­ಸು­ವು­ದ­ರಿಂದ ಸುಮಾರು 150 ರಿಂದ 200 ಲೀ ಹೆಚ್ಚಿಗೆ ಗ್ಯಾಸ್‌ ಸಿಗು­ತ್ತದೆ.

ಇದು ನಿಷ್ಪ್ರ­ಯೋ­ಜಕ ಎಂದು ತಿಳಿ­ದಿ­ರುವ ಯುಪ­ಟೋ­ರಿ­ಯಂನ ಉಪ­ಯೋಗ. ರಸ­ಗೊ­ಬ್ಬ­ರ­ಕ್ಕಾಗಿ ಗಲಾಟೆ ಮಾಡುವ ಬದಲು, ನಮ್ಮ ಕಾಲಿಗೆ ಸಿಗುವ ಕಳೆ ಗಿಡ­ಗ­ಳನ್ನು ಬಳಸಿ ಉತ್ತಮ ಗೊಬ್ಬ­ರ­ವನ್ನು ತಯಾ­ರಿ­ಸಿ­ಕೊ­ಳ್ಳ­ಬ­ಹುದು.

ಇದರ ಕುರಿತು ಹೆಚ್ಚಿನ ಮಾಹಿ­ತಿ­ಗಾಗಿ: ಡಾ. ಕೆ. ಮಂಜಪ್ಪ
                                                  ಬೇಸಾಯ ತಜ್ಞರು
                                                  ಕೃಷಿ ಸಂಶೋ­ಧನಾ ಕೇಂದ್ರ
                                                  ಬನ­ವಾಸಿ ರಸ್ತೆ, ಶಿರಸಿ
                                                   ಉತ್ತ­ರ­ಕ­ನ್ನಡ

                                                   9448722648

ಬುಧವಾರ, ಅಕ್ಟೋಬರ್ 20, 2010

ಪೋಷಕಾಂಶಗಳಾಗಿ ಕಳೆಗಳ ಬಳಕೆ

ಎಲ್ಲೆಂದರಲ್ಲಿ ಬೆಳೆಯುವ ಯೂಪೋಟೋರಿಯಂ, ಪಾರ್ಥೇನಿಯಂ ಮತ್ತು ಹೆಸರು ತಗಚೆ ಮತ್ತಿತರ ಕಳೆ ಸಸ್ಯಗಳನ್ನು ಬಳಸಿಕೊಂಡು ಕಾಂಪೋಸ್ಟ್ ಗೊಬ್ಬರ ತಯಾರಿಸಿ ಅದನ್ನು ಮುಸುಕಿನಜೋಳ, ಸೂರ್ಯಕಾಂತಿ ಮತ್ತಿತರ ಬೆಳೆಗಳಿಗೆ ಬಳಸಿ ಹೆಚ್ಚಿನ ಇಳುವರಿ ಪಡೆಯಬಹುದು.
ನಿರಂತರವಾಗಿ ರಸಗೊಬ್ಬರಗಳನ್ನು ಬಳಸುವುದರಿಂದ ಭೂಮಿಯಲ್ಲಿ ಕ್ರಮೇಣ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗುತ್ತದೆ. ಜೈವಿಕ ಉಸಿರಾಟ ನಿಧಾನವಾಗಿ ಪೋಷಕಾಂಶಗಳನ್ನು ಹಿಡಿದಿಟ್ಟುಕೊಂಡು ಬೇರುಗಳಿಗೆ ಒದಗಿಸುವ ಶಕ್ತಿಯನ್ನು ಸಸ್ಯಗಳು ಕಳೆದುಕೊಳ್ಳುತ್ತವೆ. ಅಲ್ಲದೆ ಮಣ್ಣು ತನ್ನ ಮೂಲ ಸ್ವರೂಪ ಮತ್ತು ಸಂರಚನೆಯನ್ನು ಕಳೆದುಕೊಳ್ಳುತ್ತದೆ. ಕ್ಷಾರಗುಣ ಪಡೆದುಕೊಂಡು ನೀರು ಮತ್ತು ಆಮ್ಲಜನಕ ಹಿಡಿದಿಟ್ಟುಕೊಂಡು ಸಸ್ಯಕ್ಕೆ ಅಗತ್ಯವಿರುವಾಗ ಒದಗಿಸುವಲ್ಲಿ ವಿಫಲವಾಗುತ್ತದೆ. ಈ ಎಲ್ಲದರ ಪರಿಣಾಮ ಮುಂದೊಂದು ದಿನ ಶೂನ್ಯ ಇಳುವರಿಗೆ ಕಾರಣವಾಗಬಹುದು.

ಕಳೆಗಳನ್ನು ಪೋಷಕಾಂಶಗಳಾಗಿ ಬಳಸಿ ಭೂಮಿ ಬಂಜೆಯಾಗುವುದನ್ನು ತಡೆಯಲು ಸಾಧ್ಯವಿದೆ. ಇತ್ತೀಚಿನ ವರ್ಷಗಳಲ್ಲಿ ದನಕರುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಗಣಿ ಮತ್ತು ಗಂಜಳ ಇತ್ಯಾದಿ ಸಾವಯವ ಪೋಷಕಾಂಶಗಳ ಕೊರತೆ ಹೆಚ್ಚಾಗಿದೆ. ಕಳೆಗಳಾದ ಯೂಪೋಟೋರಿಯಂ,ಪಾರ್ಥೇನಿಯಂ ಮತ್ತು ಹೆಸರು
ಯೂಪೋಟೋರಿಯ
ತಗಚೆಗಳು ಪ್ರಮುಖವಾಗಿ ಮಳೆಗಾಲದಲ್ಲಿ ರಸ್ತೆ ಪಕ್ಕದಲ್ಲಿ, ಬೀಳು ಭೂಮಿಯಲ್ಲಿ, ಹೊಲ-ಗದ್ದೆಯಲ್ಲಿನ ಬದುಗಳಲ್ಲಿ, ಗೋಮಾಳದಲ್ಲಿ, ಆಟದ ಮೈದಾನ, ಹಳ್ಳ-ಕೊಳ್ಳ ಇತ್ಯಾದಿ ಸ್ಥಳಗಳಲ್ಲಿ ಬೆಳೆಯುತ್ತವೆ. ಈ ಕಳೆ ಸಸ್ಯಗಳ ಎಲೆಗಳಲ್ಲಿ 2.63ರಷ್ಟು ಸಾರಜನಕ, ಶೇ. 0.45ರಷ್ಟು ರಂಜಕ, 2.05 ರಷ್ಟು ಪೊಟ್ಯಾಷ್ ಅಂಶಗಳಿವೆ. ಇತರೆ ಪೋಷಕಾಂಶಗಳಾದ ಗಂಧಕ,ಸುಣ್ಣ, ಮ್ಯಾಗ್ನಿಸಿಯಂ ಮತ್ತು ಲಘು ಪೋಷಕಾಂಶಗಳಾದ ಸತು, ಕಬ್ಬಿಣ, ಮ್ಯಾಂಗನೀಸ್ ಮತ್ತು ತಾಮ್ರ ಇತ್ಯಾದಿ ಖನಿಜಾಂಶಗಳೂ ಸ್ವಲ್ಪ ಪ್ರಮಾಣದಲ್ಲಿವೆ.
ಈ ಎಲ್ಲಾ ಕಳೆಗಳ ಬೇರಿನಲ್ಲಿ ರಂಜಕ ಕರಗಿಸುವ ಸೂಕ್ಷ್ಮಾಣುಗಳಿವೆ. ಹೆಸರು ತಡಚೆಯ ಬೇರಿನ ಗಂಟುಗಳಲ್ಲಿ ಸಾರಜನಕವನ್ನು ಸಂಗ್ರಹಿಸುವ ಸಾವಿರಾರು ಸೂಕ್ಷ್ಮಾಣುಗಳಿವೆ. ಈ ಬೇರುಗಳನ್ನು ಕಾಂಪೋಸ್ಟ್ ತಯಾರಿಕೆಯಲ್ಲಿ ಬಳಸುವುದರಿಂದ ಈ ಎಲ್ಲಾ ಸಾಕ್ಷ್ಮಾಣುಗಳು ಕಾಂಪೋಸ್ಟ್‌ನಲ್ಲಿ ಪುನಃ ವೃದ್ಧಿಯಾಗಿಬೆಳೆಗಳಿಗೆ ಬಳಕೆಯಾಗುತ್ತವೆ.

ಪಾರ್ಥೇನಿಯಂ
ಈ ಕಳೆಗಳ ಕಳಿತ ಗೊಬ್ಬರದಿಂದ ಮಣ್ಣಿಗೆ ಸಾವಯವ ಇಂಗಾಲ ದೊರಕುವುದರಿಂದ ಜೈವಿಕ ಆರೋಗ್ಯ ವೃದ್ಧಿಗೊಂಡು ಮಣ್ಣಿನ ರಚನೆ ಉತ್ತಮಗೊಳ್ಳುತ್ತದೆ. ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಕಳಿತ ಗೊಬ್ಬರದಿಂದ ಸಾವಯವ ಆಮ್ಲಗಳು ಬಿಡುಗಡೆಯಾಗಿ ಮಣ್ಣಿನ ರಸಸಾರ ಉತ್ತಮಗೊಂಡು ಮುಖ್ಯ ಮತ್ತು ಲಘು ಪೋಷಕಾಂಶಗಳು ಹೆಚ್ಚಾಗಿ ಬೆಳೆಗಳಿಗೆ ಲಭ್ಯವಾಗುತ್ತವೆ.
ಕಳೆ ಗೊಬ್ಬರ ತಯಾರಿಸುವ ವಿಧಾನ: ಮೇಲೆ ತಿಳಿಸಿದ ಕಳೆಗಳನ್ನು ಸಾಧ್ಯವಾದಲ್ಲಿ ಬೇರು ಸಮೇತ ಅಥವಾ ಕುಡುಗೋಲಿನಿಂದ ಬುಡಮಟ್ಟಕ್ಕೆ ಕೊಯ್ದು ತರಬೇಕು. ನಂತರ 2 ರಿಂದ 3 ಇಂಚಿನಷ್ಟು ಸಣ್ಣದಾಗಿ ಕತ್ತರಿಸಬೇಕು. 1ಟನ್ ಹಸಿರೆಲೆ ಕಳೆ ಗೊಬ್ಬರ ತಯಾರಿಸಲು 3.5 ಅಡಿ ಅಗಲ,3.5 ಅಡಿ ಎತ್ತರ ಮತ್ತು 8 ಅಡಿ ಉದ್ದದ ಸ್ಥಳ ಬೇಕಾಗುತ್ತದೆ.

ಕತ್ತರಿಸಿದ ಕಳೆಗಳನ್ನು 15ರಿಂದ 20 ಸೆಂ.ಮೀ ಗಾತ್ರದ ಪದರಿನ ರೀತಿಯಲ್ಲಿ ಕಾಂಪೋಸ್ಟ್ ಗುಂಡಿಯಲ್ಲಿ ಹರಡಬೇಕು ನಂತರ ಶೇ10ರಷ್ಟು ಹಸಿ ಸಗಣಿ ಬಗ್ಗಡವನ್ನು ಕಳೆಗಳ ಮೇಲೆ ಸಿಂಪಡಿಸಬೇಕು (ಪ್ರತಿ 100 ಕೆ.ಜಿ. ಕಳೆಗಳಿಗೆ 10 ಕೆ.ಜಿ. ಹಸಿ ಸಗಣಿ ಬೇಕಾಗುತ್ತದೆ). ಪುನಃ ಕತ್ತರಿಸಿದ ಕಳೆಗಳನ್ನು 15 ರಿಂದ 20 ಸೆಂಗಳಷ್ಟು ಹಾಕಿ ಅದರ ಮೇಲೆ ಮತ್ತು ಸಗಣಿ ಬಗ್ಗಡವನ್ನು ಹಾಕುತ್ತ ಬನ್ನಿ. ಹೀಗೆ ಹಾಕಿದ ಕಳೆಗಳು ಮತ್ತು ಬಗ್ಗಡದ ಗುಡ್ಡೆ ಎತ್ತರ 3.5 ಅಡಿಗಳಿಗೆ ಮಿತಿಗೊಳಿಸಿ.

ಗುಡ್ಡೆಯ ಮೇಲೆ 2 ಸೆಂ.ಮೀ.ನಷ್ಟು ಕೆಂಪು ಮಣ್ಣಿನ ಪದರದಿಂದ ಮುಚ್ಚಿ ಉಗುರು ಬಿಸಿ ನೀರನ್ನು ಸಿಂಪಡಿಸಿ ಮಣ್ಣನ್ನು ತೊಯಿಸಿ. ತದನಂತರ 30, 45 ಮತ್ತು 60ನೇ ದಿನಗಳಲ್ಲಿ ಕಾಂಪೋಸ್ಟ್ ಗುಡ್ಡೆಯನ್ನು ಸಲಿಕೆಯಿಂದ ಎಲ್ಲಾ ಪದರುಗಳು ಚೆನ್ನಾಗಿ ಮಿಶ್ರವಾಗುವಂತೆ ಮಗುಚಿ. ನಂತರ ಮೊದಲಿನಂತೆ ಮತ್ತೆ 2 ಸೆಂ.ಮೀ ಕೆಂಪು ಮಣ್ಣಿನಿಂದ ಮುಚ್ಚಿ ಉಗುರು ಬಿಸಿ ನೀರು ಸಿಂಪಡಿಸಿ. 90ದಿನಗಳ ವೇಳೆಗೆ ಸಂಪೂರ್ಣವಾಗಿ ಕಳಿತ ಕಳೆಗಳ ಸಾವಯವ ಗೊಬ್ಬರ ಸಿದ್ಧವಾಗುತ್ತದೆ.

ಈ ಕಳೆ ಗೊಬ್ಬರವನ್ನು ಮುಸುಕಿನಜೋಳ ಬಿತ್ತನೆ ಮಾಡುವ ಹತ್ತು ದಿನ ಮೊದಲು ಪ್ರತಿ ಎಕರೆಗೆ ನಾಲ್ಕು ಟನ್‌ಗಳಷ್ಟು ಭೂಮಿಗೆ ಸೇರಿಸಿ. ಇದರಿಂದ ಶೇ.35 ರಿಂದ 40 ರಷ್ಟು ಇಳುವರಿ ಹೆಚ್ಚುತ್ತದೆ. ಸೂರ್ಯಕಾಂತಿ ಬೆಳೆಯಲ್ಲಿ ಶೇ 32 ರಿಂದ 35ರಷ್ಟು ಇಳುವರಿ ಹೆಚ್ಚುತ್ತದೆ. ಮಣ್ಣಿನಲ್ಲಿ ಜೈವಿಕ ಇಂಗಾಲ ವೃದ್ಧಿಯಾಗುತ್ತದೆ. ಪೋಷಕಾಂಶಗಳ ಪ್ರಮಾಣ ಹೆಚ್ಚುತ್ತದೆ. ಜೈವಿಕ ಗುಣಧರ್ಮಗಳೂ ಹೆಚ್ಚಾಗುವುದು ಕಂಡುಬಂದಿದೆ.
ಈ ಕಳೆಗಳನ್ನು ಮೇಲೆ ತಿಳಿಸಿದಂತೆ ಚೆನ್ನಾಗಿ ಕಳಿಸಿದ ನಂತರ ಸಾವಯವ ಗೊಬ್ಬರವನ್ನಾಗಿ ಬಳಸುವುದರಿಂದ ಈ ಕಳೆ ಸಸ್ಯಗಳ ಬೀಜಗಳ ಪ್ರಸಾರ ತಡೆಯಬಹುದು. ಈ ಗೊಬ್ಬರ ಬಳಕೆಯಿಂದ ಭೂಮಿ ಬರಡಾಗುವುದು ತಪ್ಪುತ್ತದೆ.

ಕಳೆ ಸಸ್ಯಗಳಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವ ಬಗ್ಗೆ ಇನ್ನಷ್ಟು ಮಾಹಿತಿಗಳು ಬೇಕಿದ್ದರೆ ಕಳೆ ನಿರ್ವಹಣ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು ಅಥವಾ ಬೇಸಾಯಶಾಸ್ತ್ರ ವಿಭಾಗ, ಮಂಡ್ಯದ ವಿ.ಸಿ. ಫಾರಂನ ಕೃಷಿ ಮಹಾ ವಿದ್ಯಾಲಯವನ್ನು ಸಂಪರ್ಕಿಸಬಹುದು. ದೂರವಾಣಿ ನಂಬರ್: 080-23515944/ 08232-277211 (ಎಕ್ಸ್-209)

ಶುಕ್ರವಾರ, ಅಕ್ಟೋಬರ್ 15, 2010

ಅದ್ಭುತ ಸಸ್ಯ ಕಹಿ ಬೇವು

ಕಹಿ ಬೇವು ಒಂದು ಉತ್ತಮ ಬಹುಪಯೋಗಿ, ಪರಿಸರಪ್ರೇಮಿ ವೃಕ್ಷ. ರೈತರು ಇದನ್ನು ಬೆಳೆಸಿ ಲಾಭ ಪಡೆಯಬಹುದಾಗಿದೆ.
ಕಹಿ ಬೇವು ಉಷ್ಣ ಪ್ರದೇಶದ ಸದಾ ಹಸಿರಾಗಿರುವ ಸಸ್ಯ ಪ್ರಭೇದ. ಮೂಲತಃ ಭಾರತ ಉಪಖಂಡಕ್ಕೆ ಸೇರಿದ್ದು. ಆದರೆ ಜಗತ್ತಿನ ಇತರ ಭಾಗಗಳಲ್ಲೂ ಬೆಳೆಯಬಲ್ಲದು.

ಫಲವತ್ತಾದ ಜಮೀನಿನಲ್ಲಿ ಕ್ಷಿಪ್ರಗತಿಯಲ್ಲಿ ಸೊಂಪಾಗಿ ಬೆಳೆಯುವ ಈ ಮರ ಬಂಜರು ಭೂಮಿಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲೂ ಬೆಳೆಯುತ್ತದೆ. ಸರಾಸರಿ ಎತ್ತರ 15 ರಿಂದ 50 ಅಡಿ. ಜೀವಿತಾವಧಿ ಸುಮಾರು 150 ರಿಂದ 200 ವರ್ಷ. ತಾಯಿ ಬೇರು ಬಲವಾಗಿರುವುದರಿಂದ ಭೂಮಿಯ ಗಟ್ಟಿ ಪದರವನ್ನು ಸಡಿಲಗೊಳಿಸಿ ಆಳದಲ್ಲಿರುವ ಪೋಶಕಾಂಶಗಳನ್ನು ಹೀರಿ ಹುಲುಸಾಗಿ ಬೆಳೆಯಬಲ್ಲದು. ಆದರೆ ಎಳೆಯ ಸಸಿಗಳು ನೆರಳಿನಲ್ಲಿ ಚೆನ್ನಾಗಿ ಬೆಳೆಯಲಾರವು.

ಕಹಿ ಬೇವಿನ ಬೀಜಗಳಿಂದ ಸಸಿಗಳನ್ನು ತಯಾರಿಸಬಹುದು. ನೆಟ್ಟ ಮೊದಲ ವರ್ಷ ಇವುಗಳ ಬೆಳವಣಿಗೆ ನಿಧಾನ ಗತಿಯಲ್ಲಿರುತ್ತದೆ. ನಂತರದ ವರ್ಷಗಳಲ್ಲಿ ತ್ವರಿತಗೊಳ್ಳುತ್ತದೆ. ನೀರು ನಿಲ್ಲುವ ಜಮೀನಿನಲ್ಲಿ ಇವುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಬೇವಿನ ಮರಗಳನ್ನು ಜಮೀನಿನ ಅಂಚಿನಲ್ಲಿ ಅಥವಾ ಹೊಲದ ಮಧ್ಯದಲ್ಲಿ ಸಾಲಾಗಿ ನೆಡಬಹುದಾಗಿದೆ. ವಾಸದ ಮನೆಯ ಹಿಂದೆ ಅಥವಾ ಮುಂದುಗಡೆ ಸಹ ಬೆಳೆಸಬಹುದು.

ಬೇವಿನ ಮರಗಳ ನೆಡುತೋಪನ್ನು ಪ್ರತ್ಯೇಕವಾಗಿ ಮಾಡಬೇಕಾದರೆ ಆ ಸ್ಥಳವನ್ನು ಸ್ವಚ್ಛಗೊಳಿಸಿ ಅನುಕೂಲ­ವಾದ ಅಂತರದಲ್ಲಿ (5ಮೀ+ 5ಮೀ ಅಥವಾ 8ಮೀ+8ಮೀ) 0.5 ಘನ ಮೀಟರ್ ಗುಂಡಿಗಳನ್ನು ತೋಡಬೇಕು. ಅದರಲ್ಲಿ ಉತ್ತಮ ಸಸಿಗಳನ್ನು ನೆಟ್ಟು ಆರೈಕೆ ಮಾಡಬೇಕು. ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಕನಿಷ್ಠ 3 ರಿಂದ 4 ಬೇವಿನ ಮರ ಬೆಳೆಸಿದಲ್ಲಿ ಅಂದಾಜು 2000 ರೂಪಾಯಿ ಆದಾಯ ಗಳಿಸಬಹುದಾಗಿದೆ.

ಪ್ರಾಮುಖ್ಯತೆ: ಕಹಿ ಬೇವಿನ ಮರದ ಎಲೆ, ಕಾಂಡ, ಬೇರು, ಹೂವು ಮತ್ತು ಬೀಜಗಳನ್ನು ಔಷಧವಾಗಿ ಉಪಯೋಗಿಸುತ್ತಿದ್ದ ಬಗ್ಗೆ 4500 ವರ್ಷಗಳ ಇತಿಹಾಸವಿದೆ. ಭಾರತದಲ್ಲಿ ಶತಮಾನಗಳ ಹಿಂದೆಯೇ ಗ್ರಾಮೀಣ ಔಷಧಾಲಯಗಳೆಂದು ಈ ಮರಗಳನ್ನು ಕರೆಯಲಾಗುತ್ತಿತ್ತು. ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ತಜ್ಞರು ಉಪಯುಕ್ತವಾದ ಗಿಡಮರಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾಗ ಕಹಿ ಬೇವನ್ನು ಗ್ರಾಮೀಣ ಜನರು ತಮ್ಮ ಜಮೀನಿನ ಅಕ್ಕಪಕ್ಕಗಳಲ್ಲಿ, ಶಾಲಾ ಆವರಣಗಳಲ್ಲಿ, ರಸ್ತೆಗಳ ಎರಡೂ ಪಕ್ಕಗಳಲ್ಲಿ ಬೆಳೆಸುತ್ತಿರುವುದನ್ನು ಗಮನಿಸಿದ್ದರು. ನಂತರ ಆಳವಾಗಿ ಅಧ್ಯಯನ ಮಾಡಿ ಅದರ ಅದ್ಭುತ ಉಪಯುಕ್ತ ಮಾಹಿತಿಗಳನ್ನು ಜಗತ್ತಿಗೆ ತಿಳಿಸಿದ ಮೇಲೆ ಇದಕ್ಕೆ ಇನ್ನಷ್ಟು ಮಹತ್ವ ಬಂತು.

ಎಲ್ಲಾ ಗಿಡಮರಗಳ ಪೈಕಿ ಕಹಿಬೇವಿನ ಮರವು ಮಾನವ ಜನಾಂಗದ ಅತ್ಯುತ್ತಮ ಬಹುಪಯೋಗಿ ಸದಾ ಹಸಿರಾಗಿರುವ ಆರೋಗ್ಯಕರ ಮರ. ಕಹಿ ಬೇವಿನ ಮರಗಳು ಹೆಚ್ಚು ಆಮ್ಲಜನಕವನ್ನು ವಾತಾವರಣದಲ್ಲಿ ಬಿಡುಗಡೆ ಮಾಡುವ ಗುಣಗಳನ್ನು ಹೊಂದಿದ್ದು ವಾಯುಮಾಲಿನ್ಯ ನಿಯಂತ್ರಣದಲ್ಲಿ ಇಡಲು ಸಹಕಾರಿ.

ಕಹಿ ಬೇವಿನ ಬಗ್ಗೆ ಎರಡು ದಶಕಗಳಿಂದ ಸಾಕಷ್ಟು ಸಂಶೋಧನೆಗಳು ನಡೆದಿವೆ. ಸಾವಯವ ಗೊಬ್ಬರ, ಕೀಟನಾಶಕ, ಶಿಲೀಂದ್ರನಾಶಕ, ಔಷಧ ಹಾಗೂ ಸೌಂದರ್ಯ ವರ್ಧಕಗಳ ತಯಾರಿಕೆಯಲ್ಲಿ ಅದು ನಾನಾ ರೂಪದಲ್ಲಿ ಪ್ರಯೋಜನಕಾರಿ. ಇದರಿಂದ ಬಡ ಮತ್ತು ಶ್ರೀಮಂತ ರಾಷ್ಟ್ರಗಳು ಪ್ರಯೋಜನಗಳನ್ನು ಪಡೆಯುತ್ತಿದೆ. ಆದುದರಿಂದ ಕಹಿ ಬೇವು ಒಂದು ಅದ್ಭುತ ಗಿಡ.

ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿಯತ್ತ ಹೆಚ್ಚು ಗಮನ ಹರಿಸಿರುವ ರೈತರು ಕಹಿ ಬೇವಿನ ಹಿಂಡಿಯನ್ನು ಗೊಬ್ಬರವಾಗಿ ಉಪಯೋಗಿ­ಸುತ್ತಿದ್ದಾರೆ. ಕಹಿ ಬೇವಿನ ಹಿಂಡಿಯಲ್ಲಿ ಸಾರಜನಕ, ರಂಜಕ, ಪೊಟ್ಯಾಶ್, ಇಂಗಾಲ, ಸಲ್ಪರ್, ಕ್ಯಾಲ್ಸಿಯಂ, ಮೆಗ್ನೇಶಿಯಂ ಮುಂತಾದ ಪೋಷಕಾಂಶಗಳಿವೆ. ಬೇವಿನ ಎಣ್ಣೆಯನ್ನು ಕೀಟನಾಶಕವಾಗಿ, ಶಿಲೀಂದ್ರನಾಶಕವಾಗಿ ಬಳಸುತ್ತಿದ್ದಾರೆ. ಬೇವಿನ ಎಣ್ಣೆಯಿಂದ ತಯಾರಿಸಿದ ಕೀಟನಾಶಕಗಳು ಮಾರುಕಟ್ಟೆಯಲ್ಲಿ ಲಭ್ಯ.
ಇವುಗಳು ಕೆಲವು ಬೆಳೆಗಳ ಕೀಟಗಳನ್ನು ನಿಯಂತ್ರಿಸುತ್ತವೆ. ಅಷ್ಟೇ ಅಲ್ಲದೆ ಪರಿಸರಪ್ರೇಮಿ. ಕಹಿಬೇವಿನ ಎಣ್ಣೆಯನ್ನು ಸೊಳ್ಳೆ ನಿವಾರಕವಾಗಿ ಬಳಸಬಹುದಾಗಿದೆ.

ಮಾರುಕಟ್ಟೆಯಲ್ಲಿ ಕಹಿಬೇವಿನ ಸಾಬೂನು, ಶಾಂಪೂ, ಟೂತ್‌ಪೇಸ್ಟ್, ಟೂತ್‌ಪೌಡರ್, ಕೀಟನಾಶಕ, ಶಿಲೀಂದ್ರ­­ನಾಶಕ, ಕ್ರೀಮ್ ಇತ್ಯಾದಿಲಭ್ಯ.

ಮಂಗಳವಾರ, ಅಕ್ಟೋಬರ್ 12, 2010

ಭಾರತೀಯರಿಗೆ ಅಲಾಸ್ಕಾದ ನೀರು ಕುಡಿಸುವ ಯೋಜನೆ

ಭಾರತೀಯರಿಗೆ ಅಲಾಸ್ಕಾದ ನೀರು ಕುಡಿಸುವ ಯೋಜನೆ : ಎಸ್೨ಸಿ ಸಂಸ್ಥೆಯ ಈ ಕನಸಿಗೆ ತಳಬುಡವೇ ಇಲ್ಲ!
ಭಾರತದಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆಗೆ ಪರಿಹಾರವಾಗಿ ಅಮೆರಿಕಾದ ಎಸ್೨ಸಿ ಗ್ಲೋಬಲ್ ಸಿಸ್ಟಮ್ಸ್ ಎಂಬ ಸಂಸ್ಥೆಯು ಅಲಾಸ್ಕಾದಿಂದ ಪರಿಶುದ್ಧ ನೀರನ್ನು ಕಾರ್ಗೋ ಹಡಗುಗಳ ಮೂಲಕ ತಂದು ಮಾರಲು ನಿರ್ಧರಿಸಿದೆ. ಮುಂದಿನ ಆರೆಂಟು ತಿಂಗಳಲ್ಲೇ ಈ ಯೋಜನೆ ಸಾಕಾರಗೊಳ್ಳಲಿದೆ ಎಂದು ಸಂಸ್ಥೆಯು ಪ್ರಕಟಿಸಿದೆ. ಆದರೆ ಈ ಸಂಸ್ಥೆಯ ಹಣಕಾಸಿನ ಸಾಮರ್ಥ್ಯ, ಅಲಾಸ್ಕಾದಿಂದ ನೀರೆತ್ತುವುದರಲ್ಲಿ ಇರುವ ಸಮಸ್ಯೆಗಳು, ಭಾರತದ ನೀರಿನ ಅಗತ್ಯ - ಇವನ್ನೆಲ್ಲ ಗಮನಿಸಿದರೆ ಇದೊಂದು ಅಪ್ಪಟ ಕಮರ್ಶಿಯಲ್ ಕನಸೇ ಹೊರತು ಯಾವುದೇ ಸಾಮಾಜಿಕ ಉದ್ದೇಶವೂ ಇದರಲ್ಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ವಿಶೇಷವೆಂದರೆ ಅಲಾಸ್ಕಾದ ಸಿಟ್ಕಾ ನಗರದ ಬಳಿ ಇರುವ ಬ್ಲೂ ಲೇಕ್ ಸರೋವರದಿಂದ ಸಂಗ್ರಹವಾಗಿ ಶಾಂತಸಾಗರವನ್ನು ದಾಟಿ ಬರುವ ನೀರನ್ನು ಭಾರತದ ಪಶ್ಚಿಮ ತಟದ ಮುಂಬಯಿ, ಜವಹರಲಾಲ್ ನೆಹರು, ಮರ್ಮಗೋವಾ ಮತ್ತು ನವಮಂಗಳೂರು ಬಂದರುಗಳಲ್ಲಿ ಸಂಗ್ರಹಿಸಲಾಗುವುದು. ಅಲಾಸ್ಕಾದಲ್ಲಿ ೧೨.೫ ಪೈಸೆಗೆ ಲೀಟರಿನಂತೆ ದಿನಾಲೂ ೮೦ ಲಕ್ಷ ಗ್ಯಾಲನ್‌ನಷ್ಟು ನೀರನ್ನು ಖರೀದಿಸುವ ಎಸ್೨ಸಿ ಸಂಸ್ಥೆಯು ಭಾರತದಲ್ಲಿ ಇದೇ ನೀರನ್ನು ರೂ. ೧೨.೬೯ ಪೈಸೆಗೆ ಲೀಟರಿನಂತೆ ಮಆರಾಟ ಮಾಡಿ ಲಾಭ ಗಳಿಸುವುದಂತೆ. ಅಷ್ಟೇ ಅಲ್ಲ, ಭಾರತವನ್ನೇ ವಿಶ್ವ ಜಲಕೇಂದ್ರವನ್ನಾಗಿ ಮಾಡಿಕೊಂಡು ಇಲ್ಲಿಂದಲೇ ಅರಬ್ ಮತ್ತು ಆಫ್ರಿಕಾದ ದೇಶಗಳಿಗೂ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಈ ಎಲ್ಲಾ ದೇಶಗಳಿಗೂ ಭಾರತದಿಂದ ನಾಲ್ಕೇ ದಿನಗಳಲ್ಲಿ ನೀರು ಕಳಿಸಬಹುದು ಎಂಬುದೇ ಇಲ್ಲಿನ ಹೆಚ್ಚುಗಾರಿಕೆ.
ಈ ಸುದ್ದಿಯನ್ನು ಗಾರ್ಡಿಯನ್ ಪತ್ರಿಕೆಯು ಪ್ರಕಟಿಸಿದಾಗಿನಿಂದ ಎಲ್ಲೆಡೆ ಈ ಯೋಜನೆ ಸಾಧ್ಯವೇ, ಸಾಧುವೆ? ಎಂಬ ಚರ್ಚೆ ಆರಂಭವಾಗಿದೆ. ಹಾಗಾದರೆ ಈ ಎಸ್೨ಸಿ ಸಂಸ್ಥೆಗೆ ಈ ವಿಷಯದಲ್ಲಿ ಇರುವ ತಜ್ಞತೆಯೇನು? ಭಾರತಕ್ಕೆ ನಿಜಕ್ಕೂ ಅಲಾಸ್ಕಾದಿಂದ ನೀರು ತರಬೇಕಾದ ಅಗತ್ಯವಿದೆಯೆ? ಇಂಥ ಯೋಜನೆಗಳು ಹಿಂದೆಯೂ ಇದ್ದಿರಲಿಲ್ಲವೆ? ಅವೆಲ್ಲ ವಿಫಲವಾಗಲು ಕಾರಣವೇನು? ನೀರಿನ ಖಾಸಗೀಕರಣದ ಈ ಹೊಸ ವ್ಯಾಪಾರವನ್ನು ಭಾರತ ಸರ್ಕಾರವು ಕೂಡಲೇ ನಿಲ್ಲಿಸದಿದ್ದರೆ ಜಾಗತೀಕರಣದ ಹೆಸರಿನಲ್ಲಿ ಕುಡಿಯುವ ನೀರನ್ನೂ ಬಡವರ ಕೈಗೆ ಸಿಗದಂತೆ ಮಾಡುವ ಯತ್ನಕ್ಕೆ ಮೇಲುಗೈ ಆಗಬಹುದು.
ಭಾರತದಲ್ಲಿ ನೀರಿನ ಸಮಸ್ಯೆಯು ಭೀಕರವಾಗಿದೆ ಎಂದು ಎರಡು ವರದಿಗಳು ಹೇಳಿದ್ದನ್ನೇ ಎಸ್೨ಸಿಯಂಥ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ಮೊದಲನೆಯ ವರದಿಯನ್ನು ಜೆಪಿ ಮೋರ್ಗನ್ ಸಂಸ್ಥೆ ತಯಾರಿಸಿದ್ದರೆ, ಎರಡನೆಯ ವರದಿಯನ್ನು ಗ್ರೈಲ್ ರಿಪೋರ್ಟ್ ಸಂಸ್ಥೆಯು ರೂಪಿಸಿದೆ. ಎರಡೂ ವರದಿಗಳಲ್ಲಿ ಭಾರತದ ನೀರಿನ ಪರಿಸ್ಥಿತಿಯನ್ನು ಅಧಿಕೃತವಾಗೇ ಅಧ್ಯಯನ ಮಾಡಿರುವುದೂ ಕಂಡುಬರುತ್ತದೆ. ಈ ವರದಿಗಳ ಅಂಕಿ ಅಂಶಗಳನ್ನು ಖಚಿತವಾಗಿ ಪರಿಶೀಲಿಸಲು ನನಗೆ ಸಾಧ್ಯವಾಗಿಲ್ಲ. ಆದರೆ, ಭಾರತದ ನೀರಿನ ಸಮಸ್ಯೆ ಭೀಕರವಾಗಿಲ್ಲದಿದ್ದರೂ ಗಂಭೀರವಾಗಿದೆ ಎನ್ನುವುದಂತೂ ನಿಜ. ಇದಕ್ಕೆ ನೀರಿನ ಕೊರತೆ ಕಾರಣವಲ್ಲ, ಬದಲಿಗೆ ನೀರಿನ ಬಳಕೆಯ ಅಸಮರ್ಪಕ ಅವೈಜ್ಞಾನಿಕ ನಿರ್ವಹಣೆಯೇ ಕಾರಣ ಎಂಬುದೂ ಅಷ್ಟೇ ನಿಜ. ಕಾವೇರಿಯಿಂದ ಕುಡಿಯುವ ನೀರು ತರಿಸಿಕೊಂಡು ತಮ್ಮ ಕಾರಿನಿಂದ ಹಿಡಿದು ತಿಕದವರೆಗೆ ಎಲ್ಲವನ್ನೂ ಆ ನೀರಿನಲ್ಲೇ ತೊಳೆಯುವ ಬೆಂಗಳೂರಿನ ನನ್ನಂಥ ಲಕ್ಷಾಂತರ ಜನರೇ ಇದಕ್ಕೆ ಒಂದು ನಿದರ್ಶನ.

ಈಗ ಈ ಸುದ್ದಿಯನ್ನು ಎಳೆ ಎಳೆಯಾಗಿ ಬಿಡಿಸಿ ನೋಡಬೇಕಿದೆ. ಆದ್ದರಿಂದಲೇ ತುಸು ಉದ್ದವಾದ ಈ ಬ್ಲಾಗನ್ನು ನೀವೆಲ್ಲ ಸಂಯಮದಿಂದ ಓದಬೇಕು. ಸಮಸ್ಯೆಯನ್ನು ಬುಡದಿಂದ ಅರ್ಥ ಮಾಡಿಕೊಳ್ಳದೇ ಪರಿಹಾರ ಹುಡುಕುವುದರಲ್ಲಿ ಅರ್ಥವಿಲ್ಲ.
ಮೊದಲು ಗಾರ್ಡಿಯನ್ ಪತ್ರಿಕೆಯು ವರದಿ ಮಾಡಿದ್ದರಲ್ಲಿ ಏನೇನು ವಿಷಯಗಳಿವೆ ಅನ್ನೋದನ್ನು ತಿಳಿದುಕೊಳ್ಳೋಣ:
ಹೀಗೆ ನೀರು ತರುವಲ್ಲಿ ಡೀಸೆಲ್ ಖರ್ಚೇ ನಿಮ್ಮ ಕಂಪೆನಿಯನ್ನು ತಿಂದು ಹಾಕುತ್ತದೆ ಎನ್ನುತ್ತಾರೆ ಆಂತಾರಾಷ್ಟ್ರೀಯ ಜಲತಜ್ಞ ಪೀಟರ್ ಗ್ಲೀಕ್. ಹಾಗಂತ ಇಂಥ ಯತ್ನಗಳು ಹಿಂದೆಯೂ ನಡೆದಿವೆ. ೧೯೯೭ರಲ್ಲೇ ೧೩ ಮೈಲು ದೂರದ ಈಜಿನಾ ದ್ವೀಪಕ್ಕೆ ಗ್ರೀಸ್ ದೇಶವು ನೀರನ್ನು ಹಡಗಿನಲ್ಲಿ ಸರಬರಾಜು ಮಾಡಿತ್ತು. ಸಿಂಗಾಪುರವು ಸದ್ಯ ಮಲೇಶ್ಯಾದಿಂದಲೇ ಶುದ್ಧ ನೀರನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ಮುಖ್ಯವಾಗಿ ಅರಬ್ ದೇಶಗಳು ಡಿಸ್ಯಾಲಿನೇಶನ್ ಸ್ಥಾವರಗಳನ್ನು ಇಟ್ಟುಕೊಂಡು ಉಪ್ಪುನೀರನ್ನೇ ಶುದ್ಧೀಕರಿಸಿಕೊಂಡು ಬಳಸುತ್ತಿವೆ. ಈ ನೀರು ಅಲಾಸ್ಕಾದ ನೀರಿಗಿಂತ ೧೮ ಪಟ್ಟು ಅಗ್ಗವಂತೆ. ಸೌದಿ ಅರೇಬಿಯಾ ಮತ್ತು ಕುವೈತ್‌ಗಳಲ್ಲಿ ಇಂಥ ಸ್ಥಾವರಗಳೇ ಅಲ್ಲಿನ ನೀರಿನ ಸಮಸ್ಯೆಯನ್ನು ಬಗೆಹರಿಸಿವೆ. ಈ ಮಧ್ಯೆ ಕೆನಡಾ ದೇಶವು ನೀರಿನ ರಫ್ತನ್ನು ನಿಷೇಧಿಸಲು ಚಿಂತನೆ ನಡೆಸಿದೆ.
ಗಾರ್ಡಿಯನ್ ವರದಿ ಹಾಗಿರಲಿ, ಎಸ್೨ಸಿ ಏನು ಹೇಳುತ್ತೆ? (ಗೊತ್ತಿರಲಿ, ಎಸ್೨ಸಿ ಎಂದರೆ ಸೋಸ್ ಟು ಕನ್ಸೂಮರ್ ಎಂದರ್ಥ) ಅಲಾಸ್ಕಾ ರಿಸೋರ್ಸ್ ಮ್ಯಾನೇಜ್‌ಮೆಂಟ್ (ಎ ಆರ್ ಎಂ) ಸಂಸ್ಥೆಯಲ್ಲಿ ಶೇ ೫೦ರಷ್ಟು ಒಡೆತನವನ್ನು ಹೊಂದಿರುವ ತಾನು ಎಲ್ಲಾ ವಿಧಾನಗಳಲ್ಲಿ, ಎಲ್ಲ ಬಗೆಯ ಗಾತ್ರದಲ್ಲಿ ನೀರು ಸರಬರಾಜು ಮಾಡಬಹುದು ಎನ್ನುತ್ತದೆ.

ಎಸ್೨ಸಿ ಸಂಸ್ಥೆಯ ಮುಖ್ಯಸ್ಥರು ಯಾರು? ಅಲೆಜಾಂಡ್ರೋ ಬಾಟಿಸ್ಟಾ ಎಂಬ ೫೩ ವರ್ಷ ವಯಸ್ಸಿನ ಮೆಕ್ಸಿಕನ್ ರಿಯಲ್ ಎಸ್ಟೇಟ್ ಉದ್ಯಮಿ ಈ ಸಂಸ್ಥೆಯ ಅಧ್ಯಕ್ಷ. ಈತನ ಒಟ್ಟು ಸಿರಿವಂತಿಕೆ ೨.೪೮ ಲಕ್ಷ ಡಾಲರ್‌ಗಳು ಎಂದು ಫೋರ್ಬಿಸ್ ವೆಬ್‌ಸೈಟ್ ಉಸುರುತ್ತದೆ. ಹಾಗೇ ಎಸ್೨ಸಿ ಸಂಸ್ಥೆಯಲ್ಲಿ ನಿರ್ದೇಶಕ ಮತ್ತು ಕೆನಡಾ - ಅಮೆರಿಕಾ ಸಂಸ್ಥೆಗಳ ಅಧ್ಯಕ್ಷ. ಜೋಸೆಫ್ ಡಿಕ್ಸನ್ ಎಂಬಾತ ಸಂಸ್ಥೆಯ ಹಣಕಾಸು ಅಧಿಕಾರಿ. ಈತನ ಒಟ್ಟು ಸಿರಿವಂತಿಕೆ ೫೪ ಸಾವಿರ ಡಾಲರ್‌ಗಳು. ಟೀನಾ ವ್ಯಾಂಡರ್‌ಹೇಡೆನ್ ಎಂಬಾಕೆ ಈ ಸಂಸ್ಥೆಯ ನಿರ್ದೇಶಕಿ; ಈಕೆಯ ಕೆಲಸ ಮಾರ್ಕೆಟಿಂಗ್, ಹೂಡಿಕೆ ಸಂಗ್ರಹ. ಇನ್ನೊಬ್ಬ ನಿರ್ದೇಶಕ ಮಾರ್ಕ್ ಲೆಂಬರ್ಟ್. ನೀರಿನ ಸಾಗಣೆ ವಿಷಯದಲ್ಲಿ ಅನುಭವ ಇರುವ ಏಕೈಕ ಅಧಿಕಾರಿ ಎನ್ನಬಹುದು.
ಎಸ್೨ಸಿ ಸಂಸ್ಥೆಯ ಸ್ವಯಂ ಹೇಳಿಕೆ ಇಲ್ಲಿದೆ:
ಈ ಸಂಸ್ಥೆಯು ಅಮೆರಿಕಾ ಸರ್ಕಾರಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಯೋಜನೆಯ ಕುರಿತು ಇರುವ ರಿಸ್ಕ್‌ಗಳನ್ನು ಹೀಗೆ ಪಟ್ಟಿ ಮಾಡಿದೆ: ನಮ್ಮದು ಹೊಸ ವ್ಯವಹಾರ. ಇದರಲ್ಲಿ ನಮ್ಮ ತಂಡಕ್ಕೆ ಇರುವ ಅನುಭವ ಕಡಿಮೆ. ಆದ್ದರಿಂದ ನಮ್ಮಲ್ಲಿ ಹಣ ಹೂಡುವುದು ಒಂದು ತಾಪತ್ರಯದ ವಿಚಾರವೇ ಹೌದು. ನಾವು ಈವರೆಗೆ ಯಾವುದೇ ಕಾರ್ಯಾಚರಣೆಯನ್ನೂ ಮಾಡಿಲ್ಲ. ಜಲಸಾಗಣೆ ಬಗ್ಗೆ ಕೇವಲ ಪ್ರಯೋಗ ಮಾಡಿದ್ದೇವೆ ಅಷ್ಟೆ. ನಮ್ಮ ಯೋಜನೆಯ ಆರ್ಥಿಕ ವಯಬಿಲಿಟಿಯೇ ಸಂಶಯಾಸ್ಪದವಾಗಿದೆ. ಅಕಸ್ಮಾತ್ ನಾವು ಜಲಸಾಗಣೆ ವ್ಯವಸ್ಥೆಯನ್ನು ಸ್ಥಾಪಿಸದೇ ಇದ್ದರೆ ನಮಗೆ ಬೇರೆ ಆದಾಯವೇ ಇರುವುದಿಲ್ಲ. ನಮ್ಮ ವ್ಯವಹಾರ ಮುಂದುವರಿಸಲು ನಮಗೆ ಇನ್ನೂ ಬಂಡವಾಳ ಬೇಕಿದೆ. ಬಂಡವಾಳದ ಕೊರತೆಯಿಂದ ಪ್ರಸ್ತುತ ನಾವು ಯಾವುದೇ ಹೊಸ ಸಾಧನ ಖರೀದಿ ಒಪ್ಪಂದವನ್ನೂ ಹೊಂದಿಲ್ಲ. ಅದೂ ಅಲ್ಲದೆ ನಾವು ನೀರು ಮಾರಾಟದ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆಗೆ ಗುರಿಯಾದರೆ ಹೂಡಿಕೆದಾರರಾದ ನಿಮ್ಮ ಎಲ್ಲ ಹಣವೂ ಕಳೆದುಹೋಗುತ್ತದೆ. ಇದಲ್ಲದೆ ನಾವು ಪೆನ್ನಿಸ್ಟಾಕ್ ನಿಯಮಗಳ ಅಡಿಯಲ್ಲಿ ಬರೋದ್ರಿಂದ ನಮ್ಮ ದಾಸ್ತಾನನ್ನು ಮರುಮಾರಾಟ ಮಾಡುವುದಕ್ಕೆ ನಿರ್ಬಂಧಗಳಿವೆ.

(ಪೆನ್ನಿ ಸ್ಟಾಕ್ ಅಂದ್ರೆ: ನಾಸ್‌ಡಾಕ್ - ಅಮೆರಿಕಾದ ಶೇರು ವಿನಿಮಯ ಕೇಂದ್ರದಲ್ಲಿ ಪಟ್ಟೀಕರಣವಾಗಿರಲ್ಲ; ಅದರ ಶೇರು ಬೆಲೆ ೫ ಡಾಲರ್‌ಗಿಂತ ಕಡಿಮೆಯಾಗಿರುತ್ತೆ; ೫೦ ಲಕ್ಷ ಡಾಲರ್‌ಗಿಂತ ಕಡಿಮೆ ಆಸ್ತಿಯನ್ನು ಹೊಂದಿದ ಕಂಪೆನಿಯಾಗಿರುತ್ತೆ. ಅಲ್ಲದೆ ಅದು ನಾಸ್‌ಡಾಕ್‌ನ ಪಿಂಕ್‌ಶೀಟ್‌ನಲ್ಲಿ ಅಥವಾ ಓವರ್ ದಿ ಕೌಂಟರ್ ಬುಲೆಟಿನ್ ಬೋರ್ಡ್‌ನಲ್ಲಿ ಪಟ್ಟಿಯಾಗಿರುತ್ತೆ. ಅಂದಮೇಲೆ ಗೊತ್ತಾಯಿತಲ್ಲ, ಎಸ್೨ಸಿ ಸಂಸ್ಥೆಯ ಆರ್ಥಿಕ ಸಾಮರ್ಥ್ಯ ಏನೆಂದು…)
ನಷ್ಟದ ಕಂಪೆನಿ
ಎಸ್೨ಸಿ ಸಂಸ್ಥೆಯು ಸಲ್ಲಿಸಿದ ಅಧಿಕೃತ ವಾರ್ಷಿಕ ಹಣಕಾಸು ದಾಖಲೆಗಳ ಪ್ರಕಾರ ಸಂಸ್ಥೆಯ ೨೦೧೦ರ ಜೂನ್ ೩೦ಕ್ಕೆ ಕೊನೆಗೊಂಡಂತೆ ಅಕ್ಯುಮುಲೇಟೆಡ್ ನಷ್ಟ ೫೫.೨೭ ಲಕ್ಷ ಡಾಲರ್‌ಗಳು. ಜೂನ್೩೦ಕ್ಕೆ ಕೊನೆಗೊಂಡಂತೆ ಮೂರು ತಿಂಗಳ ನಷ್ಟವೇ ೨.೪೮ ಲಕ್ಷ ಡಾಲರ್‌ಗಳು. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪೆನಿಯು ೪೬ ಸಾವಿರ ಡಾಲರ್ ನಷ್ಟ ಅನುಭವಿಸಿತ್ತಂತೆ. ಸಂಸ್ಥೆಯ ಖರ್ಚುಗಳು ಆರು ತಿಂಗಳಲ್ಲಿ ೧.೮೨ ಲಕ್ಷ ಡಾಲರ್‌ಗಳು. ಈ ಆರು ತಿಂಗಳಲ್ಲಿ ಸಂಥೆಯು ಬಳಸಿದ ನಗದು ಹಣ ೧.೨೨ ಲಕ್ಷ ಡಾಲರ್‌ಗಳು.

ಇದೇ ವರದಿಯಲ್ಲಿ ಎಸ್೨ಸಿ ಸಂಸ್ಥೆಯು ಇರಾಖಿನ ಖಾಸಗಿ ಪಾರ್ಟಿಗಳ ಜೊತೆ ಒಪ್ಪಂದ ಮಾತುಕತೆ ನಡೆಸಿರುವುದಾಗಿಯೂ, ಭಾರತ ಮತ್ತು ಸೌದಿ ಅರೇಬಿಯಾದಲ್ಲಿ ಈಗಾಗಲೇ ಸಾಗಣೆ ಜಾಲ ಹೊಂದಿರುವ ಕಂಪೆನಿಗಳ ಜೊತೆ ಮಾತುಕತೆ ಶುರು ಮಾಡಿರುವುದಾಗಿಯೂ ತಿಳಿಸಿದೆ. ಮಾರ್ಕೆಟ್ ಕಾರ್ಯಗಳಿಗಾಗಿ ಶಹೀದ್ ವೋಹ್ರಾ ಮತ್ತು ರಾಡ್ ಬಾರ್ಲೆಟ್ ಎಂಬುವವರನ್ನು ಸಂಸ್ಥೆಯು ನೇಮಿಸಿಕೊಂಡಿದೆ. ಶಾಹಿದ್‌ಗೆ ಹಡಗು ಉದ್ಯಮದಲ್ಲಿ ಅನುಭವವಿದೆ.
ಇಷ್ಟೆಲ್ಲ ಮಾಹಿತಿಯನ್ನು ಬದಿಗಿಟ್ಟು, ಎಸ್೨ಸಿ ಸಂಸ್ಥೆಯು ಈಗ ಏನೇನು ಸಾಧಿಸಿದೆ ಅನ್ನೋದನ್ನು ನೋಡೋಣ: ಸಿಟ್ಕಾ ನಗರದಲ್ಲಿ ನೀರು ಸಾಗಣೆಗೆ ಬೇಕಾದ ವ್ಯವಸ್ಥೆಯನ್ನು ನಿರ್ಮಿಸಲು ಅದು ಇನ್ನೂ ಕಾಮಗಾರಿ ಪರವಾನಗಿಯನ್ನೇ ಪಡೆದಿಲ್ಲ. ಈ ಕೆಲಸಕ್ಕೆ ಅಮೆರಿಕಾದ ಸೇನಾ ಇಂಜಿನಿಯರ್‌ಗಳನ್ನು ಬಳಸಿದರೂ ಕನಿಷ್ಟ ಆರು ತಿಂಗಳು ಬೇಕಾಗುತ್ತಂತೆ.

ಎಸ್೨ಸಿ ಸಂಸ್ಥೆಯು ಅಲಾಸ್ಕಾದಲ್ಲಿ ಎ ಆರ್ ಎಂ ಮೂಲಕ ಬಾಟ್ಲಿಂಗ್‌ಗಾಗಿ ಟ್ರೂ ಅಲಾಸ್ಕಾ ಬಾಟ್ಲಿಂಗ್ ಅನ್ನೋ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಆದರೆ ಈ ಕಂಪೆನಯು ವ್ಯವಹಾರ ನಿಭಾಯಿಸಲಾಗದೆ ತನ್ನನ್ನೇ ಹಣಕಾಸು ನೀಡಿಕೆ ಸಂಸ್ಥೆ ಕೋವ್ ಪಾರ್ಟರ್ನ್ಸ್‌ಗೆ ಮಾರಿಕೊಂಡಿತ್ತು. ಈ ವರ್ಷದೊಳಗೆ ಅದು ಸಿಟ್ಕಾದಿಂದ ೫ ಕೋಟಿ ಗ್ಯಾಲನ್ ನೀರನ್ನು ಎತ್ತಲೇಬೇಕು; ಇಲ್ಲವಾದರೆ, ಅದಕ್ಕೆ ನೀಡಿರುವ ನೀರೆತ್ತುವ ಗುತ್ತಿಗೆಯೇ ರದ್ದಾಗುತ್ತೆ.

ಭಾರತಕ್ಕೆ ಅಲಾಸ್ಕಾದ ನೀರು ಬೇಕೆ?
ಏನೇ ಇರಲಿ, ಭಾರತಕ್ಕೆ ಅಲಾಸ್ಕಾದಿಂದ ನೀರು ತರಬೇಕೆ ಅನ್ನೋದೇ ಇಲ್ಲಿ ನಾವು, ಸಮಾಜ, ಸರ್ಕಾರ ನಿರ್ಧರಿಸಬೇಕಾಗಿರೋ ವಿಷಯ. ಹಿಮಾಲಯದ ಗ್ಲೇಸಿಯರ್‌ಗಳು ಕುಗ್ಗುತ್ತಿವೆ ಎಂಬುದನ್ನು ಒಪ್ಪಿಕೊಂಡರೂ, ಮಳೆಯ ಪ್ರಮಾಣ ಹೆಚ್ಚುಕಡಿಮೆಯಾಗಿದೆ ಎನ್ನುವುದನ್ನು ಒಪ್ಪಿಕೊಂಡರೂ, ನಮ್ಮ ದೇಶದಲ್ಲಿ ನೀರಿನ ನಿರ್ವಹಣೆ ಸರಿಯಾದರೆ ಸಮಸ್ಯೆ ಇರುವುದಿಲ್ಲ ಎನ್ನುವುದು ಒಂದು ಸಹಜ ತರ್ಕ. ರಾಜಕೀಯ ದೃಢತೆ ಇದ್ದರೆ ನೀರನ್ನು ಸಂಗ್ರಹಿಸುವ ಸಾವಿರಾರು ವಿಧಾನಗಳನ್ನು ಅನುಸರಿಸಿ ಇಡೀ ದೇಶವು ನೀರಿನ ಸಮೃದ್ಧತೆಯಿಂದ ಕೂಡಿರುವಂತೆ ಮಾಡಬಹುದು. ಕುಡಿಯುವ ನೀರು ಶುದ್ಧವಾಗಿರಬೇಕು, ನಿಜ. ಹಾಗಂತ ಶತಮಾನಗಳ ಕಾಲ ನಮ್ಮ ಹಿರೀಕರು ವಿಷಪೂರಿತ ನೀರನ್ನೇನಾನದೂ ಕುಡಿದಿದ್ದರೆ ನಮ್ಮ ಪೀಳಿಗೆ ಇಷ್ಟೆಲ್ಲ ಆರೋಗ್ಯದಿಂದ ಇರುತ್ತಿರಲಿಲ್ಲ. ಅತಿಯಾದ ಕೀಟನಾಶಕಗಳ ಬಳಕೆ, ಅಂತರ್ಜಲಕ್ಕೆ ರಾಸಾಯನಿಕಗಳ ಸೇರ್ಪಡೆ, ಎಲ್ಲಕ್ಕಿಂತ ನೀರಿನ ದುಂದು ಬಳಕೆ - ಇದೇ ನಮ್ಮ ನೀರಿನ ಸಮಸ್ಯೆಗೆ ಕಾರಣ. ಅದಿಲ್ಲದೇ ಹೋಗಿದ್ದರೆ ರಾಜಸ್ಥಾನದಲ್ಲಿ ರಾಜೇಂದ್ರ ಸಿಂಗ್ ಬತ್ತಿಹೋದ ನದಿಗಳಿಗೆ ಜೀವ ತರುವುದು ಎಂದರೇನು?
ನೀರಿಗಾಗಿ ಹೋರಾಡುವ ಪತ್ರಕರ್ತರ ದೊಡ್ಡ ಪಡೆಯೇ ನಮ್ಮಲ್ಲಿದೆ. ಕರ್ನಾಟಕದ ಶ್ರೀಪಡ್ರೆ ಅಂಥ ನೀರು ತಜ್ಞ ಪತ್ರಕರ್ತರು. ನೀರಿನ ಸಮರ್ಥ ನಿರ್ವಹಣೆಯಿಂದ ಹೇಗೆ ಕೊರತೆಯನ್ನು ಕಳೆದು ಮಿಗತೆ ಸಾಧಿಸಬಹುದು ಎಂಬ ಅಸಂಖ್ಯ ಸಮಕಾಲೀನ ಕಥೆಗಳನ್ನು ಅವರು ನೀಡಿದ್ದಾರೆ. ಇಂಥ ಪತ್ರಿಕೋದ್ಯಮ ದೇಶದೆಲ್ಲೆಡೆ ಬೆಳೆದಿದೆ. ಹಲವು ಸರ್ಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ.
ನಮ್ಮ ದೇಶದ ಅಂತರ್ಜಲವನ್ನೇ ಖಾಸಗೀಕರಣ ಮಾಡುವ ಯತ್ನಗಳು ಹಲವೆಡೆ ನಡೆದಿವೆ. ಬೆಂಗಳೂರಿನಲ್ಲಿ ನೀರಿನ ಕೊರತೆ ಇದ್ದರೆ ಖಾಸಗಿ ಸಂಸ್ಥೆಗಳು ಇಂಥ ಕೊಳವೆ ಬಾವಿಗಳಿಂದಲೇ ನೀರು ಎತ್ತುತ್ತವೆ; ದುಬಾರಿ ಬೆಲೆಗೆ ಮಾರುತ್ತವೆ. ಜಲ ನಮ್ಮ ರಾಷ್ಟ್ರೀಯ ಸಂಪತ್ತು. ಅದನ್ನು ಖಾಸಗೀಕರಣಗೊಳಿಸುವುದೇ ಒಂದು ಅಪರಾಧ. ಅದರ ಜೊತೆಗೆ ಅಲಾಸ್ಕಾದಿಂದ ನೀರು ತಂದು ಕುಡಿಯುವುದು ಎಂದರೆ….? ನಮ್ಮಲ್ಲಿ ಇರುವ ಸಾಧ್ಯತೆಗಳು ಕೊನೆಗೊಳ್ಳುವರೆಗೂ ಇಂಥ ಸಂಭಾವ್ಯತೆಯ ಬಗ್ಗೆ ಯೋಚಿಸುವುದು ಎಷ್ಟು ಸರಿ?
ನೀರಿನ ಸಮಸ್ಯೆಗೆ ನದೀಜೋಡಣೆಯೇ ಪರಿಹಾರ ಎಂಬ ಸ್ವದೇಶಿ ಚಿಂತನೆಯೊಂದು ನಮ್ಮಲ್ಲೀಗ ಬಲವಾಗಿದೆ. ಆದರೆ ಅದು ಎಷ್ಟು ಅಪಾಯಕಾರಿ ಎಂಬ ಕಲ್ಪನೆಯೂ ಅಂಥ ಅಭಿಯಾಣಿಗಳಿಗೆ ಇಲ್ಲದಿರುವುದು ಶೋಚನೀಯ. ಪ್ರಕೃತಿಯನ್ನು ಮೀರಿ ನಾವೇನೂ ಮಾಡಲಾರೆವು; ಪ್ರಕೃತಿಯು ರೂಪಿಸಿದ ಜೀವ ಸಂತುಲನ ವ್ಯವಸ್ಥೆಯನ್ನು ಹಾಳು ಮಾಡುವುದಕ್ಕೆ ನಮಗೆ ಹಕ್ಕಿಲ್ಲ ಎಂದು ನಾವು ತಿಳಿದುಕೊಳ್ಳುವವರೆಗೂ ಇಂಥ ಕಲ್ಪನೆಗಳಿಗೆ ಸ್ಕೋಪ್ ಇದ್ದೇ ಇರುತ್ತದೆ.
ಎಸ್೨ಸಿ ಸಂಸ್ಥೆಯ ಹೇಳಿಕೆಯಿಂದ ನಮ್ಮ ದೇಶದ ನೀರಿನ ಸಮಸ್ಯೆಯ ಬಗ್ಗೆ ಚರ್ಚೆ ಎದ್ದರೆ ಒಳ್ಳೇದೇ.

ಭಾನುವಾರ, ಅಕ್ಟೋಬರ್ 10, 2010

ನೀರು “ಸ್ವರ್ಗದ ಹಾದಿ”

 ಶುಚಿ ಗೊಳಿಸಲು ನೀರು ಅಗತ್ಯವಾಗಿದೆ. ಇಸ್ಲಾಂ ನೀರನ್ನು ಶುಚಿ ಗೊಳಿಸುವ ಒಂದು ಸಾಧನವನ್ನಾಗಿ ಮಾಡಿದೆ. ನಮಾಝ್ ನಿರ್ವಹಿಸುವವರು ಎಲ್ಲ ರೀತಿಯ ಅಶುದ್ಧಿಗಳಿಂದ ಶುದ್ಧವಾಗಿರಬೇಕು ಮತ್ತು ಈ ಅಶುದ್ಧಿಗಳನ್ನು ನೀರಿನಿಂದ ಶುದ್ಧಗೊಳಿಸಬೇಕು. ನೀರನ್ನು 4 ವಿಧಗಳಲ್ಲಿ ವಿಂಗಡಿಸಬಹುದು.

1. ತಹೂರ್ 2. ತಾಹಿರ್ 3. ಮುತನಜ್ಜಿಸ್ 4. ಮುಸ್ತಅಮಲ್
1. ತಹೂರ್ ನೀರು : ತಹೂರ್ ಎಂದರೆ ಶುದ್ಧ ನೀರು ಮಾತ್ರವಲ್ಲ ಇತರ ವಸ್ತುಗಳನ್ನು ಶುದ್ಧಗೊಳಿಸಲು ಸಾಮರ್ಥ್ಯ ಹೊಂದಿರುವ ನೀರು.

ಉದಾ: ಸಮುದ್ರದ ನೀರು, ನದಿಗಳ ನೀರು, ನಲ್ಲಿ ನೀರು, ಕಾರಂಜಿಯ ನೀರು, ಕೆರೆಯ ನೀರು, ಮಳೆಯ ನೀರು, ಬಾವಿಯ ನೀರು ಇತ್ಯಾದಿ
2. ತಾಹಿರ್ ನೀರು : ತಾಹಿರ್ ಸ್ವತಃ ಶುದ್ಧವಿರುವ ನೀರು. ಆದರೆ ಇತರ ವಸ್ತುಗಳನ್ನು ಶುದ್ಧಗೊಳಿಸಲು ಸಾಮರ್ಥ್ಯವಿಲ್ಲದ ನೀರು. ಉದಾ: ಸೀಯಾಳದ ನೀರು, ಚಹಾ, ಶರಬತ್ತು ಇತ್ಯಾದಿ
3 . ಮುತನಜ್ಜಿಸ್ ನೀರು : ಎಂದರೆ ಮಲಿನ ಗೊಂಡ ನೀರು ಎಂದರ್ಥ. ಶುದ್ಧ ನೀರಿಗೆ ಯಾವುದೇ ಮಾಲಿನ್ಯ ಬಿದ್ದು ನೀರಿನ ನಿಜ ರೂಪದಲ್ಲಿ ವ್ಯತ್ಯಾಸ ಉಂಟಾದರೆ ಅದನ್ನು ಮುತನಜ್ಜಿಸ್ ನೀರು ಎನ್ನುತ್ತಾರೆ.
4. ಮುಸ್ತಅಮಲ್ ನೀರು : ಒಮ್ಮೆ ವುಝೂ ಅಥವಾ ಸ್ನಾನಕ್ಕಾಗಿ ಉಪಯೋಗಿಸಿದ ನೀರು. ಅದನ್ನು ಪುನಃ ಅದೇ ಉದ್ದೇಶಕ್ಕಾಗಿ ಬಳಸ ಬಾರದು. ಮೇಲಿನ ನಾಲ್ಕು ವಿಧದ ನೀರಿನಲ್ಲಿ ಮೊದಲ ಎಂದರೆ ತಹೂರ್ ನೀರಿನಿಂದ ಮಾತ್ರ ವುಝೂ ಅಥವಾ ಸ್ನಾನ ಮಾಡಬಹುದು. ಎಂದೆ ಶುದ್ದಿ ಗಳಿಸಬಹುದು. ಇತರ ಯಾವುದೇ ವಿಧದ ನೀರಿನಿಂದ ಮಾಡಿದ ವುಝೂ ಅಥವಾ ಸ್ನಾನ ಸಿಂಧುವಾಗುವುದಿಲ್ಲ. ಮುತನಜ್ಜಿಸ್ ನೀರನ್ನು ಬಿಟ್ಟು ಇತರ ನೀರು ಬೇರೆ ಅವಶ್ಯತೆಗಳಿಗೆ ಉಪಯೋಗಿಸ ಬಹುದು . ಏಕೆಂದರೆ ಆ ನೀರು ಶುದ್ಧವಾಗಿಯೇ ಇರುತ್ತದೆ.
ನೀರಿನ ಇನ್ನೆರಡು ವಿಧಗಳು:ನೀರು ತಹೂರ್ ಮತ್ತು ಮುತನಜ್ಜಿಸ್ ಎಂದು ಬೇರ್ಪಡಿಸಲು ನೀರನ್ನು ಎರಡು ವಿಧಗಳಲ್ಲಿ ವಿಂಗಡಿಸಬಹುದು.
1. ಅಲ್-ಮಾಉಲ್ ಕಲೀಲ್ (ಕಡಿಮೆ ನೀರು)
2. ಅಲ್-ಮಾಉಲ್ ಕಸೀರ್ (ಹೆಚ್ಚು ನೀರು)
'ಎರಡು ಕುಲ್ಲತ್' ಗಿಂತ ಕಡಿಮೆ ಇದ್ದರೆ ಅದನ್ನು ಆಲ್-ಮಾಉಲ್ ಕಲೀಲ್ (ಕಡಿಮೆ ನೀರು) ಮತ್ತು 'ಎರಡು ಕುಲ್ಲತ್' ಗಿಂತ ಹೆಚ್ಚು ಇದ್ದರೆ ಅದನ್ನು ಆಲ್-ಮಾಉಲ್ ಕಸೀರ್ (ಹೆಚ್ಚು ನೀರು)ಎನ್ನುತ್ತಾರೆ.
ಒಂದು ಕಾಲು ಮೊಳ ಉದ್ದ ಒಂದು ಕಾಲು ಮೊಳ ಅಗಲ ಮತ್ತು ಒಂದು ಕಾಲು ಮೊಳ ಆಳದ ಹೊಂಡದಲ್ಲಿ ಹಿಡಿಯುವಷ್ಟು ನೀರನ್ನು 'ಎರಡು ಕುಲ್ಲತ್' ನೀರು ಎನ್ನುತ್ತಾರೆ. ಸುಮಾರು ಇನ್ನೂರು ಲೀಟರಿನಷ್ಟು.
'ಎರಡು ಕುಲ್ಲತ್' ಗಿಂತ ಕಡಿಮೆ ನೀರಿನಲ್ಲಿ (ಅಲ್-ಮಾಉಲ್ ಕಲೀಲ್) ಮಾಲಿನ್ಯ ಬಿದ್ದರೆ ಮತ್ತು ನೀರಿನ ಗುಣಗಳಲ್ಲಿ ವ್ಯತ್ಯಾಸ ಉಂಟಾಗದಿದ್ದರೂ ಆ ನೀರು ' ಮುತನಜ್ಜಿಸ್' (ಅಶುದ್ಧ) ಆಗುತ್ತದೆ.
ನೀರು 'ಎರಡು ಕುಲ್ಲತ್' ಗಿಂತ ಹೆಚ್ಚಿದ್ದು (ಅಲ್-ಮಾಉಲ್ ಕಸೀರ್)ಅದರಲ್ಲಿ ಮಾಲಿನ್ಯ ಬಿದ್ದು ನೀರಿನ ಗುಣಗಳಲ್ಲಿ ವ್ಯತ್ಯಾಸ ಉಂಟಾದರೆ ಆ ನೀರು ಕೂಡಾ ' ಮುತನಜ್ಜಿಸ್' (ಅಶುದ್ಧ) ಆಗುತ್ತದೆ. ಅಲ್-ಮಾಉಲ್ ಕಸೀರ್ ನಲ್ಲಿ ಮಾಲಿನ್ಯ ಬಿದ್ದರೂ ನೀರಿನ ಗುಣಗಳಲ್ಲಿ(ವಾಸನೆ, ರುಚಿ ಮತ್ತು ಬಣ್ಣ)ವ್ಯತ್ಯಾಸ ಆಗದಿದ್ದರೆ ಅದರಿಂದ ವುಝೂ ಮತ್ತು ಸ್ನಾನ ಮಾಡಬಹುದು. ಆ ನೀರು ಮುತನಜ್ಜಿಸ್ ಆಗಿರುವುದಿಲ್ಲ.

ಶನಿವಾರ, ಅಕ್ಟೋಬರ್ 9, 2010

ಜಲ ಸಂರಕ್ಷಣೆ

ಇಂದು ಎಲ್ಲೆಡೆಯೂ ಜಲಸಂರಕ್ಷಣೆಯ ಮಾತು ಕೇಳಿಬರುತ್ತಿದೆ. ಜಲಸಂರಕ್ಷಣೆ ಎಂದರೇನು? ಮುಂದಿನ ಪೀಳಿಗೆಗಳೂ ನಮ್ಮ ಹಾಗೆಯೇ ನೀರನ್ನು ಬಳಸುವುದಕ್ಕೆ ಅವಕಾಶ ಮಾಡಿಕೊಡುವುದೇ ಜಲಸಂರಕ್ಷಣೆ ಎಂದು ಸರಳವಾಗಿ ಹೇಳಬಹುದು.
ಜಲಸಂರಕ್ಷಣೆ ಯಾಕೆ ಬೇಕು? ನಮ್ಮ ಬದುಕಿನಲ್ಲಿ ನೀರಿಲ್ಲದೆ ಏನನ್ನೂ ಮಾಡಲಾಗುವುದಿಲ್ಲ. ಇಂಥ ನೀರೇ ಸಿಗದೆ ಹೋದರೆ ಬದುಕು ಬರಡಾಗುತ್ತದೆ. ನೀರಿಗಾಗಿ ಇಂದು ಎಲ್ಲೆಡೆ ಹಾಹಾಕಾರ ಕೇಳಿಬರುತ್ತಿದ. ನಗರಗಳಲ್ಲಿ ನೀರಿನ ಸರಬರಾಜು ಅಸ್ತವ್ಯಸ್ತವಾಗುತ್ತಿದೆ. ಹಳ್ಳಿಗಳಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ. ಇನ್ನು ಹೊಲಗದ್ದೆಗಳಿಗೆ ಬೇಕಾದ ನೀರಂತೂ ಸಿಗುವುದೇ ಕಷ್ಟವಾಗಿದೆ.
ಹಾಗೆಂದು ನೀರು ಹೆಚ್ಚಾಗುತ್ತಲೂ ಇಲ್ಲ; ಕಡಿಮೆಯೂ ಆಗುವುದಿಲ್ಲ. ಭೂಮಿಯ ನೀರಿನ ಪ್ರಮಾಣ ಕಡಿಮೆಯಾಗದಿದ್ದರೂ, ನೀರು ಸಿಗದೆ ಹೋಗುತ್ತದೆ; ಬರಗಾಲ ಹೆಚ್ಚಾಗುತ್ತದೆ. ಆದ್ದರಿಂದಲೇ ಜಲಸಂರಕ್ಷಣೆಗೆ ಮಹತ್ವ ಬಂದಿದೆ.
ಜಲಸಂರಕ್ಷಣೆಯಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಮುಖ್ಯವಾದವು ಮಳೆನೀರು ಸಂಗ್ರಹ ಮತ್ತು ಛಾವಣಿ ನೀರು ಸಂಗ್ರಹ. ವರ್ಷದಲ್ಲಿ ಮೂರ್‍ನಾಲ್ಕು ತಿಂಗಳುಗಳ ಕಾಲ ಬೀಳುವ ಮಳೆನೀರನ್ನು ಸಂಗ್ರಹಿಸಿದರೆ ಇಡೀ ವರ್ಷವೂ ನೀರಿನ ಸಮಸ್ಯೆ ಇಲ್ಲದೆ ಬಾಳಬಹುದು. ಈಗಾಗಲೇ ದೇಶದ ಹಲವು ನಗರ - ಹಳ್ಳಿಗಳಲ್ಲಿ ಈ ಪ್ರಯೋಗವು ಯಶಸ್ವಿಯಾಗಿ ನಡೆದಿದೆ. ಇದನ್ನು ಮಳೆ ಕೊಯ್ಲು ಎಂದು ಕರೆಯುತ್ತಾರೆ.
ಕೇವಲ ನೀರಿನ ಸಂಗ್ರಹವೇ ಜಲಸಂರಕ್ಷಣೆ ಆಗುವುದಿಲ್ಲ. ನಮ್ಮ ಮನೆಗಳಲ್ಲಿ ಬಳಸುವ ನೀರಿನ ಮಿತವ್ಯಯದ ಬಗ್ಗೆ ಗಮನ ಕೊಡುವುದು, ನೀರು ಪೋಲಾಗದಂತೆ ಎಚ್ಚರ ವಹಿಸುವುದು, ಸಾರ್ವಜನಿಕ ಜಲ ಸರಬರಾಜು ವ್ಯವಸ್ಥೆಗಳಲ್ಲಿ ನೀರು ವ್ಯರ್ಥವಾಗದಂತೆ ನೋಡಿಕೊಳ್ಳುವುದು, ನೀರು ಬಳಕೆಯ ಬಗ್ಗೆ ನಿರಂತರವಾಗಿ ಜನಜಾಗೃತಿ ಮಾಡುವುದು - ಇವೆಲ್ಲವೂ ಜಲಸಂರಕ್ಷಣೆಯ ವಿವಿಧ ಮಾರ್ಗಗಳು.
ಇಂದು ಜಲಸಂರಕ್ಷಣೆಯ ಚಳವಳಿ ವ್ಯಾಪಕವಾಗಿ ಹಬ್ಬಿದೆ. ಕರ್ನಾಟಕದಲ್ಲಿ ನೀರಿನ ಬಗ್ಗೆ ಶ್ರೀ ಪಡ್ರೆಯವರು ಮಾಡುತ್ತಿರುವ ಜಾಗೃತಿಯಿಂದಾಗಿ ಸಾರ್ವಜನಿಕರು ಈ ಬಗ್ಗೆ ಗಮನ ನೀಡುತ್ತಿದ್ದಾರೆ. ಪತ್ರಿಕೆಗಳಲ್ಲಿ ಈ ಬಗ್ಗೆ ಉತ್ತಮ ಲೇಖನಗಳು ಬರುತ್ತಿವೆ. ನೀರನ್ನು ಸಂರಕ್ಷಿಸುವ ಬಗ್ಗೆ ಜನಜಾಗೃತಿ ಮಾಡಿದ ವ್ಯಕ್ತಿಗಳಿಗೆ ಸಮಾಜದ ಮಾನ್ಯತೆ ಸಿಗುತ್ತಿದೆ. ಇಷ್ಟಾಗಿಯೂ ಜಲಸಂರಕ್ಷಣೆಯ ಬಗ್ಗೆ ಉಚ್ಚ ಸ ಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ. ಸಮಾಜದ ಎಲ್ಲ ವರ್ಗಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿದಾಗಲೇ ಜಲಸಂರಕ್ಷಣೆಯು ನಿಜವಾಗಿ ಜಾರಿಯಾಗುತ್ತದೆ. ಸಮಾಜವು ಹಸನಾಗುತ್ತದೆ.

ಗುರುವಾರ, ಅಕ್ಟೋಬರ್ 7, 2010

ನೀರನ್ನು ನಾವು ಉಳಿಸಿದರೆ, ಮುಂದೆ ಅದು ನಮ್ಮನ್ನುಳಿಸಬಹುದು


ಕಾಂಬೋಡಿಯಾ, ಕೀನ್ಯಾದಂಥ ರಾಷ್ಟ್ರಗಳಲ್ಲಿ ಮಾತ್ರವಲ್ಲ ಬೆಂಗಳೂರಿನಂಥ ಬೆಂಗಳೂರೇ ನೀರಿನ ಭೀಕರ ಕೊರತೆ ಎದುರಿಸುವ ದಿನ ದೂರವಿಲ್ಲ. ನೀರಿನಂತೆ ಹರಿದುಬರುತ್ತಿರುವ ಸುತ್ತಲಿನ ರಾಜ್ಯಗಳ ಜನ, ಬರಿದಾಗುತ್ತಿರುವ ಹಳ್ಳಿಗಳು, ನಗರದ ಕೆರೆಗಳು ನೀರಿನ ಒರತೆಯನ್ನು ಒರೆಸಿಹಾಕುತ್ತಿವೆ. ಹಾಗಾದರೆ, ನೀರನ್ನು ಉಳಿಸುವುದೊಂದೇ ಇದಕ್ಕೆ ಪರಿಹಾರವಾ? ಸಮಸ್ಯೆ ಇನ್ನಷ್ಟು ಕ್ಲಿಷ್ಟವಾಗುತ್ತಾ ಸಾಗುತ್ತಿದೆ. ಇದಕ್ಕೆ ಮಾರ್ಗೋಪಾಯಗಳೇನು ?

ಇತ್ತೀಚಿಗೆ ಯಾವುದೋ ಡಾಕ್ಯುಮೆಂಟರಿ ನೋಡುತ್ತಿದ್ದೆ. ಅದು, ಕಾಂಬೋಡಿಯಾ, ಕೀನ್ಯಾ ದೇಶಗಳ ಕುರಿತಾಗಿದ್ದು. ಅದರಲ್ಲಿ ನೋಡಿದ ಪ್ರಕಾರ, ಅಲ್ಲಿನ ಜನರ ಬರಗಾಲದಿಂದ ತತ್ತರಿಸುತ್ತಿದ್ದಾರೆ. ನೀರೇ ಇಲ್ಲದೆ ಇಲ್ಲಿನ ಭೂಮಿ ಬಾಯ್ಬಿಟ್ಟಿದೆ. ಎಲ್ಲಿ ನೋಡಿದರಲ್ಲಿ ಬಿಸಿಲ ಧಗೆ, ನೀರ ಹುಡುಕಾಟದಲ್ಲಿರುವ ಜನರು ಮತ್ತು ಪ್ರಾಣಿಗಳು. ಭೂಮಿಯ ಆಳದ ಅಂತರ್ಜಲ ಬತ್ತಿ ಬರಿದಾಗಿದೆ. ನೀರೇ ಇಲ್ಲವಾದ್ದರಿಂದ ಯಾವುದೇ ಬೆಳೆಯನ್ನೂ ಬೆಳೆಯಲು ಸಾಧ್ಯವಾಗುತ್ತಿಲ್ಲ. ಜನರು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ನೀರಿಲ್ಲದೆಯೂ ಬೆಳೆಯಬಲ್ಲ ವಿಷಜಾತಿಗೆ ಸೇರಿದ ಗಡ್ಡೆಗಳನ್ನು ತಿನ್ನುತ್ತಿದ್ದಾರೆ. ಈ ವಿಷಕಾರಿ ಗಡ್ಡೆ ಅವರ ಜೀವಕ್ಕೆ ಅಪಾಯವನ್ನು ತರಬಲ್ಲದು. ಆದರೆ ಅದನ್ನು ತಿನ್ನದಿದ್ದರೆ ಆ ಜನರು ಹಸಿವಿನಿಂದ ನರಳುತ್ತಾ ಸಾಯುಬೇಕಾಗುತ್ತದೆ. ಹಾಗಾಗಿ ಅವರು ಇದನ್ನೇ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಹೀಗಿದೆ ಇವರ ಬದುಕಿನ ಸ್ಥಿತಿ.

ಇಂದು ನಗರಗಳು ಅತೀ ವೇಗವಾಗಿ ಬೆಳೆಯುತ್ತಿವೆ. ಆಧುನೀಕರಣ, ನಗರೀಕರಣ, ಕೈಗಾರಿಕೀಕರಣಗಳು ನಮ್ಮ ನೈಸರ್ಗಿಕ ಸಂಪತ್ತಿನ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಕಾರ್ಖಾನೆಗಳ ಮತ್ತಿತರ ತ್ಯಾಜ್ಯ ವಸ್ತುಗಳನ್ನು ನೇರವಾಗಿ ನದಿಗಳಿಗೆ ಬಿಡುವುದರಿಂದ ನೀರು ಕಲುಷಿತಗೊಳ್ಳುತ್ತಿದೆ. ಬೆಂಗಳೂರಿನಂತಹ ಬೃಹತ್ ನಗರದಲ್ಲಿ ದಿನೇ ದಿನೇ ಜನಸಂಖ್ಯೆ ಮಿತಿ ಮೀರಿ ಹೆಚ್ಚುತ್ತಿದ್ದು ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಅಪಾಯದ ಮಟ್ಟವನ್ನು ದಾಟುತ್ತಿದೆ. ಸಂಶೋಧನೆಯೊಂದರ ಪ್ರಕಾರ, ಇಂದು ಜಗತ್ತಿನಾದ್ಯಂತ ಸುಮಾರು ಒಂದು ಬಿಲಿಯನ್ ಜನರು ಸ್ವಚ್ಛ ಕುಡಿಯುವ ನೀರು ಸಿಗದೆ ನರಳಾಡುತ್ತಿದ್ದಾರೆ. ಒಂದು ವೇಳೆ ಪರಿಸ್ಥಿತಿ ಹೀಗೆಯೇ ಮುಂದುವರೆದರೆ 2025 ವೇಳೆಗೆ ಈ ಸಂಖ್ಯೆ 2.3 ಬಿಲಿಯನ್ ತಲುಪುತ್ತದೆ.

ಬೆಂಗಳೂರನ್ನು ಉದಾಹರಣೆಗೆ ತೆಗೆದುಕೊಂಡರೆ ಇಲ್ಲಿನ ನೀರಿನ ಅತಿದೊಡ್ಡ ಮೂಲ ನೂರು ಕಿಲೋಮೀಟರ್ ದೂರದಲ್ಲಿರುವ ಕಾವೇರಿ ನದಿ. ಪ್ರತಿನಿತ್ಯ ಲಕ್ಷಾಂತರ ಲೀಟರ್ ನೀರನ್ನು ಕಾವೇರಿ ನದಿಯಿಂದ ಇಲ್ಲಿಗೆ, ವಾರ್ಷಿಕ 350ರಿಂದ 400 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸರಬರಾಜು ಮಾಡಲಾಗುತ್ತದೆ. ಇಲ್ಲಿನ ಮತ್ತೆರಡು ಪ್ರಮುಖ ಮೂಲಗಳೆಂದರೆ ತಿಪ್ಪಗೊಂಡನ ಹಳ್ಳಿ ಜಲಾಶಯ ಮತ್ತು ಅಂತರ್ಜಲ. ಆದರೆ ಇತ್ತೀಚಿನ ದಿನಗಳಲ್ಲಿ ತಿಪ್ಪಗೊಂಡನ ಹಳ್ಳಿ ಜಲಾಶಯದ ನೀರು ಗಣನೀಯವಾಗಿ ಕಡಿಮೆ ಆಗುತ್ತಿದ್ದು, ಮುಂದೊಂದು ದಿನ ಒಣಗಿ ಹೋಗುವ ಸಾಧ್ಯತೆ ಇದೆ. ಇನ್ನು ಅಂತರ್ಜಲದ ಮಟ್ಟವಂತೂ ದಿನೇ ದಿನೇ ಕುಸಿಯುತ್ತಿದೆ. ಇಡೀ ಬೆಂಗಳೂರಿನ ಜನರು ಕೇವಲ ಒಂದೇ ಕಾವೇರಿ ನದಿಯ ನೀರಿನ ಮೇಲೆ ಅವಲಂಬಿತರಾದರೆ, ಆ ನದಿ ಹೆಚ್ಚು ದಿನ ಆಸರೆ ನೀಡಲು ಸಾಧ್ಯವಿಲ್ಲ.

ಹಿಂದೆ ಬೆಂಗಳೂರು ಹಾಗೂ ಸುತ್ತಮುತ್ತ ಸುಮಾರು 200ಕ್ಕೂ ಹೆಚ್ಚು ದೊಡ್ಡ ಕೆರೆಗಳಿದ್ದವು. ಆದರೆ ಬೆಂಗಳೂರು ಬೆಳೆದಂತೆಲ್ಲಾ ಕೆರೆಗಳ ಸಂಖ್ಯೆ ಕಡಿಮೆ ಆಗುತ್ತಾ ಬಂತು. ಇತ್ತೀಚಿನ ವರದಿಯೊಂದರ ಪ್ರಕಾರ ಇಂದು ಕೇವಲ 81 ಕೆರೆಗಳು ಮಾತ್ರ ಉಳಿದಿವೆ. ಅಂದರೆ ಉಳಿದ 119 ಕೆರೆಗಳನ್ನು ಬೆಂಗಳೂರು ನುಂಗಿಬಿಟ್ಟಿದೆ.

ಅಂಕಿ ಅಂಶವೊಂದರ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 50,000ಕ್ಕೂ ಹೆಚ್ಚು ಮಕ್ಕಳು ತಮ್ಮ 5ನೇ ವರ್ಷ ದಾಟುವುದರೊಳಗಾಗಿ ಸಾಯುತ್ತಿದ್ದಾರೆ. ಇದಕ್ಕೆ ಕಾರಣ ಕಲುಷಿತ ನೀರಿನಿಂದ ಉಂಟಾಗುವ ಬೇಧಿ, ಜಠರ-ಕರುಳುಗಳ ಉರಿಯೂತ, ಹೆಪಟೈಟಿಸ್ ನಂತಹ ರೋಗಗಳು. ನಮ್ಮ ದೇಶದಲ್ಲಿ ಇಂದು ಸುಮಾರು 224 ದಶಲಕ್ಷ ಜನರು ನೀರಿನ ಕೊರತೆ ಎದುರಿಸುತ್ತಿದ್ದಾರೆ.

ಭೂಮಿಯ ಮೂರನೇ ಎರಡು ಭಾಗ ನೀರಿನಿಂದಾವೃತವಾಗಿದೆ. ಆದರೆ, ಈ ಎಲ್ಲಾ ನೀರೂ ಬಳಕೆಗೆ ಯೋಗ್ಯವಲ್ಲ. ಭೂಮಿಯ ಒಟ್ಟು ನೀರಿನ ಸೆಲೆಯ 3 ಶೇಕಡಾ ಮಾತ್ರ ಸಿಹಿನೀರು ಲಭ್ಯ. ಸಿಹಿನೀರಿನ 30 ಶೇಕಡಾ ಪಾಲು ಅಂತರ್ಜಲದಿಂದ ದೊರೆತರೆ, 0.3 ಶೇಕಡಾ ಪಾಲು ನದಿ, ಕೆರೆ, ಮತ್ತಿತರ ಮೂಲಗಳಿಂದ ದೊರೆಯುತ್ತದೆ. ಉಳಿದ ಸಿಂಹಪಾಲು ಮಂಜುಗಡ್ಡೆಗಳ ರೂಪದಲ್ಲಿದ್ದು, ಅವುಗಳ ಬಳಕೆ ಕಷ್ಟ.

ನೀರಿನ ಅತಿಯಾದ ಬೇಡಿಕೆ, ಅಂತರ್ಜಲವನ್ನು ಹೆಚ್ಚು ಹೆಚ್ಚು ಉಪಯೋಗಿಸುವಂತೆ ಮಾಡುತ್ತಿದೆ. ಇದು, ನೀರಿನ ಎಲ್ಲ ಮೂಲಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಭೂಮಿಯೊಳಗೆ ಇಂಗುವ ನೀರಿಗಿಂತ ಅಲ್ಲಿಂದ ಹೊರತೆಗೆಯುವ ನೀರಿನ ಪ್ರಮಾಣವೇ ಹೆಚ್ಚಾಗಿರುವುದು ಅಂತರ್ಜಲದ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದಕ್ಕೆ ಕಾರಣ. ಅಂತರ್ಜಲದ ಅಭಾವದಿಂದಾಗಿ ಬೆಂಗಳೂರಿನಂತಹ ಮಹಾ ನಗರಗಳಲ್ಲಿ ನೀರಿನ ಬೆಲೆ ಏರುತ್ತಿದೆ. ನೀರಿನ ಸಮಸ್ಯೆ ಹೀಗೆಯೇ ಮುಂದುವರೆದರೆ ದೇಶಾದ್ಯಂತ ಜಲಕ್ಷಾಮ ತಲೆದೂರುವ ಅಪಾಯವಿದೆ. ಬೃಹತ್ ನಗರಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ, ಅಪಾರ್ಟ್ ಮೆಂಟ್ ಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿವೆ. ಒಂದೊಂದು ಕಟ್ಟಡಕ್ಕೂ ಹತ್ತಾರು ಬೋರ್ ವೆಲ್ ಗಳನ್ನು ಕೊರೆಯಲಾಗುತ್ತಿದೆ. ಬೆಂಗಳೂರಿನಲ್ಲೇ ಪ್ರತಿ ದಿನ ಸುಮಾರು 290 ಮಿಲಿಯನ್ ಲೀಟರ್ ಅಂತರ್ಜಲವನ್ನು ಹೊರ ತೆಗೆಯಲಾಗುತ್ತಿದೆ.

ಅನಿಯಂತ್ರಿತವಾಗಿ ನೀರನ್ನು ಹೊರತೆಗೆಯುವುದರಿಂದ ಅಂತರ್ಜಲದ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಹಲವಾರು ಕಡೆಗಳಲ್ಲಿ ಅಂತರ್ಜಲ 1000ದಿಂದ 1500 ಅಡಿಗಳಷ್ಟು ಆಳಕ್ಕೆ ಇಳಿದಿದೆ. ನಿರ್ದಿಷ್ಟ ಮಟ್ಟಕ್ಕಿಂತ ಆಳದಲ್ಲಿರುವ ನೀರಿನ ಬಳಕೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.

ನೀರಿನ ಕುರಿತು ಒಂದಿಷ್ಟು ಮಾಹಿತಿ:
* ನಮ್ಮ ದೇಹದಲ್ಲಿನ ನೀರಿನ ಪ್ರಮಾಣ, ನಿಗದಿತ ಪ್ರಮಾಣಕ್ಕಿಂತ 20 ಶೇಕಡಾ ಕಡಿಮೆಯಾದರೆ ನಾವು ಸಾಯುತ್ತೇವೆ.
* ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು ಸರಾಸರಿ ಹದಿನಾಲ್ಕು ಲಕ್ಷ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಸಾಯುತ್ತಿದ್ದಾರೆ.
* ನಮ್ಮ ದೇಶದ ಒಂದು ಲಕ್ಷದ ನಲವತ್ತೆಂಟು ಸಾವಿರ ಹಳ್ಳಿಗಳಲ್ಲಿ ಕುಡಿಯುವ ನೀರಿನ ಮೂಲಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ.
* ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ವಿಶ್ವದ ಅರ್ಧದಷ್ಟು ಜನರು ಶುದ್ಧ ಕುಡಿಯುವ ನೀರಿನ ಕೊರತೆಯಿಂದಾಗಿ ನೀರಿಗೆ ಸಂಬಂಧಿಸಿದ ಹಲವು ಕಾಯಿಲೆಯಿಂದ ಬಳಲುತ್ತಿದ್ದಾರೆ.
* ನೀರಿನ ಸಮಸ್ಯೆ ಹೀಗೆಯೇ ಮುಂದುವರೆದರೆ 2025ನೇ ಇಸ್ವಿಯ ವೇಳೆಗೆ ವಿಶ್ವಾದ್ಯಂತ ಸುಮಾರು 270 ಕೋಟಿ ಜನರು ನೀರಿಗಾಗಿ ಹಗಲಿರುಳೂ ಪರದಾಡುವ ಪರಿಸ್ಥಿತಿ ಬರಬಹುದು.

ಪರಿಸ್ಥಿತಿ ಹೀಗಿರುವಾಗ ಮನೆಯ ನಲ್ಲಿಯಿಂದ ಒಂದೊಂದೇ ಹನಿ ಸೋರುತ್ತಿದ್ದರೂ ಆ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಪ್ರತಿ ನಿಮಿಷಕ್ಕೆ ಒಂದು ಹನಿ ನೀರು ಪೋಲಾಗುತ್ತಾ ಹೋದರೆ, ಒಂದು ವರ್ಷಕ್ಕೆ ಸುಮಾರು 45,000 ಲೀಟರ್ ನೀರು ಸೋರಿ ಹೋಗುತ್ತದೆ. ಈ ನೀರಿನಲ್ಲಿ ಒಬ್ಬ ಮನುಷ್ಯ ಸುಮಾರು 15 ತಿಂಗಳ ಕಾಲ ಬದುಕಬಹುದು. ಆದ್ದರಿಂದ ಹನಿ ಹನಿ ನೀರಿಗೂ ಅದರದ್ದೇ ಆದ ಮಹತ್ವವಿದೆ. ನೀರುಳಿಸಿ ನೋಡೋಣ,ಮುಂದೆ ಅದು ನಮ್ಮನ್ನುಳಿಸಬಹುದು.

ಶುಕ್ರವಾರ, ಅಕ್ಟೋಬರ್ 1, 2010

ರೈತಸ್ನೇಹಿ ಜೈವಿಕ ಕೀಟನಾಶಕ

ತರಕಾರಿ ಬೆಳೆಗಳಿಗೆ ಬರುವ ರೋಗಗಳನ್ನು ನಿಯಂತ್ರಿಸುತ್ತಲೇ ಮಣ್ಣಿನ ಫಲವತ್ತತೆ ಯನ್ನು ಕಾಪಾಡಿಕೊಳ್ಳುವ ಜೈವಿಕ ಕೀಟನಾಶಕವೊಂದನ್ನು ಮೈಸೂರಿನ ಹೆಬ್ಬಾಳ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಸಂಶೋಧನಾ ಕೇಂದ್ರ ರೂಪಿಸಿದೆ.
ಟೊಮೊಟೊ, ಮೆಣಸಿನಕಾಯಿ, ಕಬ್ಬು, ಬದನೆ, ಹೂ ಕೋಸು, ಎಲೆ ಕೋಸು ಮೊದಲಾದ ಬೆಳೆಗಳನ್ನು ಬೆಳೆಯುವ ಮೈಸೂರು ಹಾಗೂ ಸುತ್ತಮುತ್ತಲಿನ ರೈತರ ಮೊಗದಲ್ಲಿ ಈಗ ಸ್ವಲ್ಪ ನೆಮ್ಮದಿಯ ಭಾವವನ್ನು ಗುರುತಿಸಬಹುದು. ಈ ರೈತರು ಉತ್ತಮ ಇಳುವರಿ ಪಡೆಯುವುದರ ಜೊತೆಗೆ ಮಣ್ಣಿನ ಫಲವತ್ತತೆ ಮಟ್ಟವನ್ನು ಕಾಯ್ದುಕೊಳ್ಳುತ್ತಿದ್ದಾರೆ. ರಾಸಾಯನಿಕ ಕೀಟನಾಶಕಗಳನ್ನು ಬಳಸದೆ ಕೇವಲ ಜೈವಿಕ ಕೀಟನಾಶಕಗಳನ್ನು ಬಳಸಿ ಪರಿಸರ ಸ್ನೇಹಿ ಬೇಸಾಯ ಮಾಡುತ್ತಿದ್ದಾರೆ.
ಕರ್ನಾಟಕ ತೋಟಗಾರಿಕೆ ಇಲಾಖೆ ಅನುಮೋದಿಸಿರುವ ಪೋನಾಲ್ಯಾಬ್ (ಬಯೋಕಂಟ್ರೋಲ್ ಲ್ಯಾಬ್) ಭಾರತ ಸರ್ಕಾರ, ರಾಷ್ಟ್ರೀಯ ತೋಟಗಾರಿಕೆ ಮಿಷನ್‌ನಿಂದ ಮಾನ್ಯತೆ ಪಡೆದಿದೆ. ಮೈಸೂರಿನ ಹೆಬ್ಬಾಳ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ತಲೆ ಎತ್ತಿರುವ ಈ ಸಂಶೋಧನಾ ಕೇಂದ್ರ ನಿತ್ಯ ಬಳಕೆಯ ತರಕಾರಿ ಗಿಡಗಳು, ಪ್ಲಾಂಟೇಶನ್ ಹಾಗೂ ದ್ವಿದಳ ಧಾನ್ಯ ಸಸ್ಯಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವ ಸಸ್ಯ ಫಂಗಲ್ ಮತ್ತು ಬ್ಯಾಕ್ಟೀರಿಯಾ ಕುರಿತಂತೆ ಹೆಚ್ಚಿನ ಸಂಶೋಧನೆ ನಡೆಸುತ್ತಿದೆ. ಬೇಸಾಯದಲ್ಲಿ ರೈತರಿಗೆ ಸಾಮಾನ್ಯವಾಗಿ ಎದುರಾಗುವ ತೊಂದರೆಗಳನ್ನು ನಿವಾರಿಸಿ ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಉತ್ತಮ ಫಸಲನ್ನು ಪಡೆಯುವ ಸಲುವಾಗಿ ಜೈವಿಕ ಕೀಟನಾಶಕವೊಂದನ್ನು ಅಭಿವೃದ್ಧಿಪಡಿಸಿದೆ.
ಜೈವಿಕ ಕೀಟನಾಶಕ ತಯಾರಿಕೆ ಬೇಕಾದ ಅಂಶಗಳನ್ನು ವಿವಿಧ ರೀತಿಯ ಮಣ್ಣು ಮತ್ತು ಸಸ್ಯಗಳ ಭಾಗಗಳಿಂದಲೇ ಸಂಗ್ರಹಿಸುತ್ತಾರೆ. ಸಂಸ್ಥೆ ಅಭಿವೃದ್ಧಿಪಡಿಸಿರುವ ಜೈವಿಕ ಕೀಟನಾಶಕವನ್ನು ಸಸ್ಯಗಳಿಗೆ ಸಿಂಪಡಿಸುವುದರಿಂದ ಅವುಗಳ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಲು ಸಹಾಯ ಮಾಡುತ್ತದೆ. ಜೈವಿಕ ಕೀಟನಾಶಕದಲ್ಲಿರುವ ಸೂಕ್ಷ್ಮಾಣು ಜೀವಿಗಳು ಮಣ್ಣಿನ ಸುತ್ತಲೂ ಹರಡಿಕೊಂಡು ಉತ್ತಮ ಪೋಷಕಾಂಶ ಒದಗಿಸುವುದರ ಜೊತೆಗೆ ಅಲ್ಲಿರುವ ಹಾನಿಕಾರಕ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತವೆ. ಜೈವಿಕ ಕೀಟನಾಶಕಗಳು ಸಸ್ಯ ಬೆಳವಣಿಗೆಗೆ ಅವಶ್ಯಕವಾಗಿ ಬೇಕಾದ ಪೋಷಕಾಂಶಗಳಾದ ಪಾಸ್ಫರಸ್, ನೈಟ್ರೋಜನ್, ಸಲ್ಫರ್‌ಗಳನ್ನು ಸಸ್ಯಗಳಿಗೆ ಹೇರಳವಾಗಿ ಒದಗಿಸುತ್ತವೆ.
ಸಸ್ಯ ಸಂಬಂಧಿ ರೋಗಗಳು ಮಣ್ಣಿನಿಂದ, ಬೀಜಗಳಿಂದ ಹಾಗೂ ಗಾಳಿ ಮೂಲಕ ಹರಡುತ್ತವೆ. ಸಂಸ್ಥೆ ಅಭಿವೃದ್ಧಿಪಡಿಸಿರುವ ಜೈವಿಕ ಕೀಟನಾಶಕ ಸಸ್ಯಗಳನ್ನು ಬಾಧಿಸುವ ಎಲ್ಲ ಬಗೆಯ ರೋಗಗಳನ್ನು ಸಮರ್ಥವಾಗಿ ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಸಸ್ಯದ ಪೋಷಣೆಗೆ ಬೇಕಾದ ಸೂಕ್ತ ಪೋಷಕಾಂಶಗಳು, ಸೂಕ್ಷ್ಮಾಣು ಜೀವಿಗಳನ್ನು ನಿಸರ್ಗದಿಂದಲೇ ಸಂಗ್ರಹಿಸಿ ಅದನ್ನು ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿ ಯಶಸ್ಸುಕಂಡಿದೆ. ಸಸ್ಯಗಳು ತಮ್ಮ ಬೆಳವಣಿಗೆಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ನಿಸರ್ಗದಿಂದಲೇ ಪಡೆದುಕೊಳ್ಳಲು ಈ ಜೈವಿಕ ಕೀಟನಾಶಕ ನೆರವಾಗುವುದರಿಂದ ಸಸ್ಯಗಳ ಫಲವಂತಿಕೆ ಮಟ್ಟ ಅಧಿಕವಾಗಿರುತ್ತದೆ. ಈ ಕೀಟನಾಶಕ ಸಸ್ಯಕ್ಕೆ ತಗಲುವ ಹಲವು ರೋಗಗಳ ವಿರುದ್ಧ ಏಕ ಕಾಲದಲ್ಲಿ ಹೋರಾಡುವ ಗುಣ ಹೊಂದಿದೆ.

ಈ ಜೈವಿಕ ಕೀಟನಾಶಕವನ್ನು ಮೂರು ರೀತಿಯಲ್ಲಿ ಸಸ್ಯಗಳಿಗೆ ಉಪಯೋಗಿಸಬಹುದು. ದ್ರವರೂಪದ ಕೀಟನಾಶಕವನ್ನು ಸಸ್ಯಗಳಿಗೆ ನೇರವಾಗಿ ಸಿಂಪಡಣೆ ಮಾಡಬಹುದು. ಜೈವಿಕ ಕೀಟನಾಶಕದ ಪೌಡರನ್ನು ಸಸ್ಯದ ಬೇರಿನ ಸುತ್ತ ಮಣ್ಣಿನಲ್ಲಿ ಮಿಶ್ರಣ (ಸಾಯಿಲ್ ಡ್ರೆಂಚಿಂಗ್) ಮಾಡಬಹುದು. ನರ್ಸರಿ ಮಾಡುವ ಸಂದರ್ಭದಲ್ಲಿ ತೆಂಗಿನ ತುರಿಯನ್ನು ಸಂಗ್ರಹಿಸಿ (ಕೋಕೋ ಪೀಟ್ ಮಿಕ್ಸಿಂಗ್) ಅದರೊಟ್ಟಿಗೆ ಪೌಡರ್ ಮಿಶ್ರಣ ಮಾಡಿ ಸಸ್ಯಗಳನ್ನು ಬೆಳೆಸಿದಾಗ ಉತ್ತಮ ಫಲಿತಾಂಶ ಲಭ್ಯವಾಗಿದೆ.

ಜೈವಿಕ ಕೀಟನಾಶಕವನ್ನು ಸಸ್ಯಗಳ ಮೇಲೆ ಪ್ರಯೋಗಿಸಿ ಉತ್ತಮ ಫಲಿತಾಂಶ ಪಡೆದ ಅನೇಕ ರೈತರು ಮೈಸೂರಿನ ಸುತ್ತಮುತ್ತ ಇದ್ದಾರೆ. ಎಲ್ಲ ರೀತಿಯ ಫಂಗಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಸಸ್ಯಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಗಳಾದ ಮಿಲ್‌ಡಿವ್ ಆಫ್ ಗಾರ್ಡ್ಸ್, ವಿಲ್ಟ್, ಬ್ಲೈಟ್ ಅಂಡ್ ಡೈಬ್ಯಾಕ್ ರೋಗಗಳನ್ನು ತಡೆಗಟ್ಟುವಲ್ಲಿ ಈ ಜೈವಿಕ ಕೀಟನಾಶಕ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಮೈಸೂರು ಪ್ರಾಂತ್ಯದಲ್ಲಿರುವ ಗುಜ್ಜೇಗೌಡನಪುರದ ಬಸವೇಶ್ವರ ನರ್ಸರಿ, ಮಾದಳ್ಳಿ ಗೇಟ್‌ನಲ್ಲಿರುವ ಮಹದೇಶ್ವರ ನರ್ಸರಿ, ಆಲನಹಳ್ಳಿಯಲ್ಲಿರುವ ಬಸವೇಶ್ವರ ಹೈಟೆಕ್ ನರ್ಸರಿಗಳು ಜೈವಿಕ ಕೀಟನಾಶಕ ಬಳಸಿ ಉತ್ತಮ ಫಲಿತಾಂಶ ಪಡೆದುಕೊಂಡಿರುವ ಫಲಾನುಭವಿಗಳು. ಲಭ್ಯವಿರುವ ಉತ್ಪನ್ನಗಳು ಪೋನಾಸ್ಟಾರ್ ಮತ್ತು ಕೌಶಿಕ್.
ಹೆಚ್ಚಿನ ಮಾಹಿತಿಗೆ ರೈತರು ಸಂಪರ್ಕಿಸಬೇಕಾದ ವಿಳಾಸ: ಪೋನಾಲ್ಯಾಬ್, ಎ-76, 4ನೇ ಮುಖ್ಯರಸ್ತೆ, ಹೆಬ್ಬಾಳ ಕೈಗಾರಿಕಾ ಪ್ರದೇಶ, ಮೈಸೂರು-16. ದೂರವಾಣಿ ಸಂಖ್ಯೆ 0821- 2419995, ಮೊಬೈಲ್ 94498 72722, 94804 99999 ಸಂಪರ್ಕಿಸಿ.

ಮಂಗಳವಾರ, ಸೆಪ್ಟೆಂಬರ್ 28, 2010

ಜೈವಿಕ ಇಂಧನ ಮಂಡಳಿಗೆ 30 ಕೋಟಿ ರೂ.


Udayavani | Aug 10, 2010
ಬೆಂಗಳೂರು : ಜೈವಿಕ ಇಂಧನ ಮಂಡಳಿಗೆ ಶೀಘ್ರವೇ 30 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಜರುಗಿದ ಜೈವಿಕ ಇಂಧನ ಕಾರ್ಯಪಡೆಯ ಸಂಸ್ಕರಣಾ ಕೇಂದ್ರಗಳ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಪರವಾಗಿ ಅಧ್ಯಕ್ಷತೆ ವಹಿಸಿ, ಮುಖ್ಯಮಂತ್ರಿ ಅವರ ಲಿಖೀತ ಭಾಷಣ ಓದಿದ ಅವರು, ಜೈವಿಕ ಸಸ್ಯಗಳ ಬೀಜಗಳ ಸಂರಕ್ಷಣೆ, ತರಬೇತಿ ಮುಂತಾದ ಉದ್ದೇಶಗಳಿಗಾಗಿ ಶೀಘ್ರವೇ 30 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.

ಜೈವಿಕ ಇಂಧನ ಉದ್ಯಮಕ್ಕೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯೋಜನೆಯನ್ನು ಯಶಸ್ಸುಗೊಳಿಸುವ ಉದ್ದೇಶದಿಂದ ಮಂದಿನ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ 15 ಕೋಟಿ ಜತ್ರೋಪ, ಹೊಂಗೆ ಇತ್ಯಾದಿ ಸಸಿಗಳನ್ನು ನೆಡುವ ಉದ್ದೇಶವಿದೆ. ಈ ದಿಸೆಯಲ್ಲಿ ಕಾರ್ಯಪಡೆ ಹಮ್ಮಿಕೊಂಡಿರುವ ಕೆಲಸಕ್ಕೆ ಅರಣ್ಯ ಇಲಾಖೆ, ಕೃಷಿ ವಿಶ್ವವಿದ್ಯಾಲಯ ಕೈಜೋಡಿಸಬೇಕು ಎಂದು ಕರೆ ನೀಡಿದರು.

ತೈಲ ಉತ್ಪನ್ನಗಳ ಬಳಕೆಯಿಂದ ದೇಶದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೈವಿಕ ಇಂಧನ ಬಳಕೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದ್ದು ರಾಜ್ಯ ಸರ್ಕಾರ ಜೈವಿಕ ಕಾರ್ಯಪಡೆ ಸ್ಥಾಪಿಸುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದ ಅವರು, ತೈಲೋತ್ಪನ್ನಗಳ ಬಳಕೆಯಿಂದ ರಾಜ್ಯದ ಪರಿಸರದ ಮೇಲೆ ಆಗಿರುವ ಮತ್ತು ಆಗುತ್ತಿರುವ ಪರಿಣಾಮದ ಬಗ್ಗೆ ಕಾರ್ಯಪಡೆ, ಪರಿಸರ ಇಲಾಖೆ ಜತೆ ಸೇರಿ ಅಧ್ಯಯನ ನಡೆಸಬೇಕು ಎಂದು ಹೇಳಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಕಾರ್ಯಪಡೆ ಅಧ್ಯಕ್ಷ ವೈ .ಬಿ. ರಾಮಕೃಷ್ಣ , ಜೈವಿಕ ಇಂಧನ ಸಂಶೋಧನೆಗೆ ಕಾರ್ಯಪಡೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. 'ಹಸಿರು ಹೊನ್ನು' ಮತ್ತು 'ಬರಡು ಬಂಗಾರ' ಕಾರ್ಯಕ್ರಮಗಳ ಮೂಲಕ ಯೋಜನೆ ಜಾರಿಗೊಳಿಸಲಾಗುತ್ತಿದೆ. ಈ ವರ್ಷ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೊಂಗೆ ಇತ್ಯಾದಿ ಸಸಿ ನೆಡಲು ಉದ್ದೇಶಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜೈವಿಕ ಇಂಧನ ಕೈಪಿಡಿಯನ್ನು ಸಚಿವರು ಬಿಡುಗಡೆ ನಮಾಡಿದರು.

ಭಾನುವಾರ, ಸೆಪ್ಟೆಂಬರ್ 26, 2010

ಹೊಂಗೆ ಮರದ ರಸ್ತೆ

ಸಂಜಯ ನಗರ ಬಡಾವಣೆಗೆ ಹೊಂದಿಕೊಂಡಿರುವ ಭೂಪಸಂದ್ರದಲ್ಲಿ. ಇಲ್ಲಿನ ಕಲ್ಪನಾಚಾವ್ಲ ರಸ್ತೆ ಮತ್ತು ಹೆಬ್ಬಾಳದ ಫೈಓವವರ್‌ಗೆ ಸಂಪರ್ಕ ಕಲ್ಪಿಸುವ ೬೦ ಅಡಿ ವಿಶಾಲ ಒಳ ರಸ್ತೆಯೇ ಹೊಂಗೆ ಮರದ ರಸ್ತೆ !
ಈ ರಸ್ತೆಗೆ 'ಹೊಂಗೆ ಮರದ ರಸ್ತೆ' ಎಂದು ಯಾರೂ ಹೆಸರಿಟ್ಟಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಹಸಿರಿನಿಂದ ಕಂಗೊಳಿಸುವ ಸಾಲು ಸಾಲು ಹೊಂಗೆ ಮರಗಳು 'ಈ ರಸ್ತೆಗೊಂದು ಅಂಥ ಹೆಸರಿಡಿ' ಎಂದು ಕೇಳುತ್ತವೆ.

ಹೊಂಗೆ ಮರಗಳ ಸಾಲು.ಇಲ್ಲಿ ಸುಮಾರು ನೂರಕ್ಕೂ ಹೆಚ್ಚು ಮರಗಳಿರಬಹುದು. ಎಲ್ಲ ಮರಗಳನ್ನೂ ಪಾದಚಾರಿ ಮಾರ್ಗದಲ್ಲೇ ನೆಟ್ಟಿದ್ದಾರೆ. ಪ್ರತಿಯೊಂದಕ್ಕೂ ವ್ಯವಸ್ಥಿತವಾಗಿ ಸಿಮೆಂಟ್ ಪಾತಿ ಮಾಡಲಾಗಿದೆ. ದಟ್ಟವಾಗಿರುವ ಈ ಮರಗಳ ನಡುವಿನ ರಸ್ತೆಯಲ್ಲಿ ಮುಂಜಾನೆ, ಸಂಜೆ ವಿಹರಿಸುವುದೆಂದರೆ ವಾಹ್ ! ಅದರ ಅನುಭವವೇ ವಿಭಿನ್ನ !

ಐದಾರು ವರ್ಷಗಳ ಹಿಂದೆ ಭೂಪಸಂದ್ರ ಬಡಾವಣೆಯನ್ನು 'ಹಸಿರಾಗಿಸುವ' ಪ್ರಯತ್ನದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯವರು ಈ ಹೊಂಗೆ ಸಸಿಗಳನ್ನು ನೆಟ್ಟಿದ್ದಾರೆ. ಆಗ ಇಲಿ ಸ್ವಂತ ಮನೆ ಹೊಂದಿದ್ದವರು ತಮ್ಮ ಮನೆಯ ಮುಂದೆ ಅಲಂಕಾರಕ್ಕಾಗಿ ಎರಡೆರಡು ಹೊಂಗೆ ಮರಗಳನ್ನು ಕೇಳಿ ಕೇಳಿ ನಾಟಿ ಮಾಡಿಸಿದ್ದಾರೆ. ಈಗ ಅವೆಲ್ಲ ಪುಟ್ಟ ಪುಟ್ಟ ಮರಗಳಾಗಿ ಇಡೀ ರಸ್ತೆಗೆ ಹಸಿರುಡುಗೆಯಾಗಿಸಿವೆ.

ಫೆಬ್ರುವರಿ ಮಾರ್ಚ್ ತಿಂಗಳ್ಲಲಿ ಈ ರಸ್ತೆಯ್ಲಲಿ ಮುಂಜಾನೆ ಒಂದು ವಿಶಿಷ್ಟ ಅನುಭವ. ಅದು ಹೂವು ಅರಳುವ ಸಮಯ. ದುಂಬಿಗಳು ಹೂವಿನ ಮಕರಂದ ಹೀರುತ್ತಾ ಆನಂದವಾಗಿ ಹಾರುಡುತ್ತಿರುತ್ತವೆ. ಜೇನಿನ ಹುಳಗಳು ಮಕರಂದ ಹೀರಿ ಪಕ್ಕದ ಬೇಲಿಗೆ ಹಾರಿ 'ಗೂಡು' ಕಟ್ಟುತ್ತವೆ. ಹೊಂಗೆ ಹೂವು ಪರಿಮಳ 'ದೇಹ ದಂಡಿಸುವವರ' ಮನಸ್ಸನ್ನು ಅರಳಿಸುತ್ತದೆ. ಮುಂದಿನ ದಿನಗಳ್ಲಲಿ ಇದೇ ಹೂವುಗಳು ನೆಲದ್ಲಲಿ ಹರಡಿಕೊಂಡು ನಡೆದಾಡುವವರಿಗೆ ನಡೆಮುಡಿ ಹಾಸುತ್ತವೆ. ಈ ನೈಸರ್ಗಿಕ ಪ್ರಕ್ರಿಯೆಯನ್ನು ನೋಡುವುದೇ ಒಂದು ಆನಂದ.ಹೊಂಗೆ ಮರಗಳು ಅಂದ ಹೆಚ್ಚಿಸುವ ಜೊತೆಗೆ ಬೇಸಿಗೆಯ ಬೇಗೆಯನ್ನೂ ತಣಿಸುತ್ತವೆ.

ಬಿಸಿಲಿನ್ಲಲಿ ಓಡಾಡುವ ಹಿರಿಯ ಜೀವಗಳು ಹೊಂಗೆಯ ನೆರಳಿನಲ್ಲಿ ಸ್ವಲ್ಪ ಹೊತ್ತು ವಿರಮಿಸಿ ಕೊಂಡು ಮುಂದುವರಿಯುತ್ತಾರೆ.

ಹೊಂಗೆ ಮರಗಳು ಕೇವಲ ಈ ಪ್ರಮುಖ ರಸ್ತೆಯ್ಲಲಷ್ಟೇ ಅಲ. ಒಳ ರಸ್ತೆಗಳನ್ನೂ ಅಲಂಕರಿಸಿವೆ. ಸಮೀಕ್ಷೆ ಮಾಡಿದರೆ ಪ್ರತಿ ಮನೆಗಳ ಮುಂದು ಎರಡೆರಡು ಹೊಂಗೆ ಮರಗಳಿವೆ. ಆ ಮರಗಳು ಅದೆಷ್ಟು ಅಂದವಾಗಿ ಬೆಳೆದುಕೊಂಡಿವೆಯೆಂದರೆ ಒಂದು ಕಾರನ್ನು ಸರಾಗವಾಗಿ ಮರದ ಕೆಳಗೆ ಪಾರ್ಕ್ ಮಾಡಬಹುದು. ಹಾಗಾಗಿ ಮರಗಳ ನೆರಳು ಕಾರು ಪಾರ್ಕಿಂಗ್‌ಗೆ ಮೀಸಲಾಗಿದೆ. ಮರದ ನೆರಳು ಕಾರು ಪಾರ್ಕಿಂಗ್‌ಗೆ ಹೇಳಿ ಮಾಡಿಸಿದಂತಿವೆ. ಈ ನೆರಳನ್ನೇ ಬಳಸಿಕೊಂಡ ಕೆಲವರು ತಮ್ಮ ಮನೆಗಳ ಮುಂದೆ ಅಲಂಕಾರಿಕ ಸಸ್ಯಗಳನ್ನೂ ಬೆಳೆಸಿ, ರಸ್ತೆಯ ಚೆಲುವು ಹೆಚ್ಚಲು ಕೆಲವು ನಾಗರಿಕರು ಸಹಕರಿಸಿದ್ದಾರೆ.

ಬೆಂಗಳೂರಿನ ರಸ್ತೆ ಬದಿಗಳಲ್ಲಿ ಹೀಗೆ ಮರಗಳ ಸಾಲಿರುವುದು ಸಾಮಾನ್ಯ, ಅದರಲ್ಲಿ ಅಂಥ ವಿಶೇಷವಿಲ್ಲ. ಆದರೆ ಈ ಬಡಾವಣೆಯಲ್ಲಿ ಮರಗಳನ್ನು ಸಂರಕ್ಷಿಸುವ, ಪೋಷಿಸುವ ಮತ್ತು ನಿರ್ವಹಿಸುವ ನಾಗರಿಕರ ಆಸಕ್ತಿ, ಆಸ್ತೆ ಮೆಚ್ಚುವಂಥದ್ದು. ಎಲರೂ ಈ ಕಾರ್ಯಕ್ಕೆ ಕೈ ಜೋಡಿಸದಿದ್ದರೂ ತಮ್ಮ ಕಾರಿಗೆ ನೆರಳು ನೀಡುವ, ದಣಿದ ದೇಹಗಳಿಗೆ ತಂಪನೆರೆಯುವ, ಮನೆ ಮುಂದಿನ ಅಂದ ಹೆಚ್ಚಿಸುವ ವೃಕ್ಷ ಪ್ರೀತಿಯ ಮನಸ್ಸಿರುವ ಕೆಲವರು ಹೊಂಗೆ ಮರಗಳ ಒಂದೇ ಒಂದು ರೆಂಬೆಯನ್ನೂ ಕೀಳಗೊಡುವುದ್ಲಿಲ. ಅಷ್ಟೇ ಅಲ. ನಿತ್ಯ ಕಾರು ತೊಳೆಯುವವರು ಉಳಿದ ನೀರನ್ನು ಮನೆ ಮುಂದಿನ ಗಿಡಗಳಿಗೆ ಉಣಿಸುತ್ತಾರೆ. ಕಾಲ ಕಾಲಕ್ಕೆ ಕೊಂಬೆಗಳನ್ನು ಸವರಿಸುತ್ತಾರೆ. ರೆಂಬೆಗಳು ದೊಡ್ಡದಾಗ್ದಿದರೆ ಪಾಲಿಕೆಯವರಿಗೆ ತಿಳಿಸುತ್ತಾರೆ. ನಾಗರಿಕರ ಮತ್ತು ಪಾಲಿಕೆಯವರ ಸಹಯೋಗದಲ್ಲಿ ಪಾದಚಾರಿ ಮಾರ್ಗಗಳಲ್ಲೂ ಮರಗಳು ಸುರಕ್ಷಿತವಾಗಿವೆ. ಈ ಮರ ಬೆಳೆಸುವ ಮುತುವರ್ಜಿ ನಿಜಕ್ಕೂ ಮಾದರಿಯಾಗುವಂಥದ್ದು.

ಶುಕ್ರವಾರ, ಸೆಪ್ಟೆಂಬರ್ 24, 2010

ಅಭಿವೃದ್ಧಿ ಹೆಸರಿನಲ್ಲಿ ಮರಗಳ ನಾಶ

'ಪ್ರಕೃತಿಯನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ' ಎಂಬ ಮಾತಿದೆ. ಅದು ನೂರಕ್ಕೆ ನೂರು ಸತ್ಯ. ಪ್ರತಿನಿತ್ಯ ನಾವು 'ಅಭಿವೃದ್ಧಿ' ಹೆಸರಿನಲ್ಲಿ ಪ್ರಕೃತಿದತ್ತವಾಗಿ ಬೆಳೆದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಮರಗಳನ್ನು ಕ್ಷಣಾರ್ಧದಲ್ಲಿ ಸರ್ವನಾಶ ಮಾಡುತ್ತಿದ್ದೇವೆ. ಆದರೆ ಅದಕ್ಕೆ ಪರ್ಯಾಯವಾಗಿ ಅದೆಷ್ಟು ಮರಗಳನ್ನು ಸಾಕಿ ಬೆಳೆಸಿದ್ದೇವೆ? ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಂಡರೆ ನಾಲಗೆಯಲ್ಲಿ ಪದಗಳೇ ಉಸುರುವುದಿಲ್ಲ...

ದಿನಗಳೆದಂತೆ ಮನುಷ್ಯ ಪ್ರಕೃತಿಯ ಮೇಲೆ ಮಾಡುತ್ತಿರುವ ದೌರ್ಜನ್ಯ ಎಲ್ಲೆ ಮೀರುತ್ತಿದೆ. ಸಹನೆಯ ಕಟ್ಟೆಯೊಡೆದು ಪ್ರಕೃತಿ ಕೂಡ ಒಂದಿಲ್ಲೊಂದು ಹೊಸ ಹೊಸ ರೀತಿಯ ಅವಾಂತರಗಳನ್ನು ಸೃಷ್ಟಿಸುತ್ತಲೇ ಇದೆ. ಮಳೆಯನ್ನೇ ನಂಬಿ ಬೆಳೆ ಬೆಳೆಯುವ ರೈತ ಕೂಡ ಸಂಪೂರ್ಣ ಸೋತು ಸುಣ್ಣವಾಗಿದ್ದಾನೆ.

ಇದು ಯಾಂತ್ರಿಕ ಯುಗ. ಈಗ ಎಲ್ಲರಿಗೂ ಸೌಲಭ್ಯಗಳು ಮನೆ ಬಾಗಿಲಿಗೆ ಎಟಕಬೇಕು. ಹೀಗಾಗಿ ಯಾರೂ ಕೂಡ ಕಷ್ಟಪಡಲು ತಯಾರಿಲ್ಲ. ಮರಗಳನ್ನು ಬೆಳೆಸುವ ಬದಲು ಅವುಗಳನ್ನು ಧರೆಗುರುಳಿಸುವ ಬಗ್ಗೆಯೇ ಆಲೋಚಿಸುತ್ತಿದ್ದೇವೆ. ಇಂದು ಮರಗಳು ಮರೆಯಾಗುತ್ತಲೇ ಇವೆ. ಜತೆಗೆ ದಟ್ಟ ಕಾನನವನ್ನು ಕಾಪಾಡಲೆಂದೇ ಸೃಷ್ಟಿ ಮಾಡಿರುವ 'ಅರಣ್ಯ ಇಲಾಖೆ' ಕೂಡ ಅನಾಯಾಸವಾಗಿ ಮಲಗಿದೆ. ಮರಗಳನ್ನು ಬೆಳೆಸಲೆಂದು ಸರಕಾರದಿಂದ ಬಿಡುಗಡೆಯಾಗುವ ಕೋಟಿ ಕೋಟಿ ಹಣ ಎನಾಗಿದೆಯೊ ಗೊತ್ತಿಲ್ಲ ಇದು ಇಂದಿನ ಕತೆಯಲ್ಲ, ಕಳೆದ ಇಪ್ಪತೈದು ವರ್ಷಗಳೀಚೆಗೆ ನಡೆಯುತ್ತಿರುವ ನಿರಂತರ ಪ್ರಕ್ರಿಯೆ.
ದಿನಕಳೆದಂತೆ ಅಂತರ್ಜಲ ಪಾತಾಳಕ್ಕೆ ಕುಸಿಯುತ್ತಿದೆ. ನೂರಾರು ಅಡಿ ಬೋರ್‌ವೆಲ್ ಕೊರೆಯಿಸಿದರೂ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಗಾಳಿಯಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗಿ ಓಜೋನ್ ಪದರ ದಿನನಿತ್ಯ ಹರಿದು ಛಿದ್ರವಾಗುತ್ತಿದೆ. ಜನರ ಆರೋಗ್ಯ ಹದಗೆಟ್ಟು ದಿನಕಳೆದಂತೆ ಹೊಸ ಹೊಸ ಕಾಯಿಲೆಗಳು ದಾಂಗುಡಿಯಿಡುತ್ತಿವೆ. ಜತೆಗೆ ಸರಿಯಾದ ಸಮಯದಲ್ಲಿ ಮಳೆಯಿಲ್ಲದೆ ರೈತರು ಬೀದಿಗೆ ಬೀಳುತ್ತಿದ್ದಾರೆ. ಅನ್ನ, ನೀರಿಲ್ಲದೆ ನಿತ್ಯವೂ ಪರದಾಡುತ್ತಿದ್ದಾರೆ.

ಈಗಾಲೇ ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿಯಂತ ಜಿಲ್ಲೆಗಳಲ್ಲಿ ಕುಡಿಯಲು ಕೂಡ ನೀರಿಲ್ಲ. ಬೆಂಗಳೂರಿನಂಥ ಮಹಾನಗರಗಳಲ್ಲಿ ಇದ್ದ ೭೬೧ ಕೆರೆಗಳೂ ಮಾಯವಾಗಿ ನೀರಿಗಾಗಿ ಹಾಹಾಕಾರ ಶುರುವಾಗುತ್ತಿದೆ. ಆದರೂ ನಗರಗಳ ವಿಸ್ತರಣೆ ಎನ್ನುವುದು ನಿರಂತರವಾಗಿ ನಡೆದೇ ಇದೆ. ಪರಿಸರವನ್ನು ನಾಶ ಮಾಡಿ ಹೀಗೆ ಮಾಡುತ್ತಿರುವ ಅಭಿವೃದ್ಧಿಯಿಂದಲೇ ಮನುಕುಲ ಮಾತ್ರವಲ್ಲ , ಸಕಲ ಜೀವರಾಶಿಗಳೂ ವಿನಾಶದಂಚಿಗೆ ಹತ್ತಿರವಾಗುತ್ತಿವೆ ಎಂಬ ಸತ್ಯದ ಬಗ್ಗೆ ಯಾರೂ ಯೋಚಿಸುತ್ತಿಲ್ಲ.

ಇದಲ್ಲದೆ ಈಗ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡುವ ನೆಪದಲ್ಲಂತೂ ಮರಗಳ ಸಾಮೂಹಿಕ ಮಾರಣಹೋಮ ನಡೆಯುತ್ತಿದೆ. ಆದರೆ ಅದಕ್ಕೆ ಪರ್ಯಾಯವಾಗಿ ಎಲ್ಲೂ ಮರಗಳನ್ನು ನೆಡುತ್ತಿಲ್ಲ. ಶಿವಮೊಗ್ಗ, ಬೆಳಗಾವಿ, ತುಮಕೂರು, ರಾಯಚೂರು ವಿಭಾಗಗಳಲ್ಲಿ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆದು ಕೆಶಿಪ್ (ಕರ್ನಾಟಕ ಸ್ಟೇಟ್ ಹೈವೇ ಇಂಪ್ರೂಮೆಂಟ್ ಪ್ರಾಜೆಕ್ಟ್) -೧ರ ಅಡಿ ೨,೩೯೫ಕಿ.ಮೀ. ರಸ್ತೆ ನಿರ್ಮಾಣ ಮಾಡಿದ್ದು, ಕೆಶಿಪ್-೨ರ ಅಡಿ ೩,೪೧೧ಕಿ.ಮೀ.ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ರಸ್ತೆಗಳ ನಿರ್ಮಾಣವಾಗುತ್ತದೆ ಎಂಬ ಕಾರಣಕ್ಕೆ ಅಂಧಕಾರದಲ್ಲಿ ಮುಳುಗುವುದು ಯಾವ ನ್ಯಾಯ? ಅಭಿವೃದ್ಧಿ ಬೇಕೆ ಬೇಕು ಎಂದಾದರೆ ಅದಕ್ಕೆ ಪರ್ಯಾಯವಾಗಿ ಮರಗಳನ್ನಾದರೂ ನೆಡಬೇಕಲ್ಲ? ಅದೂ ಇಲ್ಲ. ಗಿಡ ಬೆಳೆಸುವ ಗೋಜಿಗೇ ಹೋಗದೆ ೨,೩೯೫ಕಿ.ಮೀ. ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ ಕೆಶಿಪ್-೧ರ ಅಡಿ ೧,೭೭,೦೦೦ ಮರಗಳನ್ನು ಧರೆಗುರುಳಿಸಲಾಗಿದೆ. ಕೆಶಿಪ್-೨ರ ಅಡಿ ೩,೪೧೧ಕಿ.ಮೀ.ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ೫೫,೫೯೬ ಮರಗಳನ್ನು ಕಡಿದು ಹಾಕಲು ತಂತ್ರ ರೂಪಿಸಲಾಗಿದೆ. ಇದರಲ್ಲಿ ಈಗಾಗಲೇ ೯,೮೦೮ ಮರಗಳನ್ನು ಸರ್ವನಾಶ ಮಾಡಿಯಾಗಿದೆ. ಉಳಿದ ೪೫,೮೦೮ ಮರಗಳಿಗೆ ಸದ್ಯದಲ್ಲಿಯೇ ಕೊಡಲಿ ಏಟು ಬೀಳಲಿದೆ.ಇದು ಕೇವಲ ಸರಕಾರಿ ಜಾಗದಲ್ಲಿರುವ ಮರಗಳ ಸಂಖ್ಯೆ. ಅದರಲ್ಲೂ ಇಲಾಖೆ ನೀಡುವ ಮಾಹಿತಿ. ಖಾಸಗಿ ಜಮೀನು ಸೇರಿದಂತೆ ಲೆಕ್ಕದಿಂದ ತಪ್ಪಿದ ಲಕ್ಷಾಂತರ ಮರಗಳ ಮಾರಣಹೋಮ ನಡೆದಿದೆ ಎನ್ನುವ ಕೂಗು ಅಲ್ಲಲ್ಲಿ ಕೇಳಿಬರುತ್ತಲೇ ಇದೆ. ಆದರೆ ಇದ್ಯಾವುದೂ ಇಲಾಖೆಯ ಅಥವಾ ಸಂಬಂಸಿದ ಅಕಾರಿಗಳ, ಜನಪ್ರತಿನಿಗಳ ಕಿವಿಗೆ ಬೀಳುತ್ತಿಲ್ಲ. ನೂರಾರು ವರ್ಷಗಳ ಇತಿಹಾಸವಿರುವ, ಕೋಟಿಗಟ್ಟಲೆ ಬೆಲೆ ಬಾಳುವ ಮರಗಳನ್ನು ಹೀಗೆ ಹಿಂದು ಮುಂದು ನೋಡದೆ ಗುತ್ತಿಗೆ ಕೊಟ್ಟು ಕತ್ತರಿಸಿ ಹಾಕುವ ಅರಣ್ಯ ಇಲಾಖೆಯ ಅಕಾರಿಗಳಿಗೆ ಅಷ್ಟೇ ಸಲೀಸಾಗಿ ಮರಗಳನ್ನು ಬೆಳೆಸಲು ಆದೀತೆ...? ಖಂಡಿತಾ ಇಲ್ಲ. ಒಂದು ಮರ ಸ್ವತಂತ್ರವಾಗಿ ಬೆಳೆಯಲು ಅಣಿಯಾಗಬೇಕಾದರೆ ಕನಿಷ್ಠ ೭ ವರ್ಷಗಳಾದರೂ ಬೇಕು. ಅಲ್ಲಿಯವರೆಗೆ ಅವುಗಳನ್ನು ಸಹನೆಯಿಂದ ಸಾಕುವ ವ್ಯವಧಾನ ಈ ಅರಣ್ಯ ಇಲಾಖೆಯ ಸಿಬ್ಬಂದಿಗೆ ಇದೆಯೇ?

ಗಿಡ ನೆಡುವ ಅವಕಾಶ ಸಿಕ್ಕಾಗಲೆಲ್ಲಾ ನೀಲಿಗಿರಿ, ಅಕೇಶಿಯಾದಂಥ ಪರಿಸರಕ್ಕೆ ಮಾರಕವಾದ ಗಿಡಗಳನ್ನು ಬೆಳೆಸಿ ಭೂಮಿಯನ್ನು ಹಾಳು ಮಾಡುವುದರ ಜತೆಗೆ ತಮಗೆ 'ಆದಾಯ' ಮಾಡಿಕೊಳ್ಳುವ ಇಂಥವರು ಮಮತೆಯಿಂದ ಮರಗಳನ್ನು ಬೆಳೆಸುವುದಾದರೂ ಎಂದು ? ಅದಿರಲಿ, ಅವುಗಳು ಮನುಷ್ಯನೂ ಸೇರಿದಂತೆ ಪ್ರಾಣಿ, ಪಕ್ಷಿಗಳ ಸಂಕುಲಗಳಿವೆ ನೀಡುವ ಉಸಿರಿಗೆ ಬೆಲೆ ಕಟ್ಟಲಾದೀತೆ...? ಅರಣ್ಯ ಇಲಾಖೆ ಕೇವಲ ನೆಪ ಮಾತ್ರಕ್ಕಿದೆ ಎಂಬ ಮಾತು ಈಗ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ನೈಜವಾಗಿ ಬೆಳೆದ ಕಡೆಗಳಲ್ಲೆಲ್ಲ 'ಪರವಾನಗಿ' ಹೆಸರಿನಲ್ಲಿ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕೆಲವು ಅರಣ್ಯ ಇಲಾಖೆಯ ಅಕಾರಿಗಳೇ ಅಗತ್ಯಕ್ಕಿಂತ ಹೆಚ್ಚು ಮರಗಳನ್ನು ಕತ್ತರಿಸುತ್ತಿರುವುದೂ ಬಹಿರಂಗ ಸತ್ಯ. ಜತೆಗೆ ಅರಣ್ಯ ಇಲಾಖೆ ಹೇಗೆಂದರೆ ಹಾಗೆ ಮರ ಕಡಿಯಲು ನೀಡುತ್ತಿರುವ ಅನುಮತಿಗೆ ಲೆಕ್ಕವೇ ಇಲ್ಲ. ಜತೆಗೆ ಸಣ್ಣಪುಟ್ಟ ಕಾಮಗಾರಿಗಳಾದರೂ ಅದೇ ನೆಪದಲ್ಲಿ ಬೃಹದಾಕಾರದ ಮರಗಳು ನೆಲಕಚ್ಚುತ್ತಿವೆ. ಅವುಗಳಿಗೆ ಯಾವ ಲೆಕ್ಕವೂ ಇಲ್ಲ. ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ಹೆಸರಲ್ಲಿ, ಅಂಡರ್‌ಪಾಸ್, ಅಥವಾ ಮೇಲ್ಸೇತುವೆ ಮುಂತಾದ ಕಾರಣಗಳಿಗಾಗಿ ಎರಡು ವರ್ಷದಿಂದೀಚೆ ಐದು ಸಾವಿರಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ಶಿವಮೊಗ್ಗ, ಮಂಡ್ಯ, ಕೋಲಾರ, ತುಮಕೂರು, ಬಳ್ಳಾರಿ, ಬೆಂಗಳುರು, ಕೊಪ್ಪಳ ಮುಂತಾದ ನಗರಗಳಲ್ಲಿ ಸಣ್ಣಪುಟ್ಟ ರಸ್ತೆ ವಿಸ್ತರಣೆಗೂ ನೂರಾರು ಮರಗಳನ್ನು ಧರೆಗುರುಳಿಸಲಾಗಿದೆ. ಆದರೆ ಎಲ್ಲೂ ಉತ್ತಮ ತಳಿಯ ಮರಗಳನ್ನು ನೆಟ್ಟಿಲ್ಲ! ಮರಗಳ ಕಳ್ಳಸಾಗಣೆ, ಗಣಿ ಹೆಸರಿನಲ್ಲಂತೂ ಅರಣ್ಯಕ್ಕೆ ಅರಣ್ಯವೇ ಸಮಾಪ್ತಿಯಾಗುತ್ತಿದೆ... ಇವುಗಳ ಬಗ್ಗೆ ಮಾತ್ರ ಪ್ರಶ್ನೆ ಮಾಡುವವರೇ ಇಲ್ಲ.

ಕೆಶಿಪ್ ಅಡಿ ಕಡಿದಿರುವ ಮರಗಳ ಬದಲಿಗೆ ಒಂದು ಕಿ.ಮೀ.ಗೆ ೨೦೦ ಮರಗಳಂತೆ ಮರಗಳನ್ನು ಬೆಳೆಸಿ ನೆಡಲು ಹಾಗೂ ೭ವರ್ಷಗಳ ವರೆಗೆ ಅವುಗಳ ಮುತುವರ್ಜಿ ನೋಡಿಕೊಳ್ಳಲು ಕರ್ನಾಟಕ ಸ್ಟೇಟ್ ಹೈವೇ ಇಂಪ್ರೂಮೆಂಟ್ ಪ್ರಾಜೆಕ್ಟ್ ಹಾಗೂ ಅರಣ್ಯ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ಅದಕ್ಕೆ ತಗಲುವ ವೆಚ್ಚವನ್ನೂ ಕೆಶಿಪ್ ಭರಿಸಲು ಒಪ್ಪಿಗೆ ನೀಡಿ, ಹಂತ ಹಂತವಾಗಿ ಹಣ ನೀಡುತ್ತಿದೆ. ಆದರೆ ಇಲ್ಲೂ ಅರಣ್ಯ ಇಲಾಖೆ ಇನ್ನೂ ಒಂದೇ ಒಂದು ಗಿಡಗಳನ್ನೂ ಎಲ್ಲೂ ನೆಟ್ಟಿಲ್ಲ !

ಸಂಪದ್ಭರಿತವಾದ ಕಾಡುಗಳನ್ನು ಕಡಿದು ಅಲ್ಲಿ ಜೀವ ವೈವಿಧ್ಯ ವಿರೋ ನೀಲಿಗಿರಿ, ಅಕೇಶಿಯಾ ಬೆಳೆಸಿದ ರೀತಿಯಲ್ಲಿ ರಸ್ತೆಯುದ್ದಕ್ಕೂ ಅರಣ್ಯ ಇಲಾಖೆ ನಾಳೆ ಇದೇ ಮರಗಳನ್ನು ನೆಟ್ಟರೆ ಭೂಮಿಯ ತಾಪಮಾನ ಈಗಿನದ್ದಕ್ಕಿಂತ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಅಂತರ್ಜಲದ ಮಟ್ಟ ಪಾತಾಳ ಸೇರಿ ಕೋಲಾರ ಜಿಲ್ಲೆಯಲ್ಲಿರುವ ನೀರಿನ ಸಮಸ್ಯೆ ಇಡೀ ರಾಜ್ಯಕ್ಕೆ ವಕ್ಕರಿಸಿಕೊಳ್ಳುವುದು ನಿಶ್ಚಿತ. ಆದ್ದರಿಂದ ಸರಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು. ಜನಸಾಮಾನ್ಯರೂ ಕೂಡ ಇಂಥ ಮಾರಕ ಹಾಗೂ ಅನಾವಶ್ಯಕ ಅಭಿವೃದ್ಧಿ, ಪರಿಸರ ವಿರೋದಿ ನಿರ್ಧಾರಗಳ ವಿರುದ್ಧ ಧ್ವನಿ ಎತ್ತದಿದ್ದರೆ ಮುಂದೊಂದು ದಿನ ಉಸಿರಾಡಲೂ ಕೂಡ ಹಣ ನೀಡಿ ಆಮ್ಲಜನಕವನ್ನು ಖರೀದಿಸಬೇಕಾದ ದಿನ ದೂರವಿಲ್ಲ !

ಸೋಮವಾರ, ಸೆಪ್ಟೆಂಬರ್ 20, 2010

ಚಾಮರಾಜನಗರ ಜಿಲ್ಲೆಯಲ್ಲಿ 400 ಹೆಕ್ಟೇರ್‌ನಲ್ಲಿ ಹೊಂಗೆ ಸಸಿ ನೆಡಲು ನಿರ್ಧಾರ

ಜುಲೈ 9ರ ಪ್ರಜಾವಾಣಿ ವಾರ್ತೆ

400 ಹೆಕ್ಟೇರ್‌ನಲ್ಲಿ ಹೊಂಗೆ ಸಸಿ ನೆಡಲು ನಿರ್ಧಾರ
ಜೈವಿಕ ಇಂಧನ ಪ್ರಾತ್ಯಕ್ಷಿಕೆ ಕೇಂದ್ರ ಸಿದ್ಧ


ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜೈವಿಕ ಇಂಧನದ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರ ಜುಲೈ 9ರಂದು ಉದ್ಘಾಟನೆಗೊಂಡಿದೆ.

'ರಾಜ್ಯ ಸರ್ಕಾರ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಈ ಕೇಂದ್ರ ಕಾರ್ಯಾರಂಭ ಮಾಡಿದೆ. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ನಿತ್ಯ 150 ಲೀ. ಜೈವಿಕ ಇಂಧನದ ಉತ್ಪಾದನಾ ಗುರಿ ಹೊಂದಲಾಗಿದೆ. ರೈತರಿಂದ ಹೊಂಗೆ, ಬೇವು ಸೇರಿದಂತೆ ಜೈವಿಕ ಇಂಧನದ ಬೀಜ ಖರೀದಿಸಲಾಗುವುದು.

ಕೇಂದ್ರದ ಸ್ಥಾಪನೆಗೆ ಸರ್ಕಾರ 10 ಲಕ್ಷ ರೂ ನೀಡಿದೆ. ಇದರಲ್ಲಿ ಯಂತ್ರೋಪಕರಣಗಳಿಗೆ 8.50 ಲಕ್ಷ ರೂ ಖರ್ಚಾಗಿದೆ. ಉಳಿದ ಹಣದಲ್ಲಿ ರೈತರಿಂದ ಜೈವಿಕ ಇಂಧನ ಬೀಜಗಳನ್ನು ಖರೀದಿಸಲಾಗುವುದು. ಒಂದು ಕೆಜಿ ಹೊಂಗೆ ಬೀಜಕ್ಕೆ 12 ರೂ ಹಾಗೂ ಬೇವಿನ ಬೀಜಕ್ಕೆ 6 ರೂ ದರ ನಿಗದಿಪಡಿಸಲಾಗಿದೆ. ಒಂದು ಕ್ವಿಂಟಲ್ ಬೀಜದಲ್ಲಿ ಶೇ. 20ರಷ್ಟು ಇಂಧನ ಲಭಿಸಲಿದೆ. ಇದನ್ನು ಕೆಎಸ್‌ಆರ್‌ಟಿಸಿ ಬಸ್ ಸೇರಿದಂತೆ ಇತರೇ ವಾಹನಗಳ ಬಳಕೆಗೆ ಉಪಯೋಗಿಸಲು ನೀಡಲಾಗುತ್ತದೆ.

'ಜಿಲ್ಲೆಯಲ್ಲಿ ಇಲಾಖೆಯಿಂದ 400 ಹೆಕ್ಟೇರ್ ಪ್ರದೇಶದಲ್ಲಿ ಜೈವಿಕ ಇಂಧನ ಸಸಿ ನೆಡಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗುಂಡಿ ತೆಗೆಯಲಾಗುತ್ತದೆ. ಸೆಪ್ಟೆಂಬರ್ ವೇಳೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಹೊಂಗೆ ಸಸಿ ನೆಡಲಾಗುವುದು' ಎಂದು ಸಾಮಾಜಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ. ರಾಜು ತಿಳಿಸಿದರು.

ಜಿಲ್ಲೆಯ ರೈತರು ಹೆಬ್ಬೇವಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈಗ ಇಲಾಖೆಯಿಂದ ಹೊಂಗೆ ಸಸಿ ನೆಡುವ ಬಗ್ಗೆ ಅರಿವು ಮೂಡಿಸ ಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕನಿಷ್ಠ ಆರು ತಿಂಗಳ ಅವಧಿಯ ಹೊಂಗೆ ಸಸಿ ನೆಡಲು ನಿರ್ಧರಿಸಲಾಗಿದೆ. ಸಸಿ ನೆಟ್ಟ ನಾಲ್ಕು ವರ್ಷದಲ್ಲಿ ಬೀಜ ದೊರೆ ಯಲಿದೆ. ನಂತರದ ವರ್ಷಗಳಲ್ಲಿ ಇಳುವರಿ ಹೆಚ್ಚಲಿದ್ದು, ರೈತರಿಗೆ ಆದಾಯ ಬರಲಿದೆ ಎಂದರು.

ಸದ್ಯಕ್ಕೆ ಕಸಿ ಮಾಡಿರುವ ಹೊಂಗೆ ಸಸಿ ನೆಡುತ್ತಿಲ್ಲ. ಪಾಳುಬಿದ್ದ ಜಮೀನುಗಳಲ್ಲೂ ಹೊಂಗೆ ಸಸಿ ನೆಡುವ ಗುರಿಯಿದೆ. ಜಿಲ್ಲೆಯಲ್ಲಿರುವ 40 ಸಾವಿರ ಎಕರೆ ಅರಣ್ಯೇತರ ಜಮೀನಿನಲ್ಲೂ ಜೈವಿಕ ಇಂಧನ ಸಸಿ ನೆಡುವ ಉದ್ದೇಶ ಹೊಂದಲಾಗಿದೆ.

ಪ್ರತಿವರ್ಷ ಸುಮಾರು 500 ಹೆಕ್ಟೇರ್ ಪ್ರದೇಶಕ್ಕೆ ಈ ಯೋಜನೆ ವಿಸ್ತರಿಸಲಾಗುವುದು. ರಸ್ತೆ ಬದಿ ಸೇರಿದಂತೆ ರೈತರ ಜಮೀನಿನ ಬದುಗಳಲ್ಲೂ ಸಸಿ ನೆಡುವ ಗುರಿಯಿದೆ. ಮುಂದಿನ ಐದಾರು ವರ್ಷಗಳಲ್ಲಿ ಜೈವಿಕ ಇಂಧನ ಉತ್ಪಾದನಾ ಘಟಕಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಸರಕು ಲಭಿಸಲಿದೆ.

ಶನಿವಾರ, ಸೆಪ್ಟೆಂಬರ್ 18, 2010

ಪರಿಸರ ಸಂರಕ್ಷಣೆಗೆ ನಾವೆಲ್ಲಾ ಪಣ ತೊಡಣ.


ದಶಕೂಪ ಸಮೋವಾಪಿ, ದಶವಾಪೀ ಸಮೋಹ್ರದಃ|
ದಶ ಹ್ರದಸ್ಸಮಃ ಪುತ್ರೋ, ದಶಪುತ್ರಃ ಸಮೋದ್ರುಮಃ||

ಅಂದರೆ, "ಒಂದು ಕೆರೆ ಹತ್ತು ಬಾವಿಗಳಿಗಿಂತ ಉತ್ತಮ, ಒಂದು ಸರೋವರ ಹತ್ತು ಕೆರೆಗಳಿಗಿಂತ ಉತ್ತಮ, ಹತ್ತು ಸರೋವರಗಳಿಗಿಂತ ಒಬ್ಬ ಸುಪುತ್ರನನ್ನು ಪಡೆಯುವುದು ಉತ್ತಮ, ಇದೆಲ್ಲಕ್ಕಿಂತಲೂ, ಒಂದು ವೃಕ್ಷ ವನ್ನು ಬೆಳೆಸುವುದು ಹತ್ತು ಸುಪುತ್ರರನ್ನು ಪಡೆಯುವುದುಕ್ಕಿಂತ ಉತ್ತಮ". ಮನುಷ್ಯನ ಬದುಕು ನಿರ್ಬರವಾಗಿರುವುದು ಪ್ರಕೃತಿಯ ಮೇಲೆ. ಪರಿಸರ ತನ್ನೆಲ್ಲಾ ಕೊಡುಗೆಗಳನ್ನು ಕೊಟ್ಟು ನಮ್ಮನ್ನು ಬೆಳೆಸುತ್ತದೆ. ಪರಿಸರ ಎಂದಾಗ ಕೇವಲ ವೃಕ್ಷ ಸಂಪತ್ತು ಮಾತ್ರವಲ್ಲ, ಆದರೆ ಉಳಿದ ಎಲ್ಲಾ ಸಂಪತ್ತಿಗೂ ವೃಕ್ಷ ಸಂಪತ್ತೇ ಆದಾರವಾಗಿರುವುದರಿಂದ ಪರಿಸರವೆಂದಾಕ್ಷಣ ಮರದ ಕಲ್ಪನೆ ಮೂಡುತ್ತದೆ. ನಮ್ಮ ಸಂಸ್ಕೃತಿ ಪರಿಸರಕ್ಕೆ ನೀಡಿದ ಪ್ರಾಧಾನ್ಯತೆಯನ್ನು ಬೇರಾವುದಕ್ಕೂ ನೀಡಿಲ್ಲ.
ಪರಿಸರ ಮನುಷ್ಯನಿಗೆ ತನ್ನೆಲ್ಲಾ ಕೊಡುಗೆಗಳನ್ನು ನೀಡಿದೆ. ಕುಡಿಯಲು ಜಲ, ಬದುಕಲು ನೆಲ, ಉಸಿರಾಡಲು ಶುದ್ಧ ಗಾಳಿ, ಹೀಗೆ ಹತ್ತು ಹಲವು. ಪ್ರಕೃತಿ ವೈಜ್ಞಾನಿಕತೆಗೂ ಮೀರಿ, ಎಲ್ಲವನ್ನೂ ವ್ಯವಸ್ಥಿತವಾಗಿರಿಸಿದೆ. ತನ್ನ ಗರ್ಭದಲ್ಲಿ ಹುಟ್ಟುವ ಪ್ರತಿಯೊಂದು ಜೀವಿಗೂ ಅಲ್ಲಲ್ಲೇ ಬದುಕಲು ಆಹಾರಾದಿಗಳನ್ನು ಓದಗಿಸಿದೆ. ತನ್ನ ಸಮತೋಲನವನ್ನು ಕಾಪಾಡಲು ಜೀವಚಕ್ರವನ್ನು ನಿರ್ಮಿಸಿದೆ. ತನ್ನ ನಿರಂತರತೆಯನ್ನು ಕಾಪಿಟ್ಟುಕೊಳ್ಳಲು ಗಂಡು ಹೆಣ್ಣೆಂಬ ಪ್ರತ್ಯೇಕತೆಯನ್ನು ಸೃಷ್ಟಿಸಿದೆ. ವಿಜ್ಞಾನ ತನ್ನ ಶೋಧದಿಂದ ಬಯಲು ಮಾಡಲಾಗದ ಅದೆಷ್ಟೋ ವಿಚಿತ್ರಗಳನ್ನು ತನ್ನೋಳಗೆ ಹುದುಗಿಸಿಕೊಂಡಿದೆ. ನಮ್ಮ ಪೂರ್ವಜರು ಪರಿಸರದೊಂದಿಗೆ ಹೊಂದಿದ್ದ ಅನುಬಂಧವನ್ನು ನಾವಿಂದು ಹೊಂದಿಲ್ಲ. ಮುಂದಿನ ನಮ್ಮ ತಲೆಮಾರು ಪರಸರದ ಕುರಿತಾದ ಅರಿವನ್ನೇ ಹೊಂದಿರುವುದಿಲ್ಲ. ಜನ್ಮ ಕೊಟ್ಟ ತಾಯನ್ನೇ ಮರೆಯುವ ನಾವು ಜೀವನ ಕೊಟ್ಟ ಪರಿಸರವನ್ನು ಮರೆತರೆ ಅಚ್ಚರಿಯೇನು?!
ಮನುಷ್ಯ ಎಂಬ ಶಬ್ದವು ಗುಣವಾಚಕ. ಮನುಕುಲದಲ್ಲಿ ಹುಟ್ಟಿದ ಮಾತ್ರಕ್ಕೆ ಒಬ್ಬ ಮಾನವನಾಗಬಹುದೇ ಹೊರತು, ಮನುಷ್ಯನಾಗಲಾರ. ಯಾವನು ಮನೀಷಿಯೋ ಅವ್ನು ಮಾತ್ರವೇ ಮನುಷ್ಯನಾಗುತ್ತಾನೆ. ಅಂದರೆ, ಯಾವನು ಪ್ರಜ್ನೆಯುಳ್ಳವನೋ, ವಿವೇಕಶಾಲಿಯೋ ಅವನು ಮಾತ್ರವೇ ಮನುಷ್ಯನು. ಆದರೆ ಪ್ರಜ್ಞಾಪೂರ್ಣ, ವಿವೇಕಶಾಲಿ ಮನುಷ್ಯ ತನ್ನ ಅಮಿತವಾದ ಆಸೆಯನ್ನು ಇಡೇರಿಸಿಕೊಳ್ಳುವುದಕ್ಕೆ ಪರಿಸರದ ಮೇಲೆ ಪ್ರಹಾರ ಮಾಡುತ್ತಾನೆ. ಸಹನಾ ಮೂರ್ತಿಯಾದ ಪರಿಸರ ಆವಾಗಲೇ ತನ್ನ ಪ್ರಭಾವವನ್ನು ತೋರಿಸುವುದು. ಚಂಡಮಾರುತ, ಕ್ಷಾಮ, ಸುನಾಮಿಯೇ ಮೊದಲಾದ ಮಾರಣಹೋಮ ನೆಡೆಯುವುದು ಈ ಕಾರಣದಿಂದ. ತನ್ನ ಮೈಗೆ ಕಲ್ಲೆಸೆದವರಿಗೆ ತಿರುಗಿ ಹಣ್ಣನ್ನು ನೀಡುವ ಮರವನ್ನು ಮುಲಾಜಿಲ್ಲದೇ ಕಡಿಯುವವರು ನಾವು. ಯಾವ ಭೂಗರ್ಭದಲ್ಲಿ ಬಂಗಾರ ದೊರೆಯುವುದೋ ಅದೇ ಭೂಗರ್ಭವನ್ನು ಬರಿದಾಗಿಸಹೊರಟವರು ನಾವು. ಛೇ!! ಹೆತ್ತ ತಾಯ ಕರುಳ ಬಾಗೇವ ನೀಚರು ನಾವು…!
ಗೆಳೆಯರೇ, ನಾವು ನಮ್ಮ ಮುಂದಿನ ಪೀಳಿಗೆಯನ್ನು ಕಾಣಬೇಕಾದರೆ, ನಮ್ಮ ಈ ದರಣಿಯನ್ನು ಮುಂದಿನವರಿಗಾಗಿ ಉಳಿಸಲೇಬೇಕಾಗಿದೆ. ಈ ಕುರಿತು ನಾವು ಮಾಡುವ ಕಾರ್ಯದ ಕುರಿತು ಚಿಂತನೆ ಅಗತ್ಯ. ಬರೀ ಮಾತು ಯಾ ಒಂದು ಲೇಖನ ಪ್ರಯೋಜನಕ್ಕೆ ಬಾರದು. ಇದು ಸಾರ್ಥಕವಾಗುವುದು ನಾವು ಈ ನಿಟ್ಟಿನಲ್ಲಿ ಒಂದು ದಿಟ್ಟ ಹೆಜ್ಜೆಯಿಟ್ಟಾಗ. ಆದುದರಿಂದ ಗೆಳೆಯರೇ, ನಾವು ನೀವೆಲ್ಲಾ ಮಾಡಬೇಕಾದದ್ದು ಏನೆಂದರೆ -
  • ನಾವು ವರ್ಷಕ್ಕೆ ಒಂದಾದರೂ ಗಿಡ ನೆಡಬೇಕು.
  • ಸೌಕರ್ಯ ಇಲ್ಲದವರು ಗಿಡ ನೆಡುವವರನ್ನಾದರೂ ಪ್ರೋತ್ಸಾಹಿಸಬೇಕು.
  • ನಮ್ಮ ಮಕ್ಕಳಿಗೆ ಪರಿಸರದ ಮಹತ್ವವನ್ನು ವಿವರಿಸಬೇಕು.
  • ನಮಗೆ ತಿಳಿದಷ್ಟು ಮರ-ಗಿಡ, ಪ್ರಾಣಿ-ಪಕ್ಷಿಗಳ ಬಗ್ಗೆ ನಮ್ಮ ಮಕ್ಕಳಲ್ಲಿ ಅರಿವು ಮೂಡಿಸಬೇಕು.
  • ಒಟ್ಟಾರೆ ನಮ್ಮ ನೆಲ-ಜಲ ಸಂರಕ್ಷಣೆಗೆ ಪಣ ತೊಡಬೇಕು.
ನಿಮ್ಮ ಅಭಿಮತವನ್ನು ತಪ್ಪದೇ ತಿಳಿಸಿ….

ಬುಧವಾರ, ಸೆಪ್ಟೆಂಬರ್ 15, 2010

ಜೈವಿಕ ಕಾರ್ಯಪಡೆ

ವಿಶ್ವದೆಲ್ಲೆಡೆ ಪೆಟ್ರೋಲ್ ಡೀಸಲ್‌ಗಳಿಗೆ ಪರ್ಯಾಯ ಶಕ್ತಿಮೂಲಗಳ ಹುಡುಕುವಿಕೆ ಅವಿರತವಾಗಿ ನಡೆದಿದೆ. ಆದರೆ ಭಾರತದ ಬಹಳಷ್ಟು ಆದಾಯ ಆಮದು ಮಾಡಿಕೊಳ್ಳುತ್ತಿರುವ ಶಕ್ತಿಮೂಲಗಳಿಗೇ ವ್ಯಯವಾಗುತ್ತಿದೆ. ಇದನ್ನು ಕಡಿಮೆ ಮಾಡಲು ದೇಶದಲ್ಲಿ ಅವಿತರ ಪ್ರಯತ್ನಗಳು ನಡೆದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕೂಡ ಪರ್ಯಾಯ ಶಕ್ತಿಗಮೂಲಗಳಿಗಾಗಿ ನಿರಂತರ ಹುಡುಕಾಟ ನಡೆಸಿವೆ.

ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು 2008ರ ಸೆಪ್ಟೆಂಬರ್ ತಿಂಗಳಿನಲ್ಲಿ ಅಗತ್ಯ ಕಾರ್ಯಕ್ರಮ ಕೈಗೊಳ್ಳಲು ಹಾಗೂ ಅದರ ಅನುಷ್ಠಾನಕ್ಕೆ ಅಗತ್ಯ ಮಾರ್ಗಸೂಚಿಗಳನ್ನು ಒಳಗು ಮಾಡಲು ಜೈವಿಕ ಕಾರ್ಯಪಡೆ ರಚಿಸಿತು. ಈ ಕಾರ್ಯಪಡೆಯ ಅಧ್ಯಕ್ಷರಾಗಿ ವೈ.ಬಿ. ರಾಮಕೃಷ್ಣ ಅವರನ್ನು ನೇಮಿಸಿತು.

ರಾಜ್ಯ ಸರ್ಕಾರ ರಚಿಸಿರುವ ಜೈವಿಕ ಕಾರ್ಯಪಡೆಯ ಮೂಲ ಉದ್ದೇಶ ಜೈವಿಕ ಇಂಧನ ಕಾರ್ಯಕ್ರಮ ಅನುಷ್ಠಾನಗೊಳಿಸುವುದು. ಈ ಪೂರಕ ಶಕ್ತಿಮೂಲ ಉತ್ಪಾದನೆಗೆ ಜನರ ಸಹಭಾಗಿತ್ವ, ಜೈವಿಕ ಇಂಧನ ಮೌಲ್ಯವರ್ಧನೆ, ಜೈವಿಕ ಬೀಜ ಉತ್ಪಾದನೆ ಮುಂತಾದವುಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದೇ ಆಗಿದೆ.

ಜೈವಿಕ ಇಂಧನಗಳಾದ ಎಥೆನಾಲ್ ಹಾಗೂ ಬಯೋ ಡೀಸೆಲ್‌ಗಳು ಈಗಾಗಲೇ ದೇಶದಲ್ಲೇ ಪ್ರಥಮಬಾರಿಗೆ ರಾಜ್ಯದಲ್ಲಿ ಶೇ.5ರಷ್ಟು ಬಳಕೆಯಲ್ಲಿದೆ. ರಾಜ್ಯದಲ್ಲಿ ಬಳಸುತ್ತಿರುವ ಪೆಟ್ರೋಲ್ ನಲ್ಲಿ ಇದನ್ನು ಬಳಕೆ ಮಾಡುತ್ತಿದ್ದು ಕಾರ್ಯಪಡೆ ಈ ವರ್ಷಾಂತ್ಯಕ್ಕೆ ಇದನ್ನು ಶೇ.10ಕ್ಕೇರಿಸುವ ಗುರಿ ಹೊಂದಿದೆ. ಬರುವ ದಿನಗಳಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಈಗಿರುವ ಸಸ್ಯ ಮೂಲಗಳ ಜೊತೆಗೆ ಕೃಷಿ ತ್ಯಾಜ್ಯ ಹಾಗೂ ನಗರ ತ್ಯಾಜ್ಯಗಳೆರಡನ್ನು ಜೈವಿಕ ಇಂಧನ ಉತ್ಪಾದಿಸುವ ಅಗತ್ಯ ತಂತ್ರಜ್ಞಾನದ ಬಗ್ಗೆ ಕಾರ್ಯ ರೂಪಿಸಲಾಗುತ್ತಿದೆ ಎನ್ನುತ್ತಾರೆ ರಾಮಕೃಷ್ಣ.

ಕಾರ್ಯಪಡೆ ರಚಿತವಾದ 1 ವರ್ಷದಿಂದೀಚೆಗೆ ರಾಜ್ಯದ 6000 ಹೆಕ್ಟೇರ್‌ನಷ್ಟು ಸರ್ಕಾರದ ಪಾಳುಬಿದ್ದ ಜಮೀನಿನಲ್ಲಿ ಜೈವಿಕ ಇಂಧನ ಉತ್ಪಾದನೆ ಅಗತ್ಯವಾದ ಬೀಜೋತ್ಪಾದನೆಗೆ ಗಿಡ ನೆಡುವ ಕಾರ್ಯ ಯಶಸ್ವಿಯಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ರಾಜ್ಯವನ್ನು ಸರ್ಕಾರಿ ಹಾಗೂ ಕೃಷಿಯೇತರ ಖಾಸಗಿ ಭೂಮಿ ಸೇರಿ ಒಂದು ಲಕ್ಷ ಹೆಕ್ಟೇರ್‌ಗೆ ಹೆಚ್ಚಿಸಬೇಕೆಂಬುದು ಕಾರ್ಯಪಡೆಯ ಗುರಿಯಾಗಿದೆ. ಅಲ್ಲಿ ಸುಮಾರು 30 ಲಕ್ಷ ಸಸಿಗಳನ್ನು ನೆಡುವ ಗುರಿ ಇದೆ. ಈಗಾಗಲೇ ದಾವಣಗೆರೆ ಜಿಲ್ಲೆಯ ದಾವಣಗೆರೆ, ಜಗಳೂರು ಹಾಗೂ ಹರಪನಹಳ್ಳಿ ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಎನ್ಆರ್ಈಜಿ ಕಾರ್ಯಕ್ರಮದಡಿ ಈ ಕಾರ್ಯ ಕೈಗೊಳ್ಳಲಾಗಿದೆ.

ಪ್ರತಿ ಸಸಿ ಬೆಳೆಯಲು 22 ರೂಪಾಯಿ ಹಾಗೂ ಸಸಿಯನ್ನು ಉತ್ತಮವಾಗಿ ಬೆಳೆಸಿ ಒಂದು ವರ್ಷ ಪಾಲನೆ ಮಾಡಿದರೆ ಆರು ರೂಪಾಯಿಗಳ ನೆರವು ನೀಡಲಾಗುತ್ತದೆ.ಈಗ ರಾಜ್ಯದಲ್ಲಿ ಬಯೋಡೀಸೆಲ್ ಬಳಕೆ ನಡೆದಿದೆ. ರಸ್ತೆ ಸಾರಿಗೆ ಸಂಸ್ಥೆಯ 2000 ವಾಹನಗಳಲ್ಲಿ ಇದನ್ನು ಇಂಧನ ಮೂಲವಾಗಿ (ಶೇ7.7 ನಷ್ಟನ್ನು ಡೀಸಲ್ ಜೊತೆ) ಬಳಕೆ ಮಾಡುತ್ತಿದ್ದು ಸಾರಿಗೆ ಸಂಸ್ಥೆಯ ಎಲ್ಲ ವಾಹನಗಳಲ್ಲೂ ಬಳಕೆ ಮಾಡುವ ಉದ್ದೇಶವಿದೆ. ಜೈವಿಕ ಇಂಧನ ಬಳಕೆ ಯಶಸ್ವಿಗೊಳಿಸಲು ಹಾಸನ ಜಿಲ್ಲೆ ಮಡೆನೂರು ಬಳಿ ಜೈವಿಕ ಇಂಧನ ಉದ್ಯಾನ ರೂಪಿಸಲಾಗಿದೆ.

ಹಾಸನ ಜಿಲ್ಲೆ 23 ಗ್ರಾಮಗಳಲ್ಲಿ ಸುಮಾರು 350 ಸಹಕಾರ ಸಂಘಗಳು ರಚನೆಗೊಂಡಿವೆ. ಅವುಗಳ ಅಧಿಕೃತ ನೋಂದಣಿ ಇನ್ನೂ ಆಗಬೇಕಿದೆ. ಕಾಲಕ್ಕೆ ತಕ್ಕಂತೆ ಪರ್ಯಾಯ ಇಂಧನ ಉತ್ಪಾದನೆಗೆ ಹೊಂಗೆ, ಬೇವು, ಹಿಪ್ಪೆ, ಜತ್ರೋಪ ಇತ್ಯಾದಿಗಳನ್ನು ಬೆಳೆಯಬಹುದಾಗಿದೆ
ರಾಜ್ಯದಲ್ಲಿ ಪ್ರಸ್ತುತ 5.75 ಲಕ್ಷ ಟನ್ ಹೊಂಗೆ ಬೀಜ ಉತ್ಪಾದನೆ ಆಗುತ್ತಿದೆ. ಕಾರ್ಯಪಡೆ ಜೈವಿಕ ಶಕ್ತಿ ಉತ್ಪಾದನೆ ಹಾಗೂ ಬಳಕೆಯ ಯಶಸ್ವಿ ಅನುಷ್ಠಾನಕ್ಕೆ ಜೈವಿಕ ಇಂಧನ ಮಂಡಳಿ ರಚನೆಗೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಜೈವಿಕ ಕಾರ್ಯಪಡೆ ಕಚೇರಿಯು ಬೆಂಗಳೂರಿನ ಡಾ ಬಿ ಆರ್ ಅಂಬೇಡ್ಕರ್ ವೀದಿಯ ಬಹುಮಹಡಿ ಕಟ್ಟಡದ 5ನೇ ಹಂತದಲ್ಲಿರುವ 6ನೇ ಕೊಠಡಿಯಲ್ಲಿದೆ.

ಶುಕ್ರವಾರ, ಸೆಪ್ಟೆಂಬರ್ 10, 2010

ಜೈವಿಕ ಇಂಧನ ಸ್ವಾವಲಂಬಿ ಕೃಷಿ ಬದುಕಿನ ಶಕ್ತಿ

ಇತ್ತೀಚಿನ ದಿನಗಳಲ್ಲಿ ವಿಶ್ವದ ಜನಸಂಖ್ಯೆ ಏರುತ್ತಲೆ ಇದೆ. ಜೊತೆಗೆ ವಿವಿಧ ರೀತಿಯ ವಾಹನಗಳ ಸಂಖ್ಯೆಯು ಕೂಡ ಜಾಸ್ತಿಯಾಗುತ್ತಿದೆ. ಈ ಕಾರಣದಿಂದ ಪ್ರತಿ ದಿನವು ವಿಶ್ವದ ಇಂಧನ ಬೇಡಿಕೆ ಗಣನೀಯವಾಗಿ ಏರುತ್ತಿದೆ. ಅಂಕಿ ಅಂಶಗಳ ಪ್ರಕಾರ ಭೂಗರ್ಭದಲ್ಲಿ ಸಿಗುವ ಇಂಧನ ಮೂಲಗಳು ಇನ್ನು ಕೆಲವೇ (20-30ವರ್ಷ) ವರ್ಷಗಳಲ್ಲಿ ಬರಿದಾಗಿ ಹೋಗುವ ಮುನ್ಸೂಚನೆ ಇದೆ. ಅಂತಹ ಸಮಯದಲ್ಲಿ ಇಂಧನ ಸಮಸ್ಯೆಯೆಂಬುದು ಎಲ್ಲರನ್ನು ದೊಡ್ಡ ಭೂತವಾಗಿ ಕಾಡಬಹುದು.
 ಈ ಮೇಲಿನ ಎಲ್ಲಾ ಕಾರಣಗಳನ್ನು ಗಮನಿಸಿದರೆ, ಈಗ ಬಳಸುತ್ತಿರುವ ಸಾಂಪ್ರದಾಯಿಕ ಇಂಧನಗಳ ಜೊತೆಗೆ ನವಿಕರಿಸಬಹುದಾದ ಜೈವಿಕ ಇಂಧನವನ್ನ ಉತ್ಪಾದಿಸಿ ಉಪಯೋಗಿಸಿದರೆ ಮುಂದೆ ಕಾಡುವ ಒಂದು ದೊಡ್ಡ ಭೂತವನ್ನು ಸುಲಭವಾಗಿ ಎದುರಿಸಬಹುದು.
  
ಈಗ ಅಭಿವೃದ್ಧಿಶೀಲವಾಗಿರುವ ಭಾರತ ಮುಂದಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ ಸಾಧ್ಯವಾದಷ್ಟು ಇಂಧನವನ್ನು ಅಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ ತನ್ನಲ್ಲಿಯೇ, ಅವಶ್ಯಕವಾದ ಬದಲಿ ಇಂಧನ ಉತ್ಪತ್ತಿ ಮಾಡಬೇಕು. ಹೇರಳವಾದ ನಿಸರ್ಗ ಸಂಪತ್ತು ನಮ್ಮಲ್ಲಿಯೆ ಇದೆ. ಆದುದರಿಂದ ಬದಲಿ ಇಂಧನ ಮೂಲಗಳನ್ನು ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಪ್ರಾಕೃತಿಕವಾಗಿ ದೊರೆಯುವ ಸಸ್ಯಮೂಲಗಳಿಂದ ಜೈವಿಕ ಇಂಧನ ಉತ್ಪಾದನೆ ಹಾಗೂ ಪ್ರಕೃತಿಯ ಸಹಜತೆಯನ್ನು ಸುಸ್ಥಿರ ಸ್ಥಿತಿಗೆ ತರುವುದು ಅವಶ್ಯಕವಾಗಿದೆ. ಈ ಸಸ್ಯ ಮೂಲಗಳನ್ನು ಕೃಷಿಕರು ತಮ್ಮ ಜಮೀನಿನ ಬದುಗಳಲ್ಲಿ, ಹಿತ್ತಲು, ಸಾಮೂಹಿಕ ಸ್ಥಳಗಳು ಹಾಗೂ ಬಂಜರು ಭೂಮಿಯಲ್ಲಿ ಬೆಳೆಯಬಹುದಾಗಿದೆ.

ಪ್ರಮುಖವಾಗಿ ಹೊಂಗೆ, ಬೇವು, ಹಿಪ್ಟೆ, ಸಿಬರೂಬಗ್ಲಾಕ, ಜಟ್ರೋಪ ಇನ್ನಿತರ ಹಲವಾರು ಸಸ್ಯಗಳ ಮೂಲಕ ಬಯೋಡೀಸಲ್ (ಜೈವಿಕ ಇಂಧನ) ಉತ್ಪಾದನೆ ಮಾಡಬಹುದಾಗಿದೆ. ಜೋಳ, ಕಬ್ಬು, ಬೀಟ್ರೂಟ್, ಮುಸುಕಿನ ಜೋಳಗಳಂತ ಬೆಳೆಗಳು ಮತ್ತು ಕೊಳೆತ ಉಪಯೋಗಕ್ಕೆ ಬಾರದ ಹಣ್ಣು ತರಕಾರಿಗಳನ್ನು ಇಥೆನಾಲ್ ಉತ್ಪಾದನೆಗಾಗಿ ಬಳಸಬಹುದಾಗಿದೆ. ಬಯೋಡೀಸಲ್ಅನ್ನು ರೈತರು ತಮ್ಮ ಮನೆಯಲ್ಲಿಯೇ ತಯಾರು ಮಾಡಿಕೊಳ್ಳಬಹುದು. ಕಾಲಕ್ಕೆ ತಕ್ಕಂತೆ ದೊರೆಯುವ ಬೀಜಗಳನ್ನು ಶೇಖರಣೆ ಮಾಡಿಕೊಂಡು, ಅವುಗಳನ್ನು ಪುಟ್ಟ ವಾಕ್ವಾಫೆಲ್ಲಿರ್-(ಗಾಣ) ಯಂತ್ರದ ಮುಖಾಂತರ ಎಣ್ಣೆ ತೆಗೆಯಬೇಕು. ಒಂದು ಲೀಟರ್ ಹೊಂಗೆ ಎಣ್ಣೆಗೆ 100-150 ಎಮ್ಎಲ್ ಇಥಿನಾಲ್ ಮತ್ತು 10-15 ಗ್ರಾಂ ಸೋಡಿಯಂ ಹೈಡ್ರಾಕ್ಸೈಡ್ ಅನ್ನು ಬೆರೆಸಿ ಚೆನ್ನಾಗಿ ಕಲಕಿ ಒಂದು ದಿವಸ ಹಾಗೆ ಇಡಬೇಕು. ಮೇಲ್ಬಾಗದಲ್ಲಿ ಬಯೋಡೀಸಲ್ ಶೇಖರಗೊಂಡರೆ, ತಳಭಾಗದಲ್ಲಿ ಗ್ಲಿಸರೀನ್ ಉಪಉತ್ಪನ್ನ ಶೇಖರಗೊಳ್ಳುತ್ತದೆ. ಗ್ಲಿಸರಿನ್ ಅನ್ನು ಬೇರ್ಪಡಿಸಿದರೆ, ಬಳಸಲು ಯೋಗ್ಯವಾದ ಬಯೋಡೀಸಲ್ ದೊರೆಯುತ್ತದೆ.

ಬಯೋಡೀಸಲ್ ಪ್ರಯೋಜನಗಳು:-
* ಪರಿಸರ ಸ್ನೇಹಿ ಜೈವಿಕ ಇಂಧನ
* ಎಣ್ಣೆ ಅಂಶ ಚೆನ್ನಾಗಿ ಇರುವುದರಿಂದ, ವಾಹನಗಳು ಸುಲಭವಾಗಿ ತಿರುಗುವುದರಿಂದ, ಅವುಗಳ ಆಯಸ್ಸು ಹೆಚ್ಚುತ್ತದೆ.
* ಎಣ್ಣೆ ಬೇರ್ಪಡಿಸಿದ ನಂತರ ದೊರೆಯುವ ಮಡ್ಡಿ (ಹಿಂಡಿ) ಉತ್ತಮ ಸಾವಯವ ಗೊಬ್ಬರವಾಗುತ್ತದೆ.
* ಎಲ್ಲದಕ್ಕಿಂತ ಹೆಚ್ಚಾಗಿ ಖರ್ಚಿಲ್ಲದೆ ಸ್ವಂತ ಬಳಕೆಗೆ ಅವಶ್ಯಕವಾದ ಡೀಸಲ್ಅನ್ನು ತಯಾರು ಮಾಡಿಕೊಳ್ಳಬಹುದು.

ಅರ್ಥಿಕ ಲೆಕ್ಕಾಚಾರ:-
ಒಂದು ಲೀಟರ್ ಹೊಂಗೆ ಎಣ್ಣೆ ಉತ್ಪಾದನೆ ಮಾಡಲು 3.5 ಕೆ.ಜಿ. ಹೊಂಗೆ ಬೀಜಬೇಕಾದರೆ, 100ಎಮ್ಎಲ್ ಇಥೆನಾಲ್, 15 ಗ್ರಾಂ ಸೋಡಿಯಂ ಹೈಡ್ರಾಕ್ಸೈಡ್ ಬೇಕು.

ಖರ್ಚು :-
3.5 ಕೆ.ಜಿ. ಹೊಂಗೆ ಬೀಜದ ಬೆಲೆ 35 ರೂ. (10 ರೂ./ಕೆ.ಜಿ)
ಎಥಿನಾಲ್, ಸೋಡಿಯಂ ಹೈಡ್ರಾಕ್ಸೈಡ್, ಪ್ರೋಸಸಿಂಗ್ ಖರ್ಚು 08 ರೂ.
ಒಟ್ಟು 43 ರೂ.

ಆದಾಯ:-
1 ಲೀಟರ್ ಬಯೋಡಿಸಲ್ 40 ರೂ.
2.5 ಕೆ.ಜಿ. ಹೊಂಗೆ ಇಂಡಿ 15 ರೂ.
200 ಎಂಎಲ್ ಗ್ಲಿಸರೀನ್ 6 ರೂ.
ಒಟ್ಟು 61 ರೂ.

ಈ ಮೂಲಕ ಲೆಕ್ಕಾಚಾರದ ಅಂಕಿಅಂಶಗಳನ್ನು ಗಮನಿಸಿದರೆ, ಬಯೋಡೀಸಲ್ ಉತ್ಪಾದನೆ ಲಾಭದಾಯಕ ಮತ್ತು ಸ್ವಾವಲಂಬಿ ವಿಧಾನವಾಗಿದೆ. ಬೇಗಬೇಗ ಬದಲಾಗುತ್ತಿರುವ ಈ ಕಾಲದಲ್ಲಿ ಕೃಷಿಕರು ಇತರ ವರ್ಗಗಳಂತೆ ಸಮನಾಗಿ ಜೀವನ ನಡೆಸಬೇಕು ಎಂದುಕೊಂಡರೆ, ಹಿಂದಿನ ಹಿರಿಯರ ಅನುಭವದೊಂದಿಗೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿಯು ಸಹ ಉದ್ಯಮ ಎಂದು ಪರಿಗಣಿಸಿ, ಮುನ್ನೆಡೆಯಬೇಕು.

ಮಂಗಳವಾರ, ಸೆಪ್ಟೆಂಬರ್ 7, 2010

ಅರಳಿ ಮರಗಳಡಿ ಅರಳಿದ ಗ್ರಾಮ

OÚßÈÚßmÛ }ÛÄàP«Ú ÔæVÚsæ VÛÃÈÚߥÚÆÇ OÛÆmæàosÚ«æ OÚMt¥Úߧ @ÁÚØÈÚßÁÚ. JM¥ÚÄÇ, GÁÚsÚÄÇ. †Û¬Væ aÚ~à Õt¥ÚM}æ OÛ{ÑÚßÈÚ «ÚàÁÛÁÚß ÈÚßÁÚVÚ×Úß.

@¥Úà J®Ú°KÁÚyÈÛW OÚmæo OÚno¥Ú @ÁÚØ(@ËÚ‡}Ú¤)ÈÚßÁÚVÚ×Úß. OÚyß| ÔÛ¿ßÒ¥ÚÅæÇÄÇ BÈÚâ OÛ{Ò¥ÛVÚ, ÈÚßÁÚVÚ×Ú @t¾ÚßÆÇ «Úsæ¾ÚßßÈÚ É¥ÚÀÈÚáÛ«ÚVÚ×Úß BÈÚâVÚ×Ú …VæX B«Ú"ÎÚßo OÚß}ÚàÔÚÄ ÈÚßàtÒ¥ÚÈÚâ.

@ÅæàÇM¥Úß OÚmæo¾ÚßÆÇ ÈÚßÕ×æ¾ÚßÁÚß ÑÚß}Úß¡ ÔÛOÚß~¡¥Û§Áæ.

3,7,11.... G{ÑÚß}Ú¡ G{ÑÚß}Ú¡ «Ú«ÚVæ }ÚÅæÑÚß}Úß¡ …M¥ÚÁÚà ÑÚß}Úß¡ ~ÁÚßVÚß~¡ÁÚßÈÚ ÈÚßÕ×æ¾ÚßÁÚ D}ÛÓÔÚ PM_}Úà¡ PÐÞ{ÑÚÆÄÇ. BÅæàÇM¥Úß @ÁÚØOÚmæo¾Úß ÈæßÞÅæ OÚàÆ OÛ½OÚÁÚß ®ÚmÛoMVÚ Ôæàsæ¾Úßß}Ú¡ ÉËÚÃÉßÑÚß~¡¥Û§Áæ. ÈÚß}æà¡M¥Úß OÚmæo¾Úß ÈæßÞÅæ †Û×æÔÚyß|, G×æ¬ÞÂ«Ú ÈÚáÛÁÛl ºÚÁÚ¦M¥Ú «Úsæ¾Úßß~¡¥æ. ÈÚßVÚ¥æàM¥Úß OÚmæo¾Úß ÈæßÞÅæ OÚßOÚQÁÚßVÛÆ«ÚÆÇ OÚßØ}Ú ÈÚßÕ×æ¾ÚßÁÚß OÚÉOÛy¥Ú ÁÚÔÚÑÚÀÈÚನ್ನೂ OÚmæo®Úâ´ÁÛy¥Ú ÈÚßàÄOÚ ËæàÞƒÑÚß~¡¥Û§Áæ. @ÈæßÂOÚ¥Ú @¨Ú´ÀOÚÐ …ÁÛOé J†ÛÈÚáÛÂM¥Ú Õt¥Úß OÚàÆOÛ½OÚÁÚ …¥ÚßP«Ú _}ÚÃyVÚ×Úನ್ನೂ C OÚmæoVÚ×Úß }æÁæ¦sÚß}Ú¡Èæ.

OÚmæo¾Úß OÚ¢æVÚ×Úß ¬dOÚàQ @^Ú`Â¥Û¾ÚßOÚÈÛWÈæ. ÔæVÚsæ VÛÃÈÚß¥Ú ÈÚßÕ×æVæ ÈÚߥÚßÈæ¾ÚáÛW OæÄ ÈÚÁÚÐVÚ×Úß OÚ×æ¥ÚÁÚà ÈÚßOÚQ×ÛVÚÆÄÇ GM¥ÚÁæ AOæ @ÁÚØÈÚßÁÚ «ælßo OÚmæo OÚnoÒ ®Úãeæ ÑÚÆÇÑÚßÈÚâ¥ÛW ÔÚÁÚOæ ÔæàÁÚß}Û¡×æ. B¥Úß GÄÇÂVÚà Væà~¡ÁÚßÈÚ ÑÚM®ÚÃ¥Û¾Úß. ÔÚÁÚOæ Ôæà}Ú¡ GÄÇÂVÚà ÑÚM}Û«Ú®ÛÚáÛW¥æ¾æß BÄÇÈæ G«Úß"ÈÚâ¥Úß †æÞÁæ É^ÛÁÚ. A¥ÚÁæ «ælo @ÁÚØWsÚÈÚ«Úß" ÈÚáÛ}Úà ÈÚßVÚßÉ«ÚM}æ @OÚQÁæ¿ßM¥Ú †æ×æÒ¥Úߧ ÈÚáÛ}Úà ÑÚ}ÚÀ. B¥ÚOæQ @ÆÇÁÚßÈÚ @ÁÚØÈÚßÁÚVÚ×Úß, @¥ÚOæàQM¥Úß OæM®Úâ´OÚÆÇ«Ú OÚmæoVÚ×æÞ ÑÛPоÚáÛWÈæ. _OÚQ WsÚ «ælßo ÈÚÁÚÐÉtÞ ¬ÞÁæÁæ¥Úß ®æãÞÏÒ¥Ú ¬ÞÁæ¾ÚßÁæ ÔæVÚsæ¾ÚßÆÇ @ËÚ‡}Ú¤ÈÚßÁÚVÚ×Ú OÛÃM~Væ OÛÁÚyÁÛ¥ÚÈÚÁÚß.

ÔæVÚsæ¾Úß ËÛM~OÛM†Û ¥æÞÉ, OÛ«ÚÈÚß½ ¥æÞÉ, ¸ÞÁÚ ¥æÞÈÚÑÛ¤«Ú, CËÚ‡ÁÚ, VÚy®Ú~ Èæà¥ÚÅÛ¥Ú ¥æÞÈÚ, ¥æÞÈÚ}æVÚ×Úß ÈÚÁÚÐOæàQÈæß½ C GÄÇ @ÁÚØOÚmæoVÚØVÚà AVÚÉßÒ ®Úãeæ Ò‡ÞOÚÂÑÚß}Ú¡Èæ. B¥ÚÂM¥Ú BÈÚâVÚØVæ ¨ÚÁÚ½OÚmæoVÚ×æM¥Úà ÔæÑÚÁÚß …M¦¥æ. ¥æÞÈÚÁÚß …ÁÚßÈÚ ¦«Ú¥ÚM¥Úß OÚmæo ÒMVÛÁÚVæà×ÚßÙ}Ú¡¥æ. ÁÚMVæàÞÆ ÔÛP ÑÚMºÚ´ÃÉßÑÚß}Û¡Áæ. B¥Úನ್ನು OÚmæo®Úãeæ GM¥æÞ OÚÁæ¾ÚßÅÛVÚß}Ú¡¥æ.

C OÚmæoVÚ×Úನ್ನು ¬Â½Ò¥ÚÈÚÁÚ ÔæÑÚ¬M¥ÚÅæ VÚßÁÚß~ÑÚÅÛVÚß}Ú¡¥æ. ÔæVÚsæ OÚmæo, OÛÌÞ«Û¢Ú ËÛ«ÚºæàÞVÚÁÚ OÚmæo, ¥æÞÈÚÁÚß ÔæVÚsæ OÚmæo ÕÞVæ JM¥æàM¥Úß OÚmæoVÚà J†æๅ¹ÁÚ ÔæÑÚÁÚß }Ú×ÚOÚßÔÛPOæàMt¥æ. ÔÚÈÚÀOÚ ÔÛVÚà VèsÚ ÑÛÁÚÑÚ‡}Ú †ÛÃÔÚ½yÁÚß BÆÇ Ôæ_`«Ú ÑÚMSæÀ¾ÚßÆÇ @ÁÚØOÚmæo ¬Â½Ò¥Û§Áæ.

OÚmæo ¬Â½ÑÚÅÛ¥Ú @ÁÚØÈÚßÁÚVÚ×Ú ÑÚMSæÀ ÑÚßÈÚáÛÁÚß 50ÂM¥Ú 55ÁÚÏoÈæ. OÚmæo¿ßÄÇ¥Ú @ÁÚØÈÚßÁÚVÚ×Úß B¥ÚPQM}Ú Ôæ_`«Ú ÑÚMSæÀ¾ÚßÆÇÈæ. OæÄ @ÁÚØÈÚßÁÚ¥Ú @t¾ÚßÆÇ OÚÄßÇVÚM…VÚ×Úನ್ನು ¬Â½Ò ÈæßÞÅÛcÈÚ{ ÈÚáÛt ÔæM^Úß ÔÛOÚÅÛW¥æ. B¥æàM¥Úß ÑÚßÑÚfg}Ú ÈÚß«æ GM…M}æ OÛ{ÑÚß~¡¥æ.

OÚmæo ¬Â½ÑÚÅÛ¥Ú GÄÇ ÈÚßÁÚVÚØVÚà …ÃÔæà½Þ®Ú¥æÞËÚ ÈÚáÛsÚÅÛW¥æ. @ÁÚØÈÚßÁÚ¥Ú …ÃÔæà½Þ®Ú¥æÞËÚOæQ EÂVæ EÁæÞ ÑæÞÁÚß}Ú¡¥æ. @M¥Úß eÛ}æþÚß ÑÚMºÚ´ÃÈÚß, ÑÚsÚVÚÁÚ. ÈÚßÁÚVÚ×Úß C EÂ«Ú ÈÚßOÚQ×ÚM}æ †æ×æ¥Úß…M¦Èæ.

BÆÇ …ÔÚß}æÞOÚ @ÁÚØÈÚßÁÚVÚ×Úß, OÚmæoVÚ×Úß ¬ÁÛ½yÈÛW «ÚàÁÛÁÚß ÈÚÁÚÐVÚ×æÞ ÑÚM¦Èæ. C_«Ú ÈÚÁÚÐVÚ×ÚÄàÇ AVæàM¥Úß CVæàM¥Úß @ÁÚØÈÚßÁÚ, OÚmæoVÚ×Úß ¬ÁÛ½yÈÛVÚß~¡Èæ. ÈÚßÕ×æ¾ÚßÁÚÆÇ …Meæ}Ú«Ú ¬ÈÛÁÚzæVæ A¨Ú߬OÚ Èæç¥ÚÀËÛÑÚ¡ð¥ÚÆÇ ÉÉ¨Ú _P}æÓVÚ×Úß …M¦¥Ú§ÂM¥Ú d«ÚÁÚ «ÚM¸Oæ OÚÃÈæßÞy OÚtÈæß¾ÚáÛVÚß~¡¥æ. ÔÛVÛW @ÁÚØÈÚßÁÚVÚ×Ú ÑÚM}Û«Û»ÈÚ䦪 PÐÞ{Ò¥æ. A¥ÚÁæ CWÁÚßÈÚ BÆÇ«Ú JM¥Úß OÚmæo¾Úßನ್ನೂ ÔÛ×Úß ÈÚáÛtÄÇ. ¥æÞÈÚÁÚ ®ÚÄÇPQVÚ×Úß BÆÇ OÚßØ}ÚßOæà×ÚßÙÈÚâ¥ÚÂM¥Ú ËÚÃ¥æª, ¨Û½OÚ ºÛÈÚ«æVÚØM¥ÛW OÚmæoVÚ×Úß ÑÚMÁÚPÐÑÚÄ°noÈæ.

OÚßÈÚßmÛ …Ø ¦ÈÚW ÑæÞ}ÚßÈæ ¬ÁÛ½yOæQ ÈÚßßನ್ನ ÈÚßMVÚ×ÚàÁÚß OÛÁÚÈÛÁÚ Ôæ¥Û§Â ÔæVÚsæ ÈÚßàÄOÚÈæ ÔÛ¥ÚßÔæàÞW}Úß¡. ÔæVÚsæ¿ßM¥Ú ÉßÁÛg«éVæ @YÚ«Û̬ «Ú¦¾Úßನ್ನು †ÛÁég ÈÚßàÄOÚ ¥ÛlÅÛVÚß~¡}Úß¡. d}æVæ ^ÚOÚQt VÛtVÚ×Úà ÔæÞÁÚ×Ú ÑÚMSæÀ¾ÚßÆÇ C ÈÚáÛÁÚX¥ÚÆÇ ÑÚM^ÚÂÑÚß~¡¥Ú§ÈÚâ. AVÚ ®ÚþÚáÛ{OÚÁÚß, ^ÚOÚQtVÛtVÚ×ÚÆÇ ÑÚM^ÚÂÑÚßÈÚ d«ÚÁÚß C @ÁÚØÈÚßÁÚVÚ×Ú Oæ×ÚVæ AËÚþÚß ®Úsæ¾Úßß~¡¥Ú§ÁÚß. A ÑÚM¥ÚÁÚ¼¥ÚÆÇ BÆÇ«Ú @ËÚ‡}Ú¤OÚmæoVÚ×Úß ®Úâ´OÚQmæ ÈÚÑÚ~VÚäÔÚVÚ×ÚM}æ …×ÚOæ¾ÚáÛVÚß~¡¥Ú§ÈÚâ.

±æçOÚÑé eÛ~Væ ÑæÞÂÁÚßÈÚ AÄ, @ÁÚØ, @~¡, …ÑÚ ÈÚäOÚÐVÚ×Úನ್ನು fÞÈÚ ÈæçɨڴÀ}æ¾Úß }ÛyVÚ×Úß GM¥Úß OÚÁæ¾ÚßÅÛVÚß~¡Èæ. ÈÚÁÚÐÉtÞ @ÑÚMSÛÀ}Ú ®ÚPÐVÚ×Úß, DsÚ, ÔÛÈÚâÁÛ{, @ØÄß, ÄMVÚàÁÚ, K~, ÑÚÔÚÑÚîڦVÚ×Ú AËÚþÚß }ÛyVÚØÈÚâ. C ÈÚßÁÚVÚ×æÞ JM¥Úß D¥ÛÀ«Ú GM¥ÚÁæ }Ú®Û°VÚÅÛÁÚ¥Úß.

ÉeÛk¬VÚ×Úß C ÈÚßÁÚVÚ×Úನ್ನು ÔÚØÙ¾Úß ËÛ‡ÑÚOæàÞËÚVÚಳೆನ್ನು}Û¡Áæ. ÈÛ}ÛÈÚÁÚyÈÚನ್ನು ®ÚÂËÚߥڪVæàØÑÚßÈÚÆÇ @ËÚ‡}Ú¤ ÈÚßÁÚVÚ×Ú ®Û}Úà ÕÂ¥æನ್ನುÈÚâ¥Úß ®ÛÃ_Þ«Ú VÚÃM¢ÚVÚ×ÚÄàÇ DÅæÇÞRÈÛW¥æ. ÔæVÚsæ¾Úß }ÚßM†Û }æà«æ¥ÛsÚß~¡ÁÚßÈÚ BM}ÚÔÚ ÈÚßÁÚVÚ×Úß ËÚ}ÚÈÚáÛ«Ú¦M¥Ú @ÆÇ«Ú ËÛ‡ÑÚOæàÞËÚVÚ×ÛW OÛÁÚÀ¬ÁÚ‡ÕÑÚß~¡Èæ.

@M¥ÚÔÛVæ ÔæVÚsæ VÛÃÈÚß¥Ú d«ÚÁÚß ¦ÞÁÛ[¾ÚßßÏVÚ×Úß. BÆÇ«Ú d«ÚÂVæ @«ÛÁæàÞVÚÀÈÚã Ôæ^Û`W †ÛƒÑÚ¥Úß. C ®Úâ´lo VÛÃÈÚߥÚÆÇ d«ÚÑÚMSæÀ ÑÛOÚÏo¥Ú§ÁÚà JM¥æÞ JM¥Úß ®ÚãÁÚ|OÛÆOÚ AÑÚ°}æà BÄÇ. ÈÚßÕ×æ¾ÚßÁÚß ®ÚÃ~¦«Ú ÈÚßßMeÛ«æ @ÁÚØÈÚßÁÚOæQ ÑÚß}Úß¡ ÔÛOÚßÈÚâ¥ÚÂM¥Ú @ÂÉÄÇ¥ÚM}æ ÈÛÀ¾ÚáÛÈÚßÈÚã AW OÛÄß«æàÞÈÚâ, VÚMlß«æàÞÈÚâ, ÔÚä¥Ú¾ÚßOæQ ÑÚM…M¨Ú®Úlo OÛ¿ßÅæ ÑÚÈÚßÑæÀ¾Úßà Ôæ^Û`W OÛsÚ¥Úß.

«ÚM¸Oæ¿ßM¥ÛW JM¥Úß EÂ«Ú d«Ú}æ }ÚÈÚßVÚÂÉÄÇ¥ÚM}æ BÎæàoM¥Úß ÈÚßÁÚVÚ×Ú«Úß" ®æãÞÏÒOæàMsÚß …ÁÚß~¡ÁÚßÈÚâ¥Úß ®ÚÂÑÚÁÚ ÁÚOÚÐzæ, †æ×ÚÈÚ{VæVæ @¥Úß¹}Ú OæàsÚßVæ¾æßÞ ÑÚÂ.

@ËÚ‡}Ú¤ ®Úâ´ÁÛy
OÚÁÛÈÚØ fÅæÇVÚ×ÚÆÇ«Ú ®ÚÁÚM®ÚÁÛVÚ}Ú LÎÚƒ ÑÚÑÚÀVÚ×Ú …VæX ÈæçeÛk¬OÚ @¨Ú´À¾Úß«Ú «ÚsæÒ¥Ú sÛ+d¾ÚßOÚÁÚ ºÚMsÛ @ËÚ‡}Ú¤ ÈÚßÁÚVÚ×Ú …VæX ÉÈÚÂÑÚß}Ú¡, @ËÚ‡}Ú¤ ÈÚßÁÚOæQ PÞ ÑæàoÞ«é Ò°ÞÌÞÑé (®ÚÂÑÚÁÚ¥Ú ÈÚßàÅÛ¨ÛÁÚ eÛ~) GM¥Úß ÑÚÑÚÀËÛÑÚ¡ð¥ÚÆÇ OÚÁæ¾ÚßÅÛVÚß}Ú¡¥æ. HOæM¥ÚÁæ B¥æàM¥æÞ ÈÚßÁÚ 50 eÛ~¾Úß PÞl, ®ÚPÐ Èæà¥ÚÅÛ¥ÚÈÚâVÚ×Ú ÈÛÑÚOæQ @ÈÚOÛËÚ J¥ÚWÑÚß}Ú¡¥æ. ÉËÛÄÈÛW ÈÛÀ¯ÑÚßÈÚâ¥ÚÂM¥Ú AÈÚßÇd«ÚOÚÈÚನ್ನೂ Ôæ_`«Ú ®ÚÃÈÚáÛy¥ÚÆÇ C ÈÚßÁÚVÚ×Úß D}Û°¦ÑÚß}Ú¡Èæ. ®ÚÂÑÚÁÚOæQ @VÚ}ÚÀ ÑæÞÈæ¾Úßನ್ನು C ÈÚßÁÚVÚ×Úß J¥ÚWÑÚß}Ú¡Èæ ÔÛVÛW C ÈÚßÁÚVÚ×Úß @ÈÚßàÄÀÈÛ¥ÚÈÚâ Gನ್ನು}Û¡Áæ.

C ÈÚßÁÚVÚØM¥Ú ÈÚßßRÀÈÛW Væà«æÞ¾ÚáÛ, ÈÚÃy, d‡ÁÚ ¬ÈÛÁÚzæ, D¾Úßà}Ú, ಸ್ನಾ¾Úßß Ñæ×æ}Ú ¬ÈÛÁÚOÚ ÔÛVÚà fÞÁÚ|Pþæß¾Úßನ್ನು ÑÚߨÛÂÑÚßÈÚ LÎÚ¨Ú }Ú¾ÚáÛÂOæ «Úsæ¾Úßß~¡¥æ. A¾ÚßßÁæ‡Þ¥Ú¥Ú ®ÚÃOÛÁÚ OÚ±Ú ÈÚß}Úß¡ ¯}Ú¡¥Ú GÄÇ ÑÚÈÚßÑæÀVÚØVæ B¥Úß LÎÚƒ¾ÚáÛW¥æ. Ò¡ðÞÁæàÞVÚVÚØVæ D}Ú¡ÈÚß LÎÚ¨ÚÈÛW¥æ GM¥Úß @ÈÚÁÚß ÔæÞ×Úß}Û¡Áæ.

ಸೋಮವಾರ, ಸೆಪ್ಟೆಂಬರ್ 6, 2010

ಆಲದ ಮರ- ಭಾರತದ ‘ರಾಷ್ಟ್ರವೃಕ್ಷ’.


ಆಲದ ಮರ- ಭಾರತದ 'ರಾಷ್ಟ್ರವೃಕ್ಷ'.

ಹಿಂದಿಯಲ್ಲಿ 'ಬರಗದ್' ಎನ್ನುವರು.

ಇದರ ನೆರಳಲ್ಲಿ ಬನಿಯಾ(ಹಿಂದೂ ವರ್ತಕರು)ಗಳು ತಮ್ಮ ವ್ಯಾಪಾರ ಮಾಡುತ್ತಿದ್ದುದರಿಂದ ಇದನ್ನು banyan tree ಎಂದು ವಿದೇಶೀಯರು ಕರೆದರು.

ಸಂಸ್ಕೃತದಲ್ಲಿ ಇದನ್ನು 'ನ್ಯಗ್ರೋಧ' ಎಂದು ಕರೆಯುವರು. ಬಿಸಿಲು, ಮಳೆ ಕೆಳಗೆ

ಬೀಳುವುದರಿಂದ ತಡೆಯುವುದು ಎಂದು ಇದರ ಅರ್ಥ. ( ನ್ಯಕ್ ಅಧೋದೇಶೇ

ಸೂರ್ಯತಾಪ ವರ್ಷಾದಿ ರೋಧನಾತ್..)
ಆಲದ ಮರಕ್ಕೆ ಕೆಳಗೆ ಸೂಚಿಸಿದ ಗುಣಗಳಿರುವುದರಿಂದ ಅದು ಪುರುಷಪ್ರಾಯವಾದುದೆಂದು, ತ್ರಿಮೂರ್ತಿಸ್ವರೂಪಿಯೆಂದು ಪರಿಗಣಿಸಲ್ಪಟ್ಟಿದೆ :

೧. ಇದರ ಬೇರುಗಳಿಂದ ಕಷಾಯ ಮಾಡಿ ಕುಡಿದರೆ ಗರ್ಭ ನಿಲ್ಲುತ್ತದೆ. ಆದ್ದರಿಂದ - ಬೇರುಗಳು ಬ್ರಹ್ಮ / ಸೃಷ್ಟಿಶಕ್ತಿಯ ಪ್ರತೀಕ

೨. ಇದರ ಕಾಂಡ, ಕೊಂಬೆಗಳು ಔಷದೀಯ ಗುಣಗಳು ಹೊಂದಿದೆ. ಇದರಿಂದ ಮಾಡುವ ಹೋಮದ ಧೂಪ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ -ಕೊಂಬೆ, ಕಾಂಡ ವಿಷ್ಣು / ಸ್ಥಿತಿಶಕ್ತಿಯ ಪ್ರತೀಕ

೩. ಎಲೆ, ಚಿಗುರಿನ ಕಷಾಯ ಗರ್ಭ ಪಾತಕ್ಕೆ ಉಪಯೋಗಿಸಲಾಗುತ್ತದೆ. ಆದ್ದರಿಂದ - ಎಲೆಗಳು ರುದ್ರ / ಲಯಶಕ್ತಿಯ ಪ್ರತೀಕ
ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ "ನಾನು ವೃಕ್ಷಗಳಲ್ಲಿ ಅಶ್ವತ್ಥ, ಋಷಿಗಳಲ್ಲಿ ಕಶ್ಯಪ, ಮುಂತಾಗಿ ತನ್ನ ವಿಶ್ವರೂಪದರ್ಶನದಲ್ಲಿ ಹೇಳುತ್ತಾನೆ"
ಹೀಗೆ ಅರಳೀ ಮರ ಪುರುಷ ಸಂಕೇತವಾಗಿದೆ. ಅದೇ ರೀತಿ ಆಲದ ಮರ ಸ್ತ್ರೀ ಸಂಕೇತವಾಗಿದೆ (ಪ್ರಾಯಶಃ ಅದರ ಅಗಾಧ ಬೇರುಗಳ ಕಾರಣದಿಂದ). ಈ ಕಾರಣಗಳಿಂದ ಅರಳೀ ಮರ - ಆಲದ ಮರದ ವಿವಾಹದ ಆಚಾರವು ನಡೆಯುತ್ತವೆ

ಭಾನುವಾರ, ಸೆಪ್ಟೆಂಬರ್ 5, 2010

ಅರಳೀಮರ (ಅಶ್ವತ್ಥ, ಪಿಪ್ಪಲ..)

ನಮ್ಮ ದೇಶದ ಎಲ್ಲೆಡೆ ಬೆಳೆಯುವ ಮರ. ಇದರ ತುಂಬಾ ಎಲೆಗಳಿರುತ್ತವೆ. ಸ್ವಲ್ಪ ಗಾಳಿಗೂ ಅಲ್ಲಾಡುತ್ತಾ ಪರಪರ ಶಬ್ದ ಮಾಡುತ್ತಿರುವುದು. ಅದಕ್ಕೇ ಈ ಮರಕ್ಕೆ 'ಚಲಪತ್ರ' ಎಂಬ ಹೆಸರೂ ಇದೆ.
ಆಲದಂತೆ ಈ ಮರಕ್ಕೂ ಬೀಳಲುಗಳಿದ್ದರೂ ಗಾತ್ರದಲ್ಲಿ
ಸಣ್ಣ ಮತ್ತು ತೆಳುವಾಗಿರುವುದು.(पीपल कि दाडी :) )
ಈ ವೃಕ್ಷದ ಅಡಿಯಲ್ಲೇ ಕುಳಿತು ಅಖಂಡ ೪೯ ದಿನ ಧ್ಯಾನಿಸಿ,
ಜ್ಞಾನೋದಯವಾದ ಬುದ್ಧನಿಂದಾಗಿ ಇದಕ್ಕೆ 'ಬೋಧಿ ವೃಕ್ಷ' ಎನ್ನುವರು.
ಆನೆಗಳಿಗೆ ಇದರ ಎಲೆ ಪ್ರಿಯ ಖಾದ್ಯ ದ್ರವ್ಯ. ೪-೬ ದಿನ ಆನೆಗಳಿಗೆ ಇದರ ಎಲೆ ತಿನ್ನಲು ಸಿಗದಿದ್ದರೆ ಉನ್ಮತ್ತಗೊಳ್ಳುವುದಂತೆ. ಅದಕ್ಕೇ ಅಶ್ವತ್ಥಕ್ಕೆ

'ಗಜಾಶನ, ಗಜಭಕ್ಷ್ಯ' ಎಂಬ ಹೆಸರು ಬಂತು.
ಹಿಂದಿ ಹೆಸರು- ಪೀಪಲ್, ಪೀಪರ್
ಇಂಗ್ಲೀಷ್ನಲ್ಲಿ- peepul tree.
ಬಾಟನಿಕಲ್ ಹೆಸರು- Ficus religiosa. (Ficus rumphii ಇತ್ಯಾದಿ ಹಲವು ಪ್ರಭೇದಗಳಿವೆ)
ಅರಳಿಮರದಲ್ಲಿ ಭೂತಪ್ರೇತಗಳು ವಾಸಿಸುವುದಿಲ್ಲ ಎಂಬ ನಂಬಿಕೆ. ದೇವಸ್ಥಾನಗಳ ಸಮೀಪ ಅರಳೀಮರ,ಅಥವಾ ಅರಳೀಮರದ ಸಮೀಪ ದೇವಸ್ಥಾನಗಳು ಏಳುವುದು ಸಾಮಾನ್ಯ.
ಈ ಮರದ ಅಡಿಯಲ್ಲಿ ನಾಗನ ಕಲ್ಲುಗಳನಿಟ್ಟು ಪೂಜಿಸುವರು. ಮಕ್ಕಳಾಗದ ದಂಪತಿಗಳು ಅಶ್ವತ್ಥಕ್ಕೆ ಸುತ್ತು ಹಾಕಿ ನಾಗನ ಕಲ್ಲಿಗೆ ಪೂಜೆ ಸಲ್ಲಿಸಿದರೆ ಮಕ್ಕಳಾಗುವುದಂತೆ.
ಸಿನಿಮಾಗಳಲ್ಲಿ, ಅರಳೀ ಮರದ ಅಡಿಯ ಕಟ್ಟೆಯಲ್ಲಿ, ಹಳ್ಳಿಯ ಸಮಸ್ತ ಜನರು ಸೇರಿ, ಚರ್ಚೆ,ಜಗಳ,ನ್ಯಾಯತೀರ್ಮಾನ ಮಾಡುವುದನ್ನು ನೋಡಿಯೇ ಇರುತ್ತೀರಿ.

ಶನಿವಾರ, ಸೆಪ್ಟೆಂಬರ್ 4, 2010

ಆರೋಗ್ಯ ಕಾಯಲು ಕರಿಬೇವು ಅತ್ಯಗತ್ಯ

ಬೇವಿನಷ್ಟು ಕಹಿಯಿಲ್ಲದಿದ್ದರೂ, ಬೇವಿನಂತೆ ವಿಶೇಷ ಗುಣವುಳ್ಳದ್ದರಿಂದ ಕರಿಬೇವಿಗೆ ಆ ಹೆಸರು ಬಂದಿದೆ. ಕರಿಬೇವು ಸಾಮಾನ್ಯವಾಗಿ ದಕ್ಷಿಣ ಭಾರತದ ಅಡುಗೆಗಳಲ್ಲಿ ಯಥೇಚ್ಛವಾಗಿ ಬಳಕೆಯಾಗುವ ಒಂದು ಬಗೆಯ ಸೊಪ್ಪು. ಸ್ವಾದ್ವಿಷ್ಟವಿಲ್ಲದಿದ್ದರೂ, ಸುವಾಸನೆ ಭರಿತವಾದ ಸಸ್ಯ. ಸಂಸ್ಕೃತದಲ್ಲಿ ಇದಕ್ಕೆ ಕಾಲಶಾಕ ಎನ್ನುತ್ತಾರೆ.

ಕಫ, ಪಿತ್ತ, ಜಠರದ ರೋಗ, ರಕ್ತದೊತ್ತಡ, ಮಧುಮೇಹ, ಉದರ ಸಂಬಂಧ ಸಮಸ್ಯೆ, ಆಮಶಂಕೆ, ಮಲಬದ್ಧತೆ, ಭೇದಿ ನಿವಾರಣೆಗೆ ಕರಿಬೇವು ಸಹಕಾರಿ. ಟಿಬಿ, ಜಾಂಡೀಸ್ ಹಾಗೂ ಸರ್ಜರಿ ನಂತರ ದೇಹದ ಆರೋಗ್ಯ ಸಮತೋಲನ ಕಾಪಾಡಲು ಕರಿಬೇವು ಸೇವನೆ ಒಳ್ಳೆಯದು.

ಉಪಯೋಗಗಳು:
* 1-2 ಟೀ ಚಮಚದಷ್ಟು ಎಲೆಯ ರಸವನ್ನು, 1 ಟೀ ಚಮಚ ನಿಂಬೆರಸವನ್ನು ಮತ್ತು ಸಕ್ಕರೆಯನ್ನು ಬೆರೆಸಿ ಸೇವಿಸುವುದರಿಂದ ಅಜೀರ್ಣ, ಅತಿಯಾಗಿ ಜಿಡ್ಡು ಪದಾರ್ಥ ಸೇವನೆಯಿಂದುಂಟಾದ ತೊಂದರೆಗಳನ್ನು ನಿವಾರಿಸಬಹುದು.

* ಭೇದಿ, ಆಮಶಂಕೆ ನಿವಾರಣೆಗೆ ಎಳೆಯದಾದ ಎಲೆಗಳನ್ನು ಜೇನಿನೊಂದಿಗೆ ನೀಡಬಹುದು. ಅಥವಾ ಚೆನ್ನಾಗಿ ಅರೆದ ಮಜ್ಜಿಗೆಯೊಂದಿಗೆ ಸ್ವಲ್ಪ ಶುಂಠಿ ಬೆರೆಸಿ ನೀಡಿದರೆ ಉಪಯುಕ್ತ.

* ಬೊಜ್ಜು ಕರಗಿಸಲು ಪ್ರತಿ ಮುಂಜಾನೆ 8-10 ತಾಜಾ ಎಲೆಗಳನ್ನು ಅಗಿದು ಸೇವಿಸಿದರೆ ಒಳ್ಳೆಯದು.ಇದರಿಂದ ಮಧುಮೇಹ ರೋಗವನ್ನು ತಡೆಗಟ್ಟಬಹುದು.

* ಕುರು, ಗಾಯವಾದಾಗ ಕರಿಬೇವಿನ ಎಲೆಗಳನ್ನು ಅರೆದು ಸ್ವಲ್ಪ ಅರಿಶಿನದೊಂದಿಗೆ ಬೆರೆಸಿ ಅರೆದು ಹಚ್ಚಬಹುದು.

* ಕಾಮಾಲೆ ರೋಗವಿದ್ದಾಗ 10-12 ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಅರೆದುಕೊಂಡು ಸುಮಾರು 60-100ಮಿ.ಲೀ ಎಳನೀರಿನೊಂದಿಗೆ ನೀಡಬಹುದು.

* ಸೊಳ್ಳೆ, ಇರುವೆ, ನೊಣ ಮುಂತಾದ ಕೀಟಗಳ ತೊಂದರೆ ತಪ್ಪಿಸಲು ಕರಿಬೇವಿನ ಸುವಾಸನೆ ಸಾಕು.

* ಕರಿಬೇವಿನ ಎಲೆಯಲ್ಲಿ ಕಬ್ಬಿಣದ ಅಂಶ ಹೇರಳವಾಗಿರುವ ಕಾರಣ, ಹಸಿ ಎಲೆಯನ್ನು ಅಗಿದು ತಿಂದರೆ ಒಳ್ಳೆಯದು.

ಆಯುರ್ವೇದ ಔಷಧಗಳಲ್ಲಿ ಕರಿಬೇವಿಗೆ ವಿಶೇಷ ಸ್ಥಾನವುಂಟು. ಕರಿಬೇವಿನ ಸೊಪ್ಪಿನ ಉಪಯೋಗಗಳು ಇನ್ನೂ ಅನೇಕ ಇದ್ದೇ ಇದೆ. ಓದುಗರು ತಮಗೆ ತಿಳಿದ ಸಲಹೆಗಳು ನಮಗೆ ತಿಳಿಸಬಹುದು

ಶುಕ್ರವಾರ, ಸೆಪ್ಟೆಂಬರ್ 3, 2010

ಗಜೇಂದ್ರಗಡ ಬೆಟ್ಟದ ಮೇಲೆ ನೀರಿನ ದುರ್ಬಳಕೆ

ಭೂಮಿ ಬೇಸಿಗೆಯ ಬಿಸಿಲಿಗೆ ಕಾದಿದೆ. ಮಳೆಯಿಲ್ಲದೇ ಭೂಮಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿದೆ. ಆದರೆ ನಾವು ಮಾತ್ರ ನೀರನ್ನು ಬೇಕಾಬಿಟ್ಟಿ ಬಳಸಿ ನೀರಿನ ಅಮೂಲ್ಯವಾದ ಪಾತ್ರವನ್ನೇ ಬರಿದು ಮಾಡುವ ಸ್ಥಿತಿಯಲ್ಲಿದ್ದೇವೆ. ಹೀಗಿದ್ದರೂ ದಿನಬೆಳಗಾದರೆ ಸಾಕು ಗ್ರಾಮಗಳಲ್ಲಿ ನಮ್ಮ ಜನರು ಕುಡಿಯಲು ನೀರಿಲ್ಲದ ಕಾರಣಕ್ಕಾಗಿ 5 ರಿಂದ 10 ಕಿ.ಮೀ. ವರೆಗೆ ಹೋಗಿ ಸೈಕಲ್.ಬಂಡಿ.ಕೊನೆಗೆ ಕಾಲುದಾರಿಯಲ್ಲಿ ನೀರನ್ನು ತರುವಂಥಹದನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ.ಗ್ರಾಮಗಳಲ್ಲಿ ಬಾವಿ ಹಳ್ಳ-ಕೊಳ್ಳ,ಕಾಲುವೆ ಹೊಂಡಗಳು ನೀರಿಲ್ಲದೆಯೇ ಒಣಗುತ್ತಿವೆ.ಇನ್ನೊಂದೆಡೆ ಮಳೆಯಿಲ್ಲದೆ ಗಿಡ ಮರಗಳು ಒಣಗುತ್ತಿವೆ. ಕೃಷಿ ಭೂಮಿಯಲ್ಲಿ ನೀರಿಲ್ಲದೇ ವ್ಯವಸಾಯ ಮಾಡಲು ರೈತರಿಗೆ ಅತೀ ಕಷ್ಟದಾಯಕವಾಗಿದೆ.
ಇಷ್ಟೆಲ್ಲಾ ಆದರೂ ನೀರನ್ನು ಯಾವ ರೀತಿ ದುರ್ಬಳಕೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿದೆ ನೋಡಿ ಒಂದು ಉದಾಹರಣೆ. ಗಜೇಂದ್ರಗಡ ಬೆಟ್ಟದ ಮೇಲೆ ಅನೇಕ ಸಿಹಿನೀರಿನ ಹೊಂಡಗಳಿವೆ. ಅವುಗಳಲ್ಲಿ ಅಕ್ಕ ತಂಗಿ,ಆಕಳ ಮತ್ತು ಮಂಗನ ಹೊಂಡಗಳೆಂದು ಕರೆಯುತ್ತಾರೆ. ಈ ಹೊಂಡಗಳ ನೀರನ್ನು ಇಲ್ಲಿನ ಲಂಬಾಣಿ ಜನಾಂಗದವರು ಸಾರಾಯಿ ತಯಾರಿಸಲು ಉಪಯೋಗಿಸುತ್ತಾರೆ. ಹೊಂಡದ ದಡದ ಮೇಲೆ ಹೆಂಡವನ್ನು ತಯಾರಿಸುತ್ತಿದ್ದಾರೆ.ಸಾರಾಯಿ ತಯಾರಿಸಿದ ಅಶುದ್ಧ ನೀರು ಮತ್ತು ತಯಾರಿಸಿ ಬಿಟ್ಟುಹೊದ ಬೂದಿ,ಕಟ್ಟಿಗೆ ಪುಡಿ ಕೊಳೆತ ಇನ್ನಿತರ ವಸ್ತುಗಳ ಕಾಲುವೆ ಮುಖಾಂತರ ನೇರವಾಗಿ ಹರಿದು ಹೊಂಡವನ್ನು ಸೇರುವುದರಿಂದ ನೀರು ಪಾಚಿ ಕಟ್ಟಿದಂತೆ ಹಚ್ಚ ಹಸಿರಾಗಿ ಮಾರ್ಪಾಡುತವೆ.

ಇದರಿಂದ ನೀರು ವಾಸನೆ ಬರುತ್ತಿರುತ್ತದೆ.ಆದರೆ ಮೂಕ ಪ್ರಾಣಿಗಳು ದಾಹವನ್ನು ತೀರಿಸಿಕೊಳ್ಳಲು ಸಾರಾಯಿ ತ್ಯಾಜ್ಯದಿಂದ ಅಶುದ್ಧಗೊಂಡ ನೀರನ್ನು ಕುಡಿದು ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತಿವೆ.ಅದೇ ಮಳೆಗಾಲದಲ್ಲಿ ಹೊಂಡಗಳು ತುಂಬಿ ಜಲಪಾತದಂತೆ ನೀರು ಬೆಟ್ಟದಿಂದ ಧುಮುಕುತ್ತಿರುವ ದೃಶ್ಯ ರಮಣೀಯ. ಹೊಂಡಗಳ ನೀರು ಮಲಿನವಾಗುವುದು ಹೀಗೇ ಮುಂದುವರೆದರೆ ಈಗ ಪ್ರಾಣಿಗಳಿಗೆ ತಗಲುವ ರೋಗಗಳು ಮುಂದೆ ಮನುಷ್ಯರಿಗೂ ತಗಲುವ ಯಾವ ಸಂದೇಹವಿಲ್ಲ.

ಗುರುವಾರ, ಸೆಪ್ಟೆಂಬರ್ 2, 2010

ಡಾಕ್ಟರ್ ಸಂಜೀವ ಕುಲಕರ್ಣಿಯವರ ‘ಸುಮನ ಸಂಗಮ’

ಡಾಕ್ಟರ್ ಸಂಜೀವ ಕುಲಕರ್ಣಿ ಧಾರವಾಡದಲ್ಲಿ ಪ್ರಸಿದ್ಧ ವೈದ್ಯರು. ಸ್ತ್ರೀ ರೋಗಗಳು ಹಾಗೂ ಪ್ರಸೂತಿ ಅವರ ಶುಶ್ರೂಷೆಯ ಸ್ಪೆಶಲೈಸೇಷನ್. ಸರಳ ಪರಿಸರ ಸ್ನೇಹಿ ಬದುಕು ರೂಢಿಸಿಕೊಂಡ ಅನುಕರಣೀಯ ವೈದ್ಯ ಅವರು.
ಧಾರವಾಡದಿಂದ ಅಳ್ನಾವರ ರಸ್ತೆಯ ಮೇಲೆ ದಡ್ದಿಕಮಲಾಪೂರ ಎಂಬ ಗ್ರಾಮವಿದೆ. ಧಾರವಾಡದಿಂದ ಅಂದಾಜು ೯ ಕಿಲೋ ಮೀಟರ್ ದೂರ. ಅಲ್ಲಿಂದ ೨ ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಕ್ರಮಿಸಿದರೆ ಡಾಕ್ಟರ್ ಸಂಜೀವಣ್ಣ ಅವರ "ಸುಮನ ಸಂಗಮ". ಅದೊಂದು ಕಾಡು-ನಾಡು ಹಿತಮಿತವಾಗಿ ಮೇಳೈಸಿ ಹದಗೊಂಡ ನಾಡಿನ ಕಾಡು ತೋಟ! ೧೯೯೬ ರಲ್ಲಿ ಡಾಕ್ಟರ್ ಸಂಜೀವ ಕುಲಕರ್ಣಿಯವರು ಈ ೧೭ ಎಕರೆ ಭೂಮಿಯನ್ನು ಕೊಂಡುಕೊಂಡರು.
ಭೂಮಿಯನ್ನು ಕೃಷಿಗಾಗಿ ಆಯ್ದುಕೊಳ್ಳುವಾಗ ಅವರ ಮುಂದೆ ಆಯ್ಕೆಯ ಸ್ಪಷ್ಠವಾದ ಮಾನದಂಡಗಳಿದ್ದವು. ಧಾರವಾಡ ಬಿಟ್ಟು ಹೊಲ ದೂರವಿರಬೇಕು. ನೈಸರ್ಗಿಕವಾಗಿ ಮಳೆ ನೀರಿನಿಂದ ತೋಯ್ದು ಇಂಗುವಂತಹ ಗುಡ್ಡದ 'ಫುಟ್ ಹಿಲ್ಸ್' ನಲ್ಲಿ ಅರಳಬಲ್ಲ, ತುಸು ಇಳಿಜಾರಿರಬೇಕು. ಮಳೆ ನೀರು ಹರಿದು ಹೋಗದೇ ಗುಂಡಿಯಾಕಾರದಲ್ಲಿ ಸಣ್ಣ ಕೆರೆಗಳಂತೆ ಅಲ್ಲಲ್ಲಿ ಸಂಗ್ರಹಿಸಿ ಪುನ: ವ್ಯವಸಾಯಕ್ಕೆ ಅನುಕೂಲವಾಗುವಂತೆ ಮಾಡಲು ಸುಲಭವಾಗಬೇಕು. ಕಾಡಿನ ಪ್ರಾಣಿ-ಪಕ್ಷಿಗಳಿಗೂ ನೈಸರ್ಗಿಕ ಅರವಟ್ಟಿಗೆಗಳಾಗಿ ಅವು ಲಭ್ಯವಾಗಬೇಕು ಎಂದು 'ಸಂಕುಲಜೀವ' ಡಾಕ್ಟರ್ ಸಂಜೀವ ಕುಲಕರ್ಣಿಯವರು ಅಳೆದು-ತೂಗಿ ಈ ಭೂಮಿ ಖರೀದಿಸಿದರು.
ನಾವು ಒಂದು ಒಳ್ಳೆಯ ಕೆಲಸ ಮಾಡಲು ನಿರ್ಧರಿಸಿದರೆ ಇಡೀ ವಿಶ್ವದ ಧನಾತ್ಮಕ ಕಾಯಗಳು ಒಗ್ಗೂಡಿ ನಮ್ಮ ಸಹಾಯಕ್ಕೆ ನಿಂತು, ಪ್ರೇರೇಪಿಸುವಂತೆ.. ಸುದೈವವಶಾತ್ ಡಾಕ್ಟರ್ ಸಂಜೀವ ಕುಲಕರ್ಣಿಯವರು ಖರೀದಿಸಿದ ಹೊಲದ ಮಾಲೀಕ ದಶಕಗಳ ಕಾಲ ಅಲ್ಲಿ ಯಾವುದೇ ಕೃಷಿ ಮಾಡಿರಲಿಲ್ಲ. ಹಾಗಾಗಿ ಅದು ವಿಷ ರಹಿತ ಅನ್ನದ ಬಟ್ಟಲಾಗಿತ್ತು! ಯಾವುದೇ ರಾಸಾಯನಿಕಗಳು, ಕೀಟನಾಶಕಗಳು ಒಟ್ಟಾರೆ ಪರಿಸರ ಅಸ್ನೇಹಿ ಒಳಸುರಿಗಳನ್ನು ಸುರಿದು ಲಾಭಕ್ಕಾಗಿ ಕೃಷಿ ಮಾಡುವುದಿಲ್ಲ ಎಂದು ಅವರು ನಿರ್ಧರಿಸಿದ್ದರು. ಮಸನೊಬು ಫುಕುವೋಕಾ ಹೇಳುವಂತೆ "ವಿಜ್ಞಾನ ತನ್ನ ವೈಜ್ಞಾನಿಕ ಜ್ಞಾನದ ಮೂಲಕ ಅರಿತಿರುವುದು ಮೃತ ಪ್ರಕೃತಿಯನ್ನಷ್ಟೇ; ಆತ್ಮವಿಲ್ಲದ ದೇಹದಲ್ಲಿರುವ ಭೂತವನ್ನಷ್ಟೇ.."! ಲಭ್ಯ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಕ್ರೊಢೀಕರಿಸಿಕೊಂಡು ಬಳಸುವುದು, ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ ಬೆಳೆ ವೈವಿಧ್ಯತೆಯ ಮೂಲಕ ಫಲವತ್ತತೆ ಕಾಯ್ದುಕೊಳ್ಳುವುದು. ನೆಲಮೂಲ ಜ್ಞಾನವನ್ನು ಆಕರಿಸಿಕೊಂಡು ಸಹಜ ಕೃಷಿ ಮಾಡುವುದು ಡಾಕ್ಟರ್ ನಿರ್ಧಾರವಾಗಿತ್ತು.

ಫುಕುವೋಕಾ ಹೇಳುತ್ತಾರೆ ಕೃಷಿಯ ಅಂತಿಮ ಗುರಿ ಬೆಳೆ ಬೆಳೆಯುವುದಲ್ಲ. ಬದಲು ಮನುಷ್ಯನ ಬೆಳವಣಿಗೆ. ನನ್ನ ಕೃಷಿ ಎಂದರೆ ನಿಸರ್ಗವನ್ನು ಅರ್ಥ ಮಾಡಿಕೊಳ್ಳುವುದು. ಅದರ ತಾಳಕ್ಕೆ, ಹೆಜ್ಜೆಗೆ, ವಿನ್ಯಾಸಕ್ಕೆ ಹೊಂದಿಕೊಂಡು ಹೆಜ್ಜೆ ಇಡುತ್ತಲೇ ಅನ್ನಾಹಾರಗಳನ್ನೂ, ಆರೋಗ್ಯವನ್ನೂ, ನೆಮ್ಮದಿಯನ್ನೂ ಪಡೆದುಕೊಳ್ಳುವುದು." ಡಾಕ್ಟರ್ ಸಂಜೀವ ಕುಲಕರ್ಣಿಯವರು ಕೃಷಿಯನ್ನು ಹಾಗೆ ಅರ್ಥ ಮಾಡಿಕೊಳ್ಳಲು ಅಧ್ಯಯನ ಮಾಡಿದ್ದಾರೆ. 'ಸುಮನ ಸಂಗಮ'ದಲ್ಲಿ ಒಟ್ಟು ಒಂಭತ್ತು ಎಕರೆ ತೋಟಕ್ಕೆ ಹಾಗೂ ಕಾಡಿನ ಮರಗಳಿಗೆ ಮೀಸಲಿಟ್ಟಿದ್ದಾರೆ. ಇನ್ನು ಐದು ಎಕರೆ ಭೂಮಿಯಲ್ಲಿ ಹುರುಳಿ, ರಾಗಿ, ಭತ್ತ, ನೆಲಗಡಲೆ ಹಾಗೂ ಸೋಯಾಬೀನ್ ಬೆಳೆಯುತ್ತಿದ್ದಾರೆ. ಕೆರೆ-ಕೃಷಿ ಹೊಂಡಗಳಿಗಾಗಿ ಎರಡು ಎಕರೆ ಮೀಸಲು. ಈ ಹೊಂಡಗಳೆ ತೋಟದ ಅಂತರ್ಜಲ ಹೆಚ್ಚಿಸುವ ಬ್ಯಾಂಕರ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಳೆಗಾಲದಲ್ಲಿ ಉಳಿತಾಯ ಖಾತೆಗಳಿಗೆ ಜಮೆ..ಬೇಸಿಗೆಯಲ್ಲಿ ಅವಶ್ಯಕತೆಗೆ ತಕ್ಕಷ್ಟು ಸೇಫ್ ಡೆಪಾಸಿಟ್ ನಿಂದ ಹಿಂಪಡೆದು ಹಿತ-ಮಿತವಾಗಿ ಬಳಕೆ. ಒಟ್ಟು ೧೭ ಎಕರೆಯಲ್ಲಿ ಮಿಕ್ಕಿದ ೧ ಎಕರೆ ಅವರು ತೋಟದಲ್ಲಿ ಸಾಕಿರುವ ಎರಡು ಎತ್ತು, ಎರಡು ಎಮ್ಮೆ, ಎರಡು ಆಕಳುಗಳಿಗೆ ಮೇಯಲು ಹಸಿರು ಹುಲ್ಲು ಒದಗಿಸುತ್ತದೆ.

ಕಳೆದ ನಾಲ್ಕಾರು ವರ್ಷಗಳ ಕೆಳಗೆ ಉತ್ತರ ಕರ್ನಾಟಕ ಭಾಗದಲ್ಲಿ ಚಾಟಿ ಬೀಸಿದ್ದ ಬರಗಾಲ ಸಂಜೀವಣ್ಣ ಅವರಿಗೂ ಬಿಸಿ ತಾಗಿಸದೇ ಬಿಟ್ಟಿಲ್ಲ. ತೋಟದ ಯಾವ ಹೊಂಡದಲ್ಲಿಯೂ ಹನಿ ನೀರಿರದೆ, ತಾತ್ವಾರಕ್ಕೆ ಈಡಾಗಿ ಡಾಕ್ಟರ್ ಸಂಜೀವ ಕುಲಕರ್ಣಿಯವರು ತಮ್ಮ ಆಶಯಕ್ಕೆ ವಿರುದ್ಧವಾಗಿ ಕೊಳವೆ ಬಾವಿ ಕೊರೆಸಿದ್ದಿದೆ. ಆದರೆ ನಂತರದ ವರ್ಷಗಳಲ್ಲಿ ಪರಿಸ್ಥಿತಿ ಸುಧಾರಿಸಿದೆ. ಡಾಕ್ಟರ್ ಸಂಜೀವ ಕುಲಕರ್ಣಿಯವರು ಬಹಳ ಉಮ್ಮೇದಿಯಿಂದ ಹೇಳುತ್ತಾರೆ.."ನಮ್ಮ ತ್ವಾಟಕ್ಕ ಮೂರು ಕಡೆ ಇಳಿಜಾರು ಅದ. ಯಾವ ಭಾಗದೊಳಗ ಮಳೆಯಾದರೂ ನೀರು ಹರದು 'ಎಪಿ ಸೆಂಟರ್' ಬೋಧಿ ಕೆರೆಯತನಕ ಸಾಗಿ ಬಂದು ಕೃಷಿ ಹೊಂಡ ತುಳುಕುವಂಗ ಮಾಡ್ತದ. ಒಂದು ಹನಿ ನೀರೂ ವ್ಯರ್ಥ ಆಗೋದಿಲ್ಲ. ನಮ್ಮ 'ಸಂಪಿಗೆ ಹೊಂಡ'ದ ಸುತ್ತಳತಿ ೧೦ x ೨೦ x ೪ ಇದ್ದು, ಮಳೆ ಬಂದಾಗ ಮೊದಲ ಅದು ತುಂಬತೈತಿ. ಅದು ತುಂಬಿ ಓವರ್ ಫ್ಲೋ ಆದಮ್ಯಾಲೆ ಕೆಳಗಿನ 'ಮೈನಾ ಹೊಂಡ'ದೊಳಗ ಸಂಗ್ರಹಗೊಳ್ತದ. ಅದರ ಅಳತಿ ಸುಮಾರು ೧೫ x ೫ x ೨. ಮೂರನೇಯ ಹೊಂಡದ ಹೆಸರು 'ರಘು ತೀರ್ಥ; ಅದು ೧೦ x ೧೦ x ೪ ರಷ್ಟು ಜಾಗೆಯೊಳಗ ಹೆಚ್ಚುವರಿಯಾಗಿ ಹರಿದು ಬರೋ ನೀರನ್ನು ತನ್ನ ಒಡಲೊಳಗ ತುಂಬಿಸಿಕೊಳ್ತದ. ನಂತರ ಮತ್ತೊಂದು ಸಣ್ಣ ಕೃಷಿ ಹೊಂಡ ಅದ 'ಕವಳಿ ಕೊಳ'. ಇವೆಲ್ಲ ತುಂಬಿ ತುಳುಕಿದ ಮ್ಯಾಲೆ ನೀರು ಹರಿದುಕೊಂಡು ಬರೋದು 'ಬೋಧಿ ಕೆರೆ'ಗೆ. ಅದು ಭಾಳ ದೊಡ್ದ ಕೆರಿ. ಕೆರೆಯ ಮಧ್ಯದೊಳಗ ಬೋಧಿ ಗಿಡ ಇರೋದರಿಂದ ಅದಕ್ಕ ಆ ಹೆಸರು ಇಟ್ಟೇವಿ" ಡಾಕ್ಟರ್ ಸಂಜೀವ ಕುಲಕರ್ಣಿಯವರ ನೀರ ಕಳಕಳಿ ಅವರು ಸಾಧಿಸಿರುವ ನೀರ ನೆಮ್ಮದಿ ನನಗೆ ವಿಶ್ವ ವಿದ್ಯಾಲಯದ ಪಠ್ಯವಾಗಬಹುದು ಅನ್ನಿಸಿತು.

ಡಾಕ್ಟರ್ ಸಂಜೀವ ಕುಲಕರ್ಣಿಯವರು ಸುಮನ ಸಂಗಮ ತೋಟದ ಸುತ್ತ 'ಜೀವಂತ ಬೇಲಿ' ನೆಟ್ಟಿದ್ದಾರೆ. ಅರ್ಥಾತ್ ವಿದ್ಯುತ್ ಬೇಲಿ ಅಲ್ಲ. ನೈಸರ್ಗಿಕವಾಗಿ ಬೆಳೆದಿದ್ದ ಕಾಡಿನ ಗಿಡಗಳನ್ನು ಕಡಿದು ಸಾಗಿಸದೇ ಹಾಗೆಯೇ ಇಟ್ಟುಕೊಂಡು, ಮತ್ತಷ್ಟು ಕಾಡು ಮರಗಳನ್ನು ಅವರು ನೆಟ್ಟಿದ್ದಾರೆ. ಸಾವಿರಕ್ಕೂ ಮಿಕ್ಕಿದ ಸಾಗವಾನಿ, ಹೊಂಗೆ ಮರಗಳು, ಅಕೇಷಿಯಾ, ಬೇವು, ಆಲ, ಅತ್ತಿ ಬಳಸಲು ಫಲ ಕೊಡುವ ತೆಂಗಿನ ಮರಗಳನ್ನು ಬೆಳೆಸಿ ತೋಟಕ್ಕೆ ಕೋಟೆ ಸದೃಷ ಆವರಣ ಅವರು ಸೃಷ್ಟಿಸಿದ್ದಾರೆ. ನೂರು ಗಿಡಗಳಷ್ಟು ಹಲಸು, ಮಾವು, ಸೀತಾಫ್ಲಲ, ರಾಮ ಫಲ, ಮರಸೇಬು, ಪಪ್ಪಾಯಾ, ಅಂಜೂರು, ಅನಾನಸು, ಸಿಂಗಾಪೂರ ಚೆರ್ರಿ, ಗೇರು ಹಣ್ಣಿನ ಮರ, ವಿವಿಧ ಜಾತಿಯ ನಿಂಬೆಯ ಗಿಡಗಳು ಇಲ್ಲಿವೆ. ಈಗಾಗಲೇ ಅವು ಫಲ ನೀಡಲು ಆರಂಭಿಸಿದ್ದು ಪಕ್ಷಿಗಳು ತಮ್ಮ ಪಾಲನ್ನು ಆಗಲೇ ಹೊತ್ತೊಯ್ದಿದ್ದರೆ, ಡಾಕ್ಟರ್ ಸಂಜೀವ ಕುಲಕರ್ಣಿಯವರು ಆಪ್ತರಿಗೂ ಹಂಚಿ ಖುಷಿ ಪಟ್ಟಿದ್ದಾರೆ.

'ಸುಮನ ಸಂಗಮ'ದಲ್ಲಿ ಪುಷ್ಪೋದ್ಯಾನವೂ ಇದೆ. ಮಲ್ಲಿಗೆ, ಸಂಪಿಗೆ, ಕಾಕಡ, ಗುಲಾಬಿ, ನಾಗಲಿಂಗ ಪುಷ್ಪ, ದೇವಕಣಗಿಲೆ, ಗೌರಿ ಹೂವು, ಅಶೋಕ ಎಲ್ಲವೂ ಮನ ತಣಿಸುತ್ತವೆ. ಕೈ ತುಂಬ ಹಣ ಸಂಪಾದನೆ ಇರುವ, ಮೈತುಂಬ ಟೆನ್ಷನ್ ಹೊತ್ತಿರುವ ಡಾಕ್ಟರ್ ಸಂಜೀವಣ್ಣ ಅವರಿಗೆ ಈ ಕೆಲಸ ಬೇಕಿತ್ತೆ? ಅವರೇ ಹೇಳುತ್ತಾರೆ.."ಕೃಷಿಯಲ್ಲಿ ಗಿಡ ಬೆಳೆಸಿದ ಖುಷಿ, ನೀರು ಇಂಗಿಸಿದ ಹಿತ, ಪಕ್ಷಿ-ಪ್ರಾಣಿಗಳಿಗೆ ಸಾಂದರ್ಭಿಕವಾಗಿ ಆಹಾರವಿತ್ತು ಪೋಷಿಸಿದ ಧನ್ಯತೆ ಇನ್ಯಾವ ವೃತ್ತಿಯಲ್ಲಿ ಇದ್ದೀತೋ?..ಹಾಗಾಗಿ ಹವ್ಯಾಸಕ್ಕಾಗಿ ಈ ಕೆಲಸ; ಆದರೆ ಅಷ್ಟೇ ಗಂಭೀರವಾಗಿ".ನೀವೂ ಒಮ್ಮೆ 'ಸುಮನ ಸಂಗಮ'ಕ್ಕೆ ಭೇಟಿ ನೀಡಿ..

ವಿಳಾಸ: ಡಾ. ಸಂಜೀವ ಕುಲಕರ್ಣಿ, ಬಾಲಬಳಗ ಆವರಣ, ಮಹಿಷಿ ರಸ್ತೆ, ಮಾಳಮಡ್ಡಿ ಧಾರವಾಡ, ೫೮೦ ೦೦೭. ದೂರವಾಣಿ: (೦೮೩೬) ೨೭೪೩೧೦೦.